Advertisment

ರಂಗು ರಂಗಿನ ಬಣ್ಣದಾಟದಲ್ಲಿ ಮಿಂದೆದ್ದ ಕರ್ನಾಟಕದ ಜನತೆ : ಕರ್ನಾಟಕದಲ್ಲಿ ಕಲರ್​ಗಳ ಕಲರವ

ಹೋಳಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತೆ. ಉತ್ತರ ಭಾರತದಲ್ಲಿ ಸ್ಪಲ್ಪ ಜೋರಾಗಿಯೇ ಆಚರಿಸಲಾಗುತ್ತೆ. ಹೋಳಿ ಹಬ್ಬದ ದಿನದಂದು ರಸ್ತೆಗಳೇ ಖಾಲಿ ಹೊಡೆಯುತ್ತಾವೆ. ಇನ್ನೂ ಕರ್ನಾಟಕದಲ್ಲಿ ನಿನ್ನೆ, ಇಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಜನರು ಆಚರಿಸಿದ್ದಾರೆ. ರಂಗು ರಂಗಿನ ಬಣ್ಣದಾಟದಲ್ಲಿ ಜನರು ಮಿಂದೆದಿದ್ದಾರೆ.

author-image
Chandramohan
karnataka holi celebrations (1)

ಕರ್ನಾಟಕದಾದ್ಯಂತ ಹೋಳಿ ಹಬ್ಬದ ಕಲರವ

Advertisment
  • ಕರ್ನಾಟಕದಾದ್ಯಂತ ಹೋಳಿ ಹಬ್ಬದ ಕಲರವ
  • ಬೀದರ್ ನಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೂ ಹೋಳಿ ಆಚರಣೆ
  • ಬಣದ ಹಬ್ಬದಲ್ಲಿ ಮಿಂದೆದ ಜನರು

ಹೋಳಿಯು ಹಿಂದೂ ಧರ್ಮದ ಪ್ರಮುಖ ಬಣ್ಣಗಳ ಹಬ್ಬವಾಗಿದ್ದು, ದೇಶದೆಲ್ಲಡೆ ಸಂಭ್ರಮ ಮನೆಮಾಡಿದೆ. 
ಹಾಗೇಯೇ ಕರ್ನಾಟಕದಲ್ಲೂ ಕೂಡಾ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನವಾಗಿ ರಂಗಿನ ಹಬ್ಬವನ್ನ ಆಚರಿಸಲಾಗುತ್ತದೆ. ಕೆಟ್ಟದರ ಮೇಲೆ ಒಳ್ಳೆಯದರ ವಿಜಯೋತ್ಸವದ ಅಂಗವಾಗಿ, ಜನರು ಕಾಮ ದಹನದ ಮರುದಿನ ಬಣ್ಣಗಳನ್ನು ಎರಚಾಡಿ, ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸುತ್ತಾರೆ. ಹೀಗೆ ಯಾವ ಯಾವ ಜಿಲ್ಲೆಗಳಲ್ಲಿ ಯಾವ ರೀತಿ ಹೋಳಿ ಹಬ್ಬವನ್ನ ವಿಶಿಷ್ಟವಾಗಿ ಆಚರಿಸಿದ್ದಾರೆ ಎಂಬುದನ್ನ ತಿಳಿದುಕೊಳ್ಳೊಣ.
ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೋಳಿ ಸಂಭ್ರಮ
ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ರಾಮ ಆ್ಯಂಡ್ ಕೋ ವೃತ್ತದಲ್ಲಿ ಹೋಳಿ ಹಬ್ಬವನ್ನ ಆಚರಿಸಲಾಗಿದೆ. ಈ ವೇಳೆ ಡಿಜೆ ಸಾಂಗ್​ಗಳಿಗೆ ಯುವಕರು  ಹುಚ್ಚೆದ್ದು ಕುಣಿದಿದ್ದಾರೆ. ಮತ್ತೊಂದೆಡೆ ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು ಸಂಭ್ರಮದಿಂದ ಹೋಳಿ ಆಡಿ ಹಬ್ಬಕ್ಕೆ ಕಳೆ ತಂದಿದ್ದಾರೆ.
ಬಣ್ಣ ಹಚ್ಚಿಕೊಂಡು ಕಡಲಿಗಿಳಿದ ಜನರು 
ಕಾರವಾರದಲ್ಲೂ ಹೋಳಿ ಹಬ್ಬದ ಸಂಭ್ರಮ ಬಲು ಜೋರಾಗಿದ್ದು, ಬಣ್ಣ ಹಚ್ಚಿಕೊಂಡ ಜನರು ಕಡಲಿಗೆ ಇಳಿದು ಸಂಭ್ರಮಿಸಿದ್ದಾರೆ. ನಗರದಾದ್ಯಂತ ಮಹಿಳೆಯರು, ಮಕ್ಕಳು ಹೋಳಿ ಹಬ್ಬದಲ್ಲಿ ಭಾಗಿಯಾಗಿದ್ದು, ಡಿಜೆ ಸಾಂಗ್​ಗಳಿಗೆ ಕುಣಿದು ಕುಪ್ಪಳಿಸಿದ್ದಾರೆ. ಕರಾವಳಿಯಲ್ಲಿ ಮುಂಜಾಗೃತ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.
ಬೀದರ್​ ಹೋಳಿ ಹಬ್ಬದಲ್ಲಿ ಚಿನ್ನರ ಮೆರಗು
ಬೀದರ್ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲಿ ನೋಡಿದ್ರು ಚಿನ್ನರದ್ದೇ ದರ್ಬಾರು, ಸಣ್ಣ ಸಣ್ಣ ಮಕ್ಕಳು ರಂಗಿನಾಟವಾಡುತ್ತಾ ಖುಷಿ ಪಡುತ್ತಿದ್ದಾರೆ. ಹೆಣ್ಣು ಮಕ್ಕಳು ನಾವೇನೂ ಕಮ್ಮಿಯಿಲ್ಲ ಅಂತ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಪಟ್ಟಿದ್ದು, ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಈ ಬಾರಿ ಬಣ್ಣದ ಹಬ್ಬದಲ್ಲಿ ಮಕ್ಕಳು ಹೆಚ್ಚಾಗಿ ಪಾಲ್ಗೊಂಡಿದ್ದಕ್ಕೆ ಬಣ್ಣದ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದೆ ಅಂತಲೇ ಹೇಳಬಹುದು.‌..
ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಧಾರವಾಡ ಮಂದಿ
ಧಾರವಾಡದಾದ್ಯಂತ ಹೋಳಿ ಹಬ್ಬದ ಸಂಭ್ರಮ ಬೀಡು ಬಿಟ್ಟಿದೆ.. ನಗರದ ಶಿವಾಜಿ ಸರ್ಕಲ್ , ಕೆಸಿಡಿ ,ದಾಸನಕೊಪ್ಪ ಸರ್ಕಲ್, ಸಂಗಮ್ ಸರ್ಕಲ್ ಸೇರಿದಂತೆ ಹಲವೆಡೆ ಹೋಳಿ ನಿಮಿತ್ತ ಡಿಜೆ ಆಯೋಜನೆ ಮಾಡಲಾಗಿತ್ತು.. ಯುವಕ, ಯುವತಿಯರು ಡಿಜೆ ಹಾಡಿಗೆ ಹೆಜ್ಜೆ ಹಾಕಿ, ಬಣ್ಣವನ್ನು ಎರಚಿ ಉತ್ಸಾಹದಿಂದ ಹೋಳಿ ಆಚರಿಸಿದ್ದಾರೆ.
ಹಂಪಿಯಲ್ಲಿ ವಿದೇಶಿಗರ ಹೋಳಿ ಕಲರವ
ವಿಜಯನಗರದ ಹಂಪಿಯಲ್ಲಿ ವಿದೇಶಿಗರು ಕೂಡಾ ಹೋಳಿ ಹಬ್ಬವನ್ನ ಸಂಭ್ರಮಿಸುತ್ತಿದ್ದಾರೆ. ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ನೂರಾರು ವಿದೇಶಿಯರು ಸ್ವದೇಶಿ ಪ್ರಜೆಗಳೊಂದಿಗೆ ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬ ಆಚರಿಸಿದ್ದಾರೆ. ತಮಟೆ ನಾದಕ್ಕೆ ತಕ್ಕಂತೆ ಸಕತ್ ಆಗಿ ಸ್ಟೆಪ್​ ಕೂಡಾ ಹಾಕಿದ್ದಾರೆ. ಹಂಪಿಯು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರೋ ಐತಿಹಾಸಿಕ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದೆ....
ಧರ್ಮದ ಕಿಚ್ಚಿನ ನಡುವೇ ಕಾಮ ದಹನ
ಬಾಗಲಕೋಟೆಯಲ್ಲಿ ಇನ್ನೂ ಧರ್ಮದ ದಂಗಲ್ ಕಿಚ್ಚು ಮುಗಿಯುವಂತೆ ಕಾಣ್ತಿಲ್ಲ. ವಿವಾದಿತ ಸ್ಥಳದಲ್ಲಿ ಹಿಂದೂ ಯುವಕರು ಹೋಳಿ ಹಬ್ಬದ ಮೆರವಣಿಗೆ ನಡೆಸಿದ್ದಾರೆ. ಕಾಮ ದಹನ ಆಚರಣೆಯ ಮೆರವಣಿಗೆ, ಪಂಕಾ ಮಸೀದಿ ಮುಂದೆ ಬರುತ್ತಿದ್ದಂತೆ ಹಿಂದೂ ಯುವಕರು ಘೋಷಣೆ ಕೂಗಿದ್ದಾರೆ. ಯಾರ್​ ಅಪ್ಪಂದ್ ಏನೈತಿ ಹಿಂದುಸ್ತಾನ್ ನಮ್ದೈತಿ, ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆ ಕೂಗಿದ್ದಾರೆ.

Advertisment

karnataka holi celebrations (2)




ಸಿಹಿ - ಕಹಿ ನಡುವೆಯೇ ರಂಗೇರಿದ ಕುಂದಾನಗರಿ
ಎಲ್ಲರೂ ಹೋಳಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ಈ ಸಮಯದಲ್ಲೂ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಮಾಡಿದೆ. ಹೋಳಿ ಸಂಭ್ರಮದಲ್ಲಿ ಮಹಾರಾಷ್ಟ್ರ ನಾಡ ಗೀತೆಗೆ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಈ ಘಟನೆ ಬೆಳಗಾವಿ ‌ಅನಗೋಳದ ರಾಜಹಂಸ ಗಲ್ಲಿಯಲ್ಲಿ ನಡೆದಿದ್ದು, ಜೈ ಮಹಾರಾಷ್ಟ್ರ ಎಂದು ಬೆಳಗಾವಿ ಮಹಾರಾಷ್ಟ್ರ ರಾಜ್ಯದ ಪರ ಘೋಷಣೆ ಕೂಗಿದ್ದಾರೆ.  
ಮತ್ತೊಂದೆಡೆ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಲೀಲಾ ಮೈದಾನದಲ್ಲಿ ಯುವಕರು ಹೋಳಿ ಆಚರಿಸಿ ಕುಣಿದು ಎಂಜಾಯ್ ಮಾಡಿದ್ದಾರೆ. ಬಣ್ಣ ಆಡಲು ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಕನ್ನಡ, ಹಿಂದಿ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಕೊಪ್ಪಳದ ಹೋಳಿಯಲ್ಲಿ ಸಹಸ್ರಾರು ಜನ ಭಾಗಿ
ಕೊಪ್ಪಳದ ತಾಲೂಕಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಹೋಳಿ ಆಚರಣೆ ನಡೆಸಲಾಗುತ್ತಿದೆ. ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್​ನಿಂದ ಹೋಳಿ ಹಬ್ಬ ಆಯೋಜನೆ ಮಾಡಲಾಗಿದ್ದು, ಆರ್ಗ್ಯಾನಿಕ್ ಬಣ್ಣವನ್ನು ಬಳಕೆ ಮಾಡುವುದಾಗಿ ಸಂಸದ ರಾಜಶೇಖರ್ ಹಿಟ್ನಾಳ್ ತಿಳಿಸಿದ್ದಾರೆ. ಎರಡನೆ ವರ್ಷದ ಅದ್ದೂರಿ ಹೋಳಿ ಹಬ್ಬ ನಡೆಸಲಾಗುತ್ತಿದ್ದು, ರೇನ್ ಡ್ಯಾನ್ಸ್ ಮಾಡುವ ಮೂಲಕ ಹೋಳಿಗೆ ಮೆರಗು ತಂದಿದ್ದಾರೆ. ಸುಮಾರು 25 ಸಾವಿರ ಜನರು ಭಾಗಿಯಾಗಲಿದ್ದು, ಮಹಿಳೆಯರಿಗೆ ಹಾಗೂ ಪುರಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 
ಮತ್ತೊಂದೆಡೆ ಯಲಬುರ್ಗಾ ಪಟ್ಟಣದ ಓಣಿಗಳಲ್ಲಿ ರತಿ- ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಿ, ಡೊಳ್ಳು, ಹಲಗೆ ಮೂಲಕ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ರಾತ್ರಿ ಕಾಮದಹನ ಮಾಡಿ ಇಂದು ಪರಸ್ಪರ ಬಣ್ಣ ಎರಚಿ  ಜನರು ಸಂಭ್ರಮಿಸಿದ್ದಾರೆ.

karnataka holi celebrations

ವರದಿ : ವಿಜಯಲಕ್ಷ್ಮಿ, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Holi celebration across Karnataka
Advertisment
Advertisment
Advertisment