Advertisment

ಅಕ್ಕಪಕ್ಕದವರಿಂದ ಸಹಾಯ.. ಮನೆಯಲ್ಲಿ ಹಬ್ಬದ ವಾತಾವರಣ, ಹಣದ ಬಗ್ಗೆ ಎಚ್ಚರ; ಇಲ್ಲಿದೆ ಇಂದಿನ ಭವಿಷ್ಯ!

ತುಂಬಾ ಹಣ ಖರ್ಚು ಆಗುವ ಸಾಧ್ಯತೆ ಆದರೂ ನೆಮ್ಮದಿ ಇದೆ, ಆರೋಗ್ಯದ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಳೆಯ ವಿಚಾರ ಮತ್ತು ಸ್ನೇಹಿತರ ಭೇಟಿ ಆಗುವ ಅವಕಾಶವಿರುತ್ತದೆ. ಇಂದು ಕೋಪ ಕಡಿಮೆ ಇದ್ದರೆ ಒಳಿತು. ಮನೆ ಕಟ್ಟುವ ವಿಚಾರದಲ್ಲಿ ನೆಮ್ಮದಿ ವಾತಾವರಣ ಇರಲಿದೆ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ದಿನ ನಿತ್ಯದ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಯಗಳು ಕಾಣಬಹುದು
  • ಅಸಮಾಧಾನ ಒತ್ತಡಗಳು ಕೋಪವನ್ನು ಹೆಚ್ಚಿಸಬಹುದು
  • ಬೇರೆಯವರಿಗೆ ಮಾದರಿಯಾಗಿರಬೇಕಾದ ನೀವು ಅಪಹಾಸ್ಯಕ್ಕೆ ಗುರಿಯಾಗುವ ದಿನ
  • ಅವಲಂಬಿತ ಕೆಲಸಗಳು ಹಿನ್ನಡೆ ಕಾಣುವಂತಹದ್ದು
  • ಕಾಯಕವೇ ನಿಮ್ಮ ಧ್ಯೇಯ ಎಂದು ತಿಳಿದುಕೊಳ್ಳಬೇಕು
  • ಕುಲದೇವತಾ ಮತ್ತು ಗುರುಗಳಲ್ಲಿ ಅಚಲವಾದ ಭಕ್ತಿಯನ್ನು ಇಟ್ಟುಕೊಳ್ಳಿ
  • ಕೇವಲ ವ್ಯಾವಹಾರಿಕವಾಗಿ ಚಿಂತನೆ ಮಾಡುವುದನ್ನು ಬಿಟ್ಟು ವೈಚಾರಿಕತೆಯಿಂದ ಚಿಂತನೆ ಮಾಡಿ
  • ಅನಾಥಾಲಯಗಳಿಗೆ ಕೈಲಾದ ಸಹಾಯ ಮಾಡಿ
     

ವೃಷಭ

RASHI_BHAVISHA_VRSHABA

  • ಕೋಪ ಮತ್ತು ಅಸಹನೆಯಿಂದ ತೊಂದರೆಯಾಗಲಿದೆ
  • ಸೋದರರ ಜೊತೆ ಜಗಳ ಇಂದು ಅಂತ್ಯಗೊಳಿಸಿದರೆ ಒಳ್ಳೆಯದು
  • ಹಣದ ವಿಚಾರ ಅಥವಾ ಸಾಲದ ವಿಚಾರವಾಗಿ ಮಾತು ಕಥೆ ನಡೆಸಬಹುದು
  • ಈ ದಿನ ಸ್ವಯಂಕೃತ ಅಪರಾಧಗಳು ಬೇಡ
  • ಆರೋಗ್ಯ ಚೆನ್ನಾಗಿರುತ್ತದೆ ಆದರೆ ಕಾಲು ನೋವು ಕಾಣಬಹುದು
  • ಶನೈಶ್ಚರನ ಮಂತ್ರ ಪಠಿಸಿ
Advertisment

ಮಿಥುನ

RASHI_BHAVISHA_MITHUNA

  • ಹಿರಿಯರ ಅಥವಾ ಗುರುಸ್ಥಾನದವರ ಬೇಸರಕ್ಕೆ ಕಾರಣವಾಗಬಹುದು
  • ಸಕಾರಾತ್ಮಕ ಚಿಂತನೆ ಮಾಡಿ ನೆಮ್ಮದಿಯಿಂದ ಇರಿ
  • ಕುಟುಂಬದ ಕಲಹ ಮಾನಸಿಕವಾಗಿ ಖಿನ್ನತೆ ಉಂಟುಮಾಡಲಿದೆ 
  • ಮನಸ್ಸಿಗೆ ಬೇಸರ ತರುವ ದಿನವಾಗಿರುತ್ತದೆ
  • ಗುಪ್ತರೋಗ ನಿಮ್ಮನ್ನು ಕಾಡಬಹುದು
  • ಹಣದ ವಿಚಾರ ಎಲ್ಲವನ್ನೂ ಮರೆಸುತ್ತದೆ
  • ಉಗ್ರನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಿದೆ
  • ದೂರದ ಬಂಧುಗಳಿಂದ ಬರುವ ಅಶುಭ ವಾರ್ತೆಯಿಂದ ನೋವನ್ನು ಅನುಭವಿಸುತ್ತೀರಿ
  • ಮಾನಸಿಕ ಕಿರಿಕಿರಿ ದಿನಪೂರ್ತಿ ಕಾಡಲಿದೆ
  • ಅನುಮಾನಾಸ್ಪದವಾಗಿ ಮನೆಯಲ್ಲಿ ಅಥವಾ ಸಮಾಜದಲ್ಲಿ ನಡೆದುಕೊಳ್ಳಬಾರದು​
  • ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ
  • ಸಹೋದರರ ಜೊತೆಯಲ್ಲಿ ಜಗಳ ಮಾಡುವುದರಿಂದ ಬೇಸರ ಅಗಬಹುದು
  • ಮೂಲ ದೇವರನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಸಾಯಂಕಾಲಕ್ಕೆ ಬೇಸರದ ವಾತಾವರಣ ಅಧಿಕವಾಗಿ ಹಣ ಖರ್ಚಾಗಲಿದೆ
  • ವೃತ್ತಿಪರ ಸಾಧನೆ ತೃಪ್ತಿ ಕೊಡುವಂತಹದ್ದು
  • ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ 
  • ಒತ್ತಡಗಳಿಂದ ದೂರ ಉಳಿಯಬೇಕು
  • ಬೇರೆಯವರನ್ನು ಅವಲಂಬಿಸಿ ಅವಮಾನವನ್ನು ಹೊಂದುತ್ತೀರಿ
  • ತಾಯಿಯವರಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
  • ಅಮೃತ ಮೃತ್ಯುಂಜಯ ಜಪ ಹಾಗೂ ಹೋಮವನ್ನು ಮಾಡಿಸಿ
Advertisment

ಕನ್ಯಾ

RASHI_BHAVISHA_KANYA

  • ಲಾಭ-ನಷ್ಟಗಳ ಚಿಂತೆಯನ್ನು ಮಾಡಬೇಡಿ
  • ಸಹಾಯ ಮಾಡಿದವರು ನಿಮ್ಮನ್ನು ಈ ದಿನ ಆಶ್ರಯಿಸಬಹುದು
  • ಆರೋಗ್ಯದ ಬಗ್ಗೆ ಗಮನ ಇರಲಿ ತಾತ್ಸಾರ ಬೇಡ
  • ಹಣ ಹೂಡಿಕೆಗೆ ಉತ್ತಮವಾದ ದಿನ 
  • ಆಸಕ್ತಿದಾಯಕ ವಿಚಾರಗಳಲ್ಲಿ ಚರ್ಚೆಯನ್ನು ಮಾಡಿ ಸಮಾಜಕ್ಕೆ ಸಂದೇಶವನ್ನು ನೀಡಿ
  • ಧಾರ್ಮಿಕ ಮುಖಂಡರ ಸಲಹೆಯಿಂದ ಸಮಾಧಾನ ಸಿಗಲಿದೆ
  • ನವಗ್ರಹರನ್ನು ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ಅನಗತ್ಯ ಮಾತಿನಿಂದ ಅಪಯಶಸ್ಸು ಕಾಣಬಹುದು
  • ಕಾರ್ಯಕ್ಷೇತ್ರ,ವೃತ್ತಿ ವ್ಯಾಪಾರದಲ್ಲಿ ಹಿನ್ನಡೆ ಕಾಣುವ ಸಾಧ್ಯತೆ ಇದೆ
  • ವಾಸ್ತವದ ವಿಚಾರಕ್ಕೆ ಹೋರಾಟ ಮಾಡಿದರೆ ಜಯ ಕಾಣುತ್ತೀರಿ
  • ಬೇರೆಯವರೊಂದಿಗಿನ ಸಂಪರ್ಕ ಸಮಾಧಾನ ನೀಡುತ್ತದೆ
  • ಸಾಮಾಜಿಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು
  • ಮಕ್ಕಳ ವಿಚಾರದಲ್ಲಿ ಜಯ ಸಿಗುವುದರಿಂದ ಸಂತೋಷವಾಗಿರುತ್ತೀರಿ
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಅಕ್ಕಪಕ್ಕದವರು ನಿಮಗೆ ಸಹಾಯ ಮಾಡಬಹುದು
  • ವಾತಾವರಣದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
  • ಹಣದ ವಿಚಾರದಲ್ಲಿ ಜಾಗ್ರತೆ ವಹಿಸಿ
  • ಇಂದು ನೀವು ಹಿರಿಯರ ನಿಂದನೆಗೆ ಒಳಗಾಗುತ್ತೀರಿ
  • ಮಕ್ಕಳ ಜೊತೆಗಿನ ಬಾಂಧವ್ಯ ಹಾಗೆ ಉಳಿಸಿಕೊಳ್ಳಿ 
  • ನಿಮ್ಮ ಶಿಸ್ತು, ನಿಮ್ಮ ವರ್ತನೆಯಿಂದ ಬೇರೆಯವರ ಮೇಲೆ ಒತ್ತಡ ಏರಬಾರದು
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ
Advertisment

ಧನುಸ್ಸು

RASHI_BHAVISHA_DHANASU

  • ತುಂಬಾ ಹಣ ಖರ್ಚು ಆಗುವ ಸಾಧ್ಯತೆ ಆದರೂ ನೆಮ್ಮದಿ ಇದೆ
  • ಆರೋಗ್ಯದ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
  • ಹಳೆಯ ವಿಚಾರ ಮತ್ತು ಸ್ನೇಹಿತರ ಭೇಟಿ ಆಗುವ ಅವಕಾಶವಿರುತ್ತದೆ
  • ಇಂದು ಕೋಪ ಕಡಿಮೆ ಇದ್ದರೆ ಒಳಿತು
  • ಮನೆ ಕಟ್ಟುವ ವಿಚಾರದಲ್ಲಿ ನೆಮ್ಮದಿ ವಾತಾವರಣ ಇರಲಿದೆ
  • ದೀರ್ಘಕಾಲದ ಆಲೋಚನೆಗಳು ಇಂದು ಪೂರ್ಣವಾಗಬಹುದು
  • ವೃದ್ಧರಿಗೆ ವಸ್ತ್ರದಾನ ಮಾಡಿ

ಮಕರ

RASHI_BHAVISHA_MAKARA

  • ಅತಿಥಿಗಳ ಆಗಮನ ಆಗುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ
  • ಭವಿಷ್ಯದ ಮೆಟ್ಟಿಲ್ಲನ್ನೇರುತ್ತೀವಿ ಅನ್ನೋ ಭಾವನೆ ನಿಮ್ಮಲ್ಲಿರಬೇಕು
  • ಆರ್ಥಿಕವಾಗಿ ಯಾವುದೇ ತೊಂದರೆಗಳು ಕಾಣುವುದಿಲ್ಲ
  • ಮನೆಯ ವಾತಾವರಣ ಸಾಯಂಕಾಲದ ಹೊತ್ತಿಗೆ ಶುಭವಾಗಲಿದೆ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲು ಎದುರಾಗುವ ಸಾಧ್ಯತೆ
  • ಸಾಲವನ್ನು ತೀರಿಸಲು ಇಂದು ಸಾಧ್ಯವಾಗುತ್ತದೆ
  • ತುಂಬಾ ಪರಿಶ್ರಮದ ದಿನವಾಗಿರುತ್ತದೆ
  • ಸ್ನೇಹಿತರಿಗೆ ಸಿಹಿ ಹಂಚುತ್ತೀರಿ

ಕುಂಭ

RASHI_BHAVISHA_KUMBHA

  • ಸಮಾಜದಲ್ಲಿ ನಿಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಬರಬಹುದು
  • ಆಹಾರ ಮಿತವಾಗಿರಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಮನೆಯವರಿಂದ ಆಶ್ಚರ್ಯ ಕಾದಿರುತ್ತದೆ
  • ಮಾನಸಿಕವಾದ ಸ್ಥಿಮಿತತೆ ಇಲ್ಲದೆ ಇದ್ದಾಗ ಯಾವುದೇ ವ್ಯವಹಾರ ಮಾಡಬೇಡಿ
  • ನಿಮ್ಮ ವೃತ್ತಿ, ನೌಕರಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಲ್ಪ ಅಡ್ಡಿ ಆಗುವ ಸೂಚನೆ ಇದೆ 
  • ನಿಮ್ಮ ಶಿಸ್ತು ನಿಮ್ಮನ್ನು ಕಾಪಾಡುತ್ತದೆ
  •  ಇಂದು ಆಲಸ್ಯವನ್ನು ಸ್ವಲ್ಪ ದೂರಮಾಡಿ
  • ಹಣದ ವಿಚಾರದಲ್ಲಿ ನಷ್ಟ ಅಥವಾ ಮೋಸ ಆಗಬಹುದು ಕಾಳಜಿವಹಿಸಿ 
  • ಕುಲದೇವತಾ ಪ್ರಾರ್ಥನೆ ಮಾಡಿ
Advertisment

ಮೀನ

RASHI_BHAVISHA_MEENA

  • ನಿರೀಕ್ಷಿಸಿದ ವಿಚಾರ ಮಾತ್ರ  ತೃಪ್ತಿ ಕೊಡುವುದಿಲ್ಲ
  • ಪ್ರವಾಸಕ್ಕೆ ಅವಕಾಶವಿರುವ ದಿನವಾಗಿರುತ್ತದೆ
  • ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಭೇಟಿ ಆಗುವ ಸಾಧ್ಯತೆ ಇದೆ
  • ಆರ್ಥಿಕ ಲಾಭವಿದ್ದರೂ ಕೂಡ ಭಯ ಪಡಬೇಕಾದ ದಿನ
  • ಇಂದು ಆತ್ಮೀಯರು ದೂರವಾಗಬಹುದು 
  • ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
  • ಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya News First Web News First
Advertisment
Advertisment
Advertisment