/newsfirstlive-kannada/media/media_files/2025/08/20/sujatha-bhat3-2025-08-20-21-16-44.jpg)
ದೂರು ನೀಡಿರುವ ಸುಜಾತ ಭಟ್
ಧರ್ಮಸ್ಥಳದಲ್ಲಿ ತಾನು ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ಕೊಟ್ಟ ದೂರಿನ ಆಧಾರದ ಮೇಲೆ ತನಿಖೆಗಾಗಿ ಎಸ್‌ಐಟಿ ರಚನೆಯಾಗಿ ಬಿರುಸಿನಿಂದ ತನಿಖೆ ನಡೆಸಿದೆ. ಒಂದು ಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕರೇ, ಮತ್ತೊಂದು ಸ್ಥಳದಲ್ಲಿ ಮೂಳೆಗಳು ಸಿಕ್ಕಿವೆ. ಉಳಿದ ಸ್ಥಳಗಳಲ್ಲಿ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಈಗ ಎಸ್‌ಐಟಿ ಭೂಮಿ ಅಗೆಯುವ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅಸ್ಥಿಪಂಜರ ಮತ್ತು ಮೂಳೆಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನೆ ಮಾಡಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಅಸಲಿ ತನಿಖೆ ಶುರುವಾಗುತ್ತೆ ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೊನ್ನೆಯೇ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಮತ್ತೊಂದೆಡೆ ಸುಜಾತ ಭಟ್ ಎಂಬ ವೃದ್ದ ಮಹಿಳೆಯೂ ಪ್ರತ್ಯಕ್ಷರಾಗಿ 2003 ರಲ್ಲಿ ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾರೆ. ಆಕೆಯನ್ನು ಯಾರೋ ಕೊಲೆ ಮಾಡಿ ಹೂತಿರಬಹುದು. ಆಕೆಯ ಅಸ್ಥಿಪಂಜರ ಸಿಕ್ಕರೇ, ಅದಕ್ಕೆ ತಾನು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ, ಶ್ರದ್ದಾ ಮಾಡುತ್ತೇನೆ, ಈ ಬಗ್ಗೆ ತನಿಖೆ ನಡೆಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಜುಲೈ 20 ರಂದು ಲಿಖಿತ ದೂರು ನೀಡಿದ್ದಾರೆ. ಈ ದೂರು ಅನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ಗೆ ವರ್ಗಾವಣೆ ಮಾಡಲಾಗಿದೆ.
ಮತ್ತೊಂದೆಡೆ ವೃದ್ಧ ಮಹಿಳೆ ಸುಜಾತ ಭಟ್ ಇದುವರೆಗೂ ಕೊಟ್ಟ ಹೇಳಿಕೆಗಳೇ ಗೊಂದಲಕಾರಿಯಾಗಿವೆ. ಯಾವುದಕ್ಕೂ ಸಾಕ್ಷ್ಯ, ದಾಖಲೆ, ಆಧಾರಗಳೇ ಇಲ್ಲ. ಇನ್ನೂ ಸುಜಾತ ಭಟ್ ತೋರಿಸುತ್ತಿರುವ ಅನನ್ಯ ಭಟ್ ಎಂಬ ಯುವತಿಯ ಪೋಟೋ ಆಕೆಯದ್ದೇ ಅಲ್ಲ. ಅದು ವಾಸಂತಿ ಎಂಬ ಮಹಿಳೆಯ ಪೋಟೋ ಎಂದು ಅನೇಕರು ಹೇಳಿದ್ದಾರೆ. ವಾಸಂತಿ ಸೋದರ ವಿಜಯ್ ಕೂಡ ಕೊಡಗಿನಲ್ಲಿ ತನ್ನ ಸೋದರಿ ವಾಸಂತಿಯ ಪೋಟೋವನ್ನು ಸುಜಾತ ಭಟ್ ದುರುಪಯೋಗ ಮಾಡಿಕೊಂಡು ಅನನ್ಯ ಭಟ್ ಎಂದು ಹೇಳಿದ್ದಾರೆ . ಇದರ ವಿರುದ್ಧ ಕೇಸ್ ಹಾಕುತ್ತೇನೆ ಎಂದಿದ್ದಾರೆ.
ಇನ್ನೂ ಸುಜಾತ ಭಟ್, ತಮ್ಮ ಮಗಳು ಎಂದಿರುವ ಅನನ್ಯ ಭಟ್ ಬಗ್ಗೆ , ತಮ್ಮ ಬಗ್ಗೆ ದಿನ ನಿತ್ಯ ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸುಜಾತ ಭಟ್ ಹೇಳಿಕೆಯಿಂದ ಹತ್ತಾರು ಪ್ರಶ್ನೆ, ಗೊಂದಲ, ಅಸ್ಪಷ್ಟತೆ ಸೃಷ್ಟಿಯಾಗಿದೆ. ಹಾಗಾದರೇ, ಸುಜಾತ ಭಟ್ ಹೇಳಿಕೆಗಳಿಂದ ಸೃಷ್ಟಿಯಾದ ಪ್ರಶ್ನೆ, ಗೊಂದಲ, ಅಸ್ಪಷ್ಟತೆ ಏನೇನು ಅನ್ನೋದನ್ನು ಇಲ್ಲಿ ವಿವರಿಸಿದ್ದೇವೆ.
ಅನನ್ಯ ಭಟ್ ಕುರಿತು ಸುಜಾತ್ ಭಟ್ ಗೊಂದಲದ ಹೇಳಿಕೆಗಳ ವಿವರ
1. ತನ್ನ ಮಗಳ ಕುರಿತು ಯಾವುದೇ ದಾಖಲಾತಿ ಇಲ್ಲ
ಅನನ್ಯ ಭಟ್ ಎಸ್ ಎಲ್ ಸಿ ಯಲ್ಲಿ 97% ಮಾರ್ಕ್ಸ್ ತಗೊಂಡಿದ್ದಾರೆ.
ಪ್ರೈಮರಿ ಓದಿರೋದು ಎಲ್ಲಿ ಅಂತ ಗೊತ್ತಿಲ್ಲ ಅಂತ ಮೊದಲು ಸುಜಾತ ಭಟ್ ರಿಂದ ಹೇಳಿಕೆ
ನಂತರ ಆ ಶಾಲೆಯ ಹೆಸರಿನ ಮಾಹಿತಿ ಕೊಡಲ್ಲವೆಂದು ಹೇಳಿದ ಸುಜಾತ ಭಟ್
2. ಮಗಳು ಅನನ್ಯ ಭಟ್ ಹುಟ್ಟಿದ ದಿನ ನೆನಪಿಲ್ಲ
ತನ್ನ ಮಗಳು ಯಾವಾಗ ಹುಟ್ಟಿದ್ದು ನೆನಪಿಲ್ಲ ಎನ್ನುತ್ತಿರೋ ಸುಜಾತ ಭಟ್.
ಯಾವುದೇ ತಾಯಿಗೆ ಆಗಲಿ ಮಗಳ ಹುಟ್ಟಿದ ದಿನ, ವರ್ಷವೂ ನೆನಪಿರಲ್ಲವೇ?
3. ಎಂಬಿಬಿಎಸ್ ದಾಖಲಾತಿಯ ಬಗ್ಗೆ ಗೊಂದಲ, ಅಸ್ಪಷ್ಟತೆ
2003ರಲ್ಲಿ ಎಂಬಿಬಿಎಸ್ ಓದುತ್ತಿದ್ದ ನನ್ನ ಮಗಳು ಅನನ್ಯ ಭಟ್ ಕಣ್ಮರೆ ಎಂದು ದೂರು
ಸುಜಾತ ಭಟ್ ನ್ಯೂಸ್ ಫಸ್ಟ್ ಜೊತೆ ಮಾತಾಡುವಾಗ ಹೇಳಿದ್ದೇ ಬೇರೆ
ನನ್ನ ಮಗಳು ಫಸ್ಟ್ ಇಯರ್ ಎಂಬಿಬಿಎಸ್ ಓದುತ್ತಿರಲಿಲ್ಲ.
ಎಂಬಿಬಿಎಸ್ ಅಡ್ಮಿಷನ್ ಆಗಿ ಜಸ್ಟ್ ಒಂದು ವಾರ ಆಗಿತ್ತು
ಅಡ್ಮಿಷನ್ ಮಾಡುವಾಗ ಯಾವುದೇ ದಾಖಲಾತಿ ಕೊಟ್ಟಿಲ್ಲ
ಜಸ್ಟ್ ಅಡ್ಮಿಷನ್ ಆಗಿತ್ತು ಅಷ್ಟೇ ಅಂದಿರೋ ಸುಜಾತ ಭಟ್
4. ಹಲ್ಲೆ, ಕೋಮಾದ ವಿವರಣೆ ಒಪ್ಪಬಹುದೇ?
ನನ್ನ ಮಗಳು ಕಾಣೆಯಾದಾಗ ಧರ್ಮಸ್ಥಳದ ದೊಡ್ಡವರ ಹತ್ತಿರ ಹೋಗಿ ಮಿಸ್ಸಿಂಗ್ ಬಗ್ಗೆ ಹೇಳಿದ್ದೆ
ಒಂದು ಕಡೆ ನಾನೂ ಕೂತಿದ್ದಾಗ ಮೂವರು ಬಂದು,ನಿಮ್ಮ ಮಗಳನ್ನ ನೋಡಿದ್ದೇನೆಂದು ಹೇಳಿದ್ದರು
ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ರು ನಾನೂ ಕೋಮಾದಲ್ಲಿದ್ದೆ.
ತಾವು ಕೋಮಾದಲ್ಲಿದ್ದ , ಚಿಕಿತ್ಸೆ ಪಡೆದಿದ್ದ ಆಸ್ಪತ್ರೆ ಯಾವುದು ಅಂತ ಸುಜಾತ ಭಟ್ ಗೆ ಗೊತ್ತಿಲ್ಲವಂತೆ
ಆವತ್ತು ದಾಖಲಾಗಿದ್ದ ಆಸ್ಪತ್ರೆಯ ಬಿಲ್ ಇಲ್ಲ,
ಮೂರು ತಿಂಗಳು ಆಸ್ಪತ್ರೆ ಬಿಲ್ ಕಟ್ಟಿದ್ಯಾರು ಅಂತ ಗೊತ್ತಿಲ್ಲ ಎನ್ನುತ್ತಿರುವ ಸುಜಾತ ಭಟ್
5. ಅನನ್ಯ ಭಟ್ ಹುಟ್ಟು
ಅನನ್ಯ ಭಟ್ ಹುಟ್ಟಿದ ದಿನಾಂಕ ಕರೆಕ್ಟ್ ನನಗೆ ಗೊತ್ತಿಲ್ಲ
ನನ್ನ ಮಗಳನ್ನ ನದಿಯ ಹತ್ತಿರ ಬಿಟ್ಟೆ. ಅರವಿಂದ್ ವಿಮಲಾ ಸಾಕಿದ್ರು ಅಂದಿರುವ ಸುಜಾತ
ಅರವಿಂದ್ - ವಿಮಲಾಳಿಗೆ ನಿಮ್ಮ ಮಗಳೇ ಎಂದು ಗೊತ್ತಾಗಿದ್ಹೇಗೆ? ಎಂಬುದಕ್ಕೂ ಅಸ್ಪಷ್ಟ ಉತ್ತರ
6. ಅರವಿಂದ್ - ವಿಮಲಾ ಯಾರು? ಅವರೆಲ್ಲಿದ್ದಾರೆ?
ತನ್ನ ಮಗಳು ಒಂದನೇ ಕ್ಲಾಸ್ ನಿಂದ ಏಳನೇ ಕ್ಲಾಸ್ ತನಕ ಅರವಿಂದ್ - ವಿಮಲಾ ಮನೆಯಲ್ಲಿದ್ದಳು ಅಂದಿರೋ ಸುಜಾತ
ಅರವಿಂದ್ ಮನೆಯಲ್ಲಿ ಅನನ್ಯ ಇದ್ದಳು ಅನ್ನೋದಕ್ಕೆ,ಪ್ರಾಥಮಿಕ ವಿದ್ಯಾಭ್ಯಾಸದ ಬಗ್ಗೆ ಯಾವುದೇ ದಾಖಲಾತಿ ಇಲ್ಲ
ಹಾಗಾದರೇ, ಈ ಅರವಿಂದ್- ವಿಮಲಾ ಯಾರು? ಅವರೆಲ್ಲಿದ್ದಾರೆ ಎಂಬ ಬಗ್ಗೆಯೂ ಯಾವುದೇ ವಿವರಣೆ ಕೊಟ್ಟಿಲ್ಲ
7. ಏಳನೇ ಕ್ಲಾಸ್ ನಿಂದ ಮಗಳು ಓದಿದ್ದು ಸೇಟು ಮನೆಯಲ್ಲಿ ಅಂದಿರೋ ಸುಜಾತ
ಇಲ್ಲಿಯ ಡಾಕ್ಯುಮೆಂಟ್ ಮನೆಗೆ ಬೆಂಕಿ ಬಿದ್ದಾಗ ಸುಟ್ಟು ಹೋಯ್ತು ಅನ್ತಿರೋ ಸುಜಾತ
ಹಾಗಾದ್ರೆ ಕೋಲ್ಕತ್ತಾದ ಸೇಟು ಮನೆಯ ದಾಖಲಾತಿ ಏನಾಯ್ತೂ?
ಕೋಲ್ಕತ್ತ್ತಾದಲ್ಲಿ ಓದಿರುವ ದಾಖಲೆ ಏಕಿಲ್ಲ. ಏನಾಯ್ತು?
8. ಕೋಲ್ಕತ್ತಾ ಕೆಲಸ
ನಾನು ಸಿಬಿಐನಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡ್ತಿದ್ದೆ ಅಂದಿರೋ ಸುಜಾತ
ಸಿಬಿಐ ಕಚೇರಿಯಲ್ಲಿ ಕೆಲಸ ಮಾಡಿರುವ ದಾಖಲಾತಿ ಯಾಕಿಲ್ಲ?
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದೆ,ಕೆಲವೊಂದು ಕಡೆ ಒಂದು ದಿನ ಕೆಲಸ ಮಾಡಿದ್ದೆ ಎಂದಿರುವ ಸುಜಾತ
ಒಂದು ದಿನ ಕೆಲಸ ಮಾಡಿರೋದನ್ನ ,ನಾನೂ ಸಿಬಿಐ ಆಫೀಸ್ ನಲ್ಲಿ ಕೆಲಸ ಮಾಡ್ತಿದ್ರು ಅಂದ್ರಾ ಸುಜಾತ?
9. ಸೇಟು ಸೀಕ್ರೆಟ್
ಸೇಟು ದುಡ್ಡು ಕೊಟ್ಟು ಮಗಳನ್ನ ಓದಿಸಿದ್ದರು ,ಎಂಬಿಬಿಎಸ್ ಗೆ ಅಡ್ಮಿಷನ್ ಮಾಡಿಸಿದ್ದರು ಅಂದಿರೋ ಸುಜಾತ
ಆ ಸೇಟು ಎಲ್ಲಿ? ಆ ಸೇಟು ಅಡ್ಮಿಷನ್ ಮಾಡಿರೋ,ದುಡ್ಡು ಕೊಟ್ಟಿರೋ ದಾಖಲಾತಿ ಎಲ್ಲಿ?
10. ಮನೆಯ ರಹಸ್ಯ
ಅನನ್ಯ ಭಟ್ ಧರ್ಮಸ್ಥಳ ಹೋದಾಗ ಮನೆ ಮಾಡಿದ್ದಳು.
ನಾಲ್ಕು ಜನ ಸ್ನೇಹಿತರು ಸೇರಿ ಇರೋಕೆ ಮನೆ ಮಾಡಿದ್ರು ಅಂತ ಸುಜಾತ ಹೇಳಿಕೆ
ಆ ಮೂವರು ಯಾರು? ಆ ಮನೆ ಯಾವುದು? ಅವರನ್ನ ಯಾಕೆ ನೀವು ಪ್ರಶ್ನೆ ಮಾಡಿಲ್ಲ ಎಂಬ ಪ್ರಶ್ನೆ
ನನಗೆ ಬೇರೆ ಕೆಲಸ ಇತ್ತು, ನಾನು ಅನನ್ಯ ಭಟ್ ಸ್ನೇಹಿತರನ್ನ ಹುಡುಕಿಕೊಂಡು ಹೋಗಿಲ್ಲ
ನನ್ನ ಹೊಟ್ಟೆ ಪಾಡಿಗೆ ಬೇರೆ ಕೆಲಸ ಮಾಡುತ್ತಿದ್ದೆ.
ಅವರನ್ನ ಹುಡುಕೋದು ಬಿಟ್ಟೆ, ನನಗೆ ಸಮಯ ಇರಲಿಲ್ಲ ಅಂದಿರೋ ಸುಜಾತ
ಅಂದು ಹೊಟ್ಟೆಪಾಡು ಅಂತ ಮಗಳ ಸ್ನೇಹಿತರ ಹತ್ತಿರ ಹೋಗದವರು, ಇಂದು ಏಕಾಏಕಿ ಮಗಳಿಗಾಗಿ ಹೋರಾಟ ಮಾಡ್ತಿರೋದ್ಯಾಕೆ?
11. ನಾನು ಯಾರಿಗೂ ತನಿಖೆ ಮಾಡಲು ಹೇಳಿಲ್ಲ
ಕಾನೂನು ಹೋರಾಟಕ್ಕೆ ಡಾಕ್ಯುಮೆಂಟ್ಸ್ ದಾಖಲಾತಿ ಇದ್ಯಾ ?
ನಾನೂ ಯಾರಿಗೆ ತನಿಖೆ ಮಾಡಲು ಹೇಳಿಲ್ಲ ಅಂದಿರೋ ಸುಜಾತ
ಮಗಳ ಮಿಸ್ಸಿಂಗ್ ತನಿಖೆ ಮಾಡೋದು ಉದ್ದೇಶ ಅಲ್ಲವಾಗಿದ್ರೆ, ಪೊಲೀಸರಿಗೆ ಕೊಟ್ಟ ದೂರಿನ ಉದ್ದೇಶ ಏನಾಗಿತ್ತು?
12. ಮಗಳ ಫೋಟೋ ವಿಚಾರ
ಅನನ್ಯ ಜೊತೆ ಫೋಟೋ ಯಾಕಿಲ್ಲ ಎಂಬ ಪ್ರಶ್ನೆ?
ನನಗೆ ಫೋಟೋ ಕ್ರೇಜ್ ಇಲ್ಲ ಅಂದಿರೋ ಸುಜಾತ
ಹಾಗಿದ್ರೆ ಬೀದಿ ನಾಯಿ ಜೊತೆ ಫೋಟೋ ತೆಗೆಸಿರುವ ಸುಜಾತ
ತನ್ನ ಮಗಳು ಅನನ್ಯ ಭಟ್ ಜೊತೆ ಯಾಕೆ ಫೋಟೋ ತೆಗೆಸಿಲ್ಲ
13. 6 ವರ್ಷ- 7 ನೇ ಕ್ಲಾಸ್
ಕೇವಲ ಆರು ವರ್ಷದಲ್ಲಿ ಏಳನೇ ಕ್ಲಾಸ್ ಮುಗಿಸಿದ್ದಳಂತೆ ಅನನ್ಯ ಭಟ್. ಇದು ಹೇಗೆ ಸಾಧ್ಯ?
ಅನನ್ಯ ಭಟ್ ಒಂದನೇ ಕ್ಲಾಸ್ ಓದಿ,ನಂತರ ಎರಡನೇ ತರಗತಿ ಓದುವ ಬದಲು ನೇರವಾಗಿ ಮೂರನೇ ಕ್ಲಾಸ್ ಓದಿದ್ದಳಂತೆ.
ಒಂದನೇ ಕ್ಲಾಸ್ ನಲ್ಲಿ ಹೆಚ್ಚು ಮಾರ್ಕ್ಸ್ ತೆಗೆದಿದ್ದಕ್ಕೆ ಎರಡನೇ ಕ್ಲಾಸ್ ಬದಲು,ಮೂರನೇ ಕ್ಲಾಸ್ ಗೆ ಶಿಕ್ಷಕಕರು ಅವಕಾಶ ಕೊಟ್ಟರಂತೆ. ಇದು ಸಾಧ್ಯನಾ?
14. ವಾಸಂತಿ ವಿಚಾರ
ವಾಸಂತಿ ಯಾರು ಅಂತ ಗೊತ್ತಿಲ್ಲ
ಫೋಟೋದಲ್ಲಿರೋದು ನನ್ ಮಗಳು ಅಂದಿರೋ ಸುಜಾತ
ರಂಗ ಪ್ರಸಾದ್ ಮನೆಯಲ್ಲಿ ಲೀವಿಂಗ್ ಟುಗೆದರ್ ಇದ್ದ ಸುಜಾತ
ರಂಗ ಪ್ರಸಾದ್ ಸೊಸೆಯ ಬಗ್ಗೆ ನನಗೆ ಗೊತ್ತೆ ಇಲ್ಲ. ಆ ಮನೆಯ ಸೊಸೆಯನ್ನು ನೋಡದೇ ಇರಲು ಸಾಧ್ಯವೇ?
ರಂಗಪ್ರಸಾದ್ ಮನೆಯಲ್ಲಿದ್ದ ಸೊಸೆಯನ್ನ , ರಂಗಪ್ರಸಾದ್ ಜೊತೆಗೆ ಲೀವಿಂಗ್ ಟುಗೆದರ್ ನಲ್ಲಿದ್ದ ಸುಜಾತ ನೋಡದಿರಲು ಸಾಧ್ಯವೇ?
15. ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಮಗಳು ನಾಪತ್ತೆ ಎಂದು ಸುಜಾತ ಭಟ್ ದೂರು
ಆದರೇ, ಮಗಳು ವ್ಯಾಸಂಗ ಮಾಡುತ್ತಿರಲಿಲ್ಲ.
ಜಸ್ಟ್ 6 ದಿನಗಳ ಹಿಂದೆ ಅಡ್ಮಿಷನ್ ಆಗಿತ್ತು ಅಂತ ಈಗ ಯೂ ಟರ್ನ್
ಹೀಗೆ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು ಸುಜಾತ ಭಟ್ ಅವರ ಹೇಳಿಕೆಯಿಂದ ಉದ್ಭವವಾಗಿವೆ. ಸುಜಾತ ಭಟ್ ದೂರು, ಹೇಳಿಕೆಗಳೇ ಸುಳ್ಳೇ ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ. ಧರ್ಮಸ್ಥಳ ಕ್ಷೇತ್ರದ ಮೇಲೆ ಇಲ್ಲದ ಗೂಬೆ ಕೂರಿಸಲು ಇಷ್ಟೆಲ್ಲಾ ಷಡ್ಯಂತ್ರ, ಸುಳ್ಳು ಹೇಳಿಕೆ, ಜನರನ್ನು ತಪ್ಪು ದಾರಿಗೆಳೆಯುವ ಕೆಲಸ ಕೆಲವರಿಂದ ಆಗುತ್ತಿದೆಯೇ ಎಂಬ ಅನುಮಾನವೂ ಜನರನ್ನು ಕಾಡುತ್ತಿದೆ.
ಮಾಸ್ಕ್ ಮ್ಯಾನ್ ತಾನು ನೂರಾರು ಶವ ಹೂತಿದ್ದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಆದರೇ, ಸಿಕ್ಕಿರೋದು ಒಂದೇ ಅಸ್ಥಿ ಪಂಜರ. ಅದು ಕಾನೂನುಬದ್ದವಾಗಿ ಹೂತ ಅಸ್ಥಿಪಂಜರವೂ ಆಗಿರಬಹುದು ಎಂದು ಧರ್ಮಸ್ಥಳದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ಈಗ ಮಾಸ್ಕ್ ಮ್ಯಾನ್ ದೂರಿನಲ್ಲಿ ಸತ್ಯಾಂಶ ಇದೆಯೇ? ಸುಜಾತ ಭಟ್ ಎಂಬ ವೃದ್ಧ ಮಹಿಳೆಯ ದೂರಿನಲ್ಲಿ ಸತ್ಯಾಂಶ ಇದೆಯೇ ಎಂಬುದನ್ನು ತನಿಖೆ ಮೂಲಕವೇ ಬಹಿರಂಗಪಡಿಸುವ ಕೆಲಸವನ್ನು ಎಸ್‌ಐಟಿ ಮಾಡಬೇಕಾಗಿದೆ. ಎಸ್‌ಐಟಿ ಮೇಲೆಯೇ ಈಗ ಮಹತ್ವದ ಜವಾಬ್ದಾರಿ ಇದೆ. ರಾಜ್ಯದ ಜನರ ಮನಸ್ಸಿರುವ ಪ್ರಶ್ನೆಗಳಿಗೂ ಎಸ್‌ಐಟಿ ತನ್ನ ತನಿಖೆಯ ಮೂಲಕವೇ ಉತ್ತರ ಕಂಡು ಹಿಡಿದು ಸರ್ಕಾರ, ಜನರಿಗೆ ತಿಳಿಸಬೇಕಾಗಿದೆ. ಗೊಂದಲಗಳನ್ನ ಬಗೆಹರಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.