ಶಕ್ತಿ ಯೋಜನೆ ಮಿಸ್​ ಯೂಸ್ ಕಂಟ್ರೋಲ್​ಗೆ ಸರ್ಕಾರ ‘ಸ್ಮಾರ್ಟ್​’ ಪ್ಲಾನ್; ಹೊಸ ರೂಲ್ಸ್ ಏನು..?

ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ (Shakti Scheme) ಹೈಟೆಕ್ ಸ್ಪರ್ಶ ನೀಡಲು ಸರ್ಕಾರ ಮುಂದಾಗಿದೆ.

author-image
Ganesh Kerekuli
Shakti scheme
Advertisment

ಬೆಂಗಳೂರು: ರಾಜ್ಯದ ಮಹಿಳೆಯರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ (Shakti Scheme) ಹೈಟೆಕ್ ಸ್ಪರ್ಶ ನೀಡಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಸುಮ್ಮನೆ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುವಂತಿಲ್ಲ. ಬದಲಾಗಿ ‘ಸ್ಮಾರ್ಟ್ ಕಾರ್ಡ್’ (Smart Card) ಹೊಂದುವುದು ಕಡ್ಡಾಯವಾಗಲಿದೆ.
ಶಕ್ತಿ ಯೋಜನೆಯಡಿ ನಡೆಯುತ್ತಿರುವ ನಕಲಿ ಅಥವಾ ಅನಧಿಕೃತ ಪ್ರಯಾಣಕ್ಕೆ ಬ್ರೇಕ್ ಹಾಕಲು ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಜೂನ್‌ನಿಂದಲೇ ಸ್ಮಾರ್ಟ್ ಕಾರ್ಡ್ ಜಾರಿ?

2023ರ ಜೂನ್ 11ರಂದು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಿತ್ತು. ಬರುವ 2026ರ ಜೂನ್ 11ಕ್ಕೆ ಯೋಜನೆ ಜಾರಿಯಾಗಿ ಬರೋಬ್ಬರಿ 3 ವರ್ಷಗಳು ತುಂಬಲಿವೆ. ಈ ಹಿನ್ನೆಲೆಯಲ್ಲಿ, ಜೂನ್ ತಿಂಗಳಿನಿಂದಲೇ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಕಾರ್ಡ್‌ಗಳ ಉತ್ಪಾದನೆ ಮತ್ತು ವಿತರಣೆಗೆ ಟೆಂಡರ್ (Tender) ಆಹ್ವಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ 3 ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ನಂತರ ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಉಚಿತ ಟಿಕೆಟ್ ಸಿಗಲಿದೆ.

ಇದನ್ನೂ ಓದಿ: ಅಸ್ಸಾಂ ಹೈವೇನಲ್ಲಿ ಸಿ-130 ಜೆ ಯುದ್ಧ ವಿಮಾನದಲ್ಲಿ ಲ್ಯಾಂಡಿಂಗ್ ಆದ ಪ್ರಧಾನಿ ಮೋದಿ!! : ಈಶಾನ್ಯ ಭಾರತದ ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ ಉದ್ಘಾಟನೆ

ಏಕೆ ಈ ಹೊಸ ನಿಯಮ?

ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಹೀಗಾಗಿ ಈ ಬದಲಾವಣೆ ತರಲಾಗುತ್ತಿದೆ. ಯೋಜನೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಆರ್ಥಿಕ ಹೊಣೆಗಾರಿಕೆ ನಿಭಾಯಿಸುವುದು. ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಯೋಜನಾ ವೆಚ್ಚ ಪಾವತಿಸುವಾಗ ಉಂಟಾಗುವ ಗೊಂದಲ ನಿವಾರಣೆ. ನಿಖರವಾದ ಪ್ರಯಾಣಿಕರ ದತ್ತಾಂಶ (Data) ಸಂಗ್ರಹಿಸಲು ಸ್ಮಾರ್ಟ್ ಕಾರ್ಡ್ ಸಹಕಾರಿ. ಸಾರಿಗೆ ಸಂಸ್ಥೆಗಳೇ ಸ್ವತಃ ಈ ಕಾರ್ಡ್ ವ್ಯವಸ್ಥೆ ಜಾರಿಗೆ ತರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದವು.

ಹೇಗಿರುತ್ತೆ ಈ 'ಸ್ಮಾರ್ಟ್ ಕಾರ್ಡ್'?

ಈ ಸ್ಮಾರ್ಟ್ ಕಾರ್ಡ್‌ಗಳು ನೋಡಲು 'ಆಯುಷ್ಮಾನ್‌ ಕಾರ್ಡ್‌' (Ayushman Card) ಮಾದರಿಯಲ್ಲಿ ಇರಲಿವೆ ಎಂದು ಹೇಳಲಾಗಿದೆ.
ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಫೋಟೋ, ಗುರುತಿನ ಚೀಟಿ ಸಂಖ್ಯೆ ಮತ್ತು ಒಂದು ವಿಶೇಷವಾದ 'ದೃಢೀಕರಣ ಸಂಖ್ಯೆ' (Validation Number) ಇರುತ್ತದೆ. ಕಾರ್ಡ್‌ಗಳಲ್ಲಿ ಮೈಕ್ರೋ ಚಿಪ್ (Micro Chip) ಅಳವಡಿಸುವ ಚಿಂತನೆಯೂ ನಡೆದಿದೆ.

ಟಿಕೆಟ್ ಪಡೆಯುವುದು ಹೇಗೆ?

ಸ್ಮಾರ್ಟ್ ಕಾರ್ಡ್ ಜಾರಿಯಾದ ಬಳಿಕ, ಮಹಿಳೆಯರು ನಿರ್ವಾಹಕರಿಗೆ (Conductor) ಕಾರ್ಡ್ ನೀಡಬೇಕು. ನಿರ್ವಾಹಕರು ಕಾರ್ಡ್‌ನಲ್ಲಿರುವ ದೃಢೀಕರಣ ಸಂಖ್ಯೆಯನ್ನು ತಮ್ಮ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್‌ನಲ್ಲಿ (ETM) ನಮೂದಿಸಿದ ನಂತರವಷ್ಟೇ ಶೂನ್ಯ ದರದ ಟಿಕೆಟ್ ಜನರೇಟ್ ಆಗುತ್ತದೆ. ಒಟ್ಟಿನಲ್ಲಿ 'ಶಕ್ತಿ' ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ 'ಸ್ಮಾರ್ಟ್' ನಡೆ ಇಟ್ಟಿದ್ದು, ಮಹಿಳೆಯರು ಶೀಘ್ರದಲ್ಲೇ ಈ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಬಾಂಗ್ಲಾದೇಶದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ!!

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Kannada News Shakti scheme
Advertisment