ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್ ಭೈರಪ್ಪ ಅವರು ಇಂದು ವಿಧಿವಶರಾಗಿದ್ದಾರೆ. ಈ ಸಂಬಂಧ ರಾಜ್ಯದೆಲ್ಲೆಡೆ ಸಾಹಿತ್ಯಾಸಕ್ತರು, ಗಣ್ಯರು ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸದ್ಯ ಎಸ್​.ಎಲ್ ಭೈರಪ್ಪ ಅವರ ಬಗ್ಗೆ ಖ್ಯಾತ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಮಾತನಾಡಿದ್ದಾರೆ. ಅವರು ಜೀವಂತ ಇರಬೇಕಾದರೆ ಅವರ ಕಾದಂಬರಿಯನ್ನು ನಾಟಕವನ್ನಾಗಿ ಮಾಡಿದೇವು. ಮೊದಲು ಈ ಬಗ್ಗೆ ಕೇಳಿದಾಗ ಅವರು ನಮ್ಮನ್ನು ಅನುಮಾನದಿಂದ ಕೇಳಿದ್ದರು ಎಂದು ಹೇಳಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಎಸ್​.ಎಲ್ ಭೈರಪ್ಪ ಅವರ ಜೊತೆ ಒಡನಾಟ ಹೆಚ್ಚಾಗಿತ್ತು. ಅದು ನನ್ನ ದೊಡ್ಡ ಪುಣ್ಯ. ನಮ್ಮ ತಂಡದ ಪರವಾಗಿ, ಅವರ ಮನೆಯವರಿಗೆ, ಕುಟುಂಬಸ್ಥರಿಗೆ ಈ ದುಃಖದ ನೋವು ಬರಿಸುವಂತ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಭಾರತ ಕಂಡ ಶ್ರೇಷ್ಠ ಬರಹಗಾರರು, ನಮ್ಮ ನೆನಪಲ್ಲಿ ಸದಾ ಸ್ಮರಣೆಯಾಗಿ, ಸ್ಪೂರ್ತಿದಾಯಕವಾಗಿ ಇರುತ್ತಾರೆ. ಪರ್ವ ಕಾದಂಬರಿ ನಾಟಕ ಮಾಡುವಾಗ ನನ್ನನ್ನು ಅನುಮಾನದಿಂದ ಕೇಳಿದ್ದರು. ಆಗ ನಾನು ಅದರ ಸ್ಕ್ರಿಪ್ಟ್ ಬರೆದುಕೊಡುತ್ತೇನೆ ಎಂದಿದ್ದೆ. ಸ್ಕ್ರಿಪ್ಟ್ ಬರೆದು ಕೊಟ್ಟಾಗ ಆವಾಗ ಅದನ್ನು ಓದಿ ನನಗೆ ಅವರು ಅನುಮತಿ ಕೊಟ್ಟರು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ