/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ
ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
ಉದ್ಯೋಗ ಸ್ಥಳದಲ್ಲಿ ಸಮಸ್ಯೆಯಾಗಬಹುದು
ಯಾವುದೇ ನಿರ್ಧಾರಕ್ಕೂ ಮುನ್ನ ಆಲೋಚನೆ ಮಾಡಿ
ಸಾಕು ಪ್ರಾಣಿಗಳಿಂದ ಎಚ್ಚರಿಕೆ ವಹಿಸಿ
ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
ನವಗ್ರಹರನ್ನು ಪ್ರಾರ್ಥನೆ ಮಾಡಿ ಅದರಲ್ಲೂ ಚಂದ್ರ ಗ್ರಹನನ್ನು ಪ್ರಾರ್ಥನೆ ಮಾಡಿ
ವೃಷಭ
ಮಾತೆಯರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
ಮಾನಸಿಕವಾಗಿ ಹಿಂಸೆಯಿಂದ ಬೇಸರ ಆಗಬಹುದು
ಸಹೋದರ ವರ್ಗದಲ್ಲಿ ಜಗಳ ಆಗಬಹುದು
ಹಣ ಹೂಡಿಕೆಯ ವಿಚಾರ ಸಮಸ್ಯೆಯಾಗಬಹುದು
ಇಂದು ವ್ಯವಹಾರದಲ್ಲಿ ಅನುಕೂಲವಿದೆ
ಬೇರೆಯವರ ಆಸ್ತಿ, ಪದಾರ್ಥದಿಂದ ತೊಂದರೆಯಾಗಬಹುದು
ಗೋ ಸೇವೆಯನ್ನು ಮಾಡಿ
ಮಿಥುನ
ಕುಟುಂಬದಲ್ಲಿ ಅಸಹಕಾರದಿಂದ ಬೇಸರ ಆಗಬಹುದು
ಆಸ್ತಿ ವಿಚಾರದಲ್ಲಿ ಮುನ್ನಡೆಯಾಗಲಿದೆ
ದಾಂಪತ್ಯದಲ್ಲಿ ಕಲಹ ಆಗಲಿದೆ
ಉನ್ನತ ಅಧಿಕಾರಿಗಳ ಸಹಾಯ ಅರ್ಧಕ್ಕೆ ನಿಲ್ಲಬಹುದು
ಇಂದು ಸ್ನೇಹಿತರು ದೂರವಾಗಬಹುದು
ಶುಭ ಕಾರ್ಯಕ್ಕೆ ವಿಘ್ನ ಆಗಬಹುದು
ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ
ಕಟಕ
ಮಾನಸಿಕವಾಗಿ ಕಳವಳ ಭಯದ ವಾತಾವರಣ ಇರಲಿದೆ
ಮನೆಯಲ್ಲಿ ಮಂಗಳ ಕಾರ್ಯದ ಚಿಂತನೆ ಮಾಡುತ್ತೀರಿ
ಧರ್ಮಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ
ತಾಯಿಯವರಿಂದ ಸಹಾಯ ಆಗಲಿದೆ
ಉಡುಗೊರೆ ಅಥವಾ ಬಹುಮಾನ ರೂಪದಲ್ಲಿ ಹಣ ಪಡೆಯಲು ಅವಕಾಶವಿದೆ
ಆರೋಗ್ಯದ ಬಗ್ಗೆ ಗಮನಹರಿಸಿ
ಗಣಪತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
ರಾಜಕೀಯ ವ್ಯಕ್ತಿಗಳಿಂದ ನಿಮಗೆ ಅನುಕೂಲವಿದೆ
ಇಂದು ಪ್ರಯಾಣದ ಅವಶ್ಯಕತೆ ಇದೆ
ಅಪರಿಚಿತರಿಂದ ಸಹಾಯ ಆಗಬಹುದು
ಉದ್ಯೋಗ ವಿಚಾರದಲ್ಲಿ ಅಸಮಾಧಾನ
ದೂರದೂರಿಗೆ ಹೋಗುವುದಕ್ಕೆ ಮನಸ್ಸು ಮಾಡುತ್ತೀರಿ
ಬೇಜವಾಬ್ದಾರಿಯ ಪರಾಕಾಷ್ಠೆ ಮತ್ತು ಆಲಸ್ಯ ತೊಂದರೆಯನ್ನು ಮಾಡಬಹುದು
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ
ನಿರೀಕ್ಷಿಸಿದ ಕೆಲಸದಿಂದ ಬಹಳ ಸಂತೋಷ ಆಗಲಿದೆ
ಹಳೆಯ ಹೂಡಿಕೆಯಿಂದ ಲಾಭವೂ ಆಗಲಿದೆ
ಮಂಗಳ ಕಾರ್ಯಗಳನ್ನು ಮಾಡಲು ನಿರ್ಧಾರ ಮಾಡುತ್ತೀರಿ
ಇಂದು ಮಕ್ಕಳಿಂದ ಶುಭವಿದೆ
ಕಾನೂನು ಹೋರಾಟಕ್ಕೆ ಹೊಸ ತಿರುವು ಬರಲಿದೆ
ವಿಷ್ಣು ಸಹಸ್ರ ನಾಮವನ್ನು ಶ್ರವಣ ಮಾಡಿ
ತುಲಾ
ಮನಸ್ಸಿಗೆ ಬಂದದ್ದನ್ನು ಮಾಡಲು ಹೋದರೆ ತೊಂದರೆಯಾಗಬಹುದು
ಕುಟುಂಬದಲ್ಲಿ ಮಾತುಕತೆ ಇರುವುದಿಲ್ಲ
ಮಕ್ಕಳಿಂದ ತಿಳುವಳಿಕೆ ಹೇಳಿಸಿಕೊಳ್ಳುತ್ತೀರಿ
ಆಸ್ತಿ ನಷ್ಟ ಅಗುವ ಭಯ ಕಾಡಲಿದೆ
ದಾಂಪತ್ಯದಲ್ಲಿ ಅಭಿಪ್ರಾಯ ಭೇದ ಇರಲಿದೆ
ಜಾಣತನದ ವ್ಯವಹಾರದಿಂದ ಸಮಸ್ಯೆ ಮಾಡಿಕೊಳ್ಳುತ್ತೀರಿ
ಇಷ್ಟದೇವತಾ ಪ್ರಾರ್ಥನೆ ಮಾಡಿ
ವೃಶ್ಚಿಕ
ರಾಜಕೀಯವಾಗಿ ಸ್ವಲ್ಪ ಆಸಕ್ತಿ ಬರಲಿದೆ
ಏನು ನಷ್ಟವಾಗದಂತೆ ಗಮನಿಸಿಕೊಳ್ಳಿ
ಇಂದು ಆರ್ಥಿಕವಾಗಿ ತೊಂದರೆ ಇಲ್ಲ
ಹೊಸ ಕಟ್ಟಡದ ನಿರ್ಮಾಣಕ್ಕೆ ಚಿಂತನೆ ನಡೆಸುತ್ತೀರಿ
ತಂದೆಯಿಂದ ಅನುಕೂಲ ಆಗಲಿದೆ
ಪ್ರಶಂಸೆ ನಿಮಗೆ ಇಷ್ಟವಾಗುವುದಿಲ್ಲ
ದುರ್ಗಾ ಪೂಜೆ ಮಾಡಿ
ಧನುಸು
ಆರ್ಥಿಕವಾಗಿ ಸಬಲರಾಗಿರುತ್ತೀರಿ
ಸ್ವಂತ ನಿರ್ಧಾರಕ್ಕೆ ಅಡ್ಡಿಯಾಗಬಹುದು
ಧನ ನಷ್ಟ ಆಗುವುದರಿಂದ ಚಿಂತೆ ಕಾಡಲಿದೆ
ಇಂದು ಉದ್ವೇಗಕ್ಕೆ ಒಳಗಾಗಬೇಡಿ
ಕಟ್ಟಡ ಕಾಮಗಾರಿಯ ಕೆಲಸ ಪೂರ್ಣ ಆಗಲಿದೆ
ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಅಗಬಹುದು
ಶಿವಾರಾಧನೆ ಮಾಡಿ
ಮಕರ
ಕಾನೂನಿನ ಹೋರಾಟಕ್ಕೆ ಸಜ್ಜಾಗಬೇಕು
ಪತ್ರ ಅಥವಾ ದಾಖಲಾತಿಗಳ ಸಮಸ್ಯೆಯಾಗಲಿದೆ
ಮಕ್ಕಳಿಂದ ಸಹಾಯ ಆಗಲಿದೆ
ಕುಟುಂಬದಲ್ಲಿ ವಾಗ್ವಾದ ಇರಲಿದೆ
ಧನ ಅಥವಾ ಉದ್ಯೋಗ ನಷ್ಟ ಆಗುವ ದಿನ
ದೃಢವಾದ ನಿರ್ಧಾರದಿಂದ ಅನುಕೂಲವಿದೆ
ಗಣಪತಿಯ ಆರಾಧನೆ ಮಾಡಿ
ಕುಂಭ
ರಾಜಕಾರಣಿಗಳ ಭೇಟಿಯ ಸಾಧ್ಯತೆ ಇದೆ
ನೌಕರಿಯ ಒತ್ತಡದಿಂದ ಶಾರೀರಿಕ ಸಮಸ್ಯೆಯಾಗಬಹುದು
ಹಲವಾರು ರೀತಿಯ ಯೋಚನೆಗಳು ಬರಲಿದೆ
ಮಾಂತ್ರಿಕ ದೋಷ ಇರುವುದು ಪತ್ತೆಯಾಗಲಿದೆ
ಮನೆಯಲ್ಲಿ ಸಮಾಧಾನ ಇರುವುದಿಲ್ಲ
ಆಸ್ತಿಯ ಲಾಭಕ್ಕೆ ಅವಕಾಶವಿದೆ
ನವಗ್ರಹರ ಆರಾಧನೆ ಮಾಡಿ
ಮೀನಾ
ಮನೆಯಲ್ಲಿ ಮಂಗಳ ಕಾರ್ಯದ ಚಿಂತೆ ಮಾಡುತ್ತೀರಿ
ಇಂದು ಪ್ರಯಾಣ ಮಾಡಬೇಡಿ
ತಂದೆಯವರಿಗೆ ಸಮಸ್ಯೆಯಾಗಬಹುದು
ಬಹಳ ದಿನಗಳ ಆಸೆ ಈ ದಿನ ಈಡೇರಬಹುದು
ಬೇರೆಯವರು ಅಪಹಾಸ್ಯ ಮಾಡುವುದನ್ನು ತಪ್ಪಿಸಿ
ಹಿಂದೆ ಮಾಡಿದ ಒಳ್ಳೆ ಕೆಲಸದಿಂದ ಫಲ ಸಿಗಲಿದೆ
ಕುಲದೇವತಾ ಆರಾಧನೆ ಮಾಡಿ
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಚಿನ್ ಪುತ್ರ ಅರ್ಜುನ್; ಯಾರೆಲ್ಲ ಬಂದಿದ್ದರು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us