/newsfirstlive-kannada/media/media_files/2025/11/22/nia-1-2025-11-22-10-56-53.jpg)
ಶಿವಮೊಗ್ಗ ತುಂಗಾ ನದಿಯಲ್ಲಿ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಅಪರಾಧಿಗಳಿಗೆ NIA ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಕಟ ಮಾಡಿದೆ.
ಮೊಹಮ್ಮದ್ ಜಬಿಯುಲ್ಲಾ, ನದೀಂ ಫೈಜಲ್ ಅಪರಾಧಿಗಳೆಂದು ಘೋಷಣೆ ಮಾಡಿದ್ದ ಕೋರ್ಟ್​, ಇಬ್ಬರಿಗೂ 6 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. UAPA, ಬಿಎನ್​ಎಸ್​ ಮತ್ತು KPD Property Act ಅಡಿಯಲ್ಲಿ ಅಪರಾಧಿಗಳು ಎಂದು ಕೋರ್ಟ್ ಹೇಳಿದೆ.
2022ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಜಸ್ಥಾನದ ಪ್ರೇಮ್ ಸಿಂಗ್ (Prem Singh) ಹತ್ಯೆ ಪ್ರಕರಣದ ತನಿಖೆ ವೇಳೆ ಸಂಚು ಬೆಳಕಿಗೆ ಬಂದಿತ್ತು. ಆರೋಪಿಗಳು IS (Islamic State) ಸಂಘಟನೆಯ ಚಟುವಟಿಕೆಗಳಿಗೆ ಬಲ ತುಂಬುವ ಉದ್ದೇಶದಿಂದ ಸಂಚು ರೂಪಿಸಿದ್ದರೆಂದು ಎನ್​ಐಎ ತನಿಖೆಯಲ್ಲಿ ಸಾಬೀತಾಗಿತ್ತು.
ಈ ಸಂಬಂಧ ಪ್ರತ್ಯೇಕ FIR ದಾಖಲಿಸಿ ತನಿಖೆಯನ್ನು NIAಗೆ ವರ್ಗಾಯಿಸಲಾಗಿತ್ತು. NIA ತನಿಖೆಯ ಪ್ರಕಾರ ಜಬಿಯುಲ್ಲಾ, ಮೊಹಮ್ಮದ್ ಶಾರಿಕ್ ಸೂಚನೆ ಮೇಲೆ ನದೀಂ ಫೈಜಲ್‌ರನ್ನು ಸೇರಿಸಿಕೊಂಡಿದ್ದ. ಆರೋಪಿಗಳು ವಾಹನಗಳು ಹಾಗೂ ಹಿಂದೂ ಸಮುದಾಯಕ್ಕೆ ಸೇರಿದ ಆಸ್ತಿಗಳನ್ನು ಸುಡುವ ಸಂಚು ರೂಪಿಸಿದ್ದರು ಅನ್ನೋದು ತನಿಖೆಯಿಂದ ತಿಳಿದುಬಂದಿತ್ತು.
ಇವರ ಉದ್ದೇಶ ದೇಶದ ಆರ್ಥಿಕ ಸ್ಥಿರತೆಯನ್ನು ಹಾನಿಗೊಳಿಸುವುದು ಮತ್ತು ದೇಶದ ವಿರುದ್ಧ ಯುದ್ಧಪ್ರಯತ್ನ ನಡೆಸುವುದಾಗಿತ್ತು. ಅಪರಾಧಿಗಳ ವಿಜಯಪುರ, ಶಿವಮೊಗ್ಗ ಮತ್ತು ಕೇಂದ್ರ ಕಾರಾಗೃಹ ಶಿಫ್ಟ್ ಮಾಡಲು ಕೋರ್ಟ್ ಆದೇಶ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us