ಪೊಲೀಸ್ ಪೇದೆಯ ಪತ್ನಿಗೆ ಮೌನೇಶ್ ಶೀಕಲ್ ಕಿರುಕುಳ, ಬ್ಲಾಕ್ ಮೇಲ್ : ಆತ್ಮಹತ್ಯೆಗೆ ಶರಣಾದ ಪೇದೆಯ ಪತ್ನಿ ರಕ್ಷಿತಾ

ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಪೇದೆ ಮೌನೇಶ್ ಶೀಕಲ್ ಎಂಬಾತನ ತನ್ನ ಸಹೋದ್ಯೋಗಿ ಪತ್ನಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾನೆ. ಇದರಿಂದ ನೊಂದ ಪೇದೆಯ ಪತ್ನಿ ರಕ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ಪೇದೆ ಮೌನೇಶ್ ಶೀಕಲ್ ವಿರುದ್ಧ ಕೇಸ್ ದಾಖಲಿಸಿ ಬಂಧಿಸಲಾಗಿದೆ.

author-image
Chandramohan
constable wife suicide at shivamogga

ಆತ್ಮಹತ್ಯೆಗೆ ಶರಣಾದ ರಕ್ಷಿತಾ, ಆರೋಪಿ ಮೌನೇಶ್ ಶೀಕಲ್

Advertisment
  • ಪತಿಯ ಸಹೋದ್ಯೋಗಿ ಮೌನೇಶ್ ಶೀಕಲ್ ನಿಂದ ರಕ್ಷಿತಾಗೆ ಬ್ಲಾಕ್ ಮೇಲ್
  • ಬ್ಲಾಕ್ ಮೇಲ್, ಮಾನಸಿಕ ಕಿರುಕುಳದಿಂದ ನೊಂದ ರಕ್ಷಿತಾ ಆತ್ಮಹತ್ಯೆ
  • ಇದೀಗ ಮೌನೇಶ್ ಶೀಕಲ್ ವಿರುದ್ಧ ಕೇಸ್ ದಾಖಲಿಸಿ, ಬಂಧನ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯ ಪೇದೆ ಮೌನೇಶ್ ಶೀಕಲ್, ತನ್ನ ಸಹೋದ್ಯೋಗಿಯ ಪತ್ನಿ ರಕ್ಷಿತಾಗೆ ಕಿರುಕುಳ ನೀಡಿದ್ದು, ಇದರಿಂದ ನೊಂದ  ಮಹಿಳೆ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ತನ್ನ ಸಹೋದ್ಯೋಗಿಯ ಪತ್ನಿ ರಕ್ಷಿತಾಗೆ ಬ್ಲಾಕ್ ಮೇಲ್ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದ ತನ್ನ ಪತ್ನಿ ರಕ್ಷಿತಾ  ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್ ಪೇದೆ ಇದೀಗ ಭದ್ರಾವತಿ ಓಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ  ದೂರಿನ ಆಧಾರದ ಮೇಲೆ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಮೌನೇಶ್ ಶೀಕಲ್ ವಿರುದ್ಧ ಕೇಸ್ ದಾಖಲಾಗಿದ್ದು, ಬಂಧಿಸಲಾಗಿದೆ. ಆರೋಪಿ ಮೌನೇಶ್ ಶೀಕಲ್ ವಿರುದ್ಧ ಬಿಎನ್‌ಎಸ್‌ ನ ವಿವಿಧ ಸೆಕ್ಷನ್ ಗಳು  ಹಾಗೂ ಐ.ಟಿ. ಕಾಯಿದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. 
ಕಳೆದ ನವಂಬರ್ 6 ರಂದೇ ಪೊಲೀಸ್ ಪೇದೆಯ ಪತ್ನಿ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿತ್ತು. ಬಳಿಕ ಪೊಲೀಸ್ ಪೇದೆಗೆ ತನ್ನ ಪತ್ನಿ ರಕ್ಷಿತಾ ಆತ್ಮಹತ್ಯೆಯು ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಪತ್ನಿ ರಕ್ಷಿತಾಳ ಮೊಬೈಲ್  ಅನ್ನು ಪರಿಶೀಲಿಸಿದ್ದಾರೆ. ಆಗ ಮತ್ತೊಬ್ಬ ಪೊಲೀಸ್ ಪೇದೆ ಮೌನೇಶ್ ಶೀಕಲ್ ಕಿರುಕುಳ ನೀಡಿ ಬ್ಲಾಕ್ ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. 
ಶಿವಮೊಗ್ಗದ ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಪೊಲೀಸ್ ಪೇದೆ ತಮ್ಮ ಪತ್ನಿ ರಕ್ಷಿತಾ, ಮಕ್ಕಳ ಜೊತೆ ವಾಸ ಇದ್ದರು. ಇದೇ ಕ್ವಾರ್ಟರ್ಸ್ ನ ನೆಲ ಅಂತಸ್ತಿನಲ್ಲಿ ಮತ್ತೊಬ್ಬ ಪೇದೆ ಮೌನೇಶ್ ಶೀಕಲ್ ವಾಸ ಇದ್ದ.  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಮೃತ ಮಹಿಳೆಯ ಪತಿ  ಕೆಲಸ ಮಾಡುತ್ತಿದ್ದರು. 
ತನ್ನ  ಇಲಾಖೆಯ ಸಹೋದ್ಯೋಗಿ ಪತ್ನಿ ರಕ್ಷಿತಾಗೆ ಅಶ್ಲೀಲ ಮೆಸೇಜ್ ಕಳಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು   ಮೌನೇಶ್ ಶೀಕಲ್ ನೀಡುತ್ತಿದ್ದ. ಇದರಿಂದ ಬೇಸತ್ತು ಕಳೆದ ನವೆಂಬರ್ 6 ರಂದು ನೇಣು ಬಿಗಿದುಕೊಂಡು ಮಹಿಳೆ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು.  ಪೊಲೀಸ್ ಕ್ವಾರ್ಟರ್ಸ್ ನಲ್ಲೇ  ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದರು.  ಪತ್ನಿ ರಕ್ಷಿತಾ ಸಾವಿನಿಂದ ಆಘಾತಕ್ಕೊಳಗಾದ ಪತಿ,  ಪತ್ನಿಯ ಸಾವಿಗೆ ಕಾರಣ ಕಂಡುಕೊಳ್ಳಲು ಮುಂದಾದರು. ಆಗ ಪತ್ನಿ ರಕ್ಷಿತಾ ಬಳಸುತ್ತಿದ್ದ ಮೊಬೈಲ್‌ ಪರಿಶೀಲನೆ ಮಾಡಿದ್ದರು.  ಪರಿಶೀಲನೆ ವೇಳೆ ಪತ್ನಿ ರಕ್ಷಿತಾಗೆ ಮೌನೇಶ್ ಶೀಕಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. 

constable wife suicide at shivamogga (1)





15 ವರ್ಷದ ಹಿಂದೆ  ಚಿಕ್ಕಮಗಳೂರಿನ ರಕ್ಷಿತಾಳನ್ನು ಮದುವೆಯಾಗಿದ್ದ ಪೊಲೀಸ್ ಪೇದೆ, ಎರಡು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು.  ಹನುಮಂತನಗರ ಕ್ವಾರ್ಟರ್ಸ್  ನಲ್ಲಿ  ಪೊಲೀಸ್ ಪೇದೆ ವಾಸ ಇದ್ದರು. ಕಳೆದ ಆಗಸ್ಟ್ 20 ರಿಂದ ಮೌನೇಶ್ ಶೀಕಲ್ ತನ್ನ ಪತ್ನಿಗೆ  ಕಿರುಕುಳ ನೀಡುತ್ತಿದ್ದ  ಎಂಬುದು ಈಗ ಬೆಳಕಿಗೆ ಬಂದಿದೆ. ತನ್ನ ತಾಯಿಯೊಂದಿಗೆ ಈ ವಿಚಾರವನ್ನು  ರಕ್ಷಿತಾ ಹಂಚಿಕೊಂಡಿದ್ದರು.  ಪೊಲೀಸ್ ಆಗಿರುವ ತನ್ನ ಪತಿಗೆ ಈ ವಿಚಾರವನ್ನು ತಿಳಿಸಲಾಗುತ್ತಿಲ್ಲ ಎಂದು ಆಸಹಾಯಕತೆಯನ್ನು  ಗೃಹಿಣಿ ರಕ್ಷಿತಾ ವ್ಯಕ್ತಪಡಿಸಿದ್ದರು. ಮೌನೇಶ್ ಶೀಕಲ್ ಕಿರುಕುಳ ನಿಲ್ಲದ ಕಾರಣ ಬೇಸತ್ತು  ಮಹಿಳೆ ರಕ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದರು. 
ಪತ್ನಿಯ ಸಾವಿಗೆ ತನ್ನದೇ ಇಲಾಖೆಯ ಸಿಬ್ಬಂದಿ ಕಾರಣ ಎಂಬುದು ಪೊಲೀಸ್ ಪೇದೆಗೆ ಅರಿವಾಗಿದೆ. 

ಆತ್ಮಹತ್ಯೆ  ಘಟನೆ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸ್ ಪೇದೆ ಮೌನೇಶ್ ಶೀಕಲ್ ವಿರುದ್ಧ ಮಹಿಳೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಬಿಎನ್ಎಸ್ ಹಾಗೂ ಐಟಿ ಕಾಯ್ದೆಯ ವಿವಿಧ ಸೆಕ್ಷನ್ ಅಡಿ‌ ದೂರು ದಾಖಲಾಗಿದೆ. ಆರೋಪಿ ಮೌನೇಶ್ ಶೀಕಲ್ ನನ್ನು ಭದ್ರಾವತಿ ಓಲ್ಡ್ ಟೌನ್ ಪೊಲೀಸರು ಬಂಧಿಸಿದ್ದಾರೆ.  ಈ ಘಟನೆಯು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

police constable harassment

ಆರೋಪಿ ಮೌನೇಶ್ ಶೀಕಲ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ ಪೊಲೀಸರು



ವರದಿ- ಪ್ರಸನ್ನ, ನ್ಯೂಸ್ ಫಸ್ಟ್.  ಶಿವಮೊಗ್ಗ,  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Wife suicide
Advertisment