ಇವತ್ತು ಓಲಾ, ಉಬರ್​, ಱಪಿಡೋ ಮುಷ್ಕರ.. ಬೆಂಗಳೂರಲ್ಲಿ ಕ್ಯಾಬ್ ಸಿಗಲ್ವಾ..?

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಉಬರ್​, ಱಪಿಡೋ ಮುಷ್ಕರಕ್ಕೆ ಕರೆ ಕೊಟ್ಟಿದೆ. ತೆಲಂಗಾಣದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಮುಷ್ಕರಕ್ಕೆ ಕರೆ ಕೊಟ್ಟಿದೆ.

author-image
Ganesh Kerekuli
ಓಲಾ, ಊಬರ್​​ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹೊಸ ಅಸ್ತ್ರ; ಈ ಪ್ಲಾನ್ ಜಾರಿಯಾದ್ರೆ ಸಮಸ್ಯೆಗೆ ಮುಕ್ತಿ ಸಿಗೋದಂತೂ ಪಕ್ಕಾ
Advertisment

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ದೇಶಾದ್ಯಂತ ಓಲಾ, ಉಬರ್​, ಱಪಿಡೋ ಮುಷ್ಕರಕ್ಕೆ ಕರೆ ಕೊಟ್ಟಿದೆ. ತೆಲಂಗಾಣದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ಮುಷ್ಕರಕ್ಕೆ ಕರೆ ಕೊಟ್ಟಿದೆ.

ಸುಮಾರು 6 ಗಂಟೆಗಳ ಕಾಲ ಈ ಆ್ಯಪ್‌ಗಳು ಆಫ್ ಆಗಲಿವೆ. ಇದ್ರಿಂದ ಕ್ಯಾಬ್, ಆಟೋ ಮತ್ತು ಬೈಕ್ ಸೇವೆಗಳ ಮೇಲೆ ಪರಿಣಾಮ ಬೀರಲಿದ್ದು, ಬೆಂಗಳೂರಲ್ಲೂ ಓಲಾ, ಉಬರ್, ಱಪಿಡೋದಲ್ಲಿ ದೊಡ್ಡ ವ್ಯತ್ಯಾಸ ಆಗಲ್ಲ ಎಂದು ಓಲಾ, ಊಬರ್ ಅಸೋಸಿಯೇಷನ್‌ ಸ್ಪಷ್ಟನೆ ನೀಡಿದೆ. 

ಬೇಡಿಕೆಗಳು ಏನು?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾನ್ಯತೆ ಪಡೆದ ಚಾಲಕ ಸಂಘಗಳೊಂದಿಗೆ ಸಮಾಲೋಚಿಸಿದ ನಂತರ ಆಟೋ, ಕ್ಯಾಬ್‌ ಮತ್ತು ಬೈಕ್ ಟ್ಯಾಕ್ಸಿಗಳಂತಹ ಅಪ್ಲಿಕೇಶನ್ ಆಧಾರಿತ ಸೇವೆಗಳಿಗೆ ಕನಿಷ್ಠ ಮೂಲ ದರಗಳನ್ನು ತಕ್ಷಣ ನಿಗದಿಪಡಿಬೇಕು. ಅಸ್ತಿತ್ವದಲ್ಲಿರುವ ಕಾನೂನುಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ ಖಾಸಗಿ, ವಾಣಿಜ್ಯೇತರ ವಾಹನಗಳಲ್ಲಿ ವಾಣಿಜ್ಯ ಪ್ರಯಾಣಿಕರು ಅಥವಾ ಸರಕು ಸಾಗಣೆಗೆ ಬಳಸುವುದನ್ನು ನಿಷೇಧಿಸುಬೇಕು. ಅಂತಹ ವಾಹನಗಳನ್ನು ವಾಣಿಜ್ಯ ವಾಹನಗಳಾಗಿ ಪರಿವರ್ತಿಸುವುದನ್ನು ಕಡ್ಡಾಯಗೊಳಿಸಬೇಕು. 

ಇದನ್ನೂ ಓದಿ:ಇಂದಿನಿಂದ ಟಿ20 ವಿಶ್ವಕಪ್: 20 ತಂಡ, 55 ಪಂದ್ಯ.. ಇವತ್ತು ಭಾರತಕ್ಕೆ ಅಮೆರಿಕ ಸವಾಲು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

uber ola
Advertisment