/newsfirstlive-kannada/media/media_files/2025/10/22/river-water-polluted-2025-10-22-16-40-00.jpg)
ರಾಜ್ಯದ 12 ನದಿಗಳ ನೀರು ಕುಡಿಯಲು ಸುರಕ್ಷಿತವಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳಿದೆ. ನದಿಗಳ ನೀರಿನ ಕಲುಷಿತ ವಾತಾವರಣವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಬಿಚ್ಚಿಟ್ಟಿದೆ.
ರಾಜ್ಯದ 12 ಪ್ರಮುಖ ನದಿಗಳ ನೀರಿನ ಗುಣಮಟ್ಟವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿದೆ. 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಅಂತಾ ವರದಿ ನೀಡಿದೆ.
12 ನದಿಗಳ ನೀರನ್ನ 32 ಕಡೆಗಳಲ್ಲಿ ಪರಿಶೀಲಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಪರೀಕ್ಷೆಗೆ ಒಳಪಟ್ಟ ನದಿಗಳ ನೀರಿನ ಪೈಕಿ ಯಾವುದೇ ನದಿಗೂ ಕೂಡ ಎ ದರ್ಜೆಯ ನೀರು ಎಂದು ಮಾನ್ಯತೆ ಸಿಕ್ಕಿಲ್ಲ. ಎ ದರ್ಜೆ ಎಂದರೇ, ಪರಿಶುದ್ದ ನೀರು, ಕುಡಿಯಲು ಯೋಗ್ಯವಾದ ನೀರು ಎಂದರ್ಥ. ಕಳೆದ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿರುವ ಪ್ರಮುಖ ನದಿಗಳ ನೀರು ಅನ್ನು ಪಡೆದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆ ನಡೆಸಿತ್ತು. 12 ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ ಇರೋದು ಪತ್ತೆಯಾಗಿದೆ. ಕರ್ನಾಟಕದ ಜೀವನದಿ ಎಂದೇ ಹೆಸರಾದ ಕಾವೇರಿ ನದಿಯ ನೀರು ಕೂಡ ಕಲುಷಿತವಾಗಿದೆ. ಕಾವೇರಿ ನದಿಯ ನೀರು ಕೂಡ ಕುಡಿಯಲು ಯೋಗ್ಯವಲ್ಲ. ಕರಾವಳಿಯ ನೇತ್ರಾವತಿ ನದಿ ನೀರಿಗೆ ಮಾತ್ರ ಬಿ ದರ್ಜೆ ಸಿಕ್ಕಿದೆ. ಇನ್ನೂಳಿದ ನದಿಗಳ ನೀರು ಎಲ್ಲವೂ ಸಿ ಮತ್ತು ಡಿ ದರ್ಜೆಯಲ್ಲೇ ಇವೆ.
/filters:format(webp)/newsfirstlive-kannada/media/media_files/2025/10/22/river-water-polluted02-2025-10-22-16-44-09.jpg)
12 ನದಿಗಳ ಪೈಕಿ ನೇತ್ರಾವತಿಗೆ ಮಾತ್ರ ಬಿ ದರ್ಜೆ ಸಿಕ್ಕಿದೆ. ಸ್ನಾನ ಹಾಗೂ ಗೃಹಬಳಕೆಗೆ ನೇತ್ರಾವತಿ ನದಿ ನೀರು ಬಳಕೆಗೆ ಯೋಗ್ಯವಾಗಿದೆ. ಇನ್ನೂಳಿದ 8 ನದಿಗಳಿಗೆ ಸಿ ಹಾಗೂ 3 ನದಿಗಳಿಗೆ ಡಿ ದರ್ಜೆ ಸಿಕ್ಕಿದೆ.
ಯಾವ್ಯಾವ ನದಿಗಳ ನೀರು ಪರೀಕ್ಷೆ?
ನೇತ್ರಾವತಿ -ಬಿ ದರ್ಜೆ.
ಲಕ್ಷ್ಮಣತೀರ್ಥ, ತುಂಗಾಭದ್ರ, ಕಾವೇರಿ, ಕಬಿನಿ, ಕೃಷ್ಣಾ, ಶಿಂಷಾ: ಸಿ ದರ್ಜೆ.
ಭೀಮನದಿ, ಕಾಗಿಣಾ,ಅರ್ಕಾವತಿ: ಡಿ ದರ್ಜೆ .
ನದಿಗಳ ನೀರಿನಲ್ಲಿ ಕೆಮಿಕಲ್ ಯುಕ್ತ ಆಮ್ಲಜನಕ, ಕೋಳಿಫಾರ್ಮ್ ಬ್ಯಾಕ್ಟೀರಿಯ ಪತ್ತೆಯಾಗಿವೆ. ಹೀಗಾಗಿ ಸಿ ಮತ್ತು ಡಿ ದರ್ಜೆಯ ನದಿಗಳ ನೀರು ಕುಡಿಯಲು ಯೋಗ್ಯವಲ್ಲ. ಜೊತೆಗೆ ಸ್ನಾನ ಮತ್ತು ಗೃಹ ಬಳಕೆಗೂ ಯೋಗ್ಯವಲ್ಲ.
ಕರ್ನಾಟಕದಲ್ಲಿ ಅನೇಕ ಕಡೆ ಕಾವೇರಿ ನದಿ ನೀರು ಅನ್ನು ಕಲುಷಿತಗೊಳಿಸಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ನೀರು ಅನ್ನು ಕಲುಷಿತಗೊಳಿಸುವುದನ್ನು ಕರ್ನಾಟಕ ನಿಲ್ಲಿಸಬೇಕು, ಕಾವೇರಿ ನದಿ ನೀರು ಅನ್ನು ಶುದ್ದೀಕರಣಗೊಳಿಸಿ ತಮಿಳುನಾಡಿಗೆ ಬಿಡಬೇಕೆಂದು ಕೋರಿ ತಮಿಳುನಾಡು ರಾಜ್ಯ ಸರ್ಕಾರ ಈ ಹಿಂದೆಯೇ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
/filters:format(webp)/newsfirstlive-kannada/media/media_files/2025/10/09/karnataka-state-pollution-control-board-2025-10-09-12-59-00.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us