Advertisment

ಗಂಡನ ಅನೈತಿಕ ಸಂಬಂಧಕ್ಕೆ ನೊಂದು ನವವಿವಾಹಿತೆ ಆತ್ಮಹತ್ಯೆ : ಗಂಡನ ಆರೆಸ್ಟ್ ಮಾಡುವಂತೆ ಬಿಗಿ ಪಟ್ಟು

ಚಿಕ್ಕಬಳ್ಳಾಪುರದ ಕೊಂಡಾವಲಹಳ್ಳಿ ಗ್ರಾಮದಲ್ಲಿ ನವವಿವಾಹಿತೆ ಜಯಶ್ರೀ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಚಂದ್ರಶೇಖರ್ ಗೆ ಬೇರೊಬ್ಬ ಯುವತಿಯ ಜೊತೆ ಅಫೇರ್ ಇತ್ತಂತೆ. ಇದನ್ನು ಪ್ರಶ್ನಿಸಿದ್ದಕ್ಕೆ ಗಂಡನೇ ಹೆಂಡತಿಗೆ ಕಿರುಕುಳ ನೀಡಿದ್ದಾನೆ.

author-image
Chandramohan
JAYASRI SUICIDE NOTE

ಆತ್ಮಹತ್ಯೆಗೆ ಶರಣಾದ ಜಯಶ್ರೀ, ಪತಿ ಚಂದ್ರಶೇಖರ್ , ಆಕೆಯ ಡೆತ್ ನೋಟ್‌

Advertisment
  • ಗಂಡನ ಅನೈತಿಕ ಸಂಬಂಧಕ್ಕೆ ನೊಂದು ಪತ್ನಿ ಜಯಶ್ರೀ ಆತ್ಮಹತ್ಯೆ
  • ಚಿಕ್ಕಬಳ್ಳಾಪುರದ ಕೊಂಡಾವಲಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ
  • ಬಾತ್ ರೂಮುನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
  • ಪತಿ ಚಂದ್ರಶೇಖರ್ ಬಂಧನಕ್ಕೆ ಪೋಷಕ ಆಗ್ರಹ

ಗಂಡನ ಅನೈತಿಕ ಸಂಬಂಧದಿಂದ ನೊಂದು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬಾತ್ ರೂಮುನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಕೆ. ಚಿಕ್ಕಬಳ್ಳಾಪುರದ ಕೊಂಡಾವಲಹಳ್ಳಿ ಗ್ರಾಮದ ತನ್ನ  ತವರು ಮನೆಯಲ್ಲಿ  ನವ ವಿವಾಹಿತೆ ಕೆ.ಎಸ್.ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಜಯಶ್ರೀ ವಿವಾಹವಾಗಿದ್ದರು. ಫೇಸ್ ಬುಕ್ ನಲ್ಲಿ ಪತಿ ಚಂದ್ರಶೇಖರ್ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಜೊತೆ ಜಯಶ್ರೀ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. 
ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಯಾವಾಗಲೂ ಯುವತಿಯೊಬ್ಬಳ ಜೊತೆ ಚಾಟಿಂಗ್​ ಮಾಡುತ್ತಿದ್ದ.  ಇದನ್ನ ಪ್ರಶ್ನಿಸಿದ್ದಕ್ಕೆ ಪತಿ ಚಂದ್ರಶೇಖರ್​​ನಿಂದ ಪತ್ನಿ ಜಯಶ್ರೀಗೆ ಕಿರುಕುಳ ನೀಡಲಾಗಿತ್ತಂತೆ. ಈ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ  ಮಾಡಿಕೊಂಡಿವುದಾಗಿ   ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.  

Advertisment

JAYASRI SUICIDE NOTE02

ಪತಿ ಚಂದ್ರಶೇಖರ್ ನನ್ನು  ಬಂಧಿಸುವವರೆಗೆ ಶವ ಸಂಸ್ಕಾರ ಮಾಡಲ್ಲ ಅಂತ ಜಯಶ್ರೀ ಪೋಷಕರು  ಪಟ್ಟು ಹಿಡಿದಿದ್ದಾರೆ.   ಕೊಂಡಾವಲಹಳ್ಳಿ ಗ್ರಾಮದಲ್ಲಿ ನೀರವ ಮೌನ   ಮಡುಗಟ್ಟಿದೆ.  ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

LOVE AFFAIR SUICIDE
Advertisment
Advertisment
Advertisment