ಶುಭ ಸೋಮವಾರ: ಯಾವ ರಾಶಿಗೆ ಶುಭ, ಯಾರಿಗೆ ಅಶುಭ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಚಿತ್ತಾ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸರ್ಕಾರದ ಕೆಲಸಗಳು ನಿಮಗೆ ಸಂತೋಷ ಉಂಟು ಮಾಡಬಹುದು
  • ಮಾತು ಸ್ವಭಾವ ಸ್ವಾಭಾವಿಕವಾಗಿದ್ದರೆ ಬೆಲೆ ಹೆಚ್ಚಾಗುತ್ತದೆ
  • ಬೇರೆಯವರ ಸಲಹೆ ತೆಗೆದುಕೊಳ್ಳಿ ಆದರೆ ತೀರ್ಮಾನ ನಿಮ್ಮದಾಗಿರಬೇಕು
  • ಆರ್ಥಿಕ ಸಹಾಯದ ಅಗತ್ಯ ನಿಮಗೆ ಕಾಣುತ್ತದೆ
  • ಬೇರೆಯವರ ಪೂರ್ಣ ಅವಲಂಬನೆಯಿಂದ ನಿಮಗೆ ಹಿನ್ನಡೆಯಾಗಬಹುದು
  • ನಿಮ್ಮ ಸ್ವಾಭಿಮಾನದ ಬಗ್ಗೆ ಗೌರವವಿರಲಿ ಆದರೆ ಸ್ವಾಭಿಮಾನ ಅಹಂಕಾರವಾಗಬಾರದು
  • ಶ್ರೀನಿವಾಸನನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೀವು ನೀವಾಗಿರಬೇಕು ಹೊಸತನ್ನು ಪ್ರದರ್ಶಿಸಬೇಡಿ
  • ನಿಮ್ಮ  ನಡವಳಿಕೆಯಿಂದ ಮನೆಯವರಿಗೆ ಕೋಪ ಬರಬಹುದು
  • ತಾಯಿಯವರ ಆರೋಗ್ಯದಲ್ಲಿ ಏರುಪೇರಾಗಬಹುದು ಜಾಗ್ರತೆವಹಿಸಿ
  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ಚಲ್ಪ ಕಿರಿಕಿರಿ ಉಂಟಾಗಬಹುದು
  • ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಇಂದು ಅವಕಾಶ ಸಿಗಲಿದೆ
  • ಹೊಸ ಕೆಲಸಗಳಿಗಾಗಿ ಆತುರ ಪಡಬೇಡಿ
  • ವಿಷ್ಣು ಮೂರ್ತಿಯನ್ನು ಆರಾಧಿಸಿ

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣ ಉಳಿಸುವ ಬೇರೆ ಬೇರೆ ದಾರಿ ಕಂಡುಕೊಳ್ಳುವಿರಿ
  • ನಿಮ್ಮ ವಿರೋಧಿಗಳ ಬಗ್ಗೆ ಧೈರ್ಯವಾಗಿ ಕಾರ್ಯ ಯೋಜನೆಗಳನ್ನು ಮಾಡಿ ಜಯಶೀಲರಾಗುತ್ತೀರಿ
  • ಮನೆಯ ಸದಸ್ಯರ ಹಾಗೂ ಮಕ್ಕಳ ಮೇಲೆ ಪ್ರೀತಿ ವಿಶ್ವಾಸ ತೋರಿಸಬೇಕು
  • ಹೊಸ ವ್ಯಾಪಾರ ವ್ಯವಹಾರ ಮಾಡಲು ಶುಭ ದಿವಸ
  • ನಿಮ್ಮ ವಿರೋಧಿಗಳಿಗೆ ಈ ದಿನ ಜಯವಿರುವುದಿಲ್ಲ
  • ಆರೋಗ್ಯದ ಬಗ್ಗೆ ಸಮಾಧಾನವಿರುತ್ತದೆ
  •  ಶ್ರೀ ರಾಮ ದೂತ ಮಾರುತಿಯನ್ನು ಪೂಜಿಸಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೀವು ಯಾರಿಗೆ ಉಪಕಾರ ಮಾಡಿದ್ರು ಜನರು ನಿಮ್ಮನ್ನು ಹಿಂದೆಯಿಂದ ದೂಷಿಸುತ್ತಾರೆ
  • ಬೇರೆಯವರ ಭಾವನೆಗಳಿಗೆ ನೀವು ಹೆಚ್ಚು ಸ್ಪಂದಿಸುತ್ತೀರಿ
  • ಎಲ್ಲಾ ಇದ್ದರೂ ಕೂಡ ಸುಖ ಪಡುವ ಯೋಗ ನಿಮ್ಮದಾಗಿರುವುದಿಲ್ಲ
  • ಜನರು ನಿಮ್ಮ ಕಡೆ ಆಕರ್ಷಕರಾಗುತ್ತಾರೆ
  • ನಿಮ್ಮದು ಉಚಿತವಾದ ಸಲಹೆ ಆದ್ರೆ ಇದರ ಉಪಯೋಗ ಬೇರೆಯವರು ಪಡೆಯುತ್ತಾರೆ
  • ಲಕ್ಷ್ಮೀ ದೇವಿ ಆರಾಧನೆ ಮಾಡಿ

ಸಿಂಹ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಾಳೆಯ ವಿಷಯವನ್ನು ಮರೆತು ಬಹಳ ಆನಂದದಾಯಕರಾಗಿರುತ್ತೀರಿ
  • ಸಾಯಂಕಾಲ ನಿಮಗೆ ಶುಭ ಸುದ್ದಿ ಬರುವ ಸಾಧ್ಯತೆಯಿದೆ
  • ನಿಮ್ಮ ಕೋಪ, ಒತ್ತಡವನ್ನು ಬೇರೆಯವರ ಮೇಲೆ ತೋರಿಸಬಾರದು
  • ಕಾರ್ಯದೊತ್ತಡದಿಂದ ತುಂಬಾ ಆಯಾಸವಾಗುವ ದಿನ
  • ಕಠಿಣ ಪರಿಶ್ರಮ ನಿಮ್ಮ ಯಶಸ್ಸಿಗೆ ಕಾರಣೀಭೂತವಾಗಿರುವುದು
  • ಮಾನಸಿಕವಾಗಿ ನೀವು ಧೃಡವಾಗಿದ್ದರು, ಒತ್ತಡ ನಿಮ್ಮನ್ನು ಬಲಹೀನರನ್ನಾಗಿ ಮಾಡಬಹುದು
  • ಶ್ರೀ ರುದ್ರನನ್ನು ಪ್ರಾರ್ಥಿಸಿ

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನೆರೆಹೊರೆಯವರ ಜೊತೆ ಮಾನಸಿಕ ಸಮಾಧಾನ ಇರುವುದಿಲ್ಲ ಜಗಳ ಬೇಡ
  • ಒಡಹುಟ್ಟಿದವರೊಂದಿಗೆ ನಿಮ್ಮ ಭಾಂದವ್ಯ ಚೆನ್ನಾಗಿರುತ್ತೆ ಅದನ್ನ ಹಾಗೆ ಉಳಿಸಿಕೊಳ್ಳಿ
  • ಭೂಮಿ ಆಸ್ತಿಗೆ ಸಂಬಂಧಿಸಿದ ಮಾತುಕತೆ ನಡೆಯಬಹುದು 
  • ಭಾವನೆಗಳ ಆಧಾರದ ಮೇಲೆ ಕಾರ್ಯಕ್ಷೇತ್ರದಲ್ಲಿ ಯಾವುದೇ ತೀರ್ಮಾನ ಬೇಡ
  • ಧಾರ್ಮಿಕ ಭಾವನೆಗಳಿಂದ ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಬಹುದು
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮಕ್ಕಳಿಗೆ ಯಶಸ್ಸಿದೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಪರಿಶ್ರಮ ಮುಂದುವರೆಯಲಿ
  • ಇಂದು ದಾಂಪತ್ಯದಲ್ಲಿ ಸಾಮರಸ್ಯವಿರುತ್ತದೆ
  • ಕಾರ್ಯಕ್ಷೇತ್ರದಲ್ಲಿ ತುಂಬಾ ಸ್ಪರ್ಧಾತ್ಮಕ ವಾತಾವರಣವಿರುತ್ತದೆ
  • ನಿಮ್ಮ ಸ್ವಭಾವದ ಬಗ್ಗೆ  ಆತ್ಮಾವಲೋಕನ ಮಾಡಿಕೊಳ್ಳಬೇಕು
  • ಎಲ್ಲಾ ಕೆಲಸಗಳನ್ನು ತುಂಬಾ ಶ್ರದ್ಧೆಯಿಂದ ನಿರ್ವಹಿಸಿ
  • ನಿಮ್ಮ ಜೀವನದಲ್ಲಿ ಯಾವುದಾದರು ತಪ್ಪು ನಡೆದಿದ್ದರೆ ಅದನ್ನು ಅಗತ್ಯವಾಗಿ ಇಂದು ಸರಿಪಡಿಸಿಕೊಳ್ಳಿ
  • ಶ್ರೀ ಮಾತ್ರೆ ನಮಃ ಎಂದು ದೇವಿಯನ್ನು ಆರಾಧಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಕಳಂಕ ಬರಬಹುದು ಜಾಗ್ರತೆಯಿರಲಿ
  • ಹೆಚ್ಚು ಖರ್ಚಿಗೆ ಅವಕಾಶವಿರುವ ದಿನ ಗಮನವಿರಲಿ
  • ಸ್ನೇಹಿತರು ಮತ್ತು ಬಂಧುಗಳಲ್ಲಿ ಹೆಚ್ಚು ಪ್ರೀತಿಪಾತ್ರರಾಗಿರುತ್ತೀರಿ
  • ಪೂರ್ವ ನಿಯೋಜನೆಯಂತೆ ಕೆಲಸ ನಿರ್ವಹಿಸಿದರೆ ಜಯಶೀಲರಾಗುತ್ತೀರಿ
  • ಸ್ನೇಹಿತರು ಮತ್ತು ಬಂಧುಗಳಲ್ಲಿ ಹೆಚ್ಚು ಪ್ರೀತಿಪಾತ್ರರಾಗಿರುತ್ತೀರಿ
  • ಕೆಲಸದ ಮಧ್ಯೆ ಪ್ರತಿಕೂಲವಿದ್ದರು ಜಯಶೀಲರಾಗುತ್ತೀರಿ
  • ನಿಮ್ಮ ಕೆಲಸದ ವಿಚಾರದಲ್ಲಿ ಮನೆಯವರ ಮಾರ್ಗದರ್ಶನ ಸಲಹೆ ಮುಖ್ಯವಾಗಿರುತ್ತದೆ
  • ಶ್ರೀಕೃಷ್ಣನನ್ನು ಪ್ರಾರ್ಥಿಸಿ

ಧನಸ್ಸು 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಹೋದರರಿಗೆ ಅಪಘಾತವಾಗುವ ಸಾಧ್ಯತೆಗಳಿವೆ ಎಚ್ಚರಿಕೆಯಿಂದಿರಲು ಹೇಳಿ
  • ಹೊಸ ಆದಾಯದ ಮೂಲಗಳು ಸಿಗುವ ಸಾಧ್ಯತೆಯಿದೆ
  • ಕಲೆ ಮತ್ತು ಸಂಗೀತ ಕ್ಷೇತ್ರದವರಿಗೆ ಗೌರವ, ಪುರಸ್ಕಾರಗಳು ಸಿಗಬಹುದು
  • ವೃತ್ತಿ ಜೀವನದ ದೃಷ್ಟಿಯಿಂದ ತುಂಬಾ ಜಾಗರೂಕರಾಗಿರಬೇಕು
  • ಇಂದು ವೃತ್ತಿಯನ್ನು ಬಿಟ್ಟು ಬೇರೆ ವ್ಯವಹಾರದಲ್ಲಿ ಆದಾಯಗಳಿಸಬಹುದು
  • ದುರ್ಗಾರಾಧನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯುತ್​ ಉಪಕರಣ ಮಾರಾಟ ಮಾಡುವವರಿಗೆ ಶುಭಫಲವಿದೆ
  • ಮಧ್ಯಾಹ್ನದ ಒಳಗೆ ಆದಷ್ಟು ನಿಮ್ಮೆಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು
  • ನಿಮ್ಮ ಸ್ನಾಯು ನರಗಳಲ್ಲಿ ತೊಂದರೆ ಕಾಣಬಹುದು
  • ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಕೆಲವು ಕೆಲಸಗಳಾಗುವ ಸೂಚನೆಗಳಿವೆ
  • ವ್ಯಾಪಾರ, ವ್ಯವಹಾರದಲ್ಲಿನ ಸಮಸ್ಯೆಗಳು ದೂರವಾಗಬಹುದು
  • ಮನೆಯಲ್ಲಿ, ಕಛೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ಕಾಣಬಹುದು 
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕುಂಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಣ್ಣಪುಟ್ಟ ಮೈಗ್ರೇನ್​ ತಲೆನೋವು ನಿಮಗೆ ಹಿಂಸೆ ಕೊಡಬಹುದು
  • ನಿಮ್ಮ ಕೆಲಸಗಳಲ್ಲಿ ಹೆಚ್ಚು ಮಗ್ನರಾಗಬೇಕು
  • ಸಹೋದ್ಯೋಗಿಗಳು ಹಾಗೂ ಸಹೋದರರ ಜೊತೆ ವ್ಯವಹಾರಿಕ ವಿಚಾರಕ್ಕೆ ಸಣ್ಣಪುಟ್ಟ ಕಲಹ ಸಾಧ್ಯತೆ
  • ಪ್ರಯಾಣ ಮಾಡದಿರುವುದು ಒಳ್ಳೆಯದು ನಿಮ್ಮ ಕಾರ್ಯದಲ್ಲಿ ಮಗ್ನರಾಗಿ
  • ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು ಜಾಗ್ರತೆವಹಿಸಿ
  • ಉನ್ನತ ವ್ಯಾಸಂಗಕ್ಕೆ ಪ್ರಯತ್ನಪಡುತ್ತಿರುವ ವಿದ್ಯಾರ್ಥಿಗಳಿಗೆ ಶುಭವಿದೆ
  • ನಿಮ್ಮ ಸ್ವಭಾವ ಮನೆಯವರಿಗೆ ಆತಂಕ ತರಬಹುದು ಸ್ವಭಾವ ಸರಿಪಡಿಸಿಕೊಳ್ಳಿ
  • ತಾಪಸ ಮನ್ಯುವಿಗೆ ಶರಣು ಹೋಗಿ

ಮೀನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಉತ್ತಮವಾದ ಭೋಜನ ತಿಂಡಿ-ತಿನಿಸುಗಳ ರುಚಿ ಸವಿಯುವ ಯೋಗವಿದೆ
  • ಇಂದು ಮೇಲಾಧಿಕಾರಿಗಳು, ಹಿರಿಯರು ನಿಮ್ಮನ್ನು ಹೊಗಳುತ್ತಾರೆ
  • ಅನಗತ್ಯ ವಿಚಾರಗಳಿಗೆ ಗಮನ ಕೊಡದಿರುವುದು ಒಳ್ಳೆಯದು
  • ಇಂದು ಮಾಡುವ ಪ್ರಯಾಣ ಲಾಭದಾಯಕವಾಗಿರುತ್ತದೆ
  • ಮನಸ್ಸಿನಲ್ಲಿ ಯಾವುದೇ ರೀತಿಯ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬೇಡಿ
  • ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment