/newsfirstlive-kannada/media/media_files/2025/08/25/bng_sslc_student-2025-08-25-10-48-25.jpg)
ಬೆಂಗಳೂರು: 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿದ್ದು ಶಾಲೆಯ ಹೋಮ್ ವರ್ಕ್ ಒತ್ತಡದಿಂದ ಹೀಗೆ ಮಾಡಿಕೊಂಡಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದಾಸನಪುರ ಗ್ರಾಮದ ನಿವಾಸಿ ರಾಮು ಮತ್ತು ಶೋಭ ದಂಪತಿಯ ಮಗಳು ಕುಸುಮ (15) ಜೀವ ಕಳೆದುಕೊಂಡವರು. ಮಾಕಳಿಯ ಸೃಷ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಕುಸುಮ ಸಾಕಷ್ಟು ಹೋಮ್ ವರ್ಕ್ ಮಾಡದೇ ಹಾಗೇ ಇಟ್ಟುಕೊಂಡಿದ್ದಳು. ಶಿಕ್ಷಕರು ಹೋಮ್ ವರ್ಕ್ ಕೇಳುತ್ತಾರೆ ಅನ್ನೋ ಭಯದಿಂದ ಮೊನ್ನೆ ಶಾಲೆ ಬಿಟ್ಟು ಮನೆಯಲ್ಲಿ ಉಳಿದಿದ್ದಳು.
ಇದನ್ನೂ ಓದಿ:KGF, ರಣವಿಕ್ರಮ ಖ್ಯಾತಿಯ ಶೆಟ್ಟಿ ಭಾಯ್ ದಿನೇಶ್ ಮಂಗಳೂರು ಇನ್ನಿಲ್ಲ
ಹೋಮ್ ವರ್ಕ್ ಮಾಡಿಲ್ಲ ಅಂದರೆ ಟೀಚರ್ ಹೊಡೆಯುತ್ತಾರೆ ಎನ್ನುವ ಭಯ, ಶಾಲೆಗೆ ರಜೆ ಹಾಕಿದರೆ ಪೋಷಕರು ಬೈಯ್ಯುತ್ತಾರೆ ಎನ್ನುವ ಮನಸ್ಥಿತಿಯಲ್ಲಿ ಕುಸುಮ ಮನನೊಂದಿದ್ದಳು. ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾಳೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹ ಹಸ್ತಾಂತರ ಮಾಡಲಾಗಿದೆ.
ಸದ್ಯ ಈ ಸಂಬಂಧ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಎಲ್ಲಾ ಮಕ್ಕಳಿಗೂ ಒಂದೇ ರೀತಿ ಹೋಮ್ ವರ್ಕ್ ನೀಡಲಾಗಿದೆ. ಅವರ ಸಾವಿಗೆ ಬೇರೆ ಕಾರಣವೂ ಇರಬಹುದು. ಪೊಲೀಸರ ತನಿಖೆ ಬಳಿಕ ಸತ್ಯ ಹೊರ ಬರುತ್ತದೆ ಎಂದು ಘಟನೆ ಕುರಿತಂತೆ ಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ