/newsfirstlive-kannada/media/media_files/2025/10/22/rape-case-against-inspector-sunil-2025-10-22-13-38-27.jpg)
ಸಂತ್ರಸ್ಥ ಮಹಿಳೆ ಹಾಗೂ ಇನ್ಸ್ ಪೆಕ್ಟರ್ ಸುನೀಲ್
ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ… ಕೇಳಿ ಬಂದಿದೆ. ವಿವಾಹ ಆಗುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ. ಕಳೆದ ಒಂದು ವರ್ಷದಲ್ಲಿ ಮೂರು ಭಾರಿ ರೇಪ್ ಮಾಡಿದ್ದಾರೆಂದು ದೂರು ಸಲ್ಲಿಕೆಯಾಗಿದೆ. ಸಂತ್ರಸ್ಥ ಮಹಿಳೆಯೊಬ್ಬರು ಡಿಜಿ ಮತ್ತು ಐಜಿಪಿ ಕಚೇರಿಗೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿರುದ್ಧ ರೇಪ್ ನಡೆಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.
ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ವಿರುದ್ಧ ರೇಪ್ ಆರೋಪದಡಿ ದೂರು ನೀಡಲಾಗಿದೆ. 36 ವರ್ಷದ ಸಂತ್ರಸ್ಥೆಗೆ ಮನೆ ಕೊಡಿಸುತ್ತೇನೆ, ಬ್ಯೂಟಿ ಪಾರ್ಲರ್ ಓಪನ್ ಮಾಡಿಕೊಡುತ್ತೇನೆ ಎಂದು ಹೇಳಿ ಭರವಸೆ ನೀಡಿದ್ದಾರಂತೆ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಗೆ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿರೋ ಆರೋಪ…ಕೇಳಿ ಬಂದಿದೆ. ನಿನ್ನನ್ನು ರಿಜಿಸ್ಟರ್ ಮ್ಯಾನೇಜ್ ಆಗುತ್ತೇನೆ ಎಂದು ಕೂಡ ಇನ್ಸ್ ಪೆಕ್ಟರ್ ನಂಬಿಸಿದ್ದಾರಂತೆ. ತಮ್ಮ ಮನೆ ಮತ್ತು ಹೋಟೆಲ್ ಗೆ ಸಂತ್ರಸ್ಥ ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ನಡೆಸಿರುವ ಆರೋಪದ ದೂರು ಸಲ್ಲಿಕೆಯಾಗಿದೆ.
ಖಾಸಗಿ ಪೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ನಡೆಸಿರುವ ಆರೋಪವನ್ನು ಮಹಿಳೆ ಮಾಡಿದ್ದಾರೆ. …ನಮ್ಮ ವಿಚಾರವನ್ನು ಯಾರಿಗಾದರೂ ಹೇಳಿದರೇ ಕೊಲೆ ಮಾಡೋದಾಗಿ ಬೆದರಿಕೆ…ಕೂಡ ಹಾಕಿದ್ದಾರಂತೆ. ಪ್ರತಿ ಭಾರಿ ವಿಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಿದ್ದಾರೆ ಎಂದು ಕೂಡ ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಂತ್ರಸ್ಥೆ ನಡುವೆ ವಾಟ್ಸಾಫ್ ಚಾಟಿಂಗ್ ಕೂಡ ನಡೆದಿದೆ. ತನ್ನ ಮನೆ ಲೊಕೇಷನ್ ಶೇರ್ ಮಾಡಿ ಮನೆಗೆ ಬರುವಂತೆ ಆಹ್ವಾನ…ಕೂಡ ನೀಡಿದ್ದಾರೆ. ಮನೆಯಲ್ಲಿ ಹೆಂಡತಿ , ಮಕ್ಕಳಿಲ್ಲ, ನನ್ನ ಮನೆಗೆ ಬಾ ಎಂದು ಇನ್ಸ್ ಪೆಕ್ಟರ್ ಮೆಸೇಜ್…ಮಾಡಿದ್ದಾರೆ. ಯು ಆರ್ ಲವ್ ಮೈ ಸ್ವೀಟ್ ಹಾರ್ಟ್ ಅಂಥ ಯುವತಿಯಿಂದಲೂ ಮೆಸೇಜ್ ಮಾಡಲಾಗಿದೆ. ಚಿನ್ನಿ, ಮಿಸ್ ಯೂ ಅಂಥ ಸಂತ್ರಸ್ಥೆಯಿಂದಲೂ ಮೆಸೇಜ್…ಮಾಡಲಾಗಿದೆ. ಅದಕ್ಕೆ ಮೀ ಟೂ ಅಂಥ ಇನ್ಸ್ ಪೆಕ್ಟರ್ ರಿಪ್ಲೈ ಮಾಡಿದ್ದಾರೆ. ವಿಡಿಯೋ ಕಾಲ್ ಮೂಲಕ ಇಬ್ಬರ ನಡುವೆ ಮಾತುಕತೆಯೂ ನಡೆದಿದೆ. ಇನ್ಸ್ ಪೆಕ್ಟರ್ ಸುನೀಲ್ ಹಾಗೂ ಸಂತ್ರಸ್ಥ ಮಹಿಳೆಯ ನಡುವಿನ ವಾಟ್ಸಾಫ್ ಚಾಟಿಂಗ್ ಅನ್ನು ಮಹಿಳೆ ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.