/newsfirstlive-kannada/media/media_files/2025/11/27/latha-suicide-at-shivamogga-2025-11-27-15-34-06.jpg)
ಪತಿ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಲತಾ
ಆಕೆ ಮೋಹಕ ಚೆಲುವೆ. ಅಷ್ಟೆ ಅಲ್ಲ ಪದವೀಧರೆ ಕೂಡ ಹೌದು. ಅಪ್ಪ- ಅಮ್ಮನ ಮುದ್ದಿನ ಮಗಳಾಗಿ ಬೆಳೆದ ಆಕೆ ಮನೆಯಲ್ಲಿ ತುಂಬಿದ ಕೊಡವನ್ನ ಕೂಡ ಎತ್ತಿದವಳಲ್ಲ. ಆದರೆ, ಸುಂದರ ಬದುಕಿನ ಕನಸಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಕೆ ಕಳೆದ ಒಂದೊಂದು ದಿನವೂ ನರಕಕ್ಕೆ ಸಮನಾಗಿತ್ತು. ಇದರಿಂದ ಬೇಸತ್ತ ಆಕೆ ಕೊನೆಗೂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ಆಕೆಯ ಡೆತ್ ನೋಟ್ ಅವಳ ನೋವಿನ ಬದುಕಿಗೆ ಕನ್ನಡಿ ಹಿಡಿದಂತಿದೆ. ಅರೇ ಇದೇನಿದು ಟ್ರಾಜಿಡಿ ಅಂತೀರಾ ಈ ಸ್ಟೋರಿ ಓದಿ.
/filters:format(webp)/newsfirstlive-kannada/media/media_files/2025/11/27/latha-suicide-at-shivamogga02-2025-11-27-15-36-49.jpg)
ಫೋಟೋದಲ್ಲಿ ಕಾಣುತ್ತಿರುವ ಈಕೆ ಯಾರೋ ಮಾಡೆಲ್ ಅಲ್ಲ. ಹಿರೋಯಿನ್ ಕೂಡ ಅಲ್ಲ, ಆದರೇ, ಅವರಿಗೆ ಸೈಡ್ ಹೊಡೆಯುವಂತ ಚೆಲುವಿಗೇನು ಕೊರತೆಯಿರಲಿಲ್ಲ. ಈ ಸುಂದರಿ ತನ್ನ ಸೌಂದರ್ಯದಷ್ಟೆ ವೈವಾಹಿಕ ಜೀವನ ಸಹ ಸುಂದರವಾಗಿರುತ್ತದೆ ಎಂದುಕೊಂಡಿದ್ದಳು. ಆದರೇ, ಮದುವೆಯಾದ ಏಳು ತಿಂಗಳಲ್ಲೇ ಏಳು ಜನ್ಮಕ್ಕಾಗುವಷ್ಟು ನೋವು, ಯಾತನೆ, ಹತಾಶೆಯನ್ನ ಕಂಡು ಬದುಕಿಗೆ ವಿದಾಯ ಹೇಳಿದ್ದಾಳೆ. ಹೌದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಲತಾ(26) ಕಳೆದ ಮೇ 14 ರಂದು ಶಿಕಾರಿಪುರ ತಾಲೂಕಿನ ದಿಂಡದಹಳ್ಳಿಯ ಗುರುರಾಜ್ ಜೊತೆ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಳು. ಶಿವಮೊಗ್ಗದ ಭದ್ರಾ ಪ್ರಾಜೆಕ್ಟ್ ನಲ್ಲಿ ಇಂಜಿನಿಯರ್ ಆಗಿದ್ದ ಗುರುರಾಜ್ ಗೆ ಕೈ ತುಂಬಾ ವರದಕ್ಷಿಣೆ, ಸೂಟು, ಬೂಟು, ವಾಚ್, ಬಂಗಾರ ಸೇರಿದಂತೆ ಎಲ್ಲವನ್ನ ನೀಡಿ, ಮುದ್ದಿನ ಮಗಳನ್ನ ಲತಾ ಪೋಷಕರು, ಧಾರೆ ಎರೆದು, ಕೊಟ್ಟಿದ್ದರು. ಮಗಳ ಬಾಳು ಹಸನಾಗಿರಲಿ ಎಂದು ಹಾರೈಸಿದ್ದರು. ಅದೇ ರೀತಿ ಪತಿ ಗುರುರಾಜ್ ಒಳ್ಳೆಯ ವ್ಯಕ್ತಿ ಎಂದೇ ಭಾವಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ, ಮದುವೆಯಾದ ಕೆಲವೇ ದಿನದಲ್ಲಿ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ನಿಜರೂಪ ಬಯಲಾಗಿದೆ.
ಲಕ್ಷಗಟ್ಟಲೇ ವರದಕ್ಷಿಣೆ, ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಸೇರಿದಂತೆ ತಮ್ಮ ಸಾಮರ್ಥ್ಯಕ್ಕೆ ಮೀರಿ ಎಲ್ಲವನ್ನ ಅಳಿಯನಿಗೆ ಕೊಟ್ಟಿದ್ದರೂ, ಆತ ಹಾಗೂ ಆತನ ಕುಟುಂಬದವರ ದಾಹ ತಣಿದಿರಲಿಲ್ಲ. ಮತ್ತಷ್ಟು ದುಡ್ಡಿಗೆ ಬೇಡಿಕೆಯಿಟ್ಟಿದ್ದ ಪತಿ ಗುರುರಾಜ್, ಇನ್ನೋವಾ ಕಾರನ್ನ ತರುವಂತೆ ಒತ್ತಾಯಿಸುತ್ತಿದ್ದ.ಇದಕ್ಕೆ ಸರ್ಕಾರಿ ನೌಕರಿಯಿಂದ ನಿವೃತ್ತಿಯಾಗಿದ್ದ ಮಾವ ಹಾಗೂ ಅತ್ತೆ, ಅಳಿಯನ ಅಕ್ಕ ಮತ್ತೀತರರು ಸೇರಿಕೊಂಡು ಕೊಡಬಾರದ ಹಿಂಸೆ ನೀಡಿದ್ದಾರೆ. ಅದರಲ್ಲೂ ಊಟ, ತಿಂಡಿ, ಬಟ್ಟೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಲತಾಳಿಗೆ ಕಿರುಕುಳ ಕೊಟ್ಟಿದ್ದಾರೆ. ಆರಂಭದಲ್ಲಿ ಇವೆಲ್ಲವನ್ನು ಸಹಿಸಿಕೊಂಡಿದ್ದ ಲತಾ, ಇಂದಲ್ಲಾ ನಾಳೆ ಎಲ್ಲವೂ ಸರಿಹೋಗುತ್ತೆ ಎಂದು ಭಾವಿಸಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ಯಾರು ಕೈ ಕೊಟ್ಟರು ಪತಿ ತನ್ನ ಜೊತೆಗೆ ಇರ್ತಾನೆ ಎಂದು ಬಲವಾಗಿ ನಂಬಿದ್ದಳು. ಆದರೇ, ಅಪ್ಪ- ಅಮ್ಮ ಹಾಗೂ ಅಕ್ಕನ ಮಾತಿಗೆ ಕುಣಿಯುತ್ತಿದ್ದ ಗುರುರಾಜ್ ನ ವರ್ತನೆ ಸಾಕಷ್ಟು ಬದಲಾಗಿದ್ದನ್ನ ಕಂಡು, ಆಕೆ ಸಾಕಷ್ಟ ನೋವು ಅನುಭವಿಸಿದ್ದಳು.
ದಿನಕಳೆದಂತೆ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ಬದಲಾದ ವರ್ತನೆ ಹಾಗೂ ನಡವಳಿಕೆಯಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದ ಲತಾಳಿಗೆ ಗಂಡನ ಅಕ್ರಮ ಸಂಬಂಧ ಬರ ಸಿಡಿಲಿನಂತೆ ಅಘಾತ ಉಂಟು ಮಾಡಿತ್ತು. ಪತಿ ಗುರುರಾಜ್ ಬೇರೊಬ್ಬಳೊಂದಿಗೆ ಚಾಟಿಂಗ್ & ಡೇಟಿಂಗ್ ನಲ್ಲಿ ಇರೋದನ್ನ ಮೊಬೈಲ್ ನಿಂದ ಲತಾ ತಿಳಿದುಕೊಂಡಿದ್ದಳಲ್ಲದೇ, ಖುದ್ದಾಗಿ ಕೂಡ ನೋಡಿದ್ದಳು. ಇದೆಲ್ಲವನ್ನ ತನ್ನ ಪೋಷಕರ ಗಮನಕ್ಕೂ ಲತಾ ತಂದಿದ್ದಳು.
ಇದಕ್ಕೆ ಪೋಷಕರು, ಬೀಗರಿಗೆ ಕರೆ ಮಾಡಿ, ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದ್ದರು. ಆದರೇ, ಪತಿ ಹಾಗೂ ಆತನ ಕುಟುಂಬಸ್ಥರ ಬದಲಾಗದ ವರ್ತನೆಯಿಂದ ಬೇಸತ್ತ ಲತಾ ಅಂತಿಮವಾಗಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾಳೆ. ತವರು ಮನೆ ಭದ್ರಾವತಿಯ ಹಂಚಿನಸಿದ್ದಾಪುರಕ್ಕೆ ಬಂದ ಲತಾ, ವಾಟ್ಸಾಪ್ ನಲ್ಲಿ ಡೆತ್ ನೋಟ್ ಮೇಸೆಜ್ ಹಾಕಿ, ಚಪ್ಪಲಿ, ಮೊಬೈಲ್ ಬಿಟ್ಟು, ಕಳೆದ ಸೋಮವಾರ ಭದ್ರಾ ನಾಲೆಗೆ ಹಾರಿದ್ದಾಳೆ.
/filters:format(webp)/newsfirstlive-kannada/media/media_files/2025/11/27/latha-suicide-at-shivamogga02-1-2025-11-27-15-39-01.jpg)
ಮನೆಗೆ ಬಂದ ಮಗಳು ನಾಪತ್ತೆಯಾಗಿದ್ದರಿಂದ ಗಾಬರಿಯಾದ ಪೋಷಕರು ಲತಾಳಿಗೆ ಸಾಕಷ್ಟು ಹುಡುಕಾಡಿದ್ದಾರೆ. ಅಂತಿಮವಾಗಿ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ನಾಲೆಯ ದಂಡಯ ಮೇಲೆ ಲತಾಳ ಮೊಬೈಲ್, ಚಪ್ಪಲಿ ಸಿಕ್ಕ ಹಿನ್ನಲೆಯಲ್ಲಿ ನಾಲೆಯಲ್ಲಿ ಶೋಧ ಆರಂಭಿಸಿದಾಗ ಆಕೆಯ ಶವ, ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದ ಕಣಿವೆ ಬಿಳಚಿ ಬಳಿ ನಾಲೆಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಬಳಿಕ ಲತಾ ಶವವನ್ನ ಮೆಗ್ಗಾನ್ ಶವಾಗಾರಕ್ಕೆ ಶಿಪ್ಟ್ ಮಾಡಲಾಗಿದ್ದು, ಭದ್ರಾವತಿ ತಹಸೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಇನ್ನು ಮಗಳ ಸಾವಿನಿಂದ ಶಾಕ್ ಒಳಗಾಗಿರುವ ಲತಾ ಕುಟುಂಬಸ್ಥರು, ಮೆಗ್ಗಾನ್ ಶವಾಗಾರದ ಬಳಿ ಕೂಡ ಜಮಾಯಿಸಿದ್ದರು. ಲತಾಳ ಫೋಟೊ ಹಿಡಿದು, ಮಗಳಿಗೆ ಅನ್ಯಾಯ ಮಾಡಿದ ಪತಿ ಗುರುರಾಜ್ ಹಾಗೂ ಆತನ ಕುಟುಂಬಸ್ಥರ ವಿರುಧ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅದರಲ್ಲೂ ಲತಾಳ ತಾಯಿ, ಭದ್ರಾವತಿ ತಹಶೀಲ್ದಾರ್ ಮುಂದೆ ಕೈ ಮುಗಿದು, ಅಳುತ್ತಾ, ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದದ್ದು, ಎಂತಹವರ ಮನಸ್ಸನ್ನು ಕಲಕುವಂತಿತ್ತು. ಮಗಳು ಸಾಯುವ ಮುನ್ನವೇ ಡೆತ್ ನೋಟ್ ನಲ್ಲಿ ಎಲ್ಲವನ್ನ ಬರೆದಿಟ್ಟಿದ್ದು, ಅದನ್ನ ಪರಿಗಣಿಸಿ, ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆ, ದುಡ್ಡಿನ ದಾಹ, ಅಕ್ರಮ ಸಂಬಂಧ ಹಾಗೂ ಅಮಾನವೀಯ ನಡವಳಿಕೆಯ ಕುಟುಂಬದವರೊಂದಿಗೆ ಜೀವನ ನಡೆಸುವುದು ಅಸಾಧ್ಯ ಎಂದು ಭಾವಿಸಿ, ಬದುಕಿಗೆ ವಿದಾಯ ಹೇಳಿದ್ದು ಮಾತ್ರ ನಿಜಕ್ಕೂ ದುರಂತ.
/filters:format(webp)/newsfirstlive-kannada/media/media_files/2025/11/27/latha-suicide-at-shivamogga03-2025-11-27-15-43-22.jpg)
ಲತಾ ಬರೆದ ಡೆತ್ ನೋಟ್, ಲತಾ ಮದುವೆ ಪೋಟೋ, ಆರೋಪಿ ಪತಿ ಗುರುರಾಜ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us