/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
- ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ ಅನಾನುಕೂಲ
- ನಕಾರತ್ಮಕ ವಿಚಾರಗಳಿಗೆ ಸಮಯ ವ್ಯರ್ಥ
- ವಸ್ತು ಖರೀದಿಯಲ್ಲಿ ಚರ್ಚೆ ಅವಮಾನ ಕಲಹ ಆಗಬಹುದು
- ಬೇರೆಯವರನ್ನು ಯಾವಾಗಲೂ ಮಾತಿನಿಂದ ಅವಮಾನಿಸುವ ಅಭ್ಯಾಸ ದೂರಮಾಡಿ
- ಕುಟುಂಬದಲ್ಲಿ ಆಶಾಂತಿ ವಾತಾವರಣ
- ಆತುರದ ಮಾತು ತಪ್ಪಾಗಬಹುದು
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ವೃಷಭ
- ಸತ್ಯಕ್ಕೆ ಹತ್ತಿರವಾದ ಉಪಯುಕ್ತವಾದ ಚರ್ಚೆ ಮಾಡುವುದು ಉತ್ತಮ
- ಇಂದು ಸಹೋದರರಲ್ಲಿ ಭಿನ್ನಾಭಿಪ್ರಾಯದ ಮಾತುಗಳಿರಬಹುದು
- ಕುಟುಂಬದ ಮೂಲವನ್ನು ಸರಿಯಾಗಿ ಹುಡುಕಿ ಸರಿಪಡಿಸಬೇಕಾಗಬಹುದು
- ದೀರ್ಘಕಾಲದ ತೊಂದರೆಯಿರುವವರಿಗೆ ಸ್ವಲ್ಪ ಚೇತರಿಕೆ ಆಗಬಹುದು
- ಅನಗತ್ಯ ವಸ್ತು ವಿಷಯಗಳಿಗೆ ಕಲಹವಾಗಬಹುದು
- ನಿಮ್ಮ ಮೊಂಡು ಸ್ವಭಾವವನ್ನು ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿ
- ಸಾಲಗ್ರಾಮ ರೂಪೀ ವಿಷ್ಣುವಿನ ಆರಾಧನೆ ಮಾಡಿ
ಮಿಥುನ
- ಸಾಯಂಕಾಲದ ಚರ್ಚೆ ನಿಮಗೆ ಅನುಕೂಲಕರವಾಗಲಿದೆ
- ಸ್ಥಿರ ಮನಸ್ಸಿಲ್ಲದೆ ಅನೇಕ ಗೊಂದಲಗಳಿಗೆ ಸಿಲುಕಬಹುದು
- ನೀವು ಎಷ್ಟು ನಯವಾಗಿರುತ್ತಿರೋ ಅಷ್ಟು ಗೌರವ ನಿಮ್ಮದಾಗುತ್ತದೆ
- ಜೊತೆಗಿದ್ದ ಸ್ನೇಹತರು ನಿಮ್ಮ ಸ್ವಭಾವದಿಂದ ದೂರವಾಗಬಹುದು
- ದಿನದ ಆರಂಭದಲ್ಲಿ ನಿಮಗೆ ತೊಂದರೆ ಬೇಸರದ ಸೂಚನೆಯಿರಬಹುದು
- ನಿಮ್ಮ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ
- ಭಗವದ್ಗೀತಾ ಶ್ಲೋಕ ಪಠಿಸಿ
ಕಟಕ
- ಕೆಲವು ವಿಚಾರಗಳಲ್ಲಿ ಮನೆಯಲ್ಲಿ ನಿಮ್ಮನ್ನು ಪರಿಗಣಿಸುವುದಿಲ್ಲ
- ಬೇರೆಯವರ ವಿಚಾರಕ್ಕೆ ತಲೆಹಾಕಿ ಅವಮಾನವಾಗಬಹುದು
- ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
- ಮದುವೆ ವಿಚಾರ ಚರ್ಚೆಯಾಗಲಿದೆ
- ಮಹಿಳೆಯರು ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು
- ನಿಮ್ಮ ಕೆಲಸ ಒತ್ತಡವನ್ನು ಬೇರೆಯವರಿಗೆ ವಹಿಸಬೇಡಿ
- ಮನೋಭವ ಮಂತ್ರ ಉಪಾಸನೆ ಮಾಡಿ
ಸಿಂಹ
- ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಬಹುದು
- ಸಾಯಂಕಾಲದಲ್ಲಿ ವ್ಯಾವಹಾರಿಕ ಹಣದ ವಿಚಾರಕ್ಕೆ ಕಲಹ ಜಗಳಬೇಡ
- ಮನೆಯಲ್ಲಿ ಗಾಜಿನ ಪದಾರ್ಥ ಒಡೆಯಬಹುದು ಎಚ್ಚರವಹಿಸಿ
- ನಿಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಕೆಲಸ ಮಾಡಿ
- ವ್ಯಕ್ತಿತ್ವ ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗಬಹುದು
- ಆರೋಗ್ಯದಲ್ಲಿ ತುಂಬಾ ಏರು ಪೇರು ಕಾಣಬಹುದು
- ರುದ್ರ ಮಂತ್ರ ಶ್ರವಣ ಮಾಡಿ
ಕನ್ಯಾ
- ಸಾಕು ಪ್ರಾಣಿಯ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ
- ಸರ್ಕಾರಿ ಕೆಲಸ ಮಾಡುವವರಿಗೆ ಬಡ್ತಿ ಸಿಗಲಿದೆ
- ಮುದ್ರಕರಿಗೆ ಶುಭ ದಿನ
- ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಗೊಂದಲಗಳು ಕಾಡಬಹುದು
- ಅರಿಯದ ವಿಚಾರಗಳಲ್ಲಿ ಸಿಲುಕಬಹುದು
- ಬಂಧುಗಳಲ್ಲಿದ್ದ ವಿರಸ ಭಿನ್ನಾಭಿಪ್ರಾಯ ದೂರವಾಗುತ್ತದೆ
- ಮನೆಯಲ್ಲಿ ಮಂಗಳಕಾರ್ಯದ ವಿಚಾರ ಪ್ರಸ್ತಾಪಿಸಬಹುದು
- ಈಶ್ವರನ ಆರಾಧನೆ ಮಾಡಿ
ತುಲಾ
- ಆಯಾಸದಿಂದ ಕಿರಿಕಿರಿ ಆಗಬಹುದು
- ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
- ದಾಂಪತ್ಯದಲ್ಲಿ ವಿರಸ ಬಿರುಕು ತೋರುತ್ತದೆ ಹೊಂದಾಣಿಕೆ ಅಗತ್ಯ
- ಮನೆಯಲ್ಲಿ ಕಹಿವಿಚಾರಗಳನ್ನು ಮಾತನಾಡಬೇಡಿ
- ನಿಗೂಢ ವಿಷಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ
- ಉದ್ಯಮಿಗಳಿಗೆ ಹಣದ ಏರುಪೇರಿನಿಂದ ತೊಂದರೆ
- ಐಕ್ಯಮತ್ಯ ಮಂತ್ರ ಶ್ರವಣ ಮಾಡಿ
ವೃಶ್ಚಿಕ
- ಶುಭಕಾರ್ಯಕ್ಕೆ ಹೋಗಲು ಮನಸ್ಸಿರುವುದಿಲ್ಲ
- ನೌಕರಿಯ ಬಗ್ಗೆ ಸ್ನೇಹಿತರಿಂದ ತೊಂದರೆಯಿದೆ
- ಕುಟುಂಬದ ನಿರ್ವಹಣೆ ಹಣದ ದೃಷ್ಟಿಯಿಂದ ಕಷ್ಟವಾಗಬಹುದು
- ವಸ್ತು ಖರೀದಿ ಅಥವಾ ವ್ಯಾಪಾರದಲ್ಲಿ ಲಾಭವಿದೆ
- ಸಾಯಂಕಾಲದ ವೇಳೆಗೆ ಅಶುಭವಾರ್ತೆ ಮನೆಯಲ್ಲಿ ಆತಂಕ
- ತಂದೆಯವರ ಸಂಪೂರ್ಣ ಸಹಾಯ ಸಹಕಾರ ಸಿಗಲಿದೆ
- ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ
ಧನಸ್ಸು
- ಪ್ರಯಾಣದಲ್ಲಿ ತೊಂದರೆಯಿದೆ - ಎಚ್ಚರಿಕೆ
- ನಿಮ್ಮ ಪರಿಶ್ರಮವು ಲೆಕ್ಕಕ್ಕೆ ಬರುವುದಿಲ್ಲ ಉದ್ಯೋಗ + ಮನೆ
- ಉದ್ಯೋಗದಲ್ಲಿ ಸ್ಥಾನ ಮಾನಗಳು ಸಿಗಬಹುದು
- ಮನಸ್ಸಿನಿಂದ ವೃತ್ತಿ ಉದ್ಯೋಗದ ಚಿಂತೆ ದೂರವಾಗುತ್ತದೆ
- ಬರಬೇಕಾದ ಬಾಕಿ ಹಣವಿದ್ದರೆ ಇಂದು ಯೋಗವಿದೆ
- ವಿದ್ಯಾರ್ಥಿಗಳಿಗೆ ಯಶಸ್ಸಿದೆ
- ಕುಲದೇವತಾ ಆರಾಧನೆ ಮಾಡಿ
ಮಕರ
- ತಲೆ ನೋವಿನ ಸಮಸ್ಯೆ ಕಾಡಬಹುದು
- ಮೇಲಾಧಿಕಾರಿಗಳಿಂದ ನಿಂದನೆಗೊಳಗಾಗುತ್ತೀರಿ
- ಮಾನಸಿಕ ಒತ್ತಡ-ಕೋಪ ಕಾಣಬಹುದು
- ನಕಾರಾತ್ಮಕ ಆಲೋಚನೆಗಳು ಬರದಂತೆ ತಡೆಯಿರಿ
- ಎಲ್ಲಾ ಅನುಕೂಲಗಳಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
- ಏನೋ ನಿಮಗಾಗದ ಮಾತು ಕೇಳಿ ಬೇಸರವಾಗಬಹುದು
- ನವಗ್ರಹ ಪೀಟಾ ಪರಿಹಾರ ಸ್ತೋತ್ರ ಪಠಿಸಿ
ಕುಂಭ
- ದೈಹಿಕ ತೊಂದರೆಯಿದೆ ಚಿಕಿತ್ಸೆ ಅಗತ್ಯ
- ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಬಹುದು
- ವ್ಯಾಪಾರದಾರರಿಗೆ ಲಾಭವಿದೆ
- ಉದ್ಯೋಗ ಹುಡುಕುತ್ತಿರುವವರಿಗೆ ಅನುಕೂಲ
- ಶತ್ರುಗಳ ಕಾಟ ಉಂಟಾಗಬಹುದು
- ಈ ದಿನ ಧನಲಾಭ
- ಪ್ರತ್ಯಂಗಿರಾ ದೇವಿ ಉಪಾಸನೆ ಮಾಡಿ
ಮೀನ
- ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
- ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ
- ಇಷ್ಟಾರ್ಥಗಳು ಈಡೇರುತ್ತವೆ ದುರಾಸೆ ತಪ್ಪಿದ್ದಲ್ಲ
- ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸಿ ವಿಫಲರಾಗುತ್ತೀರಿ
- ಬೇಕಾದವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡುತ್ತೀರಿ
- ಭಾವನೆಗಳನ್ನು ನಿಯಂತ್ರಿಸಿ
- ಬಂಡಿಕೇಶ್ವರನನ್ನು ಪ್ರಾರ್ಥಿಸಿ
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us