Advertisment

ಖಂಡ ಗ್ರಸ್ತ ಸೂರ್ಯಗ್ರಹಣ; 15 ದಿನದಲ್ಲಿ ಎರಡು ಗ್ರಹಣ.. ಪ್ರಾಕೃತಿ ವಿಕೋಪಗಳು ಸಂಭವಿಸಲಿವೆಯಾ..?

ಪ್ರಕೃತಿಯಲ್ಲಿ ಬದಲಾವಣೆಗಳು ಆಗ್ತಾವೆ ಅನ್ನೋದನ್ನ ವಿಜ್ಞಾನವೂ ಒಪ್ಪುತ್ತೆ. ಆದ್ರೆ, ಗ್ರಹಣದಿಂದಲೇ ಭೂಕಂಪನ ಆಯ್ತು, ಭಾರೀ ಪ್ರಮಾಣದಲ್ಲಿ ಜಲತಾಂಡವ ಆಯ್ತು, ಭೂಕುಸಿತವಾಯ್ತು ಅನ್ನೋದಕ್ಕೆ ವಿಜ್ಞಾನಕ್ಕೂ ಇನ್ನೂ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ. ಆದ್ರೆ..

author-image
Bhimappa
solar_eclipse
Advertisment

ಗ್ರಹಣ ಅನ್ನೋ ಹೆಸರು ಕೇಳಿದ್ರೆ ಸಾಕು ಏನೋ ಒಂದ್‌ ರೀತಿಯ ಭಯ ಆತಂಕ, ಖಂಡಿತವಾಗಿಯೂ ಇರುತ್ತೆ. ಕಾರಣ ತಮ್ಮ ಮೇಲೆ ಏನು ಪರಿಣಾಮ ಬೀರುತ್ತಾ, ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತಾ? ರೋಗರುಚಿನಗಳನ್ನ ಹೊತ್ತು ತರುತ್ತಾ? ಅನ್ನೋ ಭೀತಿ ಇರುತ್ತೆ. ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರಜ್ಞರು ಏನು ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. 

Advertisment

ಕೇತುಗ್ರಸ್ತ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸ್ಕೊಳ್ತಾ ಇಲ್ಲ. ಹೀಗಾಗಿ ಭಾರತದಲ್ಲಿ ಸೂತಕದ ಪಾಲನೆ ಇಲ್ಲವೇ ಇಲ್ಲ. ಗ್ರಹಣಕ್ಕೂ ಮುನ್ನ ಏಳೆಂಟು ಗಂಟೆ ಮುನ್ನವೇ ಆಹಾರ ಸೇವಿಸಿ ಇರ್ಬೇಕು ಅನ್ನೋದ್‌ ಇಲ್ಲ. ಗ್ರಹಣಕಾಲದಲ್ಲಿ ಆಹಾರ ಸೇವಿಸ್ಬಾರದು ಅನ್ನೋದೂ ಇಲ್ಲ. ಹಾಗೇ ಆಹಾರಗಳಿಗೆ ತುಳಿಸಿ ಅಥವಾ ದರ್ಬೆ ಹಾಕಿ ಇಡ್ಬೇಕು ಅನ್ನೋದು ಇಲ್ಲ. ಹಾಗಂತ ಭಾರತದ ಮೇಲೆ ಗ್ರಹಣ ಗ್ರಹಚಾರ ಬೀರಲ್ಲ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ. ಖಂಡಿತವಾಗಿಯೂ ಬೀರುತ್ತೆ ಅನ್ನೋದನ್ನ ಜ್ಯೋತಿಷಿಗಳು ಹೇಳ್ತಾ ಇದ್ದಾರೆ. ಹಾಗಾದ್ರೆ, ರಾಜಕೀಯವಾಗಿ, ಪ್ರಾಕೃತಿಕವಾಗಿ ಹೇಗೆ ಪರಿಣಾಮ ಬೀರುತ್ತೆ? ಮನುಷ್ಯರ ಮೇಲೆ ಪರಿಣಾಮ ಬೀರಿದ್ರೆ ಯಾವ್‌ ರೀತಿಯಲ್ಲಿ ಬೀರುತ್ತೆ? ಅನ್ನೋದ್‌ ಮಹತ್ವದ ವಿಚಾರ. 

Solar Eclipse

ಸೂರ್ಯ ಗ್ರಹಣ ಆಗಿರ್ಬಹುದು, ಚಂದ್ರ ಗ್ರಹಣ ಆಗಿರ್ಬಹುದು ಜ್ಯೋತಿಷ್ಯ ಶಾಸ್ತ್ರ ಹೇಳೋದು ಏನು ಅಂದ್ರೆ, ಗ್ರಹಣ ಯಾವ ರಾಶಿ ಮತ್ತು ನಕ್ಷತ್ರದಲ್ಲಿ ನಡೆಯುತ್ತೋ? ಆ ಸಂದರ್ಭದಲ್ಲಿ ಕುಂಡಲಿಯಲ್ಲಿ ಏನೇನ್‌ ಸ್ಥಾನ ಇರುತ್ತೋ? ಅದರ ಆಧಾರ ಮೇಲೆ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತೆ. ಅದ್ಕೆ ಪರಿಹಾರದ ಮಾರ್ಗ ಅಂದ್ರೆ, ದೇವರ ಧ್ಯಾನ ಮಾಡೋದು, ನಾಮಸ್ಮರಣೆ ಮಾಡೋದು, ದೇವರಿಗೆ ಅಭಿಷೇಕ ಮಾಡಿಸೋ ಸಲಹೆಯನ್ನ ಜ್ಯೋತಿಷಿಗಳು ನೀಡ್ತಾರೆ. ಹಾಗಾದ್ರೆ, ಈ ಸೂರ್ಯಗ್ರಹಣ ಯಾವ ರಾಶಿಯಲ್ಲಿ ನಡೀತಾ ಇದೆ? ಅದು ಯಾರ ಮೇಲೆ ಪರಿಣಾಮ ಬೀರುತ್ತೆ? ಅನ್ನೋ ಬಗ್ಗೆ ಜ್ಯೋತಿಷಿಗಳೇ ಹೇಳಿದ್ದಾರೆ.

ಸಾವಿರಾರು ವರ್ಷಗಳ ಹಿಂದೆಯೇ ಋಷಿ ಮುನಿಗಳು ನೀಡಿರೋ ಜ್ಯೋತಿಷ್ಯ ಶಾಸ್ತ್ರದ ವಿಶೇಷ ಅಂದ್ರೆ, ಯಾವುದೇ ಗ್ರಹಣದ ಪರಿಣಾಮ ಏನು ಅನ್ನೋದ್ ಹೇಗೆ ಉಲ್ಲೇಖವಾಗಿರುತ್ತೋ? ಹಾಗೇ ಅದ್ಕೆ ಪರಿಹಾರದ ಮಾರ್ಗಗಳು ಇರ್ತಾವೆ.

Advertisment

ಪ್ರಕೃತಿ ಮೇಲೆ ಪರಿಣಾಮ ಬೀರುತ್ತಾ?

ಗ್ರಹಣಗಳು ಮನುಷ್ಯರ ಮೇಲೆ ರಾಶಿಗಳಿಗೆ ಅನುಗುಣವಾಗಿ, ನಕ್ಷತ್ರಗಳಿಗೆ ಏನುಗುಣವಾಗಿ ಪರಿಣಾಮ ಬೀರುತ್ತವೆ ಅನ್ನೋದನ್ನ ಜ್ಯೋತಿಷಿಗಳು ಹೇಳ್ತಾರೆ. ಆದ್ರೆ, ಪ್ರಕೃತಿ ಮೇಲೆ ಪರಿಣಾಮ ಬೀರುತ್ತಾ ಅಂತ ಕೇಳಿದ್ರೆ ಖಂಡಿತ ಹೌದು ಅನ್ನೋ ಉತ್ತರಗಳು ಬರ್ತಾವೆ. ಈ ಹಿಂದೆ ಗ್ರಹಣಗಳು ಕಾಣಿಸಿಕೊಳ್ಳುವ 3 ತಿಂಗಳು ಮಂಚಿತ ಮತ್ತು ಗ್ರಹಣ ಕಾಣಿಸಿಕೊಂಡ 3 ತಿಂಗಳ ನಂತರ ಪ್ರಾಕೃತಿಕ ವಿಕೋಪಗಳು ಆಗಿವೆ. ಅದು ಭಾರೀ ಪ್ರಮಾಣದಲ್ಲಿ ಮಳೆಯಾಗಿ ನೆರೆ ಬಂದಿರೋದು ಆಗಿರ್ಬಹುದು, ಭೂಕಂಪನ ಆಗಿರ್ಬಹುದು, ಭೂಕುಸಿತ ಆಗಿರ್ಬಹುದು, ಜ್ವಾಲಾಮುಖಿ ಸ್ಫೋಟವಾಗಿರ್ಬಹುದು. ಆ ರೀತಿಯ ಪ್ರಾಕೃತಿಕ ವಿಕೋಪಗಳು ಕಾಣಿಸ್ಕೊಂಡಿವೆ. ಅದ್ರಲ್ಲಿಯೂ 15 ದಿನದ ಅಂತರದಲ್ಲಿ ಎರಡು ಗ್ರಹಣಗಳು ಕಾಣಿಸ್ಕೊಂಡಾಗಿ ಜಾಸ್ತಿ ಪ್ರಮಾಣದಲ್ಲಿಯೇ ಪ್ರಾಕೃತಿ ವಿಕೋಪಗಳು ಕಾಣಿಸ್ಕೊಂಡಿವೆ ಅಂತ ಹೇಳಲಾಗ್ತಿದೆ.

ಗ್ರಹಣಗಳಿಂದ ಪ್ರಕೃತಿಯಲ್ಲಿ ಬದಲಾವಣೆಗಳು ಆಗ್ತಾವೆ ಅನ್ನೋದನ್ನ ವಿಜ್ಞಾನವೂ ಒಪ್ಪುತ್ತೆ. ಆದ್ರೆ, ಗ್ರಹಣದಿಂದಲೇ ಭೂಕಂಪನ ಆಯ್ತು, ಭಾರೀ ಪ್ರಮಾಣದಲ್ಲಿ ಜಲತಾಂಡವ ಆಯ್ತು, ಭೂಕುಸಿತವಾಯ್ತು ಅನ್ನೋದಕ್ಕೆ ವಿಜ್ಞಾನಕ್ಕೂ ಇನ್ನೂ ಸೂಕ್ಷ ಸಾಕ್ಷ್ಯ ಸಿಕ್ಕಿಲ್ಲ. ಆದ್ರೆ, ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆಯನ್ನ ಮಾಡ್ತಾ ಇದ್ದಾರೆ. ಸೂರ್ಯ ಗ್ರಹಣದಿಂದ ಪ್ರಕೃತಿ ಮೇಲೆ ಯಾವ ಪರಿಣಾಮವಾಗುತ್ತೆ? ಚಂದ್ರ ಗ್ರಹಣದಿಂದ ಏನು ಪರಿಣಾಮ ಆಗುತ್ತೆ? ಅನ್ನೋ ಬಗ್ಗೆ ಸಂಶೋಧನೆ ಮಾಡ್ತಿದ್ದಾರೆ.

ಗ್ರಹಣ ಗ್ರಹಚಾರ, ರೋಗರುಜಿನಗಳು ಬರ್ತಾವಾ?

ಸಾಂಕ್ರಾಮಿಕ ರೋಗಳಿಗೂ? ಗ್ರಾಹಣಗಳಿಗೂ? ಎಲ್ಲಿಂದ ಎಲ್ಲಿಯ ಸಂಬಂಧ? ಅಂತ ನಮ್ಗೂ -ನಿಮ್ಗೂ ಖಂಡಿತವಾಗಿ ಅನಿಸುತ್ತೆ. ಆದ್ರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣಗಳಿಗೂ? ದಿಢೀರ್‌ ಅಂತ ಕಾಣಿಸ್ಕೊಳ್ಳುವ ರೋಗರುಜಿನಗಳಿಗೂ ಸಂಬಂಧವಿದೆ. ಈ ಹಿಂದೆ ವಿಶ್ವ ಮಟ್ಟದಲ್ಲಿ ಯಾವಾಗ ಭೀಕರ ಸಾಂಕ್ರಾಮಿರ ರೋಗಗಳು ಕಾಣಿಸ್ಕೊಂಡಿದ್ದಾವೋ? ಆ ಎಲ್ಲಾ ಸಂದರ್ಭದಲ್ಲಿಯೂ ಗ್ರಹಣಗಳು ಪರಿಣಾಮ ಬೀರಿವೆ ಅಂತ ಹೇಳಲಾಗ್ತಿದೆ. ಹಾಗಾದ್ರೆ, ಈ ಬಾರಿಯೂ ಗ್ರಹಣಗಳು ಪರಿಣಾಮ ಬೀರುತ್ತವಾ? ಅದ್ರಲ್ಲಿಯೂ 15 ದಿನದ ಅಂತರದಲ್ಲಿಯೇ ಎರಡು ಗ್ರಹಣ ಆಗ್ತಾ ಇರೋದು ಸಾಂಕ್ರಾಮಿಕ ರೋಗಗಳಿಗೆ ದಾರ ಮಾಡಿಕೊಡುತ್ತಾ? ಅನ್ನೋ ಭೀತಿ ಹುಟ್ಟಿಸ್ತಿದೆ. 

Advertisment

ಇದನ್ನೂ ಓದಿ:ಪಂದ್ಯದ ಆರಂಭದಲ್ಲೇ ಸೂರ್ಯಗೆ ಗುಡ್ ಲಕ್.. ಪಾಕ್​ ವಿರುದ್ಧ ಭಾರತದ ಪ್ಲೇಯಿಂಗ್- 11 ಹೇಗಿದೆ?

Solar eclips

ಗ್ರಹಣಗಳಿಗೂ? ಸಾಂಕ್ರಾಮಿಕ ರೋಗಳಿಗೂ? ಸಂಬಂಧವಿದೆ ಅನ್ನೋದಕ್ಕೆ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲಿಯವರೆಗೂ ಸಿಗದೇ ಇರ್ಬಹುದು. ಆದ್ರೆ, ಆ ನಿಟ್ಟಿನಲ್ಲಿ ಸಂಶೋಧನೆಗಳು ನಡೀಬೇಕು. ಸಂಬಂಧ ಇದೆಯೋ ಇಲ್ವೋ ಅನ್ನೋದನ್ನ ಗೊತ್ತು ಮಾಡಿಕೊಳ್ಳಬೇಕು. ಅದು ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರೋದಕ್ಕೆ ಅನುಕೂಲ ಮಾಡಿಕೊಡುತ್ತೆ.

ವರ್ಷದ ಕೊನೆಯ ಗ್ರಹಣ ಸೆಪ್ಟೆಂಬರ್‌ 21 ರಂದು ರಾತ್ರಿ ಕಾಣಿಸ್ಕೊಳ್ತಾ ಇದೆ. ಅದು ಭಾರತದಲ್ಲಿ ಕಾಣಿಸಿಕೊಳ್ಳದೇ ಇದ್ರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಫೆಕ್ಟ್‌ ಏನು ಅನ್ನೋದನ್ನ ನಿಮ್ಮ ಮುಂದೆ ಇಟ್ಟಿದ್ದೇವೆ. ಆದ್ರೆ, ಅದನ್ನ ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lunar eclipse Solar Eclipse
Advertisment
Advertisment
Advertisment