/newsfirstlive-kannada/media/media_files/2025/11/29/siddaramiah-dk-shivakumar-2025-11-29-11-14-27.jpg)
ಅಧಿಕಾರ ಹಂಚಿಕೆ ವಿಚಾರದಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದ್ದವು. ಇದರಿಂದ ಕಾಂಗ್ರೆಸ್​ ಹೈಕಮಾಂಡ್​ ಇಕ್ಕಟ್ಟಿಗೆ ಸಿಲುಕಿತ್ತು. ಎದುರಾಗಿರುವ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಸಿದ್ದು ಮತ್ತು ಡಿಕೆಶಿಗೆ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿತ್ತು. ಅಂತೆಯೇ ಇಂದು ಸಿದ್ದು ಹಾಗೂ ಡಿಕೆಶಿ ಬ್ರೇಕ್​ಫಾಸ್ಟ್​ ಮೀಟಿಂಗ್ ಮಾಡಿದರು. ಈ ವೇಳೆ ಇಬ್ಬರು ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಮಾತುಕತೆ ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ರಾಜ್ಯ ರಾಜಕೀಯ ಬೆಳವಣಿಗೆ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
- Nov 29, 2025 12:11 IST
ಈಡೇರಿಸುತ್ತಾರೆ ಎಂಬ ಭರವಸೆ ನನಗೆ ಇದೆ-ಡಿಕೆ ಸುರೇಶ್
ಒಂದಾಗಿ ಹೋಗೋದು ಅವರ ಕರ್ತವ್ಯ ಕೂಡ. ಅವರು ರಾಜ್ಯದ ಜನರಿಗೆ ಮಾತು ಕೊಟ್ಟಿದ್ದಾರೆ. ಅದನ್ನು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳು ಈಡೇರಿಸುತ್ತಾರೆ ಎಂಬ ಭರವಸೆ ನನಗೆ ಇದೆ. ಪವರ್ ಶೇರಿಂಗ್ ಬಗ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸ್ಪಷ್ಟನೆ ಕೊಟ್ಟಿರೋದ್ರಿಂದ ಹೆಚ್ಚು ಚರ್ಚೆ ಬೇಡ. ಇಬ್ಬರು ನಾಯಕರೇ ಹೇಳಿರೋದ್ರಿಂದ ಅದರ ಬಗ್ಗೆ ಮತ್ತೊಬ್ಬರು ಮಾತನ್ನಾಡುವ ಅಗತ್ಯತೆ ಇಲ್ಲ. ಶಿವಕುಮಾರ್ ಅವರು, ಪ್ರತಿಯೊಂದು ಸಂದರ್ಭದಲ್ಲಿ ಗಾಂಧಿ ಕುಟುಂಬದ ತ್ಯಾಗ, ಬಲಿದಾನವನ್ನು ಹೇಳುತ್ತಲೇ ಇರುತ್ತಾರೆ. ನಿನ್ನೆ ಮಾತ್ರ ಹೇಳಿಲ್ಲ. ಸೋನಿಯಾ ಗಾಂಧಿ ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಹೃದಯದಿಂದ ಕಾರ್ಯಕರ್ತರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ -ಡಿಕೆ ಸುರೇಶ್, ಮಾಜಿ ಸಂಸದ
- Nov 29, 2025 11:48 IST
ಐದು ಸಂದೇಶ
- ಹೈಕಮಾಂಡ್ ಹೇಳಿದ್ದನ್ನು ಕೇಳುವುದು
- ಅಧಿವೇಶನದಲ್ಲಿ ಸರ್ಕಾರಕ್ಕೆ ಯಾವುದೇ ವ್ಯತ್ಯಾಸ ಆಗದಂತೆ ಕ್ರಮ
- ದೆಹಲಿಯಲ್ಲಿ ಹೈಕಮಾಂಡ್ ಸಭೆ ಕರೆದಾಗ ಹೋಗುವುದು
- ಗುಂಪುಗಾರಿಕೆಗೆ ಅವಕಾಶ ಕೊಡದಂತೆ ಎರಡೂ ಕಡೆಯಿಂದ ಕ್ರಮ
- ನಮ್ಮ ನಮ್ಮ ಬೇಡಿಕೆಗಳನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸುವುದು
- Nov 29, 2025 11:30 IST
ಡಿಕೆ ಶಿವಕುಮಾರ್ ಏನು ಹೇಳಿದರು..?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಜನರಿಗೆ ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿದ್ದೇವೆ. ಜನರು ನಮ್ಮ ಮೇಲೆ ವಿಶ್ವಾಸ ಕೊಟ್ಟು ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ವಿರೋಧ ಪಕ್ಷದ ವಿರುದ್ಧ ಪ್ರತಿತಂತ್ರವನ್ನ ರೂಪಿಸಿದ್ದೇವೆ. ರಾಜಕೀಯವಾಗಿ ಇಬ್ಬರದ್ದೂ ಒಂದೇ ತೀರ್ಮಾನ. ಹೈಕಮಾಂಡ್ ಹೇಳಿದಂತೆ ಇಬ್ಬರೂ ಒಟ್ಟಿಗೆ ಹೋಗುತ್ತೇವೆ. ನಾನು ಯಾವ ಗುಂಪಿಗೂ ಅವಕಾಶ ನೀಡಿಲ್ಲ. ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
- Nov 29, 2025 11:26 IST
ಹೈಕಮಾಂಡ್ ಏನು ತೀರ್ಮಾನ ಕೊಡುತ್ತೋ ಅದರಂತೆ ನಡೆಯುತ್ತೇವೆ
ಹೈಕಮಾಂಡ್ ಏನು ಹೇಳಲಿದೆಯೋ ಅದಕ್ಕೆ ನಾವು ಬದ್ಧ. ನಾವಿಬ್ಬರೂ ಇದಕ್ಕೆ ಬದ್ಧರಾಗಿದ್ದೇವೆ. ಅಸೆಂಬ್ಲಿ ಇರುವ ಕಾರಣ ಇಬ್ಬರಿಗೂ ಗೊಂದಲ ತಿಳಿಗೊಳಿಸಿ ಎಂದು ಹೈಕಮಾಂಡ್ ಹೇಳಿತ್ತು. ನಾಳೆಯಿಂದ ಯಾವುದೇ ಗೊಂದಲ ಇರೋದಿಲ್ಲ. ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ಕೆಲವು ಮಾಧ್ಯಮಗಳಿಂದ ಗೊಂದಲ ಸೃಷ್ಟಿಯಾಗಿದೆ. ಹೈಕಮಾಂಡ್ ಏನು ತೀರ್ಮಾನ ಕೊಡುತ್ತೋ ಅದರಂತೆ ನಡೆಯುತ್ತೇವೆ. ನಾನು ಮತ್ತು ಡಿಕೆಶಿ ಚರ್ಚಿಸಿ ತೀರ್ಮಾನ ಮಾಡಿದ್ದೇವೆ ಎಂದರು.
- Nov 29, 2025 11:24 IST
ನಾವು 142 ಜನ ಶಾಸಕರು ಇದ್ದೇವೆ - ಸಿದ್ದರಾಮಯ್ಯ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಸುಳ್ಳು ಆರೋಪಗಳನ್ನು ಮಾಡುವುದು ಬಿಜೆಪಿ, ಜೆಡಿಎಸ್ ಚಾಳಿ. ಬಹಳ ಸಮರ್ಥವಾಗಿ ನಾವು ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರಗಾರಿಕೆಯನ್ನ ನಾವು ಮಾಡಿದ್ದೇವೆ. ನಾವು 142 ಜನ ಶಾಸಕರು ಇದ್ದೇವೆ. ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಸಾಧ್ಯವೇ ಇಲ್ಲ. ಬಿಜೆಪಿ, ಜೆಡಿಎಸ್ ಇಬ್ಬರೂ ಸೇರಿದರೂ 82 ಆಗಬಹುದು. ಅದಕ್ಕಿಂತಲೂ ಹೆಚ್ಚಿನ ಶಾಸಕರು ಅವರ ಬಳಿ ಇಲ್ಲ. ಅವರು ಅಸೆಂಬ್ಲಿಯಲ್ಲಿ ಏನೇ ಆರೋಪ ಮಾಡಿದರೂ ಸಮರ್ಥವಾಗಿ ಎದುರಿಸುತ್ತೇವೆ -ಸಿದ್ದರಾಮಯ್ಯ
- Nov 29, 2025 11:20 IST
ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ-ಸುದ್ದಿಗೋಷ್ಟಿಯಲ್ಲಿ ಸಿಎಂ ಹೇಳಿಕೆ
ಕೆಲ ದಿನಗಳಿಂದ ಅನಗತ್ಯವಾಗಿ ಕೆಲ ಗೊಂದಲ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಗೊಂದಲ ನಿರ್ಮಾಣವಾಗಿದೆ. ನಾವಿಬ್ಬರೇ ಕುಳಿತು ಮಾತಾಡಿದೆವು. ಮುಂದಿನ ಚುನಾವಣೆ ನಮಗೆ ಬಹಳ ಮುಖ್ಯ. ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಚರ್ಚಿಸಿದೆವು. ಕಾಂಗ್ರೆಸ್ ಅನ್ನ ಮತ್ತೆ ಅಧಿಕಾರಕ್ಕೆ ತರಬೇಕೆಂದು ಚರ್ಚಿಸಿದೆವು. ಕಳೆದ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಿದೆವೋ ಅದೇ ರೀತಿ ಮುಂದೆಯೂ ಒಟ್ಟಿಗೆ ಇರುತ್ತೇವೆ. ನನಗೆ, ಡಿಕೆಶಿಗೆ ಯಾವುದೇ ವ್ಯತ್ಯಾಸ ಇಲ್ಲ. ಇಂದಿಗೂ ಎಂದೆಂದಿಗೂ ವ್ಯತ್ಯಾಸ ಇಲ್ಲ, ಒಟ್ಟಿಗೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
- Nov 29, 2025 11:17 IST
ಬ್ರೇಕ್ಫಾಸ್ಟ್ ತುಂಬಾನೇ ಚೆನ್ನಾಗಿತ್ತು ಸಿಎಂ
ಬ್ರೇಕ್ಫಾಸ್ಟ್ ತುಂಬಾನೇ ಚೆನ್ನಾಗಿಯೇ ಇತ್ತು. ಡಿಕೆಶಿ ಅವರು ನಮ್ಮ ಮನೆಗೆ ಬ್ರೇಕ್ಫಾಸ್ಟ್ಗೆ ಬಂದಿದ್ದರು. ಯಾಕೆಂದರೆ, ಹೈಕಮಾಂಡ್ ಡಿಕೆಶಿ ಅವರನ್ನು ಬ್ರೇಕ್ಫಾಸ್ಟ್ ಗೆ ಕರೆಯುವಂತೆ ಕೇಳಿಕೊಂಡಿತ್ತು. ಅದರಂತೆ ಶಿವಕುಮಾರ್ ಕೂಡ ಬ್ರೇಕ್ಫಾಸ್ಟ್ಗೆ ಬರುವಂತೆ ನನ್ನನ್ನು ಆಹ್ವಾನಿಸಿದರು. ಈಗ ಬೇಡ, ಇನ್ನೊಂದು ದಿನ ಊಟಕ್ಕೆ ಬರುತ್ತೀನೆ ಎಂದೆ. ಅದರಂತೆ ಶಿವಕುಮಾರ್ ಇವತ್ತು ನಮ್ಮ ಮನೆಗೆ ಬ್ರೇಕ್ಫಾಸ್ಟ್ಗೆ ಬಂದಿದ್ದರು ಅಂತಾ ಸಿದ್ದರಾಮಯ್ಯ ಹೇಳಿದರು.
- Nov 29, 2025 10:50 IST
ಟ್ವೀಟ್ ಮಾಡಿದ ಸಿದ್ದರಾಮಯ್ಯ
ಡಿಕೆಶಿ ಜೊತೆಗೆ ಮಾತುಕತೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ. @DKShivakumarpic.twitter.com/7ak3xFjatL
— Siddaramaiah (@siddaramaiah) November 29, 2025 - Nov 29, 2025 10:45 IST
ಸಭೆ ಮುಕ್ತಾಯ.. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಬ್ರೇಕ್ಫಾಸ್ಟ್ ಮೀಟಿಂಗ್ ಮುಕ್ತಾಯವಾಗಿದೆ. ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
- Nov 29, 2025 10:40 IST
ಬ್ರೇಕ್ ಫಾಸ್ಟ್ ಮೀಟಿಂಗ್, ಆಪ್ತರಿಗೆ ಟೆನ್ಷನ್
ಸಿಎಂ, ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ಮೀಟಿಂಗ್ ಮಾಡ್ತಿದ್ದಾರೆ. ಈ ಮಧ್ಯೆ ಅವರ ಆಪ್ತ ವಲಯದಲ್ಲಿ ಟೆನ್ಷನ್ ಹೆಚ್ಚಾಗಿದೆ. ನಾಯಕರು ಯಾವ ತೀರ್ಮಾನಕ್ಕೆ ಬರ್ತಾರೆ? ನಮ್ಮ ಲೀಡರ್ ಪರ ನಾವು ಮಾಡಿದ್ದ ತಂತ್ರಗಳು ಏನಾಗುತ್ತೆ? ನಮ್ಮ ನಾಯಕರು ಪಟ್ಟು ಸಡಿಲಿಸದಿರಲಿ ಎಂಬ ಟೆನ್ಷನ್ ಶುರುವಾಗಿದೆ.
- Nov 29, 2025 10:28 IST
ಡೋರ್ ಕ್ಲೋಸ್ ಮಾಡಿ ಮೀಟಿಂಗ್
ಸಿಎಂ, ಡಿಸಿಎಂ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ತುಂಬಾನೇ ಕುತೂಹಲ ಪಡೆದುಕೊಂಡಿದೆ. ಇದೀಗ ಉಭಯ ನಾಯಕರು ಡೋರ್ ಕ್ಲೋಸ್ ಮಾಡಿ ಚರ್ಚೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ನಿವಾಸ ಕಾವೇರಿಯಲ್ಲಿ ಸಿಎಂ, ಡಿಸಿಎಂ ಚರ್ಚೆ ಮಾಡುತ್ತಿದ್ದಾರೆ. ಎಲ್ಲರನ್ನೂ ಹೊರಗೆ ಕಳುಹಿಸಿ ಮಹತ್ವದ ಚರ್ಚೆಯನ್ನು ನಡೆಸಲಾಗುತ್ತಿದೆ.
- Nov 29, 2025 10:20 IST
ಸಿದ್ದು-ಡಿಕೆಶಿ ಮೀಟಿಂಗ್ ಬಗ್ಗೆ ಪರಂ ಏನಂದ್ರು?
ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವ.. ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಗೊಂದಲ ಬಗೆಹರಿದ್ರೆ ಒಳ್ಳೆಯದೇ ಅಲ್ವಾ? ಗೊಂದಲ ಇರಬಾರದು ಅಂತ ಎಲ್ಲರ ಇಚ್ಛೆ. ಹೈಕಮಾಂಡ್ ಸಹ ಗೊಂದಲ ಇರಬಾರದು ಎಂದಿದ್ದಾರೆ. ಇಬ್ಬರು ನಾಯಕರು ಗೊಂದಲ ಇದ್ದರೆ ಬಗೆಹರಿಸಿಕೊಳ್ಳಲು ತಿಳಿಸಿದ್ದಾರೆ. ಗೊಂದಲಗಳಿಗೆ ತೆರೆ ಬಿದ್ದರೆ ಒಳ್ಳೆಯದೇ ಅಲ್ವಾ? ದೆಹಲಿಗೆ ಹೋಗುವ ಅವಶ್ಯಕತೆ ಬಂದ್ರೆ ಹೋಗ್ತೀವಿ. ಸದ್ಯಕ್ಕೆ ದೆಹಲಿಗೆ ಹೋಗಲ್ಲ. ಅವಶ್ಯಕತೆ ಇದ್ದರೆ ಹೋಗ್ತೀವಿ ಎಂದಿದ್ದಾರೆ.
- Nov 29, 2025 10:05 IST
ಬನ್ರಿ ಶಿವಕುಮಾರ್ ಎಂದ ಸಿದ್ದರಾಮಯ್ಯ
ಇಡ್ಲಿ, ಒಡೆ, ಉಪ್ಪಿಟ್ಟು, ಕೇಸರಿಬಾತ್
ಡಿಕೆ ಶಿವಕುಮಾರ್ ತಮ್ಮ ನಿವಾಸಕ್ಕೆ ಬರುತ್ತಿದ್ದಂತೆಯೇ ಸಿದ್ದರಾಮಯ್ಯ ಸ್ವಾಗತಿಸಿದರು. ಬಳಿಕ ಬನ್ರಿ ಶಿವಕುಮಾರ್ ಎನ್ನುತ್ತ ಬ್ರೇಕ್ಫಾಸ್ಟ್ ಮೀಟಿಂಗ್ಗೆ ಕರೆದುಕೊಂಡು ಹೋಗಿದ್ದಾರೆ. ಬ್ರೇಕ್ ಫಾಸ್ಟ್ಗೆ ಇಡ್ಲಿ, ಒಡೆ, ಉಪ್ಪಿಟ್ಟು ಹಾಗೂ ಕೇಸರಿಬಾತ್ ಆಗಿದೆ.
/fit-in/580x348/filters:format(webp)/newsfirstlive-kannada/media/media_files/2025/11/29/dk-shivakumar-siddaramaiah-2025-11-29-10-07-35.jpg)
- Nov 29, 2025 10:01 IST
ಸಿಎಂ ಮನೆಗೆ ಆಗಮಿಸಿದ ಡಿಸಿಎಂ
ಸಿಎಂ ಜೊತೆಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆಯಲ್ಲಿ ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಆಗಮಿಸಿದ್ದಾರೆ. ಕಾವೇರಿ ನಿವಾಸಕ್ಕೆ ಡಿಕೆಶಿಯನ್ನ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಡಿಕೆಶಿ ಬರುವಾಗ ಸಿದ್ದರಾಮಯ್ಯ ಹಾಲ್ನಲ್ಲಿದ್ದರು.
/fit-in/580x348/filters:format(webp)/newsfirstlive-kannada/media/media_files/2025/11/29/dk-shivakumar-13-2025-11-29-10-01-43.jpg)
- Nov 29, 2025 09:55 IST
ಸಿದ್ದರಾಮಯ್ಯ ನಿವಾಸಕ್ಕೆ ಹೊರಟ ಡಿಕೆಶಿ
ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯರ ನಿವಾಸಕ್ಕೆ ಹೊರಟಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಕಾರಿನ ಮೂಲಕ ಸಿದ್ದರಾಮಯ್ಯರ ನಿವಾಸ ಕಾವೇರಿಗೆ ಹೊರಟಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಉಭಯ ನಾಯಕರು ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ.
- Nov 29, 2025 09:51 IST
ಶಿವಕುಮಾರ್ ನಿವಾಸಕ್ಕೆ ಆಪ್ತರು ದೌಡು
ಸಿದ್ದರಾಮಯ್ಯ ಜೊತೆ ಬ್ರೇಕ್ಫಾಸ್ಟ್ ಮೀಟಿಂಗ್ ಹಿನ್ನೆಲೆಯಲ್ಲಿ ಇವತ್ತು ರಾಜ್ಯ ಕಾಂಗ್ರೆಸ್ನಲ್ಲಿ ದೊಡ್ಡ ಬೆಳವಣಿಗೆಯ ನಿರೀಕ್ಷೆ ಮಾಡಲಾಗಿದೆ. ಅದರಂತೆಯೇ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಬರ್ತಿರುವ ಆಪ್ತ ಶಾಸಕರು ದೌಡಾಯಿಸುತ್ತಿದ್ದಾರೆ. ಸಿಎಂ ನಿವಾಸಕ್ಕೆ ಡಿಸಿಎಂ ತೆರಳೋ ಮೊದಲೇ ಶಾಸಕರ ಸಭೆ ನಡೆಸಲಿದ್ದಾರೆ. ಡಿಕೆಶಿಗೆ ಪಟ್ಟು ಸಡಿಲಿಸದಂತೆ ಆಪ್ತ ಶಾಸಕರಿಂದ ಒತ್ತಾಯ ಮಾಡಲಿದ್ದಾರೆ. ಸಿಎಂ ಸ್ಥಾನಕ್ಕೆ ತಮ್ಮ ಪಟ್ಟು ಸಡಿಲಿಸದಂತೆ ಶಾಸಕರಿಂದ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
- Nov 29, 2025 09:30 IST
ಹೈಕಮಾಂಡ್ ಬ್ರೇಕ್ಫಾಸ್ಟ್ ಮೀಂಟಿಂಗ್ ಮಾಡಲು ಹೇಳಿದ್ದೇಕೆ..?
‘ಸಿಎಂ ಕುರ್ಚಿ’ ಗುದ್ದಾಟದ ನಡುವೆಯೇ ಹೈಕಮಾಂಡ್ ಬ್ರೇಕ್ಫಾಸ್ಟ್ ಮೀಟಿಂಗ್ಗೆ ಸಂದೇಶ ನೀಡಿದೆ. ಯಾಕೆ ಹೈಕಮಾಂಡ್ ಬ್ರೇಕ್ಫಾಸ್ಟ್ ಮೀಟಿಂಗ್ ಸೂಚಿಸಿದೆ ಅಂತಾ ನೋಡೋದಾದ್ರೆ..
- ಸಿಎಂ ಕುರ್ಚಿ ಕಾಳಗಕ್ಕೆ ದೆಹಲಿಯಲ್ಲಿ ತೆರೆ ಬೀಳಲಿದೆ ಅಂತ ಚರ್ಚೆ
- ದೆಹಲಿಯಲ್ಲಿ ತೆರೆ ಬೀಳಲಿದೆ ಎಂಬ ಚರ್ಚೆಯ ಬೆನ್ನಲ್ಲೇ ಸಂದೇಶ
- ರಾಜ್ಯದಲ್ಲೇ ಒಗ್ಗಟ್ಟಿನ ಸೂತ್ರ ಸಿದ್ಧಪಡಿಸುವಂತೆ ಅಂತಿಮ ಸಂದೇಶ
- ಸಿಎಂ, ಡಿಸಿಎಂ ಪರಸ್ಪರ ಮಾತುಕತೆ ನಡೆಸುವಂತೆ ವರಿಷ್ಠರ ಸೂಚನೆ
- ಅಂತಿಮ ನಿಲುವು ಪ್ರಕಟಿಸುವ ಮುನ್ನ ಉಭಯ ನಾಯಕರು ಚರ್ಚೆ
- ಸಿಎಂ, ಡಿಸಿಎಂ ನಡುವೆ ಮಾತುಕತೆ ಯಶಸ್ವಿಯಾದ್ರೆ ‘ಹೈ’ಗೆ ಸುಲಭ
- ಚರ್ಚೆ ಯಶಸ್ವಿಯಾದ್ರೆ ತನ್ನ ನಿರ್ಧಾರ ಪ್ರಕಟಿಸಲು ‘ಹೈ’ ಲೆಕ್ಕಾಚಾರ
- ತನ್ನ ನಿರ್ಧಾರ ಪ್ರಕಟಿಸಲು ಸುಲಭವಾಗಲಿದೆಂಬ ಲೆಕ್ಕಾಚಾರದಲ್ಲಿ ‘ಹೈ’
- ಬ್ರೇಕ್ ಫಾಸ್ಟ್ ನೆಪದಲ್ಲಿ ಸಿಎಂ, ಡಿಸಿಎಂ ಚರ್ಚೆ ನಡೆಸುವಂತೆ ಸೂಚನೆ
- Nov 29, 2025 09:09 IST
ಸಿಎಂ, ಡಿಸಿಎಂ ಜಂಟಿ ಸುದ್ದಿಗೋಷ್ಠಿ
ಬ್ರೇಜ್ಫಾಸ್ಟ್ ಮೀಟಿಂಗ್ ಬಳಿಕ ಸಿಎಂ, ಡಿಸಿಎಂ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಾಧ್ಯಮಗಳ ಮುಂದೆ ಸಿಎಂ, ಡಿಸಿಎಂ ಫೋಟೋ ಸೆಷನ್ ನಡೆಸಿ ಒಗ್ಗಟ್ಟು ಪ್ರದರ್ಶಿಸುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಜಂಟಿ ಸುದ್ದಿಗೋಷ್ಠಿ ಬಳಿಕ ಸಿದ್ದರಾಮಯ್ಯ ಆರೋಗ್ಯ ತಮಾಷಣೆಗೆ ಆಸ್ಪತ್ರೆಗೆ ಹೋಗಲಿದ್ದಾರೆ.
- Nov 29, 2025 08:46 IST
ದಲಿತ ವರ್ಗದವರು ಇದುವರೆಗೆ ಮುಖ್ಯಮಂತ್ರಿ ಆಗಿಯೇ ಇಲ್ಲ -ಡಾ.ಯತೀಂದ್ರ ಸಿದ್ದರಾಮಯ್ಯ
ಕುರ್ಚಿ ಕಾಳಗದಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಮುಖ್ಯಮಂತ್ರಿಗಾದಿಗಾಗಿ ಆಂತರಿಕ ತಿಕ್ಕಾಟದ ನಡುವೆ ತಮ್ಮ ತಂದೆ ಪರ ಪ್ರಬಲ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ಮಂಡ್ಯದ ಕುರುಬ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿರೋ ಡಾಕ್ಟರ್, ಹಿಂದುಳಿದವರನ್ನೇ ಸಿಎಂ ಸ್ಥಾನದಲ್ಲಿ ಉಳಿಸಿಕೊಳ್ಳುವಂತೆ ಹೈಕಮಾಂಡ್ಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.ಹೈಕಮಾಂಡ್ ನಿರ್ಧಾರಕ್ಕೆ ಸಿಎಂ-ಡಿಸಿಎಂ ಬದ್ಧ ಅಂತ ಹೇಳ್ತಾನೇ ರಾಜ್ಯದಲ್ಲಿ ಹಿಂದುಳಿದವರು ಸಿಎಂ ಆಗಿರೋದು ತುಂಬಾ ಕಮ್ಮಿ, ಹಿಂದುಳಿದ ವರ್ಗದವರು ಸಣ್ಣ ತಪ್ಪು ಮಾಡಿದ್ರೂ ದೊಡ್ಡದಾಗಿ ಬಿಂಬಿಸಿ ಅಧಿಕಾರದಿಂದ ಇಳಿಸುವ ಷಡ್ಯಂತ್ರ ನಡೆಸ್ತಾರೆ ಅಂತ ಸಿಡಿಸಿದ್ದಾರೆ.
ತಂದೆ ಪರ ಪ್ರಬಲ ಜಾತಿ ಅಸ್ತ್ರ
ಒಂದು ಸಣ್ಣ ತಪ್ಪು ಮಾಡಿದ್ರೂ ಅದನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಇಲ್ಲದೇ ಇರೋ ಘಟನೆಗಳನ್ನು ಸೃಷ್ಟಿಸುತ್ತಾರೆ. ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂಬ ಪ್ರಯತ್ನವನ್ನು ಮಾಡುತ್ತಾರೆ. ರಾಜಕೀಯ ಶಕ್ತಿಯೂ ಕೂಡ ಬಹಳ ಮುಖ್ಯ. ಸುಮುದಾಯದಲ್ಲಿ ಒಬ್ಬ ವ್ಯಕ್ತಿ ರಾಜಕೀಯವಾಗಿ ದೊಡ್ಡ ಮೊಟ್ಟದಲ್ಲಿದ್ದರೆ, ಅದರಿಂದ ಎಲ್ಲರಿಗೂ ಪ್ರಯೋಜನ ಆಗಲಿದೆ. ಆ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು.
ಮುಖ್ಯಮಂತ್ರಿಯೋ ಅಥವಾ ಯಾವುದೋ ದೊಡ್ಡ ಹುದ್ದೆಯನ್ನು ಪಡೆದುಕೊಂಡರೆ ಅದರಿಂದ ಉಳಿದುಕೊಳ್ಳುವುದು ದೊಡ್ಡ ಕಷ್ಟ. ರಾಜ್ಯದಲ್ಲಿ ಇವತ್ತು ಸುಮಾರು 23 ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. 23 ಜನ ಮುಖ್ಯಮಂತ್ರಿಗಳಲ್ಲಿ ಹಿಂದುಳಿದ ವರ್ಗದ ಮುಖ್ಯಮಂತ್ರಿಗಳು ಯಾರು ಅಂದರೆ ಬರೀ ಐದು ಜನ. ದಲಿತ ವರ್ಗದವರು ಇದುವರೆಗೆ ಮುಖ್ಯಮಂತ್ರಿ ಆಗಿಯೇ ಇಲ್ಲ.
ಡಾ.ಯತೀಂದ್ರ ಸಿದ್ದರಾಮಯ್ಯ, ಪರಿಷತ್ ಸದಸ್ಯ
- Nov 29, 2025 08:31 IST
ಸಭೆ ಮುರಿದು ಬಿದ್ದರೆ ಏನಾಗುತ್ತದೆ..?
ಬ್ರೇಕ್ಫಾಸ್ಟ್ ಮೀಟಿಂಗ್ ಫಲಿತಾಂಶದ ಮೇಲೆ ಹೈಕಮಾಂಡ್ ಸಭೆ ನಿಂತಿದೆ. ಸಿಎಂ, ಡಿಸಿಎಂ ನಡುವಿನ ಮಾತುಕತೆ ಫಲಪ್ರದವಾದರೆ ಹೈಕಮಾಂಡ್ ಹಾದಿ ಸುಲಭವಾಗಲಿದೆ. ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಸಿಎಂ, ಡಿಸಿಎಂ ಪರಸ್ಪರ ಪರಿಹಾರ ಕಂಡುಕೊಂಡಲ್ಲಿ ಹೈಕಮಾಂಡ್ಗೆ ಟೆನ್ಷನ್ ಇರಲ್ಲ. ಮಾತುಕತೆ ಮುರಿದುಬಿದ್ದಲ್ಲಿ ಸಿಎಂ, ಡಿಸಿಎಂ ಇಬ್ಬರನ್ನೂ ಹೈಕಮಾಂಡ್ ದೆಹಲಿಗೆ ಕರೆಸಿಕೊಳ್ಳಲಿದೆ. ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ತಮ್ಮ ನಿರ್ಣಯ ತಿಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
- Nov 29, 2025 08:29 IST
ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಸಿದ್ದು ಹೇಳಿದ್ದೇನು..?
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ
ಹೈಕಮಾಂಡ್ ಅವರಿಗೂ (ಡಿಕೆಶಿ) ಫೋನ್ ಮಾಡಿದ್ದರು. ನನಗೂ ಫೋನ್ ಮಾಡಿದ್ದರು. ಅದಕ್ಕಾಗಿ ನಾನು ಅವನಿಗೆ ಬ್ರೇಕ್ಫಾಸ್ಟ್ಗೆ ಕರೆದಿದ್ದೇನೆ. ಅಲ್ಲಿ ಬಂದಾಗ ಚರ್ಚೆ ಮಾಡುತ್ತೇನೆ. ನನ್ನ ಸ್ಟ್ಯಾಂಡ್ನಲ್ಲಿ ಯಾವುದೇ ಬದಲಾವಣೆ ಇಲ್ಲ.ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ. ಪಕ್ಷದ ವರಿಷ್ಠರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿದ್ದಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ಹೇಳಿದ್ದಾರೆ. ಹೈಕಮಾಂಡ್‌ನವರು ನವದೆಹಲಿಗೆ ಕರೆದರೆ ಹೋಗುತ್ತೇನೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us