/newsfirstlive-kannada/media/media_files/2025/12/30/renuka-swamy-mother-hostile-witness-2025-12-30-16-25-55.jpg)
ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿ-ಎಸ್‌ಪಿಪಿ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಬೆಂಗಳೂರಿನ ಕೋರ್ಟ್ ನಲ್ಲಿ ನಡೆಯುತ್ತಿದೆ. ಕೋರ್ಟ್ ನಲ್ಲಿ ವಿಚಾರಣೆ ವೇಳೆ ಮಹತ್ವದ ಬೆಳವಣಿಗೆಯಾಗಿದೆ. ಹತ್ಯೆಯಾದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ರತ್ನಪ್ರಭಾ ಅವರು ಜಡ್ಜ್ ಎದುರು ಹೇಳಿಕೆ ನೀಡಿದ್ದರು. ಈ ವೇಳೆ ಅವರನ್ನು ಆರೋಪಿ ಪರ ವಕೀಲರಾದ ಬಾಲನ್, ಸಿ.ವಿ.ನಾಗೇಶ್ ಅವರು ಕ್ರಾಸ್ ಎಕ್ಸಾಮಿನೇಷನ್ ಮಾಡಿದ್ದರು.
ಆದರೇ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು ಪ್ರಾಸಿಕ್ಯೂಷನ್ ಗೆ ಪೂರಕವಾಗಿ ಸಾಕ್ಷಿಗಳನ್ನು ಹೇಳಿಲ್ಲ. ಹೀಗಾಗಿ ರತ್ನಪ್ರಭಾ ಅವರನ್ನು Hostile witness (ಪ್ರತಿಕೂಲ ಸಾಕ್ಷಿ, ಅನುಕೂಲಕರ ಸಾಕ್ಷಿ ಅಲ್ಲ) ಎಂದು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ಕೋರ್ಟ್ ಗೆ ಇಂದು ಮನವಿ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಅಂದರೇ, ಪೊಲೀಸರಿಗೆ ಪ್ರತಿಕೂಲವಾಗುವಂತೆ ಸಾಕ್ಷಿ ಹೇಳಿದ ಕಾರಣಕ್ಕಾಗಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಕೋರ್ಟ್ ಗೆ ಎಸ್.ಪಿ.ಪಿ. ಪ್ರಸನ್ನಕುಮಾರ್ ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಕೋರ್ಟ್ ಮುಂದಿನ ಸೋಮವಾರ ನಿರ್ಧಾರ ಮಾಡಲಿದೆ.
ಕೋರ್ಟ್ ನಲ್ಲಿ ಜಡ್ಜ್ ಮುಂದೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಮತ್ತೆ ಕ್ರಾಸ್ ಎಕ್ಸಾಮಿನೇಷನ್ ಮಾಡಲು ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ. ಬಹುತೇಕ ಕೇಸ್ ಗಳಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಕ್ರಾಸ್ ಎಕ್ಸಾಮಿನೇಷನ್ ಮಾಡಲ್ಲ. ಆದರೇ, ಪ್ರಾಸಿಕ್ಯೂಷನ್ ಸಾಕ್ಷಿಗಳೇ ಉಲ್ಟಾ ಸಾಕ್ಷಿ ಹೇಳಿದಾಗ, ಪ್ರಾಸಿಕ್ಯೂಷನ್ ನ ಆರೋಪಕ್ಕೆ ವಿರುದ್ಧವಾಗಿ ಸಾಕ್ಷಿ ಹೇಳಿದ್ದಾಗ, Hostile witness ಎಂದು ಪರಿಗಣಿಸುವಂತೆ ಕೋರ್ಟ್ ಗೆ ಮನವಿ ಮಾಡಬಹುದು. ಹೀಗಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಈ ರೀತಿಯಾಗಿ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಕೋರ್ಟ್ ಅನುಮತಿ ನೀಡಿದರೇ, ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಮತ್ತೊಮ್ಮೆ ರತ್ನಪ್ರಭಾ ಅವರನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ.
ರೇಣುಕಾಸ್ವಾಮಿ ಸಿಮ್, ಮೊಬೈಲ್ ಹಾಗೂ ಕಾಲ್ ಗಳ ಬಗ್ಗೆ ಅವರ ತಾಯಿ ರತ್ನಪ್ರಭಾ ದ್ವಂದ್ವ ಹೇಳಿಕೆ ನೀಡಿದ್ದಾರೆ. ತನ್ನ ಮಗನ ಮೊಬೈಲ್ ನಂಬರ್ ಗೊತ್ತಿಲ್ಲ ಎಂದು ರತ್ನಪ್ರಭಾ ಹೇಳಿದ್ದಾರೆ. ಪೊಲೀಸ್ ತನಿಖೆ ವೇಳೆ ಮೊಬೈಲ್ ನಲ್ಲಿ ಸೇವ್ ಆಗಿದೆ ಅಂತ ಹೇಳಿಕೆ ನೀಡಿದ್ದರು. ಮೊಬೈಲ್ ನಲ್ಲಿನ ನಂಬರ್ ನೋಡಿ ಇದೇ ನಂಬರ್ ಅಂತ ಕನ್ಫರ್ಮ್ ಮಾಡಿ ಪೊಲೀಸರಿಗೆ ಹೇಳಿದ್ದರು.
ಆದರೇ, ಬೆಂಗಳೂರಿನ ಕೋರ್ಟ್ ನಲ್ಲಿ ಕ್ರಾಸ್ ಎಕ್ಸಾಮಿನೇಷನ್ ಮಾಡುವಾಗ ನನಗೆ ಮೊಬೈಲ್ ನಂಬರ್ ಗೊತ್ತಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಹೀಗಾಗಿ ಈ ಸಾಕ್ಷಿಯನ್ನು ಪರಿಗಣಿಸಬೇಡಿ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಅರ್ಜಿ ಹಾಕಿದ್ದಾರೆ. ಆದರೇ, ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿಗೆ ಆರೋಪಿ ದರ್ಶನ್ ಸೇರಿದಂತೆ ಉಳಿದ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜನವರಿ 5 ರ ಸೋಮವಾರಕ್ಕೆ ಮುಂದೂಡಿದೆ.
ಪ್ರತಿಕೂಲ ಸಾಕ್ಷಿ (Hostile Witness): ಒಬ್ಬ ಸಾಕ್ಷಿಯು ತಾನು ಸಾಕ್ಷಿ ಹೇಳಬೇಕಾದ ಪಕ್ಷಕ್ಕೆ ವಿರುದ್ಧವಾಗಿ, ಅಥವಾ ಅವರ ಕ್ಲೈಂಟ್‌ಗೆ ಹಾನಿಯಾಗುವಂತೆ ಸಾಕ್ಷಿ ಹೇಳಿದಾಗ ಅಥವಾ ವರ್ತಿಸಿದಾಗ ನ್ಯಾಯಾಧೀಶರು ಅವರನ್ನು 'Hostile' ಎಂದು ಘೋಷಿಸುತ್ತಾರೆ.
ಪ್ರಮುಖ ಪ್ರಶ್ನೆಗಳು (Leading Questions): ಈ ಸ್ಥಿತಿಯಲ್ಲಿ, ಸಾಕ್ಷಿಯನ್ನು ಕರೆದ ವಕೀಲರು ಸಾಕ್ಷಿಯಿಂದ ಉತ್ತರವನ್ನು ಸೂಚಿಸುವ ಪ್ರಶ್ನೆಗಳನ್ನು (ಉದಾ: "ನೀವು ಆ ವ್ಯಕ್ತಿಯನ್ನು ಅಲ್ಲಿ ನೋಡಿದ್ದೀರಿ, ಸರಿ?") ಕೇಳಲು ಅನುಮತಿ ಪಡೆಯುತ್ತಾರೆ, ಇದು ಸಾಮಾನ್ಯ ಅಡ್ಡ-ಪರೀಕ್ಷೆಯ (cross-examination) ನಿಯಮಗಳಿಗೆ ಅಪವಾದವಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2025/05/Darshan-pavithra-gowda-9.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us