/newsfirstlive-kannada/media/media_files/2025/12/13/cyber-crime-case-against-youth-2025-12-13-14-00-08.jpg)
ಮಕ್ಕಳ ಅಶ್ಲೀಲ ವಿಡಿಯೋ ಅತಿಯಾಗಿ ವೀಕ್ಷಿಸಿದ್ದಕ್ಕೆ ಕೇಸ್ ದಾಖಲು
ಅತಿಯಾಗಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಆರೋಪದಡಿ ರಾಯಚೂರಿನ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಮಕ್ಕಳ ಲೈಂಗಿಕ ಶೋಷಣೆಯ ವಸ್ತುಗಳ ಸೈಬರ್ ಕ್ರೈಂ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವೆಬ್ ಸೈಟ್ ಗಳಲ್ಲಿ ಸದಾ ಅಶ್ಲೀಲ ವಿಡಿಯೋಗಳನ್ನೇ ಯುವಕ ವೀಕ್ಷಣೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹಗಲು-ರಾತ್ರಿ ಎನ್ನದೇ ಸದಾ ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲೇ ಮುಳುಗಿರುತ್ತಿದ್ದ. ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ವಿಡಿಯೋ ವೀಕ್ಷಣೆ ಕೂಡ ಅಪರಾಧ. ಬಹಳ ಜನರಿಗೆ ಇದರ ಬಗ್ಗೆ ಮಾಹಿತಿ ಇರಲ್ಲ. Child sexual abuse material Act ನಡಿ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಕೂಡ ಅಪರಾಧ. ಹೀಗಾಗಿ ರಾಯಚೂರು ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವೆಬ್ ಸೈಟ್ ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ಇ ಮೇಲ್ ಐ.ಡಿ. ಆಧಾರದ ಮೇಲೆ ಅತಿ ಹೆಚ್ಚು ವಿಡಿಯೋ ವೀಕ್ಷಣೆ ಮಾಡಿದ ಯುವಕನನ್ನು ಪೊಲೀಸರು ಪತ್ತೆ ಹಚ್ಚಿ ಕೇಸ್ ದಾಖಲಿಸಿದ್ದಾರೆ. ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಬಳಿಕ ಯುವಕ ಮೊಬೈಲ್ ವಿಡಿಯೋ ವೀಕ್ಷಣೆ ಮಾಡಿದ ಹಿಸ್ಟರಿಯನ್ನು ಡೀಲೀಟ್ ಮಾಡುತ್ತಿದ್ದ. ಆದರೇ, ಅಶ್ಲೀಲ ವೆಬ್ ಸೈಟ್ ನಲ್ಲಿ ಯುವಕ ವಿಡಿಯೋ ನೋಡಿದ ದಾಖಲೆ ರೆಕಾರ್ಡ್ ಆಗಿತ್ತು.
ಚೈಲ್ಡ್ ಸೆಕ್ಸ್ಯುಯಲ್ ಮೆಟಿರೀಯಲ್ ಆ್ಯಕ್ಟ್ ನಡಿ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ್ದು ಸಾಬೀತಾದರೇ, 5 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us