/newsfirstlive-kannada/media/media_files/2025/08/26/ganesh-1-2025-08-26-08-20-04.jpg)
ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಇಂದು ಬೆಳಗಿನ ಜಾವಾ 3 ಗಂಟೆಯಿಂದಲೇ ಕೆ.ಆರ್ ಮಾರ್ಕೆಟ್ನಲ್ಲಿ ಜನವೋ ಜನವೋ. ಇಂದು ಗೌರಿಗೆ ವಿಶೇಷ ಪೂಜೆ ಹಾಗೂ ನಾಳೆ ಗೌರಿ ಮಗ ಗಣಪತಿ ಪ್ರತಿಷ್ಠಾಪನೆ ಮಾಡುವುದರಿಂದ ಹೂವು, ಹಣ್ಣುಗಳ ಖರೀದಿಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರ್ಕೆಟ್ಗೆ ಬಂದಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಆಗಿದೆ.
ಗಣೇಶ ಚತುರ್ಥಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಸಾಕಷ್ಟು ಗ್ರಾಹಕರು ಮಾರ್ಕೆಟ್ಗೆ ಧಾವಿಸಿದ್ದಾರೆ. ಇದರಿಂದ ಮಾರ್ಕೆಟ್ ಸುತ್ತಲಿನ ರಸ್ತೆಗಳಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಆಗಿದೆ. ಇದರಿಂದ ಡ್ರೈವರ್ಗಳು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಕೆಲವು ಬಿಎಂಟಿಸಿ ಬಸ್ ಅಂತೂ ಮಾರ್ಕೆಟ್ಗೆ ಹೋಗದೇ ಒಂದು ಸ್ಟಾಪ್ ಹಿಂದೆಯೇ ಪ್ರಯಾಣಿಕರನ್ನು ಇಳಿಸಿ ವಾಪಸ್ ಹೋಗುತ್ತಿವೆ. ಕಳೆದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಹೂವು, ಹಣ್ಣುಗಳ ಬೆಲೆಗಳು ಗಗನಕ್ಕೆ ಏರಿವೆ. ಹಬ್ಬ ಇರುವುದರಿಂದ ಗ್ರಾಹಕರು ಹೆಚ್ಚಿನ ಹಣ ಕೊಟ್ಟೇ ಖರೀದಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇಲ್ಲಿ ಧರ್ಮಸ್ಥಳದ ಪ್ರಕರಣ ತನಿಖೆ.. ಆದರೆ ಅಮೆರಿಕದಲ್ಲಿ ಐಪಿಎಸ್ ಅಧಿಕಾರಿ DIG ಅನುಚೇತ್
ಗೌರಿ ಗಣೇಶ ಹಬ್ಬವನ್ನ ರಾಜ್ಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಇಂದು ಗೌರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುವುದರಿಂದ ಈಗಾಗಲೇ ಹಲವೆಡೆ ತಯಾರಿ ಜೋರಾಗಿ ನಡೆದಿದೆ. ಇನ್ನು ಕೆಆರ್ ಮಾರ್ಕೆಟ್ ನಿನ್ನೆಯಿಂದಲೇ ವ್ಯಾಪಾರಸ್ಥರು, ಗ್ರಾಹಕರು, ಸಾರ್ವಜನಿಕರಿಂದ ತುಂಬಿ ಹೋಗಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಎಲ್ಲರೂ ಮುಗಿಬಿದ್ದಿದ್ದಾರೆ.
ಒಂದು ಕೆಜಿಗೆ ಹೂವಿನ ಬೆಲೆ?
ಹೂವುಗಳು | ದರ |
ಮಲ್ಲಿಗೆ | 1,200 ರಿಂದ 1,600 |
ಸೇವಂತಿ | 500 ರಿಂದ 600 |
ಗುಲಾಬಿ | 600 ರಿಂದ 800 |
ಕನಕಾಂಬರ | 3,000 ರಿಂದ 4,000 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ