Advertisment

ನಿರುದ್ಯೋಗಿಗಳಿಗೆ ಶುಭ ಸುದ್ದಿ.. ಗುರಿ ಮುಟ್ಟುವುದೇ ನಿಮ್ಮ ಉದ್ದೇಶ; ಇಲ್ಲಿದೆ ಇಂದಿನ ಭವಿಷ್ಯ!

ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭವಾಗುವ ಸೂಚನೆಯಿದೆ. ಷೇರು ವ್ಯವಹಾರವನ್ನು ಬೆಳಗ್ಗೆ 11.30 ರಿಂದ 1 ಗಂಟೆಯೊಳಗೆ ಒಳಗೆ ಮುಗಿಸಿಕೊಳ್ಳಿ. ನಿಮಗಿರುವ ಧಾರ್ಮಿಕ ಭಾವನೆಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಸಂಗಾತಿಗೆ ಆಶ್ಚರ್ಯಕರ ಉಡುಗೊರೆ ಕೊಟ್ಟು ಸಂತೋಷಪಡಿಸಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಈ ದಿನ ಅನಗತ್ಯ ತಿರುಗಾಟ ಬೇಡ ನೀರಿನಿಂದ ದೂರವಿರಿ
  • ನದಿ ಮತ್ತು ಸಮುದ್ರದ ಸಮೀಪಕ್ಕೆ ಹೋಗಬೇಡಿ
  • ಕುಟುಂಬದಲ್ಲ್ಲಿ ಎಲ್ಲರ ಮನಸ್ಥಿತಿ ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಇಂದು ವಾಹನ ಸವಾರರು ಎಚ್ಚರಿಕೆಯಿಂದಿರಿ
  • ಗೊತ್ತಿಲ್ಲದೆ ತಾವೇ ಮಾಡಿಕೊಂಡ ತಪ್ಪಿನಿಂದ ತೊಂದರೆಯಿದೆ ಎಚ್ಚರಿಕೆ ಇರಲಿ
  •  ಗಣಪತಿಯನ್ನು ಪ್ರಾರ್ಥಿಸಿ 

ವೃಷಭ

RASHI_BHAVISHA_VRSHABA

  • ಬೇರೆಯವರ ವಾಹನದಲ್ಲಿ ಪ್ರಯಾಣ ಮಾಡಬೇಡಿ
  • ಸ್ನೇಹಿತರೊಂದಿಗೆ ಕಾಲ ಕಳೆಯುತ್ತೀರಿ
  • ನಿಮ್ಮ ಆಸಕ್ತಿಗನುಗುಣವಾಗಿ ಕೆಲಸದ ಆಯ್ಕೆ ಮಾಡಿಕೊಳ್ಳಿ
  • ಮನೆಯಲ್ಲಿ ನಿಮ್ಮ ಮಾತೇ ಮುಖ್ಯವಾಗುತ್ತದೆ
  • ಜೀವನಕ್ಕೆ  ತೊಂದರೆಯಿಲ್ಲ ಎಂಬ ಮನದಾಳದ ಮಾತು ನಿಮ್ಮ ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗುತ್ತದೆ
  • ದುರ್ಗಾದೇವಿ ಪ್ರಾರ್ಥನೆ ಮಾಡಿ
Advertisment

ಮಿಥುನ

RASHI_BHAVISHA_MITHUNA

  • ಹೊಸ ಹೊಸ ಆದಾಯದ ಮೂಲಗಳು ಸಿಗುತ್ತವೆ
  • ಉದ್ಯೋಗದಲ್ಲಿ ಅನುಕೂಲವಿದೆ
  •  ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಯೋಗವಿದೆ
  • ನಿಮ್ಮ ಕೆಲಸ ಕಾರ್ಯಕ್ಕೆ ಸಹಕಾರಿಯಾಗಬಹುದು
  • ನಿಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ವಿಶ್ವಾಸ ಉಳಿಸಿಕೊಳ್ಳಿ
  • ಬೇರೆಯವರ ಮೇಲೆ ನಿಮ್ಮ ಹಿಡಿತವನ್ನು ಸಾಧಿಸಬೇಡಿ
  • ಕುಲದೇವತೆ ಪ್ರಾರ್ಥನೆ ಮಾಡಿ
     

ಕಟಕ

RASHI_BHAVISHA_KATAKA

  • ದುರಾಸೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
  • ಇಂದು ಸಮಯ ವ್ಯರ್ಥ ಮಾಡಬೇಡಿ
  • ಉದ್ಯೋಗದಲ್ಲಿ ಸ್ವಲ್ಪ ಅಡಚಣೆ ಸಾಧ್ಯತೆ ಇದೆ
  • ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸದ ನೀವೇ ಮಾಡಿ
  •  ಬೇರೆಯವರಿಗೆ ಹಣ ನೀಡುವಾಗ ಎಚ್ಚರಿಕೆ ಇರಲಿ
  • ದತ್ತಾತ್ರೇಯರನ್ನು ಆರಾಧಿಸಿ

ಸಿಂಹ 

RASHI_BHAVISHA_SIMHA

  • ಸಣ್ಣ ತೊಂದರೆಗಳ ನಂತರ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
  • ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶವಿದೆ
  • ಮದುವೆ ವಿಚಾರ ಮನೆಯಲ್ಲಿ ಪ್ರಸ್ತಾಪವಾಗಿ ಎಲ್ಲರೂ ಸಂಭ್ರಮಿಸುವ ವಾತಾವರಣ ಇರುತ್ತದೆ
  • ಹಣಕಾಸಿನ ಲಾಭದಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ
  • ಕುಲದೇವತೆಯನ್ನು ಆರಾಧನೆ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ಹಳೆಯ ಸ್ನೇಹಿತರ ಭೇಟಿಯಿಂದ ಮುಖ್ಯ ವಿಷಯಗಳ ಚರ್ಚೆಯಾಗುತ್ತದೆ
  • ವೈವಾಹಿಕ ವಿಚಾರದಲ್ಲಿರುವವರಿಗೆ ಉತ್ತಮ ಫಲಿತಾಂಶ
  • ರಹಸ್ಯ ಶತ್ರುಗಳ ಬಗ್ಗೆ ಹೆಚ್ಚು ಗಮನವಿರಲಿ
  •  ಬರಹಗಾರರಿಗೆ ಈ ದಿನ ಚೆನ್ನಾಗಿದೆ
  • ದೂರದ ಪ್ರಯಾಣ ನಿಮಗೆ ತೊಂದರೆಯಾಗಬಹುದು
  • ಶೂಲಿನೀ ದುರ್ಗಾದೇವಿ ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ನಿಮ್ಮ ಕಾರ್ಯಗಳಿಗೆ ಕುಟುಂಬದವರ ಸಹಕಾರ ಪೂರ್ಣವಾಗಿ ಸಿಗುತ್ತದೆ
  • ಸರ್ಕಾರಿ ಕೆಲಸಗಳಿಂದ ಮನಸ್ಸಿಗೆ ಸಮಾಧಾನ
  • ಉತ್ತಮ ಕಾರ್ಯಗಳಿಗಾಗಿ ಪ್ರಯಾಣ ಮಾಡುತ್ತೀರಿ
  • ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಪ್ರಗತಿ ಕಾಣುತ್ತೀರಿ
  • ಆಸ್ತಿ ವಿವಾದಗಳಿದ್ದರೆ ಬಗೆ ಹರಿಯುವ ಸಾಧ್ಯತೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಸಂಗೀತ ಆಸಕ್ತರಿಗೆ ಉತ್ತಮವಾದ ದಿನ
  • ಹೊಸ ವಿಷಯ ಕಲಿಯಲು ಉತ್ಸುಕರಾಗಿರುತ್ತೀರಿ
  • ನಿಮ್ಮ ಏಕಾಗ್ರತೆಗೆ ಅಡ್ಡಿಯಾಗುವ ಪ್ರಸಂಗಗಳೇ ಹೆಚ್ಚು
  • ಮಾಡಿದ ಕೆಲಸವು ಸರಿಯಾಗದೆ ಮತ್ತೆ ಮಾಡಬೇಕಾಗಬಹುದು
  • ತಾಯಿ, ಅಜ್ಜಿಯ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಬಂಧುಗಳ ಆಗಮನದಿಂದ ಮನೆಯಲ್ಲಿ ಮನಸ್ತಾಪ ಉಂಟಾಗಬಹುದು
  • ಇಂದಿನ ಕೆಲಸ ಕಾರ್ಯಗಳು ನಿಮ್ಮ ಚುರುಕುತನಕ್ಕೆ ತಕ್ಕಂತೆ ಆಗುವುದಿಲ್ಲ
  •  ಶ್ರೀ ಕೃಷ್ಣನನ್ನು ಪ್ರಾರ್ಥಿಸಿ
Advertisment

ಧನುಸ್ಸು

RASHI_BHAVISHA_DHANASU

  • ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ
  • ಬೇರೆಯವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
  • ಗುರಿ ಮುಟ್ಟುವುದೇ ನಿಮ್ಮ ಮೂಲ ಉದ್ದೇಶ ಆಗಿರುತ್ತದೆ
  • ಇಂದು ನೀವು ತುಂಬಾ ಕಾರ್ಯ ಒತ್ತಡಕ್ಕೆ ಸಿಲುಕುತ್ತೀರಿ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುತ್ತೀರಿ
  • ಗೋವಿನ ದರ್ಶನ ಮಾಡಿ

ಮಕರ

RASHI_BHAVISHA_MAKARA

  • ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭವಾಗುವ ಸೂಚನೆಯಿದೆ
  • ಷೇರು ವ್ಯವಹಾರವನ್ನು ಬೆಳಗ್ಗೆ 11.30 ರಿಂದ 1 ಗಂಟೆಯೊಳಗೆ ಒಳಗೆ ಮುಗಿಸಿಕೊಳ್ಳಿ
  • ನಿಮಗಿರುವ ಧಾರ್ಮಿಕ ಭಾವನೆಯನ್ನು ಹೆಚ್ಚಿಸಿಕೊಳ್ಳಿ
  • ನಿಮ್ಮ ಸಂಗಾತಿಗೆ ಆಶ್ಚರ್ಯಕರ ಉಡುಗೊರೆ ಕೊಟ್ಟು ಸಂತೋಷಪಡಿಸಿ
  • ಇಂದು ಪತಿ- ಪತ್ನಿಯರ ಮಧ್ಯೆ ಉತ್ತಮ ಬಾಂಧವ್ಯ ಇರಲಿದೆ
  • ಗುರುಗಳನ್ನು ಆರಾಧಿಸಿ

ಕುಂಭ

RASHI_BHAVISHA_KUMBHA

  • ವಾಹನ ಚಾಲನೆ ಮಾಡುವಾಗ ಜಾಗ್ರತೆವಹಿಸಿ
  • ಆಸ್ತಿಯ ಖರೀದಿ ವಿಚಾರದಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
  • ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸದ ವಿಚಾರದಲ್ಲಿ ಶುಭ ಸುದ್ದಿ ಬರುತ್ತದೆ
  • ನಿಮಗಿರುವ ಪ್ರತಿಭೆಯನ್ನ ಜನ ಇಂದು ಗುರುತಿಸುತ್ತಾರೆ
  • ಇಂದು ಅನಗತ್ಯ ಕೆಲಸಗಳಿಂದ ದೂರವಿರಿ
  • ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ
Advertisment

ಮೀನ

RASHI_BHAVISHA_MEENA

  • ಪರಸ್ಪರ ಭಿನ್ನಾಭಿಪ್ರಾಯಬರಬಹುದು ಮಾತು ಮೃದುವಾಗಿರಲಿ
  • ನೇರವಾಗಿ ಮಾತನಾಡಿ ನಿಷ್ಠೂರಕ್ಕೆ ಗುರಿಯಾಗುತ್ತೀರಿ
  • ಇವತ್ತು ಯಾರನ್ನೂ ಅತಿಯಾಗಿ ನಂಬಬೇಡಿ
  • ಇಂದು ಸ್ವಲ್ಪ ದುರ್ಬಲವಾದ ದಿನ
  • ಪ್ರೇಮಿಗಳ ವಿಚಾರದಲ್ಲಿ ನಿರಾಸೆಯಾಗಬಹುದು
  • ಇವತ್ತು ಯಾರನ್ನೂ ಅತಿಯಾಗಿ ನಂಬಬೇಡಿ
  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
  • ಸೂರ್ಯನಿಗೆ 12 ಬಾರಿ ನಮಸ್ಕರಿಸಿ
     

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment
Advertisment
Advertisment