/newsfirstlive-kannada/media/media_files/2025/08/06/khanapura-techie-murder01-2025-08-06-16-43-12.jpg)
ಸುರೇಶ್ ಮತ್ತು ರೇಖಾ
ಕುಂದಾನಗರಿ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ರಾಜೀ ಪಂಚಾಯಿತಿ ವೇಳೆ ಟೆಕ್ಕಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಇದರಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಟೆಕ್ಕಿಯನ್ನ ಹತ್ಯೆಗೈದು ಚಾಕೂ ಸಮೇತ ಆರೋಪಿ ಖಾನಾಪುರ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆಯಾದ ಸುರೇಶ್ ಬಂಡಿವಡ್ಡರ ಧಾರವಾಡದ ತೇಗೂರ ಗ್ರಾಮದವನು
ಇಂಜಿನಿಯರಿಂಗ್ ಓದುವಾಗ ರೇಖಾಳನ್ನು ಪ್ರೀತಿಸಿ ಮದುವೆ ಆಗಿದ್ದ ಸುರೇಶ್
ಮದುವೆ ನಂತರ ಯಶವಂತ್ ಎಂಬಾತನ ಜೊತೆಗೂ ಸಲುಗೆ ಹೊಂದಿದ್ದ ಪತ್ನಿ
ಒಮ್ಮೆ ಸುರೇಶ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ ರೇಖಾ-ಯಶವಂತ್
2 ದಿನಗಳ ಹಿಂದೆ ಪತಿಗೆ ಹೇಳದೇ ಕೊಪ್ಪಳದ ತವರು ಮನೆಗೆ ಹೋಗಿದ್ದ ರೇಖಾ
ಯಶವಂತ್ ಜೊತೆಗೆ ಪತ್ನಿ ಹೋಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದ ಸುರೇಶ್
ಈ ಕಾರಣಕ್ಕೆ ಮೊನ್ನೆ ರಾಜೀ ಪಂಚಾಯಿತಿಗೆ ಸೇರಿದ್ದ ಉಭಯ ಕುಟುಂಬಸ್ಥರು
ಕೊಲೆಯಾದ ಸುರೇಶ ಬಂಡಿವಡ್ಡರ ಧಾರವಾಡದ ತೇಗೂರ ಗ್ರಾಮದವನು, ಸಿವಿಲ್ ಇಂಜಿನಿಯರಿಂಗ್ ಓದುವಾಗ ರೇಖಾಳನ್ನು ಪ್ರೀತಿಸಿ ಮದುವೆ ಆಗಿದ್ದ. ಆದ್ರೆ ಮದುವೆ ನಂತರ ಪತ್ನಿ ರೇಖಾ ಯಶವಂತ ಎಂಬತನ ಜೊತೆಗೂ ಸಲುಗೆ ಹೊಂದಿದ್ದಳು. ಒಮ್ಮೆ ಪತಿ ಸುರೇಶ್ ಕೈಗೆ ರೇಖಾ-ಯಶವಂತ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆದ್ರೆ ಕಳೆದ 2 ದಿನಗಳ ಹಿಂದೆ ಪತಿಗೆ ಹೇಳದೇ ರೇಖಾ ಕೊಪ್ಪಳದಲ್ಲಿರುವ ತವರು ಮನೆಗೆ ಹೋಗಿದ್ದಳು.. ಆದ್ರೆ ಅನುಮಾನಗೊಂಡ ಸುರೇಶ್, ಯಶವಂತ್ ಜೊತೆಗೆ ಪತ್ನಿ ಹೋಗಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದ.. ಇದರಿಂದ ಉಭಯ ಕುಟುಂಬಸ್ಥರು ರಾಜೀ ಪಂಚಾಯ್ತಿಗೆ ಸೇರಿದ್ದರು.
ಖಾನಾಪುರ ಪಟ್ಟಣದ ಶನಿ ಮಂದಿರದಲ್ಲಿ ರಾಜೀ ಪಂಚಾಯಿತಿಗೆ ಸೇರಿದ್ದ ವೇಳೆ, ಯಶವಂತ್ ಕುಟುಂಬಸ್ಥರು, ತಮ್ಮ ಮಗನ ಮೇಲೆ ಸುಳ್ಳು ಆರೋಪ ಮಾಡ್ಬೇಡಿ ಎಂದು ಹೇಳಿದ್ದಾರೆ. ಇದರಿಂದ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಯಶವಂತ್ ತಂದೆ ಯಲ್ಲಪ್ಪ, ಸುರೇಶ್ನ ಹೊಟ್ಟೆಗೆ ಚಾಕುವಿನಿಂದ ರಭಸವಾಗಿ ಇರಿದಿದ್ದಾನೆ. ಕೂಡಲೇ ಕುಟುಂಬಸ್ಥರು, ಸುರೇಶ್ನನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಮೃತಪಟ್ಟಿದ್ದಾನೆ.
ಟೆಕ್ಕಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಚಾಕು ಸಮೇತ ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ.. ಸದ್ಯ ಖಾನಾಪುರ ಪೊಲೀಸರು ಯಶವಂತ್ ತಂದೆ ಯಲ್ಲಪ್ಪ ಬಂಡಿವಡ್ಡರ, ಅವರ ಪತ್ನಿ ಸಾವಿತ್ರಿ, ಪುತ್ರ ಯಶವಂತ ಸೇರಿದಂತೆ ಮೂವರನ್ನು ಬಂಧಿಸಿ, ವಿಚಾರಣೆ ತೀವ್ರಗೊಳಿಸಿದ್ದಾರೆ.
ಶ್ರೀಕಾಂತ್ ,ನ್ಯೂಸ್ಫಸ್ಟ್, ಬೆಳಗಾವಿ