Advertisment

ಒಳ್ಳೆ ಕೆಲಸಕ್ಕೆ ಕೈ ಹಾಕಿದ್ರೆ ಶುಭ ಫಲ.. ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳಲ್ಲೂ ಯಶಸ್ಸು; ಇಲ್ಲಿದೆ ಇಂದಿನಿ ಭವಿಷ್ಯ!

ಹಲವು ದಿನದ ಕನಸು ನನಸಾಗಲಿದೆ. ಸಮಾಜಮುಖಿಯಾಗಿ, ಸಾರ್ವಜನಿಕವಾಗಿ ಸಮಾಜದ ಉದ್ಧಾರಕ್ಕೋಸ್ಕರ ಮಾಡುವ ಕೆಲಸ ಯಶಸ್ಸನ್ನು ಕೊಡಲಿದೆ. ತಂತ್ರಜ್ಞಾನವಿರಬಹುದು ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ. ಗೌರವ ಪುರಸ್ಕಾರಗಳಿಗೆ ಭಾಜನರಾಗುತ್ತೀರಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು,ಆಶ್ವಯುಜ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಧನಿಷ್ಠ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಸಂಸ್ಥೆ, ಪ್ರಕಾಶನ, ಚಲನಚಿತ್ರಗಳಲ್ಲಿ ನಿರ್ವಹಣ ಕೆಲಸ ಮಾಡುತ್ತಿರುವವರಿಗೆ ಲಾಭ ಹೆಚ್ಚು
  • ನಿಮ್ಮ ಪ್ರತಿಭೆಗೆ  ಪುರಸ್ಕಾರ ದೊರೆಯುವ ದಿನ
  • ಆರ್ಥಿಕವಾಗಿಯೂ ಅನುಕೂಲಕರವಾದ ದಿವಸ
  • ನಿಮ್ಮ ವೃತ್ತಿಯ ನಿಮಿತ್ತವಾಗಿ ದೂರದೂರಿಗೆ ಪ್ರಯಾಣ ಮಾಡಲು ಅವಕಾಶವಿರಲಿದೆ 
  • ಸಂಬಂಧಿಕರಿಂದ ಶುಭವಾರ್ತೆ ಬರಲಿದೆ
  • ಪಶು ಪಕ್ಷಿಗಳಿಗೆ ಆಹಾರ ನೀರು ಕೊಡಿ ಶುಭ   

ವೃಷಭ

RASHI_BHAVISHA_VRSHABA

  • ಕೋಪ ನಿಯಂತ್ರಣದಲ್ಲಿರಬೇಕು 
  • ಪರಸ್ಪರವಾಗಿ ವಿವಾಹವಾಗದಿದ್ದವರ ವಿಚಾರದಲ್ಲಿ ಸಹಾಯ ಮಾಡಿದರೆ ನೀವು ಕಷ್ಟಕ್ಕೆ ಸಿಲುಕುತ್ತೀರಿ 
  • ಅವಮಾನ ಆಗಬಹುದು ಜಾಗ್ರತೆವಹಿಸಿ
  • ಯಾರಿಗೂ ಮನಸ್ಸಿಗೆ ನೋವಾಗದಂತೆ ವರ್ತಿಸಿ
  • ವಿಕಲ ಚೇತನರಿಗೆ ಹಣ್ಣನ್ನು ನೀಡಿ
Advertisment

ಮಿಥುನ

RASHI_BHAVISHA_MITHUNA

  • ಒಳ್ಳೆಯ ಕೆಲಸಕ್ಕೆ ಕೈ ಹಾಕಿದರೂ ಶುಭಫಲಗಳಿವೆ 
  • ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳೂ ಇಂದು ಸಡಿಲ ಆಗಲಿದೆ
  • ಇಂದು ತುಂಬಾ ಕಾರ್ಯನಿರತರಾಗಿರುತ್ತೀರಿ
  •  ನೀವು ಬಿಡುವಿಲ್ಲದ ಕಾರ್ಯಕ್ರಮಗಳನ್ನು ಒತ್ತಡಗಳನ್ನು ನೋಡಿ ಸ್ನೇಹಿತರು ಕುಟುಂಬದವರು
  • ಸಂತೋಷ ಪಡುತ್ತಾರೆ
  • ಪರಶುರಾಮನನ್ನು ಸ್ಮರಿಸಿ 

ಕಟಕ

RASHI_BHAVISHA_KATAKA

  • ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
  • ಯಾವುದೇ ಸಂದರ್ಭದಲ್ಲೂ ಉದ್ವಿಗ್ನಕ್ಕೆ ಒಳಗಾಗಬಾರದು
  • ಆತುರವಾಗಿ ನಿರ್ಧಾರವನ್ನು ಮಾಡಬೇಡಿ
  •  ಉದ್ವಿಗ್ನ ಪರಿಸ್ಥಿತಿ ಏರ್ಪಾಟ್ಟಾಗ ನಿಮ್ಮಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ
  • ಸ್ವಾರ್ಥಿಗಳು ನಿಮ್ಮ ಹಿಂದೆ ಮುಂದೆ ಸುತ್ತುತ್ತಿರುತ್ತಾರೆ
  • ಅವರ ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಳ್ಳಬೇಡಿ
  • ಹಣದ ವಿಚಾರದಲ್ಲಿ ಎಚ್ಚರಿಕೆಯಿರಲಿ
  • ಧನಲಕ್ಷ್ಮಿ ಪ್ರಾರ್ಥನೆ ಮಾಡಿ

ಸಿಂಹ 

RASHI_BHAVISHA_SIMHA

  • ಒಳ್ಳೆಯ ವಿಚಾರಗಳಿಂದ ಶುಭ ಸುದ್ದಿಗಳಿಂದ ಆರಂಭವಾಗುತ್ತದೆ
  • ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗುತ್ತದೆ
  • ಮನೆಯವರ ಸಂತೋಷ ದೊಡ್ಡವರ ಪ್ರೀತಿ ಹಾರೈಕೆ ಚಿಕ್ಕಮಕ್ಕಳ ಮುದ್ದು ಧನಾತ್ಮಕವಾಗಿ ಸಿಗಲಿದೆ
  • ತುಂಬಾ ಅದೃಷ್ಟಶಾಲಿ ಎಂಬ ಭಾವ ನಿಮಗಾಗುತ್ತದೆ
  • ಯಥೇಚ್ಛ ಹಣವನ್ನು ಖರ್ಚು ಮಾಡುತ್ತೀರಿ
  • ಇದೇ ರೀತಿ ಸದಾಕಾಲ ಆನಂದವಾಗಿರಿ
  • ಶುಭವಾಗಲಿ
Advertisment

ಕನ್ಯಾ

RASHI_BHAVISHA_KANYA

  • ಆರೋಗ್ಯ ಸಮಸ್ಯೆ ಉಂಟಾಗಬಹುದು
  • ಹಿಂದೆ ಸೇವಿಸಿದ ಆಹಾರದಿಂದ ವಿಷಾಹಾರವಾಗಿ ಸಮಸ್ಯೆಯಾಗಬಹುದು
  • ಮನೆಯಲ್ಲಿಯ ಔಷಧಿಯಿಂದ ಗುಣವಾಗುತ್ತದೆ
  • ಆದಷ್ಟು  ಮನೆಮದ್ದನ್ನು ಮಾಡಿ ಗುಣಮುಖರಾಗಿರಿ
  • ಈ ದಿನ ಅಗತ್ಯವಾಗಿ ವಿಶ್ರಾಂತಿ ಮಾಡಿ
  • ಅಗತ್ಯಬಿದ್ದರೆ ಮಾತ್ರ ರಕ್ತಪರೀಕ್ಷೆ ಮಾಡಿಸಿಕೊಳ್ಳಿ
  • ಮೂಕಾಂಬಿಕ ದೇವಿಯನ್ನು ಪ್ರಾರ್ಥನೆ ಮಾಡಿ 

ತುಲಾ

RASHI_BHAVISHA_TULA

  • ಮನೆಯವರು ತೆಗೆದುಕೊಂಡ ಒಂದು ನಿರ್ಧಾರ ಇಡೀ ಕುಟುಂಬವನ್ನು ಅಲ್ಲೋಲ ಕಲ್ಲೋಲ ಮಾಡಲಿದೆ
  • ನೀವು ಜಗಳ ಬೈಗುಳಗಳಿಗೆ ಅವಕಾಶ ಆಗದಂತೆ ಎಚ್ಚರವಹಿಸಿ
  • ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ 
  • ಇದರ ಪರಿಣಾಮ ಮಕ್ಕಳ ಮೇಲೆ ಬೀರಲಿದೆ
  •  ಶಾಂತತೆಯನ್ನು ಕಾಪಾಡಿಕೊಳ್ಳುವ ಸಂದರ್ಭಗಳು ಹೆಚ್ಚಿನ ಒತ್ತಡಗಳನ್ನು ತರಲಿದೆ
  • ಒಟ್ಟಾರೆ ಮನೆ ರಣರಂಗವಾಗುತ್ತದೆ
  • ಇದೆಲ್ಲವನ್ನೂ ತಡೆದು ಶಾಂತಿಯನ್ನು ಕಾಪಾಡಿ
  • ಕೆಂಪು ಹೂವಿನಿಂದ ಕಾಳಿಯನ್ನು ಅರ್ಚಿಸಿ  

ವೃಶ್ಚಿಕ

RASHI_BHAVISHA_VRUSHCHIKA

  • ಅತಿ ಮುಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಹಾಳಾಗುತ್ತದೆ
  • ಅಗೌರವ ಹಣದ ನಷ್ಟ ಉಂಟಾಗಬಹುದು
  • ಎಲ್ಲಾ ರೀತಿಯ ಆಗಬಾರದ ನಷ್ಟಗಳು ನಿಮ್ಮ ಹೆಗಲೇರುತ್ತದೆ 
  • ಅನಗತ್ಯ ಗೊಂದಲಕ್ಕೆ ಒಳಗಾಗುತ್ತೀರಿ
  • ಮಾತೆಯರು ವಿಶೇಷವಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಹೇಳಿಕೊಳ್ಳದಿದ್ದರೆ ಉತ್ತಮ
  • ಹಿಂದಿನ ಯಾವುದೊ ವಿಚಾರ ಕುಟುಂಬದಲ್ಲಿ ಅಶಾಂತಿಗೆ ಕಾರಣ ಆಗುತ್ತೀರಿ
  • ನಿಮಗೂ ಮನೆಯಲ್ಲಿ ಇರುವವರಿಗೂ ನೆಮ್ಮದಿ ಇಲ್ಲದೆ ಆಗುತ್ತದೆ
  • ಈಶ್ವರನನ್ನು ಪ್ರಾರ್ಥನೆ ಮಾಡಿ 
Advertisment

ಧನುಸ್ಸು

RASHI_BHAVISHA_DHANASU

  • ನಿಮ್ಮ ಹಲವು ದಿನದ ಕನಸು ನನಸಾಗಲಿದೆ
  • ಸಮಾಜಮುಖಿಯಾಗಿ ಸಾರ್ವಜನಿಕವಾಗಿ ಸಮಾಜದ ಉದ್ಧಾರಕ್ಕೋಸ್ಕರ ಮಾಡುವ ಕೆಲಸ ಯಶಸ್ಸನ್ನು ಕೊಡಲಿದೆ
  • ತಂತ್ರಜ್ಞಾನವಿರಬಹುದು ಅಥವಾ ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ
  •  ಗೌರವ ಪುರಸ್ಕಾರಗಳಿಗೆ ಭಾಜನರಾಗುತ್ತೀರಿ
  • ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು
  • ಆದಷ್ಟು ಲ್ಯಾಪ್ ಟಾಪ್ ಮೊಬೈಲ್ ಬಳಕೆಯನ್ನು ಅಗತ್ಯವಿದ್ದಷ್ಟು ಬಳಸಿ
  • ವಿನಾಕಾರಣ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಜಾಗ್ರತೆ ಇರಲಿ
  • ಅಶ್ವಿನಿ ದೇವತೆಗಳನ್ನು ಸ್ಮರಿಸಿ

ಮಕರ

RASHI_BHAVISHA_MAKARA

  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಸರ್ಕಾರದಿಂದ ಹರಾಜಾಗುವ ಭೂಮಿ, ವಾಹನ ಖರೀದಿಯಲ್ಲಿ ಭಾಗವಹಿಸುವ ಯೋಗವಿದೆ
  • ಭೂಮಿ ಖರೀದಿಗೆ ಮುಂದುವರೆಯಿರಿ
  • ವಾಹನವಾದರೆ  ಖಂಡಿತಾ ಬೇಡ ಅದರಿಂದ ತೊಂದರೆಯಾಗಬಹುದು
  • ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಲಾಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನು ಅಗತ್ಯವಾಗಿ ಮಾಡಿ
  • ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಲ್ಲಿ ತೊಂದರೆಯನ್ನುಂಟು ಮಾಡಿಕೊಳ್ಳುತ್ತೀರಿ
  • ಸರಿ ತಪ್ಪು ತಿಳಿದ ನಂತರ ಪಶ್ವಾತ್ತಾಪ ಪಡುತ್ತೀರಿ 
  • ಅವಮಾನ ಆಗಬಹುದು ಸರಿಯಾದ ತಿಳುವಳಿಕೆ ಇರಲಿ
  • ಅತಿಯಾದ ಆತ್ಮವಿಶ್ವಾಸ ಬೇಡ
  • ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ
Advertisment

ಮೀನ

RASHI_BHAVISHA_MEENA

  • ನಿಮ್ಮ ಸ್ವಭಾವ,ಸಿಟ್ಟು, ನಡವಳಿಕೆ,ಜುಗ್ಗತನದಿಂದ ಬಂಧುಗಳು ಮನೆಯವರು ಸ್ನೇಹಿತರು ಬೇಸರ ಪಡುತ್ತಾರೆ 
  • ರಾಜಕಾರಣಿಗಳೊಂದಿಗೆ ಉತ್ತಮ ದಿನ
  • ವಿನಾಕಾರಣ ಬೇರೆ ರೀತಿ ವರ್ತನೆ ಮಾಡಿ ಸಿಕ್ಕಿ ಹಾಕಿಕೊಳ್ಳಬೇಡಿ
  • ಸಾಕು ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ
  • ಕಾಲಭೈರವನ ಆರಾಧನೆ ಮಾಡಿ
       

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Bangalore Kannada News Horoscope
Advertisment
Advertisment
Advertisment