/newsfirstlive-kannada/media/media_files/2026/02/17/shimogga-love-case-2026-02-17-11-15-08.jpg)
ಪ್ರೀತಿ ನಿರಾಕರಿಸಿದ ಎಂಬ ಕಾರಣಕ್ಕೆ ಉನ್ಮಾದಗೊಂಡ ಯುವಕನೊಬ್ಬ ಯುವತಿಯ ಮನೆಗೆ ನುಗ್ಗಿ ಬಿಯರ್ ಬಾಟಲಿಯಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ
ತೂದೂರು ಗ್ರಾಮದ ನಿವಾಸಿ ಸ್ವರೂಪ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಕಳೆದ ಆರು ತಿಂಗಳಿಂದ ಈತ ಅದೇ ಊರಿನ ಅಪೂರ್ವ ಎಂಬಾಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಅಪೂರ್ವ ಆತನ ಪ್ರೀತಿಯನ್ನು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸ್ವರೂಪ್, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:6 ಕೋಟಿ ಆಸ್ತಿಗಾಗಿ ಹೆತ್ತ ತಂದೆಯನ್ನೇ ಮುಗಿಸಿದ ಪಾಪಿ ಮಕ್ಕಳು..! ವಿಲ್ ಬರೆದಿದ್ದೇ ತಪ್ಪಾಯ್ತಾ?
ಮನೆಗೆ ನುಗ್ಗಿ ಅಟ್ಟಹಾಸ
ಇಂದು ಸಂಜೆ ಕಂಠಪೂರ್ತಿ ಕುಡಿದು ಬಂದಿದ್ದ ಸ್ವರೂಪ್, ಏಕಾಏಕಿ ಅಪೂರ್ವ ಅವರ ಮನೆಗೆ ನುಗ್ಗಿದ್ದಾನೆ. ಇದನ್ನು ತಡೆಯಲು ಬಂದ ಅಪೂರ್ವ ತಾಯಿ ಪೂರ್ಣಿಮಾ ಅವರನ್ನು ಮನೆಯಿಂದ ಹೊರಗೆ ತಳ್ಳಿ, ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ತಾನು ತಂದಿದ್ದ ಬಿಯರ್ ಬಾಟಲಿಯಿಂದ ಅಪೂರ್ವ ಅವರ ಕತ್ತು, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಮನಸೋ ಇಚ್ಛೆ ಚುಚ್ಚಿ ಗಾಯಗೊಳಿಸಿದ್ದಾನೆ.
ಬಾಗಿಲು ಒಡೆದು ರಕ್ಷಿಸಿದ ತಂದೆ
ಮನೆಯೊಳಗೆ ಚೀರಾಟ ಕೇಳಿ ಸಮೀಪದಲ್ಲೇ ಇದ್ದ ಅಪೂರ್ವ ತಂದೆ ಸುಧಾಕರ್ ಓಡಿ ಬಂದು ಬಾಗಿಲು ಒಡೆದಿದ್ದಾರೆ. ತಂದೆ ಒಳಬರುತ್ತಿದ್ದಂತೆಯೇ ಆರೋಪಿ ಸ್ವರೂಪ್ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಪೂರ್ವ ಅವರನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅಪೂರ್ವ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ನಂತರ ಪರಾರಿಯಾಗಿದ್ದ ಆರೋಪಿ ಸ್ವರೂಪ್‌ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us