/newsfirstlive-kannada/media/media_files/2025/08/05/poddar-plumbing-company-mb-patil-2025-08-05-09-59-30.jpg)
ಭಾರತದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಈ ಉದ್ಯೋಗ ಸಮಸ್ಯೆ ಎಂಬುದು ದೇಶದಲ್ಲಿ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ. ಯಾವ ಸರ್ಕಾರ ಬಂದ್ರೂ ಏನು ಪ್ರಯೋಜನವಿಲ್ಲ ಎಂದು ಯುವಕರು ಬೈದಾಡಿಕೊಂಡು ಓಡಾಡುತ್ತಿದ್ದಾರೆ. ಜನಸಂಖ್ಯೆ ಬೆಳವಣಿಗೆಯಿಂದಲೂ ಉದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗಿ ಕಾಡಲಿದೆ ಎಂಬುದು ಮತ್ತೊಂದು ಶಾಕಿಂಗ್ ವಿಚಾರ. ಇದರ ಮಧ್ಯೆ ನಮಗೆಲ್ಲಾ ಯಾರ್ ಕೆಲಸ ಕೊಡ್ತಾರೆ ಎಂದು ಚಿಂತಿಸುವವರಿಗೆ ಖುಷಿ ವಿಚಾರ ಸಿಕ್ಕಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರೇ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಸಿವಿಸಿ ಮತ್ತು ಪಿವಿಸಿ ಪೈಪುಗಳ ಉತ್ಪಾದಿಸೋ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ. ಈಗಾಗಲೇ ಸರ್ಕಾರ ಕಂಪನಿಗೆ ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 33 ಎಕರೆ ಜಮೀನು ನೀಡಿದೆ. ಮುಂದಿನ ವರ್ಷ 2026ರ ಆಗಸ್ಟ್ ಹೊತ್ತಿಗೆ ಇದು ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲೂ ಇದು ಘಟಕವನ್ನು ತೆರೆಯಲಿದೆ ಎಂದಿದ್ದಾರೆ ಎಂಬಿ ಪಾಟೀಲರು.
ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಆಶೀರ್ವಾದ್ ಪೈಪ್ ಗಳನ್ನು ಉತ್ಪಾದಿಸುವ ಕಂಪನಿಯಾಗಿದೆ. ಆಶೀರ್ವಾದ್ ಪೈಪ್ ಗಳು ಕರ್ನಾಟಕದಲ್ಲಿ ಮನೆ ಮಾತಾಗಿವೆ. ಪ್ಲಂಬಿಂಗ್ ಕೆಲಸಕ್ಕೆ ಜನರು ಆಶೀರ್ವಾದ್ ಪೈಪ್ ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.
ಕಂಪನಿಯು ಈ ಹಿಂದೆ 492 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಅದನ್ನು 758 ಕೋಟಿ ರೂ.ಗೆ ಏರಿಸಲು ಅದು ಅನುಮೋದನೆ ಕೋರಿದೆ. ಈ ಯೋಜನೆಯಿಂದ 3 ಸಾವಿರ ನೇರ ಉದ್ಯೋಗ ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು ಎಂ.ಬಿ. ಪಾಟೀಲರು.
#ಕೋಲಾರ ಮತ್ತು #ವಿಜಯಪುರ ದಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಬಾಗಿಲು ತೆರೆಯುತ್ತಿದೆ!
— M B Patil (@MBPatil) July 30, 2025
ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ ಈಗ ತನ್ನ ಹೂಡಿಕೆಯನ್ನು ರೂ.492 ಕೋಟಿಯಿಂದ ರೂ.758 ಕೋಟಿಗೆ ಹೆಚ್ಚಿಸಲು ಮುಂದಾಗಿದೆ.
📍 ಸ್ಥಳ: ವೇಮಗಲ್ ಕೈಗಾರಿಕಾ ಪ್ರದೇಶ, ಕೋಲಾರ
🏭 2ನೇ ಘಟಕ: #ವಿಜಯಪುರದಲ್ಲಿ ಪ್ರಸ್ತಾವಿತ
👷 ಉದ್ಯೋಗಾವಕಾಶ: ಸುಮಾರು 12,000… pic.twitter.com/ZoizGWmmd4
ಇನ್ನೂ ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500 ಕೋಟಿ ರೂ.ಗಳಿಗೆ ಕೊಂಡೊಯ್ಯುವ ಉದ್ದೇಶ ಕಂಪನಿಯದ್ದು. ಇದರಿಂದ ಸರಕಾರಕ್ಕೆ 3 ಸಾವಿರ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಬರಲಿದೆ. ಸಿವಿಸಿ ಮತ್ತು ಪಿವಿಸಿ ಪೈಪುಗಳನ್ನು ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ. ಕಂಪನಿಗೆ ವೇಮಗಲ್‌ನಲ್ಲಿ ಈಗಾಗಲೇ 28 ಎಕರೆ ನೀಡಿದ್ದು, ಉಳಿದ ಐದು ಎಕರೆ ಕೂಡ ಸದ್ಯದಲ್ಲೇ ನೀಡ್ತೀವಿ ಎಂದರು.
ಈಗಾಗಲೇ ನಾವು 7 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇವೆ. ವೇಮಗಲ್ ಘಟಕದ ಕಾರ್ಯಾರಂಭದ ನಂತರ ವಿಜಯಪುರ ಜಿಲ್ಲೆಯಲ್ಲೂ ಹೂಡಿಕೆ ಮಾಡಲಿದ್ದೇವೆ. ಇದರ ಜತೆಗೆ ಮತ್ತಷ್ಟು ಉದ್ಯೋಗ ಸೃಷ್ಟಿ ನಮ್ಮ ಗುರಿ ಎಂದು ಪೊದ್ದಾರ್ ಕಂಪನಿ ತಿಳಿಸಿದೆ.