Advertisment

ಬೆಂಗಳೂರಿನಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ: VIDEO

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಪ್ರಧಾನಿ ಮೋದಿ ಚಾಲನೆ ನೀಡುವ ಹಿನ್ನೆಲೆಯಲ್ಲಿ ಮೊದಲೇ ರೈಲನ್ನು ಹೂವುಗಳಿಂದ ಸಿಂಗಾರ ಮಾಡಲಾಗಿತ್ತು.

author-image
Bhimappa
Advertisment

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಪ್ರಧಾನಿ ಮೋದಿ ಚಾಲನೆ ಮಾಡುವ ಹಿನ್ನೆಲೆಯಲ್ಲಿ ಮೊದಲೇ ರೈಲನ್ನು ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಇದು ಕರ್ನಾಟಕದಲ್ಲಿ ಸಂಚಾರ ಮಾಡುವ 11ನೇ ವಂದೇ ಭಾರತ್ ರೈಲು ಆಗಿದೆ. 

Advertisment

ಪ್ರಧಾನಿ ಮೋದಿ ಬೆಂಗಳೂರು ಟು ಬೆಳಗಾವಿಗೆ ಚಲಿಸುವ ವಂದೇ ಭಾರತ್ ನೂತನ ರೈಲಿಗೆ ಚಾಲನೆ ನೀಡಿದ್ದಾರೆ. ಮೇಖ್ರಿ ಸರ್ಕಲ್, ಮೂಲಕ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತಲುಪಿದ ಮೋದಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ರೈಲು ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುತ್ತದೆ. ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಡುವೆ ಸಂಪರ್ಕ ಕಲ್ಪಿಸಲಾಗಿದೆ. 

ಕರ್ನಾಟಕದಲ್ಲಿ ಒಟ್ಟಾರೆ 11 ವಂದೇ ಭಾರತ್ ರೈಲುಗಳು ಓಡಾಡಲಿದೆ ಎಂಬ ಖ್ಯಾತಿ ಪಡೆದುಕೊಂಡಿದೆ. ನೂತನ ಒಂದೇ ಭಾರತ್ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಈ ರೈಲು ಬುಧವಾರ ಹೊರತು ಪಡಿಸಿ ವಾರದ 6 ದಿನಗಳು ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಕುಂದಾನಗರಿ ನಡುವೆ ಸಂಚಾರ ಮಾಡಲಿದೆ. ಈ ನೂತನ ರೈಲು ಕೇವಲ 8 ಗಂಟೆಯಲ್ಲಿ ಗಮ್ಯ ಸ್ಥಾನ ತಲುಪಲಿದೆ. ಅಲ್ಲದೇ 6 ಜಿಲ್ಲಾ ಕೇಂದ್ರಗಳಲ್ಲಿ ವಂದೇ ಭಾರತ್ ಟ್ರೈನ್ ನಿಲ್ಲುತ್ತದೆ. 

Yellow Line specialization Metro Yellow Line vande bharat train, pm modi Pm Narendra Modi
Advertisment
Advertisment
Advertisment