/newsfirstlive-kannada/media/media_files/2025/10/14/private-buses-in-bangalore-2025-10-14-15-34-14.jpg)
ದೀಪಾವಳಿ ಹಬ್ಬದ ವೇಳೆ ಖಾಸಗಿ ಬಸ್ ಟಿಕೆಟ್ ದರ ಮೂರು ಪಟ್ಟು ಏರಿಕೆ
ಹಬ್ಬ ಬಂತು ಅಂದ್ರೆ ಬ್ಯಾಗು ಹಿಡಿದು ಸೀದಾ ನಡಿ ಅಂತ ಎಲ್ಲಾ ತಮ್ಮೂರಿನ ಕಡೆ ಬಸ್​ ಹತ್ತಿ ಹೊರಡುವುದಕ್ಕೆ ಶುರು ಮಾಡ್ತಾರೆ. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್​ ಮಾಲೀಕರು ಬಸ್ ರೇಟ್ ಒನ್ ಟು ಟ್ರಿಪಲ್ ಅಂತ ಅನೌನ್ಸ್​ ಮಾಡಿದ್ದಾರೆ.. ಸೋ ಈಗ ಟಿಕೆಟ್​ ಬುಕ್​ ಮಾಡೋಕೆ ಹೊರಟ ಜನ ಶಾಕ್​ ಆಗಿದ್ದು, ಭೂಮಿಗಿಂತ ಭಾರವಾದ ಈ ದರ ನೋಡಿದ್ರೆ, ಗಗನ ಪ್ರಯಾಣಕ್ಕೆ ಏಣಿ ಹಾಕೋದ್​​ ವಾಸಿ ಅಂತಿದ್ದಾರೆ.
ಎಲ್ಲೆಲ್ಲೂ ಹಬ್ಬ ಹಬ್ಬ .. ಬಂದೇ ಬಿಡ್ತು ದೀಪಾವಳಿ ಹಬ್ಬ... ನಮ್ಮೂರಿಗೆ ಹೋಗೋದೆ ಫ್ಯಾಮಿಲಿ ಜೊತೆ ಕಾಲ ಕಳೆಯೋದಕ್ಕೆ ,ಪಟಾಕಿ ಸಿಡಿಸಿ ಸಂಭ್ರಮಿಸೋದಕ್ಕೆ ಅಂತ ಸಿಲಿಕಾನ್​ ಸಿಟಿ ಮಂದಿ ರೆಡಿಯಾಗಿದ್ರು. ಆದ್ರೆ, ಈ ಖುಷಿಯಲ್ಲಿ ರಾಕೆಟ್​ನಂತೆ ಖಾಸಗಿ ಬಸ್​ಗಳ ಟಿಕೆಟ್ ಬೆಲೆ ಮೇಲಕ್ಕೇರಿದೆ.
GFX. FF
ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರಿಗೆ ಬಿತ್ತು ದರ ಏರಿಕೆ ಬರೆ
ಖಾಸಗಿ ಬಸ್ ಮಾಲೀಕರಿಂದ ಜೇಬಿನ ಸುಲಿಗೆಗೆ ಕತ್ತರಿ ಪ್ರಯೋಗ
ಹೌದು, ಹಾಲಿನ ದರ ಹಾಲಾಹಲ.. ತರಕಾರಿ ರೇಟು ಕೇಳೊಂಗೆ ಇಲ್ಲ.. ದಿನಸಿ ದುಬಾರಿ.. ಮದ್ಯದ ಸ್ಥಿತಿ ಅಯ್ಯೋ ಅಯ್ಯೋ ಅನ್ನೋ ಪರಿಸ್ಥಿತಿ ಅನ್ನುವಂತಿರುವಾಗ ಬಸ್ ದರ ಕೂಡ ಏಕಾಎಕಿ ಒನ್​ ಟು ಡಬಲ್​ ಅಲ್ಲ ಒನ್​ ಟು ಟ್ರಿಪಲ್​ ಆಗಿದೆ. ಸಾಲು ಸಾಲು ರಜೆ ಹಿನ್ನೆಲೆ ಊರಿಗೆ ಹೊರಟವರ ಜೇಬಿನ ಸುಲಿಗೆಗೆ ಕೆಲ ಖಾಸಗಿ ಬಸ್​ ಮಾಲೀಕರು ಮುಂದಾಗಿದ್ದಾರೆ. ಹಾಗಿದ್ರೆ ಹೇಗಿದೆ ದರ ಏರಿಕೆಯ ಪ್ರಯೋಗ ಅಂದ್ರೆ, ನೀವೇ ನೋಡಿ
ಖಾಸಗಿ ಬಸ್ ದುಬಾರಿ
ಬೆಂಗಳೂರು - ಮಡಿಕೇರಿ
ಇಂದಿನ ದರ ಅ.17ರ ದರ
₹500- ₹600 ₹2299- ₹5000
==========
ಬೆಂಗಳೂರು - ಉಡುಪಿ
ಇಂದಿನ ದರ ಅ. 17ರ ದರ
₹600- ₹950 ₹2500- ₹3700
===========
ಬೆಂಗಳೂರು-ಧಾರವಾಡ
ಇಂದಿನ ದರ ಅ. 17ರ ದರ
₹800 ₹1200 ₹1700-₹3000
===========
ಬೆಂಗಳೂರು -ಬೆಳಗಾವಿ
ಇಂದಿನ ದರ ಅ.17ರ ದರ
₹800 ₹1000 ₹2000-₹3999
============
ಬೆಂಗಳೂರು - ದಾವಣಗೆರೆ
ಇಂದಿನ ದರ ಅ.17ರ ದರ
₹600 ₹800 ₹ 1300-₹4590
=============
ಬೆಂಗಳೂರು - ಮಂಗಳೂರು
ಇಂದಿನ ದರ ಅ.17ರ ದರ
₹600- ₹950 ₹2500- ₹3500
ಬೆಂಗಳೂರಿನಿಂದ ಮಡಿಕೇರಿಗೆ ಇಂದಿನ ಖಾಸಗಿ ಬಸ್​ ದರ 500-600 ರೂಪಾಯಿ ಇದೆ. ಅದೇ ಅಕ್ಟೋಬರ್​ 17 ರಂದು 2299- 5000 ರೂಪಾಯಿ ನಿಗದಿಯಾಗಿದೆ.
ಬೆಂಗಳೂರಿನಿಂದ ಉಡುಪಿಗೆ ಇಂದಿನ ದರ 600-950 ರೂಪಾಯಿ ಇದೆ. ಅದೇ ಅಕ್ಟೋಬರ್​ 17 ರಂದು 2500- 3700 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಇಂದಿನ ದರ 800 ರಿಂದ 1200 ರೂಪಾಯಿ ಇದೆ. ಅದೇ ಅಕ್ಟೋಬರ್​ 17 ರಂದು 1700-3000 ರೂಪಾಯಿಗೆ ನಿಗದಿಯಾಗಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಇಂದಿನ ದರ 800 ರಿಂದ 1000 ರೂಪಾಯಿ ಇದೆ. ಅದೇ ಅಕ್ಟೋಬರ್​ 17 ರಂದು 2000-3999 ರೂಪಾಯಿ ನಿಗದಿಯಾಗಿದೆ.
ಬೆಂಗಳೂರಿನಿಂದ ದಾವಣಗೆರೆಗೆ ಇಂದಿನ ದರ 600-800 ರೂಪಾಯಿ ಇದೆ. ಅ.17ರ ದರ ₹ 1300 ರಿಂದ 4590 ರೂಪಾಯಿ ಆಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಇಂದಿನ ದರ ₹600- ₹950 ರೂಪಾಯಿ ಇದೆ. ಅದೇ ಅಕ್ಟೋಬರ್​ 17 ರಂದು ₹2500- ₹3500 ರೂಪಾಯಿ ನಿಗದಿಯಾಗಿದೆ.
ಅಕ್ಟೋಬರ್ 20, ಸೋಮವಾರ ದೀಪಾವಳಿ ಹಬ್ಬವಿದೆ . ಶುಕ್ರವಾರದಿಂದಲೇ ಜನ ಊರಿಗೆ ಹೋಗೋ ಪ್ಲಾನ್​ ಮಾಡಿದ್ದಾರೆ. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್​ ಮಾಲೀಕರು ಸುಲಿಗೆಗೆ ಇಳಿದಿರೋದು ಖಂಡನೀಯ. ಹೀಗೆ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್​ಗಳ ಈ ಬೆಲೆ ಏರಿಕೆಯಾಟ ಹೊಸದೇನಲ್ಲ. ಸರ್ಕಾರ , ಸಾರಿಗೆ ಇಲಾಖೆ , ಆರ್‌ಟಿಓ ಗಳು ಟಿಕೆಟ್ ದರ ಟ್ರಿಪಲ್ ಆಗಿರೋದಕ್ಕೆ ಈಗಲೇ ಕಡಿವಾಣ ಹಾಕಬೇಕು.
ಪ್ರಗತಿ ಶೆಟ್ಟಿ, ನ್ಯೂಸ್​ಫಸ್ಟ್​​ ಬೆಂಗಳೂರು .
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.