/newsfirstlive-kannada/media/media_files/2025/10/03/mysuru-dasara-2-2025-10-03-07-07-00.jpg)
/newsfirstlive-kannada/media/media_files/2025/10/03/mysuru-dasara-6-2025-10-03-07-07-50.jpg)
ದಸರಾ.. ಮೈಸೂರು ದಸರಾ.. ಐರಾವತದ ಆಡಂಬರ.. ಚಾಮುಂಡಿ ತಾಯಿಯ ಸಿಂಗಾರ.. ಮೈಸೂರಿನ ಅಲಂಕಾರ.. ಆಹಾ ಎಂಥ ಚಂದ.. ಜಂಬೂಸವಾರಿಯ ಈ ಅಂದದ ಸಡಗರ..
/newsfirstlive-kannada/media/media_files/2025/10/03/mysuru-dasara-8-2025-10-03-07-08-30.jpg)
ವಿಶ್ವವಿಖ್ಯಾತ 416ನೇ ದಸರಾ ಮೆರವಣಿಗೆ ಜಂಬೂಸವಾರಿ ಯಶಸ್ವಿ ಆಗಿದೆ. ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿ ಅಂಬಾರಿ ಹೊತ್ತು ಸಾಗಿದ್ದಾನೆ. 750 ಕೆ.ಜಿ ತೂಕದ ಸ್ವರ್ಣ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡಿ ದಿಗ್ದ್ದರ್ಶನ ತೋರಿದ್ದಾಳೆ.
/newsfirstlive-kannada/media/media_files/2025/10/03/mysuru-dasara-7-2025-10-03-07-09-01.jpg)
ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಗಣ್ಯರು ಶುಭ ಕುಂಭ ಲಗ್ನದಲ್ಲಿ ಅಂದರೆ, ಸಂಜೆ 4:41ಕ್ಕೆ ಪುಷ್ಪಾರ್ಚನೆ ಮಾಡಿದರು. ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಅರಮನೆಯಿಂದ ಹೆಜ್ಜೆ ಹಾಕಿದನು, ಜಂಬೂ ಸವಾರಿ ಮೆರವಣಿಗೆಯಲ್ಲಿ ನೌಪತ್ ಹಾಗೂ ನಿಶಾನೆ ಹಾಗೂ ಸಾಲಾನೆಗಳೂ ಮೆರವಣಿಗೆಯಲ್ಲಿ ಸಾಗಿದವು. ಬಳಿಕ 58 ಸ್ಥಬ್ಧ ಚಿತ್ರಗಳು 100ಕ್ಕೂ ಹೆಚ್ಚು ಕಲಾ ತಂಡಗಳು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಿದವು.
/newsfirstlive-kannada/media/media_files/2025/10/03/mysuru-dasara-1-2025-10-03-07-09-21.jpg)
ಈ ಬಾರಿ ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದಾರೆ.. ಅಂಬಾರಿ ಏರಿದ ತಾಯಿ ಚಾಮುಂಡಿಗೆ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸಿದ ಭಾಗ್ಯಕ್ಕೆ ಪಾತ್ರರಾಗಿದ್ದಾರೆ.. ಸಿದ್ದರಾಮಯ್ಯ ಈವರೆಗೆ ಒಟ್ಟು 8ನೇ ಬಾರಿ ಪುಷ್ಪಾರ್ಚನೆ ಮಾಡಿದ ದಾಖಲೆ ಬರೆದಿದ್ದು, ಈ ಅದೃಷ್ಟಕ್ಕೆ ತಮ್ಮ ಪಾಲಿಗೆ ಒದಗಿ ಬಂದಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ರು.
/newsfirstlive-kannada/media/media_files/2025/10/03/mysuru-dasara-4-2025-10-03-07-10-18.jpg)
ದೇಶ-ವಿದೇಶಗಳಿಂದ ಬಂದ ಲಕ್ಷಾಂತರ ಜನರು ಜಂಬೂ ಸವಾರಿಯನ್ನು ಕಣ್ತುಂಬಿಕೊಂಡ್ರು. ಗಜಪಡೆಗಳ ಮೆರವಣಿಗೆ ಜೊತೆಗೆ ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ನಮಿಸಿ ಪುನೀತರಾದ್ರು.
/newsfirstlive-kannada/media/media_files/2025/10/03/shivanna-2025-10-03-07-12-19.jpg)
ಈ ವೇಳೆ ಜನರ ಮದ್ಯ ಕುಳಿತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಾಮಾನ್ಯರಂತೆ ದಸರಾ ವೀಕ್ಷಿಸಿದ್ರು.. ಅಲ್ಲದೆ ಜನರ ಜೊತೆ ಡ್ಯಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದ್ರು.
/newsfirstlive-kannada/media/media_files/2025/10/03/mysuru-dasara-3-2025-10-03-07-13-12.jpg)
ಒಟ್ಟಾರೆ, ಐತಿಹಾಸಿಕ, ವಿಶ್ವವಿಖ್ಯಾತ ಜಂಬೂ ಸವಾರಿ ಅದ್ಧೂರಿಯಾಗಿ ನಡೆದಿದೆ. ಅಂಬಾರಿಯ ಸಂಪೂರ್ಣ ಹೊಣೆ ಹೊತ್ತಿದ್ದ ಅಭಿಮನ್ಯು ತನ್ನ ಮೇಲಿನ ವಿಶ್ವಾಸವನ್ನ ಉಳಿಸಿದ್ದಾನೆ..
/newsfirstlive-kannada/media/media_files/2025/10/03/mysuru-dasara-5-2025-10-03-07-13-29.jpg)
ಮೈಸೂರು ದಸರಾ ಸಂಪನ್ನಗೊಂಡಿದ್ದು ಆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲಿರಲಿ ಅನ್ನೋದೇ ನಮ್ಮೆಲ್ಲರ ಪ್ರಾರ್ಥನೆ..