/newsfirstlive-kannada/media/media_files/2026/01/07/janardhan-reddy-and-hdk-new-friendship-2026-01-07-11-53-11.jpg)
ಕರ್ನಾಟಕ ಪೊಲಿಟಿಕಲ್ಸ್ ನಲ್ಲಿ ಹೊಸ ವರಸೆ ಶುರುವಾಗಿದೆ. ಪರಸ್ಪರ ಮುಖನೋಡಿಕೊಳ್ಳದಿದ್ದ ಮಾಜಿ ಶತ್ರುಗಳು ಈಗ ಸ್ನೇಹಹಸ್ತ ಚಾಚಿದ್ದಾರೆ. ಸಂಕಷ್ಟದಲ್ಲಿದ್ದ ಶತ್ರುವಿನ ಬೆನ್ನಿಗೆ ಮಾಜಿ ಸಿಎಂ ಹೆಚ್ ಡಿಕೆ ನಿಂತಿದ್ದಾರೆ. ಪರಸ್ಪರ ಪೋನ್ ಮುಖಾಂತರ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಜೊತೆ ಮಾತುಕತೆ ಮಾಡಿ ಸುದ್ದಿಗೋಷ್ಠಿಯನ್ನು ನಡೆಸಿದ್ದ ಹೆಚ್ ಡಿಕೆಗೆ, ಸುದ್ದಿ ಗೋಷ್ಠಿ ಬಳಿಕ ಕಾಲ್ ಮಾಡಿ ಧನ್ಯವಾದವನ್ನು ಜನಾರ್ದನ ರೆಡ್ಡಿ ತಿಳಿಸಿದ್ದಾರೆ. ಆ ಮೂಲಕ ತಮ್ಮ ಮತ್ತೊಬ್ಬ ಶತ್ರು ಡಿಕೆಶಿ ವಿರುದ್ಧ ಹೋರಾಟಕ್ಕೆ ಚಾಣಕ್ಯ ನೀತಿಯನ್ನು ಹೆಚ್ ಡಿಕೆ ಅನುಸರಿಸಿದ್ದಾರೆ. ಬಳ್ಳಾರಿ ಗಲಾಟೆಯ ಬಳಿಕ ತಮ್ಮ ವಿರುದ್ಧ 150 ಕೋಟಿ ರೂಪಾಯಿ ಕಿಕ್ ಬ್ಯಾಕ್ ಆರೋಪ ಮಾಡಿದ್ದ ಗಣಿಧಣಿ ಜನಾರ್ದನ ರೆಡ್ಡಿಗೆ ಎಚ್‌ಡಿ.ಕುಮಾರಸ್ವಾಮಿ ಬೆಂಬಲ ನೀಡಿರುವುದು ವಿಶೇಷ.
2006-07 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಇದೇ ಜನಾರ್ಧನ ರೆಡ್ಡಿ, ಕುಮಾರಸ್ವಾಮಿ ಹಾಗೂ ಚೆನ್ನಗಪ್ಪ ವಿರುದ್ಧ 150 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದ ಆರೋಪ ಮಾಡಿದ್ದರು. ಅದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು.
ಆದರೇ, ಈಗ ರಾಜ್ಯ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಜ್ಯದ ಕೃಷ್ಣಾ, ಕಾವೇರಿ, ತುಂಗಭದ್ರಾ ನದಿಗಳಲ್ಲಿ ಭಾರಿ ನೀರು ಹರಿದು ಹೋಗಿದೆ. ಅದೇ ರೀತಿ ರಾಜಕೀಯವಾಗಿಯೂ ಕಾಂಗ್ರೆಸ್ ಜೊತೆ ಮೈತ್ರಿ ಬಿಟ್ಟು ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಬೆಳೆಸಿ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿದ್ದಾರೆ. ಹೀಗಾಗಿ ಬಿಜೆಪಿ ನಾಯಕ ಜನಾರ್ಧನ ರೆಡ್ಡಿ ಬೆಂಬಲಕ್ಕೆ ಕುಮಾರಸ್ವಾಮಿ ನಿಂತಿದ್ದಾರೆ.
ಇಬ್ಬರು ಒಂದಾಗಿ ಡಿಕೆಶಿ ವಿರುದ್ಧ ಸಮರ ಸಾರುವುದಕ್ಕೆ ಪ್ಲಾನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಜೊತೆಗೆ ಡಿಕೆಶಿ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಲು ತೀರ್ಮಾನ ಮಾಡಿದ್ದಾರೆ. ಆ ಮೂಲಕ ದ್ವೇಷ ಮರೆತು ಒಂದಾದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜನಾರ್ಧನ ರೆಡ್ಡಿ ಒಂದಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಸೋಲಿಸಲು ಒಂದಾಗಿ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ರಾಜ್ಯದ ಹೊಸ ಜೋಡೆತ್ತುಗಳ ಆಗ್ತಾರಾ ಹೆಚ್ ಡಿಕೆ, ಜನಾರ್ದನ ರೆಡ್ಡಿ ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2024/08/HDK.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us