Advertisment

ಈ ರಾಶಿಯವ್ರು ಕುಲದೇವರಿಗೆ ತುಪ್ಪದ ದೀಪ ಹಚ್ಚಿ, ನೀವು ಅಂದ್ಕೊಂಡಿದ್ದು ಪಕ್ಕಾ!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತೃತೀಯಾ ತಿಥಿ, ಆರಿದ್ರಾ ನಕ್ಷತ್ರ. ರಾಹುಕಾಲ ಭಾನುವಾರ ಮಧ್ಯಾಹ್ನ 4.30 ರಿಂದ 6.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೈಯಕ್ತಿಕ ಪ್ರತಿಷ್ಠೆಯಿಂದ ಹಣ ಸ್ಥಾನ ಗೌರವ ಕಳೆದುಕೊಳ್ಳಬಹುದು
  • ಕುಟುಂಬದ ಸದಸ್ಯರು ನಿಮ್ಮ ಯೋಜನೆಗಳಲ್ಲಿ ಮಾರ್ಗದರ್ಶನ ಮಾಡಬಹುದು
  • ಇಂಜಿನಿಯರ್ಸ್​ ಮತ್ತು ಇಂಜಿನಿಯರ್​ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಲಹೆಗಳು ದೊರೆಯುತ್ತದೆ
  • ಇದರಿಂದ ಭವಿಷ್ಯ ಉಜ್ವಲವಾಗುವಂತದ್ದು
  • ಹೊಸ ವ್ಯಾಪಾರದಿಂದ ಹಿನ್ನಡೆ ಉಂಟಾಗಬಹುದು
  • ನಿಮ್ಮ ಮನಸ್ಸಿನ ಸ್ಥಿರ ನಿರ್ಧಾರಗಳನ್ನು ಬದಲಿಸಿ ಅನುಕೂಲವಿದೆ
  • ಮೊಂಡುತನ ಹಟ ಸ್ವಭಾವವನ್ನು ದೂರಮಾಡಿಕೊಂಡರೆ ಒಳ್ಳೆಯದು
  • ಶ್ರೀ ಸಾಯಿಬಾಬರನ್ನು ಪ್ರಾರ್ಥನೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಗೆ ಹೆಚ್ಚು ನಿಯಮ ಹಾಕಬೇಡಿ ಆಗ ದಾರಿ ತಪ್ಪಬಹುದು
  • ಹೆಂಗಸರ ದ್ರವ್ಯ ಹಣ ಆಭರಣಗಳಿಗೆ ಕುತ್ತು ಬರಬಹುದಾದ ಸಾಧ್ಯತೆ ಇದೆ
  • ಲೇಖಕರಿಗೆ ಸಂಶೋಧಕರಿಗೆ ಹಿನ್ನಡೆಯಾಗುವ ದಿನವಾಗಿರುತ್ತದೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಗಾಗಿ ಕೆಲವು ಮಾರ್ಗಗಳನ್ನು ಅನುಸರಿಸುತ್ತಿರುತ್ತೀರಿ
  • ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
  • ಈ ದಿನ ಗೊಂದಲ ಸೃಷ್ಠಿಯಾಗುವ ಸಾಧ್ಯತೆ ಹೆಚ್ಚಾಗಿದೆ
  • ಮಕ್ಕಳಲ್ಲಿ ಸಿಟ್ಟು ವೈರತ್ವ ಮೂಡಿ ಮನೆಗೆ ಕಂಟಕವಾಗಬಹುದು
  • ಈ ದಿನ ಸತ್ಯ ಶೋಧನೆ ಮಾಡಿ 
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಾನಸಿಕವಾಗಿ ಬೇಸರ ಆಗುವಂತಹ ದಿನ
  • ಅದೃಷ್ಟ ನಿಮ್ಮದಾಗಿರಬೇಕಿದ್ದರೆ ಅನಗತ್ಯ ವಿಚಾರದಲ್ಲಿ ತಲೆ ಹಾಕಿ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತೀರಿ
  • ಸಂಗೀತ ಮನೋರಂಜನೆಯಲ್ಲಿ ಕಾಲ ಕಳೆಯುತ್ತೀರಿ
  • ನೀವು ನಿರೀಕ್ಷೆ ಮಾಡದ ಲಾಭ ಅಥವಾ ಹಣ ನಿಮ್ಮ ಕೈ ಸೇರುವುದಿಲ್ಲ
  • ಬೇರೆಯವರಿಗೆ ಸಲಹೆ ಸೂಚನೆ ಕೊಡುವಂತಹ ಸಮಯ ಇದಾಗಿದೆ
  • ಉತ್ತಮ ಭೋಜನ ಲೌಕಿಕವಾದ ಆನಂದ ನಿಮ್ಮದಾಗುತ್ತದೆ
  • ಕಾರ್ತವೀರ್ಯಾರ್ಜುನನನ್ನು ಪ್ರಾರ್ಥನೆ ಮಾಡಿ 
Advertisment

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಮಾಧಾನವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು
  • ಆತುರದ ನಿರ್ಧಾರಗಳು ಒಳ್ಳೆಯದಲ್ಲ
  • ದೂರದ ಸಂಬಂಧಿಕರ ಜೊತೆಯಲ್ಲಿ ಕಲಹ ಉಂಟಾಗಬಹುದು
  • ನಿಮ್ಮ ಸಮಸ್ಯೆ ದೌರ್ಬಲ್ಯಗಳ ಅರಿವು ಇರಬೇಕು
  • ಮನೆಯಲ್ಲಿ ಅಶುಭ ಗೊಂದಲದ ವಾತಾವರಣ ಉಂಟಾಗಬಹುದು ಜಾಗ್ರತೆ
  • ನಿಮಗಿಂತ ಬಲವಾಗಿರುವವರೊಂದಿಗೆ ಸ್ಪರ್ಧಿಸಲು ಮುಂದಾಗುತ್ತೀರಿ 
  • ತೀರ್ಮಾನಿಸಿದ ಕೆಲಸಗಳಲ್ಲಿ ತಕ್ಷಣ ಬದಲಾವಣೆಯಾಗುವ ಸಾಧ್ಯತೆ
  • ಯಾವುದೇ ಕೆಲಸಕ್ಕೂ ಕೈ ಹಾಕಿದರು ಸೋಲಾಗಬಹುದು
  • ಗಣಪತಿಯನ್ನು ಪ್ರಾರ್ಥಿಸಿ

ಸಿಂಹ  

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬುದ್ಧಿವಂತಿಕೆಯಿರಲಿ ಅತಿಯಾದ ಬುದ್ಧಿವಂತಿಕೆ ತೋರಿಸಿದರೆ ಹಿನ್ನಡೆಯಾಗುವ ಸಾಧ್ಯತೆ
  • ಮಕ್ಕಳು ಅಗತ್ಯವಾಗಿ ಪೋಷಕರ ಮಾತನ್ನು ಕೇಳಬೇಕಾಗುತ್ತದೆ
  • ತಂದೆ ಮಕ್ಕಳ ಮಧ್ಯೆ, ವಿದ್ಯಾರ್ಥಿಗಳು ಮತ್ತು  ಶಿಕ್ಷಕರ ಮಧ್ಯೆ ಮುನಿಸು ಬರಬಹುದು
  • ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡದಿಂದ ತೊಂದರೆಯಾಗಬಹುದು ಜಾಗ್ರತೆ
  • ಸುಳ್ಳು ಹೇಳುವವರಿಗೆ ತಕ್ಕ ಶಿಕ್ಷೆ ಆಗಲಿದೆ
  • ವಿದ್ಯಾರ್ಥಿಗಳಿಗೆ ಈ ದಿನ ತುಂಬಾ ಹಿನ್ನಡೆಯಾಗಲಿದೆ
  • ಭವಿಷ್ಯವನ್ನು ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ
  • ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಶ್ರವಣ ಮಾಡಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಅನೇಕರು ತಮ್ಮ ನೌಕರಿಯನ್ನು ದೂಷಿಸುತ್ತ ರಾಜೀನಾಮೆ ಕೊಡುವ ಸಾಧ್ಯತೆಗಳಿವೆ
  • ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತವೆ ಆದರೆ ಯಾವುದು ಕೈಗೂಡುವುದಿಲ್ಲ
  • ರಿಯಲ್​ ಎಸ್ಟೇಟ್​ ಮಾಡುವವರ ಸ್ಥಿತಿ ತುಂಬಾ ಗಂಭೀರವಾಗಿರುತ್ತದೆ
  • ಟೀಮ್​ ವರ್ಕ್​ ಮಾಡುವವರಿಗೆ ಶುಭಫಲವಿದೆ
  • ಕೆಟ್ಟ ವಾರ್ತೆ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಬಹುದು
  • ಮಹಾವಿಷ್ಣುವಿನ ಸ್ಮರಣೆ ಮಾಡಿ
Advertisment

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆರ್ಥಿಕ ಲಾಭವಿದ್ದರು ಲೆಕ್ಕ ಸಿಗದ ಖರ್ಚಿನಿಂದ ನಷ್ಟ ಸಾಧ್ಯತೆ
  • ನಿಮ್ಮ ಆಲೋಚನೆ ನೀವಿರುವ ವಾತಾವರಣ ಆತ್ಮವಿಶ್ವಾಸ ಹೆಚ್ಚಿಸಬಹುದು 
  • ಸಮಯಕ್ಕೆ ಮಹತ್ವ ನೀಡಿ ನಿಮ್ಮ ದೃಢ ನಿರ್ಧಾರಗಳು ಸ್ವಲ್ಪ ಸಡಿಲವಾಗಬೇಕು
  • ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರು ಅವರನ್ನು ಉಪಯೋಗಿಸಿಕೊಳ್ಳದೆ ಕೆಲಸದಲ್ಲಿ ಹಿನ್ನಡೆ ಸಾಧ್ಯತೆ
  • ಅವಿವಾಹಿತರ ಕಷ್ಟಗಳನ್ನು ಕೇಳುವವರಿಲ್ಲದೆ ಬೇರೆ ಬೇರೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ
  • ಗುರು ಪ್ರಾರ್ಥನೆ ಮಾಡಿ 

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೈದ್ಯಕೀಯ ರಂಗದವರಿಗೆ ಗೊಂದಲದ ಸವಾಲುಗಳು ಕಾಡಬಹುದು 
  • ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡಿ ಕಾಲಹರಣ ಸಾಧ್ಯತೆ
  • ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು
  • ಇಂದು ನಿಮ್ಮ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
  • ಹಿಂದೆ ಮಾಡಿದ ತಪ್ಪುಗಳಿಗೆ ಇಂದು ವಿಷಾದ ವ್ಯಕ್ತಪಡಿಸುತ್ತೀರಿ
  • ಈ ದಿನ ಋಣಾತ್ಮಕ ಚಿಂತನೆಗಳು ನಿಮ್ಮನ್ನು ಹೆಚ್ಚಾಗಿ ಕಾಡಬಹುದು
  • ಮಾರುತಿಯನ್ನು ಪ್ರಾರ್ಥನೆ ಮಾಡಿ

ಧನಸ್​

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮನೆಯಲ್ಲಿ ಹೇಳಿಕೊಂಡರೆ ಒಳ್ಳೆಯದು
  • ಇಂದು ಪ್ರೇಮಿಗಳಿಗೆ ಶುಭ ದಿನ
  • ಔಷಧಿ ವ್ಯಾಪಾರಿಗಳು ಸಮಸ್ಯೆಗೆ ಸಿಲುಕಬಹುದು
  • ನಿಮ್ಮ ಮೇಲಿನವರ ಸಹಕಾರವಿದ್ದರು ತೊಂದರೆಯಾಗಬಹುದು
  • ನಿಮ್ಮ ತಪ್ಪು ಮಾಹಿತಿಗಳಿಂದ ಅನರ್ಥವಾಗಿ ತೊಂದರೆಯಾಗುವ ಸಾಧ್ಯತೆ
  •  ಬೆಂಕಿ ಅವಘಡ ಸಂಭವಿಸಬಹುದು ಜಾಗ್ರತೆವಹಿಸಿ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ
  • ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ
Advertisment

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳ ಸಲಹೆ ಮನೆಯವರಿಗೂ ಹಿರಿಯರ ಸಲಹೆ ಮಕ್ಕಳಿಗೂ ಅನುಕೂಲವಾಗಲಿದೆ
  • ವಿದ್ಯೆ-ವಿವಾಹ ವಿಚಾರಕ್ಕೆ ಇದ್ದ ಸಮಸ್ಯೆ ದೂರಾಗಬಹುದು
  • ಮನೆಯಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುವ ಸಾಧ್ಯತೆ
  • ತಂದೆ-ಮಕ್ಕಳ ಸಂಬಂಧ ಚೆನ್ನಾಗಿರುವಂತೆ ನೋಡಿಕೊಳ್ಳಿ
  • ಮನೆಯಲ್ಲಿ ಹೊಸ ವ್ಯವಹಾರದ ಬಗ್ಗೆ  ಚರ್ಚೆಯಾಗಲಿದೆ ಆದರೆ ನೀವು ಸಹಕರಿಸುವುದಿಲ್ಲ
  • ಮನೆಯವರ ಜೊತೆ ಮನಸ್ತಾಪ ಆಗಬಹುದು
  • ಹೊಸ ಕೆಲಸ ಮಾಡುವುದಕ್ಕೆ ಮುಂಚೆ ಹಿರಿಯರ ಆಶೀರ್ವಾದವನ್ನು ಪಡೆಯಿರಿ
  • ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಈ ದಿನ ಜಮೀನಿಗೆ ಸಂಬಂಧಪಟ್ಟ ವಿಷಯ ಬಗೆಹರೆಯಲಿದೆ
  • ಕೆಂಪು ವಸ್ತ್ರ ಧರಿಸಿ ವಾಹನ ಚಾಲನೆ ಮಾಡುವವರಿಗೆ ತೊಂದರೆ ಸಾಧ್ಯತೆ
  • ಮಕ್ಕಳ ಯಶಸ್ಸಿನ ಬಗ್ಗೆ ಯೋಚಿಸುವಿರಿ
  • ಬ್ಯಾಂಕ್ ನೌಕರರಿಗೆ ಉತ್ತಮವಾದ ದಿನ
  • ಹೊಸ ಸಾಧನೆ ಮಾಡಲು ಪ್ಲಾನ್​ ಮಾಡುತ್ತೀರಿ ಆದರೆ ಕೈಗೂಡುವ ಸಾಧ್ಯತೆ ಕಡಿಮೆ 
  • ದೈಹಿಕ ಹಾಗೂ ಮಾನಸಿಕ ಒತ್ತಡಗಳಿಂದ ಶಾರೀರಿಕ ಆರಾಮವಿರುವುದಿಲ್ಲ
  • ಆದಾಯದ ಹಿಂದೆ ಹೋಗಿ ಮರ್ಯಾದೆ ಕಳೆದುಕೊಳ್ಳುವ ಸಾಧ್ಯತೆಯಿದೆ ಜಾಗ್ರತೆವಹಿಸಿ
  • ಮೃತ್ಯುಂಜಯನನ್ನು ಬಿಲ್ವ ಪತ್ರೆ ತುಂಬೆ ಹೂವಿನಿಂದ ಅರ್ಚಿಸಿ 

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಬೇಜವಾಬ್ದಾರಿ ಕೆಲಸಗಳು ಹಿನ್ನಡೆಯಾಗುವ ಸಾಧ್ಯತೆ
  • ತಾವು ಮಾಡಿದ ಕೆಲಸಗಳೆಲ್ಲವೂ ಹಾಳಾಗುವಂತಹುದು
  • ಇಂದು ಕೆಲಸದ ಒತ್ತಡ ಹೆಚ್ಚಾಗಲಿದೆ
  • ಅಪಶಕುನದಿಂದ ತೊಂದರೆ ಆಗುವ ಸಾಧ್ಯತೆಯಿದೆ
  • ಇಂದು ಪ್ರಯಾಣ ಮಾಡುವುದು ಬೇಡ
  • ಹೊರಗಿನ ಆಹಾರ ಸೇವನೆಯಿಂದ ತೊಂದರೆಯಾಗಬಹುದು ಎಚ್ಚರವಹಿಸಿ 
  • ಪ್ರೇಮಿಗಳಲ್ಲಿ ಪರಸ್ಪರ ಕಾದಾಟ ಸಾಧ್ಯತೆ
  • ಮಾನಸಿಕವಾಗಿ ಸ್ಥೈರ್ಯ ಹೊಂದಿ ಕೆಲಸಗಳಲ್ಲಿ ಪ್ರವೃತ್ತರಾಗಿ
  • ಕುಲದೇವರಿಗೆ ತುಪ್ಪದ ದೀಪ ಹಚ್ಚಿ
Advertisment

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment