/newsfirstlive-kannada/media/media_files/2025/12/11/ramnagar-silkworm-price-rise-2025-12-11-18-22-10.jpg)
ರಾಮನಗರದಲ್ಲಿ ರೇಷ್ಮೆ ಗೂಡಿನ ಬೆಲೆ 905 ರೂಪಾಯಿಗೆ ಏರಿಕೆ
ಕಳೆದೊಂದು ತಿಂಗಳಿನಿಂದ ರೇಷ್ಮೆ ಧಾರಣೆಯಲ್ಲಿ ಗಣನೀಯ ಏರಿಕೆಯಾಗಿದ್ದು, ದ್ವಿತಳಿ ರೇಷ್ಮೆ ಗೂಡಿನ ಬೆಲೆ 905 ರೂ.ಗೆ ತಲುಪಿದೆ. ಹವಾಮಾನ ವೈಪರೀತ್ಯದಿಂದ ಸದಾ ನಷ್ಟ ಅನುಭವಿಸುತ್ತಿದ್ದ ರೇಷ್ಮೆ ಬೆಳೆಗಾರರು ಸದ್ಯ ಲಾಭದ ನಿರೀಕ್ಷೆಯಲ್ಲಿದ್ದು, ರೇಷ್ಮೆ ಗೂಡಿಗೆ ಬಂಗಾರದ ಬೆಲೆ ಬಂದಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಗೂಡಿನ ಬೆಲೆ 1ಸಾವಿರ ದಾಟುವ ಅಂದಾಜು ಮಾಡಲಾಗಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.
ರೇಷ್ಮೆ ಗೂಡಿಗೆ ಬಂಗಾರದ ಬೆಲೆ, ದಿನದಿನಕ್ಕೂ ಧಾರಣೆ ಏರಿಕೆ
ದ್ವಿತಳಿ ರೇಷ್ಮೆಗೂಡು 905 ರೂ.ಗೆ ವ್ಯಾಪಾರ, 1 ಸಾವಿರ ದಾಟುವ ನಿರೀಕ್ಷೆ
ಏಷ್ಯಾ ಖಂಡದಲ್ಲೇ ರೇಷ್ಮೆಗೂಡಿನ ಅತಿದೊಡ್ಡದಾದ ರಾಮನಗರ ಮಾರುಕಟ್ಟೆಯಲ್ಲಿ ಕಳೆದ 7 ದಿನಗಳ ಅವಧಿಯಲ್ಲಿ ರೇಷ್ಮೆಗೂಡಿನ ದರ 800ರೂ ಗಡಿ ದಾಟಿ 900ರೂ ತಲುಪಿದೆ. ದರ ಅರಕ್ಕೇರುತ್ತಿಲ್ಲ, ಮೂರಕ್ಕಿಳಿಯುತ್ತಿಲ್ಲ ಎಂಬ ಬೆಳಗಾರರ ಗೊಣಗಾಟದ ಮಧ್ಯೆ ಕಳೆದ ಒಂದು ವಾರದಿಂದ ಏರುಗತಿಯಲ್ಲಿರುವ ಧಾರಣೆಯು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ರೇಷ್ಮೆಗೂಡು ಹರಾಜಾಗುತ್ತಿದೆ. ಈ ವರ್ಷ ಮೊದಲ ಬಾರಿಗೆ ಮಿಶ್ರತಳಿ ಗೂಡಿನ ದರ ದಾಖಲೆ ಗರಿಷ್ಠ 795 ರೂ ಹಾಗೂ ದ್ವಿತಳಿಯು ಗರಿಷ್ಠ 905ಕ್ಕೆ ಮಾರಾಟವಾಗಿದೆ. ಗೂಡಿನ ಧಾರಣೆ ಹೆಚ್ಚಳಕ್ಕೆ ಚಳಿಗಾಲದ ವಾತಾವರಣವೂ ಕಾರಣವಾಗಿದ್ದು, ಸಾಮಾನ್ಯ ದಿನಗಳಲ್ಲಿ 28 ದಿನ ಇರುತ್ತಿದ್ದ ಹುಳು ಸಾಕಾಣಿಕೆ ಅವಧಿ, ಇದೀಗ 30 ದಿನ ಮೀರಿದೆ. ಇದರಿಂದಾಗಿ ಗೂಡು ಉತ್ಪಾದನೆ ತಗ್ಗಿದ್ದು, ಅವಕ ಕಮ್ಮಿಯಾಗಿದೆ. ಮಾರುಕಟ್ಟೆಗೆ ನಿತ್ಯ 45 ಮೆಟ್ರಿಕ್ ಟನ್ ಬರುತ್ತಿದ್ದ ಗೂಡು, ಈಗ 25ರಿಂದ 30 ಮೆಟ್ರಿಕ್ ಟನ್‌ಗೆ ಇಳಿದಿದೆ ಇದರಿಂದ ರೇಷ್ಮೆ ದರ ಗಣನೀಯ ಏರಿಕೆ ಕಾಣ್ತಿದೆ ಎಂದು ರೇಷ್ಮೆ ಮಾರುಕಟ್ಟೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/11/ramnagar-silkworm-price-rise02-2025-12-11-18-25-26.jpg)
ಇನ್ನೂ ರೇಷ್ಮೆ ದರ ಏರಿಕೆ ಹಿನ್ನೆಲೆ ರೇಷ್ಮೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಸಾಕಷ್ಟು ನಷ್ಟ ಕಂಡಿದ್ದೇವೆ. ಸದ್ಯ ಈ ಬಾರಿ ದಾಖಲೆ ಪ್ರಮಾಣ ದರ ಸಿಕ್ಕಿರೋದು ಸಂತಸದ ವಿಚಾರ. ಇದರಿಂದ ಮತ್ತಷ್ಟು ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಆಗುತ್ತೆ. ರೀಲರ್ಸ್ ಗಳು ಉತ್ತಮ ಬೆಲೆ ನೀಡ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸಿದ್ರೆ ನಮಗೆ ಇನ್ನೂ ಅನುಕೂಲ ಆಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಒಟ್ಟಾರೆ ರೇಷ್ಮೆ ದರದ ಏರಿಳಿತಕ್ಕೆ ಸಿಲುಕಿ ನಲುಗಿದ್ದ ರೈತರು ಸದ್ಯ ದರ ಗಣನೀಯ ಏರಿಕೆಯಿಂದ ನಿಟ್ಟುಸಿರು ಬಿಟ್ಟಿದ್ದು, ಬಹುಕಾಲದ ಬಳಿಕ ರೇಷ್ಮೆ ಬೆಳೆಯಲ್ಲಿ ಲಾಭ ನೋಡುವಂತಾಗಿದೆ.
ಮೋಹನ್, ನ್ಯೂಸ್ ಫಸ್ಟ್, ರಾಮನಗರ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us