ಪ್ರೀತಿ ಪಾತ್ರರ ಅನಗತ್ಯ ಬೇಡಿಕೆ ಒಪ್ಪಬೇಡಿ.. ಹಣ ಹೂಡಿಕೆಯಿಂದ ನಷ್ಟವಾಗುವ ಸಾಧ್ಯತೆ..!

ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಆಗುವ ಸಾಧ್ಯತೆ ಹೆಚ್ಚು ಇದೆ. ನಿಮ್ಮ ಸ್ವಂತ ವಿಚಾರಕ್ಕೆ ಸ್ವಲ್ಪ ಸಮಯ ಮೀಸಲಿಡಿ. ಇದರಿಂದ ನಿಮಗೆ ನೆಮ್ಮದಿ ದಕ್ಕುತ್ತದೆ. ವ್ಯಾಪಾರದಲ್ಲಿ ಮಗ್ನ ಆಗುವುದರಿಂದ ಬೇರೆ ವಸ್ತುಗಳ ಬೆಲೆ ಗೊತ್ತಾಗಲ್ಲ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಕೃಷ್ಣಪಕ್ಷ, ಏಕಾದಶಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ  3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಹಣದ ವಿಚಾರಕ್ಕೆ ಸ್ವಲ್ಪ ಗೊಂದಲಗಳಾಗಬಹುದು
  • ಸ್ವಲ್ಪ ಚಟುವಟಿಕೆಯಂದಿರಿ ಆಲಸ್ಯ ಬೇಡ
  • ಜೀವನದಲ್ಲಿ, ವ್ಯಾವಹಾರಿಕ ಕ್ಷೇತ್ರಗಳಲ್ಲಿ ಯಶಸ್ಸು ಕಾಣುತ್ತೀರಿ
  • ನಿಮಗೆ ಸಾಮರ್ಥ್ಯ ಇದ್ದರೂ ಕೂಡ ನೀವು ಮಾನಸಿಕವಾಗಿ ಹಿನ್ನಡೆಯನ್ನು ತೋರಿಸುತ್ತೀರಿ 
  • ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಲು ಉತ್ತಮ ದಿನ
  • ಶಾರೀರಿಕವಾಗಿ ಮಾನಸಿಕವಾಗಿ ಅಶಕ್ತರಾಗಿರುವಂತೆ ವರ್ತನೆ ಮಾಡುತ್ತೀರಿ
  •  ಆಂಜನೇಯಸ್ವಾಮಿಗೆ ವೀಳ್ಯದೆಲೆ ಮತ್ತು ತುಳಸಿಯನ್ನು ಕೊಡಿ

ವೃಷಭ

RASHI_BHAVISHA_VRSHABA

  • ಹಳೆ ಸ್ನೇಹಿತರ, ಬಂಧುಗಳ ಭೇಟಿಗೆ ಕಾತುರರಾಗಿರುತ್ತೀರಿ ಆದರೆ ಅವಕಾಶವಾಗುವುದಿಲ್ಲ
  • ಜೀವನಕ್ಕೆ ತೊಂದರೆಯಿರುವುದಿಲ್ಲ ಆದರೆ ಜೀವಕ್ಕೆ ಅಭದ್ರತೆ ಕಾಡಲಿದೆ
  • ಇಂದು ಒಂಟಿತನ ಹೆಚ್ಚಾಗಿ ಕಾಡುವ ದಿನ
  • ಕೆಲವು ಸಂದರ್ಭಗಳಲ್ಲಿ  ಹಣದ ಕೊರತೆ ಉಂಟಾಗಬಹುದು
  • ಲಾಭದಾಯಕ ದಿನವಾದ್ರೂ ನಿರಾಸೆ ಉಂಟಾಗಲಿದೆ
  • ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕ ಸಹಾಯವಾಗಲಿದೆ
  • ಪ್ರತ್ಯಂಗಿರಾ ದೇವಿಯನ್ನು ಆರಾಧಿಸಿ

ಮಿಥುನ

RASHI_BHAVISHA_MITHUNA

  • ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ  
  • ನಿಮ್ಮ ಖ್ಯಾತಿಗೆ, ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು
  • ವೈಯಕ್ತಿಕವಾಗಿ  ವೃತ್ತಿಯಲ್ಲಿ ಬೆಳವಣಿಗೆಗೆ ಅವಕಾಶವಿದೆ
  •  ತಾತ್ಕಾಲಿಕವಾಗಿ ಸಾಲ ಕೇಳಲು ಬರುವವರ ಜೊತೆ ಅಂತರವನ್ನು ಕಾಯ್ದುಕೊಳ್ಳಬೇಕು
  •  ತುಂಬಾ ಆತಂಕ ಮತ್ತು ಮನಸ್ಸಿನಲ್ಲಿ ಚಿಂತೆಯ ದಿನ
  • ಶೂಲಿನೀ ದುರ್ಗೆಯನ್ನು ಪ್ರಾರ್ಥಿಸಿ 

ಕಟಕ

RASHI_BHAVISHA_KATAKA

  • ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
  • ಸಾಧನೆ ಮಾಡಿದವರ ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳಿ
  • ಪೋಷಕರ ಸಹಾಯ ಮುಖ್ಯ ಇಲ್ಲದಿದ್ದರೆ ಸಮಸ್ಯೆ ಉಂಟಾಗಲಿದೆ
  • ಯಾವುದೇ ಕೆಲಸವನ್ನು ಯೋಚಿಸಿ, ಚರ್ಚಿಸಿ ಮಾಡಿದರೆ ಒಳ್ಳೆಯದು
  • ಮನೋರಂಜನೆಗಾಗಿ ಹಣ ಖರ್ಚು ಮಾಡುವ ಸಿದ್ಧತೆಯಲ್ಲಿರುತ್ತೀರಿ
  • ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನಿಸುವ ಸಾಧ್ಯತೆಗಳಿವೆ
  • ಬೆಳಗ್ಗೆ ಎದ್ದಾಗಿನಿಂದ ಕಿರಿಕಿರಿ ಇರುತ್ತದೆ ತಾಳ್ಮೆಯಿರಲಿ
  • ಹಸುವಿಗೆ ಅನ್ನ, ಬೆಲ್ಲವನ್ನು ಕೊಡಿ

ಸಿಂಹ 

RASHI_BHAVISHA_SIMHA

  • ಮನೆಯವರೊಂದಿಗೆ ಸ್ಪಂದಿಸಲು ಇಷ್ಟವಿಲ್ಲದ ಸ್ವಭಾವ 
  • ಸಂಬಂಧಿಕರ ಮತ್ತು ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಹಾಳಾಗುತ್ತದೆ
  • ಹಣ ಹೂಡಿಕೆ  ಮಾಡುವುದರಿಂದ ನಷ್ಟ ಆಗುವ ಸಾಧ್ಯತೆ 
  • ಕಾಲು ನೋವು, ಸ್ನಾಯುಗಳ ನೋವಿಗೆ ವಿಶ್ರಾಂತಿ ಪಡೆಯಿರಿ
  • ನಿಮ್ಮ ಅಭಿಪ್ರಾಯ ಸಲಹೆ ಸ್ಪಷ್ಟವಾಗಿರಬೇಕು
  • ಅನಾವಶ್ಯಕವಾದ ಒತ್ತಡಗಳಿಗೆ ನೀವು ಸಿಲುಕಬಹುದು
  • ಆಂಜನೇಯನ ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಿ

ಕನ್ಯಾ

RASHI_BHAVISHA_KANYA

  • ಶಾರೀರಿಕ ತೊಂದರೆ ನೋವು, ಆಲಸ್ಯ ಕಾಣಬಹುದು
  • ಚೆನ್ನಾಗಿರುವವರ ಮನಸ್ಸಿನ ಮೇಲೆ ನೀವು ಪರಿಣಾಮ ಬೀರುತ್ತೀರಿ
  • ಸಹೋದ್ಯೋಗಿಗಳ ಮತ್ತು  ಸ್ನೇಹಿತರು ನಿಮಗೆ  ಸಹಾಯ ಮಾಡುವುದಿಲ್ಲ
  • ಸಮಾಜಕ್ಕೆ, ಕುಟುಂಬಕ್ಕೆ, ಮಕ್ಕಳಿಗೆ ತಪ್ಪು ಸಂದೇಶ ಕೊಟ್ಟು ನೀವು ಹಿನ್ನಡೆ ಅನುಭವಿಸುತ್ತೀರಿ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ, ಕುಟುಂಬದಲ್ಲಿ ಬೇರೆಯವರನ್ನು ಹೊಗಳುತ್ತಾ ಮೋಡಿ ಮಾಡುತ್ತೀರಿ
  • ಪತಿ-ಪತ್ನಿಯರಲ್ಲಿ ಜಗಳ ಉಂಟಾಗುವ ದಿನ
  • ಐಕ್ಯಮತ್ಯ ಮಂತ್ರ ಪಠಿಸಿ

ತುಲಾ

RASHI_BHAVISHA_TULA

  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಆಗುವ ಸಾಧ್ಯತೆ ಹೆಚ್ಚು
  • ನಿಮ್ಮ ಸ್ವಂತ ವಿಚಾರಕ್ಕೆ ಸ್ವಲ್ಪ ಸಮಯವನ್ನು ಮೀಸಲಾಗಿಡಿ
  • ವ್ಯಾಪಾರದಲ್ಲಿ ತಲ್ಲೀನತೆ ಹೊಂದಿರುವುದರಿಂದ ಬೇರೆ ಯಾವುದರ ಬೆಲೆ ಗೊತ್ತಾಗುವುದಿಲ್ಲ
  • ಮಧ್ಯಾಹ್ನದ ನಂತರ ಉಸಿರಾಟಕ್ಕೆ ತೊಂದರೆ ಆಗಬಹುದು ಎಚ್ಚರಿಕೆ
  •  ಬಂಡವಾಳದ ಬಗ್ಗೆ ಚಿಂತೆ ಉಂಟಾಗಬಹುದು
  • ಇಂದು ದಾಂಪತ್ಯದಲ್ಲಿ ಕಲಹ ಏರ್ಪಡುತ್ತದೆ
  • ಲಾಭದಾಯಕವಾದ ದಿನ, ಬಂದ ಆದಾಯವನ್ನು ಒಳ್ಳೆ ಕೆಲಸಕ್ಕೆ ವಿನಿಯೋಗಿಸಿ
  • ಶನಿ ಗ್ರಹವನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಹೊಸ ಆಲೋಚನೆಗಳು ನಿಮಗೆ ಅಧೈರ್ಯ ಉಂಟು ಮಾಡಬಹುದು
  • ನಿಮ್ಮ ಬುದ್ಧಿವಂತಿಕೆ ಕೆಲಸಕ್ಕೆ ಬರುವ ದಿನ
  • ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ ಆದರೆ ಹೆದರಿಕೆ ಇರುತ್ತದೆ
  • ಬೇರೆಯವರನ್ನು ಅಗೌರವದಿಂದ ಕಂಡರೆ ನಿಮಗೆ ಮಾನಹಾನಿಯಾಗಬಹುದು
  • ಹೊರಗಡೆ ತಿರುಗಾಡಲು ಅವಕಾಶಗಳು ಆಗುವುದಿಲ್ಲ ಮನಸ್ಸಿಗೆ ಬೇಸರವಾಗುತ್ತದೆ
  • ಮನೆಯಲ್ಲಿ ಶಾಂತವಾಗಿ ವರ್ತಿಸಬೇಕಾಗಬಹುದು
  • ಶಾಂತಿ ದುರ್ಗೆಯನ್ನು ಪ್ರಾರ್ಥಿಸಿ

ಧನುಸ್ಸು

RASHI_BHAVISHA_DHANASU

  • ತಂದೆಗೆ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆ ಆಗಬಹುದು ಎಚ್ಚರಿಕೆವಹಿಸಿ
  • ಅಕ್ಕ ಪಕ್ಕದವರ ಜೊತೆ ಜಗಳವಾಗಬಹುದು
  • ಹೆಚ್ಚು ಬೆಲೆ ಬಾಳುವ ವಸ್ತು ಖರೀದಿಸುವಿರಿ
  • ಆತ್ಮವಿಶ್ವಾಸ, ಭರವಸೆ ನಿಮ್ಮ ಮುಂದಿನ ಕೆಲಸಕ್ಕೆ ಸ್ಫೂರ್ತಿದಾಯಕವಾಗಿರುತ್ತದೆ
  • ನಿಮ್ಮ ಒಳ್ಳೆಯತನ ಬೇರೆಯವರಿಗೆ ದೌರ್ಬಲ್ಯವೆನಿಸಬಹುದು ಎಚ್ಚರ
  • ಜೀವನದ ಉಜ್ವಲವಾದ ಭವಿಷ್ಯ ನಿಮಗೆ ಕಾಣಬಹುದು
  •  ಸೂರ್ಯನಾರಾಯಣನನ್ನು ಆರಾಧಿಸಿ 

ಮಕರ

RASHI_BHAVISHA_MAKARA

  • ಪ್ರೀತಿ ಪಾತ್ರರ ಅನಗತ್ಯ ಬೇಡಿಕೆಗಳನ್ನು ಒಪ್ಪಬಾರದು
  • ಸಂತೋಷದ ವಾತಾವರಣ ಅನಾರೋಗ್ಯದಿಂದ ಹಾಳಾಗಬಹುದು
  • ಆಸ್ಪತ್ರೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಇದರಿಂದ ಬೇಸರವಾಗುವ ದಿನ
  • ಕುಟುಂಬದವರ ಸಹಕಾರವಿರುವುದರಿಂದ ಧೈರ್ಯ ಬರುತ್ತದೆ
  • ಹಳೆಯ ನೋವು ಅಥವಾ ಅನಾರೋಗ್ಯ ಮರುಕಳಿಸಬಹುದು
  • ಸಂತಾನಾಪೇಕ್ಷಿಗಳಿಗೆ ಶುಭ ಸಮಯ ದೈವಾನುಗ್ರಹವಿದೆ
  •  ಗೋಪಾಲ ಕೃಷ್ಣನನ್ನು ಪ್ರಾರ್ಥಿಸಿ

ಕುಂಭ

RASHI_BHAVISHA_KUMBHA

  • ಆಲಸ್ಯ ಮತ್ತು ಸೋಮಾರಿತನದಿಂದ ನೀವು ಹೆಚ್ಚು ಅವಕಾಶ ವಂಚಿತರಾಗುತ್ತೀರಿ
  • ಏಕಾಂಗಿ ಅಥವಾ ಒಂಟಿತನ ನಿಮ್ಮನ್ನು ಕಾಡಬಹುದು
  • ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗೆ ಬೆಲೆ ಸಿಗಬೇಕೆಂದರೆ ಜಾಗರೂಕರಾಗಿರಬೇಕು
  • ಹಣದ ವೃದ್ಧಿ ಇದ್ರೂ ಕೂಡ ದೇಹಾಲಸ್ಯ ಕಡಿಮೆ ಇರುತ್ತದೆ
  • ನಿಮ್ಮ ಶರೀರದ ಶಕ್ತಿಯನ್ನು ವೃದ್ಧಿಸಿಕೊಳ್ಳಿ ಆರೋಗ್ಯವಂತರಾಗಿರಲು ಯೋಗ ಮಾಡಿ
  • ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ

ಮೀನ

RASHI_BHAVISHA_MEENA

  • ಮಕ್ಕಳಿಂದ ಬೇಸರವಾಗುವ ದಿನ
  • ಈ ದಿನ ಉತ್ತಮವಾಗಿದ್ದರೂ ನಿಮಗೆ ತೃಪ್ತಿಯಿರುವುದಿಲ್ಲ
  • ಮನೆಯಲ್ಲಿ ಆಶ್ಚರ್ಯವೆಂಬಂತೆ  ಒಂದು ಘಟನೆ ನಡೆಯಬಹುದು
  • ಹೆಚ್ಚು ಹಣ ಖರ್ಚಾದರೂ ಮತ್ತೆ ಸಂಗ್ರಹವಾಗುವ ಯೋಗ ಇದೆ
  • ಮನೋರಂಜನೆಗಾಗಿ ಹೊರಗಡೆ ಸಮಯವನ್ನ ಕಳೆಯುತ್ತೀರಿ
  • ಮಕ್ಕಳನ್ನು ಬಹಳ ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ಗೊತ್ತಿರಬೇಕು
  • ಆಧ್ಯಾತ್ಮಿಕವಾಗಿ ಆಸಕ್ತಿಯಿದ್ದರೂ ರೂಢಿಸಿಕೊಳ್ಳಬೇಕು
  •  ಕುಲದೇವತಾ  ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Kannada News Bangalore
Advertisment