/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ವಿಶೇಷವಾಗಿ ಉದ್ಯೋಗದಲ್ಲಿ ಆಸಕ್ತಿ ಹೆಚ್ಚಾಗಲಿದೆ
- ಹಣದ ಅಡಚಣೆಯಿಂದ ನಿಂತಿದ್ದ ಕೆಲಸ ಪ್ರಾರಂಭ ಆಗಲಿದೆ
- ನಿಮ್ಮ ಕೆಲಸಕ್ಕೆ ಅನುಕೂಲವಾಗುವ ಉಪಕರಣ ಖರೀದಿಸುವ ಸಾಧ್ಯತೆ
- ಮರಗೆಲಸ ಮಾಡುವವರಿಗೆ ವಿಶೇಷ ದಿನ
- ವಿಶ್ವಕರ್ಮ ಮುನಿಯ ಸ್ಮರಣೆ ಮಾಡಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ
- ಸಹೋದರ ಸಂಬಂಧ ಗಟ್ಟಿಯಾಗುವ ಸಾಧ್ಯತೆ
- ಭಾವನಾತ್ಮಕ ನಿರ್ಧಾರಗಳಿಂದ ತೊಂದರೆಗೆ ಸಿಲುಕುತ್ತೀರಿ ಎಚ್ಚರಿಕೆ ಇರಲಿ
- ಅನಾಥ ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತಿಸಿ ಕೈಲಾದ ಸಹಾಯ ಮಾಡಿ
- ಮಕ್ಕಳಿಗಾಗಿ ಹಣ ಖರ್ಚು ಮಾಡಿ ತೃಪ್ತಿ ಪಡುವ ದಿನ
- ಕುಲದೇವತಾರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಸ್ಥಿರಾಸ್ತಿಗೆ ಸಂಬಂಧಿಸಿದ ಮಾತಿನ ಇತ್ಯರ್ಥವಾಗಬಹುದು
- ಮನೆಯಲ್ಲಿ ಶುಭ ಕೆಲಸದ ಪ್ರಸ್ತಾಪ ಸಾಧ್ಯತೆ
- ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಸಾಧನೆಗೆ ಗೌರವ ಸಿಗುತ್ತದೆ
- ಬ್ಯಾಂಕ್ ಅಥವಾ ಫೈನಾನ್ಸ್​ನಲ್ಲಿರುವ ಉದ್ಯೋಗಿಗಳಿಗೆ ಶುಭ ಸುದ್ದಿ
- ಇಂದು ಪ್ರಾಮಾಣಿಕತೆಗೆ ನಿಜವಾದ ಬೆಲೆ ತಿಳಿಯುವ ದಿನ
- ಶನೇಶ್ವರನ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಚಿಕ್ಕಮಕ್ಕಳಿಗೆ ಬೆನ್ನಿನ ಭಾಗದಲ್ಲಿ ನೋವು ಸಾಧ್ಯತೆ
- ಮಕ್ಕಳು ಮೊಮ್ಮಕ್ಕಳೊಂದಿಗೆ ವಿಶೇಷವಾದ ಸಮಯ ಕಳೆಯುತ್ತೀರಿ
- ನಿಮ್ಮ ಕುಟುಂಬದವರು ಅಥವಾ ಸ್ನೇಹಿತರು ನಿಮಗೆ ಆಶ್ಚರ್ಯ ಉಂಟುಮಾಡಬಹುದು
- ಅಲರ್ಜಿ ತೊಂದರೆ ಕಾಡಬಹುದು ಜಾಗ್ರತೆ ವಹಿಸಿ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಕೋರ್ಟು ಕಚೇರಿಗಳಲ್ಲಿ ಕೇಸ್​ಗಳಿರುವವರಿಗೆ ಶುಭದಿನ
- ಸರ್ಕಾರದಿಂದ ಬರಬೇಕಾದ ಹಣ ಇಂದು ಬರಬಹುದು
- ಇಂದು ನಿಮ್ಮ ಕಾರ್ಯ ಮುಗಿದ ತಕ್ಷಣ ಮನೆ ಸೇರಿದರೆ ಒಳ್ಳೆಯದು
- ಅನಿರೀಕ್ಷಿತವಾಗಿ ಹಣ ಖರ್ಚಾಗುವ ಸಾಧ್ಯತೆ
- ನಿಮ್ಮ ದಾಖಲಾತಿಗಳಿಗೆ ಸಂಬಂಧಿಸಿದ ಪತ್ರಗಳನ್ನು ಬೇರೆಯವರಿಗೆ ಕೊಡಬೇಡಿ
- ಗುರು ರಾಘವೇಂದ್ರರನ್ನು ಸ್ಮರಿಸಿ
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಇಂದು ಹೊಸ ಕೆಲಸಗಳನ್ನು ಆರಂಭಿಸಲು ಉತ್ತಮ ದಿನ
- ಪಾಲುದಾರರು ತಮ್ಮ ಕಷ್ಟದಿಂದ ಹೊರಬರುತ್ತೀರಿ
- ಆಸ್ತಿಯ ವಿಚಾರದಲ್ಲಿ ನಿಮಗೆ ಜಯವಿದೆ
- ಕಠಿಣ ಪರಿಶ್ರಮದ ಕಡೆಗೆ ಮನಸ್ಸು ಬದಲಾವಣೆ
- ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ ಮನಸ್ಸಿಗೆ ಸಮಾಧಾನ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆ ಆಗುವ ಸಾಧ್ಯತೆ
- ದೇವಿಯನ್ನು ಆರಾಧನೆ ಮಾಡಿ
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ಆರೋಗ್ಯದ ಸಮಸ್ಯೆ ಅಧಿಕ ಖರ್ಚು ಆಲಸ್ಯ ಕಾಡುವ ಸಾಧ್ಯತೆ
- ಇಂದು ನಿರಾಶಾದಾಯಕ ದಿನ
- ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆ ಇದೆ
- ಈ ರಾಶಿಯ ಮಕ್ಕಳಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ಒತ್ತಡದಿಂದ ಮಾನಸಿಕ-ದೈಹಿಕ ತೊಂದರೆ ಉಂಟಾಗಬಹುದು
- ಮನೆಯಲ್ಲಿ ಕೂತು ಕೆಲಸ ಮಾಡುವವರಿಗೆ ತೊಂದರೆಯಾಗಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ನಿಮ್ಮ ಕೈ ಕೆಳಗೆ ಕೆಲಸ ನಿರ್ವಹಿಸುವವರೂ ನಿಮ್ಮಿಂದ ಸಂತೋಷವಾಗಿರುತ್ತಾರೆ
- ನಿಂತಿದ್ದ ಕೆಲಸಗಳಿಗೆ ಮರು ಚಾಲನೆ ಸಿಗಬಹುದು
- ಮಾನಸಿಕ ಒತ್ತಡ ಆರೋಗ್ಯ ಸಮಸ್ಯೆ ಕಾಡಬಹುದು
- ದೊಡ್ಡ ದೊಡ್ಡ ಕೆಲಸಗಳಿಂದ ಆಕರ್ಷಿತರಾಗುವ ಸಾಧ್ಯತೆ
- ಹೊಸ ಜೀವನದ ಅನುಭವ ಮನೆಗೆ ಅತಿಥಿಗಳ ಆಗಮನ ಸಾಧ್ಯತೆ
- ನಿಮ್ಮ ತೊಂದರೆಗಳೆಲ್ಲಾ ದೂರವಾಗುತ್ತವೆ
- ಶ್ರೀರಾಮನ ಆರಾಧನೆ ಮಾಡಿ
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಸಹೋದ್ಯೋಗಿಗಳ ವರ್ತನೆಯಿಂದ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ
- ಇಂದು ಕುಟುಂಬದಿಂದ ನಿಮ್ಮಗೆ ಬೆಂಬಲ ಸಿಗುತ್ತದೆ
- ಪಿತ್ರಾರ್ಜಿತ ಆಸ್ತಿ ಹಣದಿಂದ ಅನುಕೂಲ ಸಾಧ್ಯತೆ
- ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ
- ನಿಮ್ಮ ಧೈರ್ಯದ ಮಾತುಗಳಿಂದ ಅನುಕೂಲ ಆಗುತ್ತದೆ
- ಕುಲದೇವತಾ ಆರಾಧನೆ ಮಾಡಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಪ್ರೇಮಿಯೊಂದಿಗೆ ಸಮಯ ಕಳೆಯುತ್ತೀರಿ
- ಸಮಾಜದ ಗಣ್ಯರ ಹೆಸರಿನೊಂದಿಗೆ ನಿಮ್ಮ ಹೆಸರು ಬರುತ್ತದೆ
- ವಾಹನದಿಂದ ನಷ್ಟ ಸಾಧ್ಯತೆ ಎಚ್ಚರಿಕೆ ಇರಲಿ
- ಮಾಡಬೇಕಾದ ಕೆಲಸದಿಂದ ದೂರ ಉಳಿದು ನಷ್ಟವಾಗುವ ಸಾಧ್ಯತೆ
- ನಿಮಗಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ದಿನ
- ದುರ್ಗಾ ಪರಮೇಶ್ವರಿಯನ್ನು ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ನಿಮ್ಮ ಯೋಚನೆ ಯೋಜನೆಗಳನ್ನು ರಹಸ್ಯವಾಗಿಡಿ
- ಮನೆಯಲ್ಲಿ ಅವಿವಾಹಿತರಿದ್ದರೆ ಪ್ರಯತ್ನಿಸಿ ಶುಭ ಫಲವಿದೆ
- ಮನೆಯವರಿಗೆಲ್ಲಾ ಆತಂಕ ಸೃಷ್ಟಿಮಾಡಿ ಅವರ ಕೋಪಕ್ಕೆ ಒಳಗಾಗಬಹುದು
- ಇಂದು ತಾಳ್ಮೆಯಿಂದ ಇರುವುದು ಒಳ್ಳೆಯದು
- ನರ ಮೂಳೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
- ಗಣಪತಿ ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಸಗಟು ವ್ಯಾಪಾರಿಗಳಿಗೆ ಶುಭಫಲ
- ಭೂಮಿ ಅಥವಾ ಮನೆಯನ್ನು ಖರೀದಿ ಮಾಡುತ್ತೀರಿ
- ಕೆಲಸದಲ್ಲಿ ವಿಶೇಷವಾದ ಆಸಕ್ತಿ ತೋರಿ ಅನುಕೂಲ ಪಡೆಯುತ್ತೀರಿ
- ವಿದ್ಯಾರ್ಥಿಗಳಿಗೆ ಅಪರೂಪದ ಯಶಸ್ಸು
- ನಿಮ್ಮ ಆತ್ಮೀಯರ ಜೊತೆ ಹೆಚ್ಚು ಕಾಲ ಕಳೆಯುತ್ತೀರಿ
- ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುವ ಸಾಧ್ಯತೆ
- ಸೂರ್ಯನಾರಯಣನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us