Advertisment

ಹೊಸ ಉದ್ಯೋಗ ಅಥವಾ ವೃತ್ತಿ ಆರಂಭಿಸಲು ಶುಭದಿನ.. ಪ್ರಯಾಣವೂ ಸುಖಕರ; ಇಲ್ಲಿದೆ ಇಂದಿನ ಭವಿಷ್ಯ!

ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅನಾನುಕೂಲ ಸಾಧ್ಯತೆ, ದೂರ ಪ್ರಯಾಣದ ವಿಚಾರವಾಗಿ ಮಾತುಕತೆ ನಡೆಯಬಹುದು. ಅಧಿಕ ಖರ್ಚಿರುತ್ತೆ, ಆದರೆ ಖರ್ಚನ್ನ ನಿಭಾಯಿಸುವ ಶಕ್ತಿ ಕೂಡ ಇರುತ್ತದೆ. ಸ್ವಲ್ಪ ಸಂತೋಷ ಸ್ವಲ್ಪ ಬೇಸರ ಇರುವ ದಿನ. ನಿಮ್ಮ ಆಹಾರದ ಬಗ್ಗೆ ಜಾಗ್ರತೆವಹಿಸಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಪ್ರತಿಪತ್ (ಬಿದಿಗೆ)ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ  12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಖಾಸಗಿ ಉದ್ಯೋಗಿಗಳಿಗೆ ಬದಲಾವಣೆಯ ಭಯ 
  • ಹಣದಿಂದ ಜನರು ಗೌರವಿಸುವ ಸಾಧ್ಯತೆ 
  • ಇಂದು ನಿಮ್ಮ ಮಾತು ಕೋಪದಿಂದ ಕೆಲಸವಾಗಬಹುದು
  • ತುಂಬಾ ಬುದ್ದಿವಂತರರಾದ ನೀವು ಮೋಸಹೋಗುವ ಸಾಧ್ಯತೆ
  • ಸ್ಪರ್ಧಾತ್ಮಕ ವಿಚಾರಗಳಿಗೆ ಶುಭದಿನ
  • ನಿಮ್ಮ ಆಲೋಚನೆಗಳು ಕುಟುಂಬದ ಮಧ್ಯದಲ್ಲಿರಲಿ
  •  ಶ್ರೀರಾಮನನ್ನು ಪ್ರಾರ್ಥನೆ ಮಾಡಿ  

ವೃಷಭ

RASHI_BHAVISHA_VRSHABA

  • ಸಹೋದರರಲ್ಲಿ ವಿವಾದ, ಕಲಹ ಬೇಡ
  • ವ್ಯವಹಾರದಲ್ಲಿ ನಿಮ್ಮ ಜಾಗ್ರತೆ ಬೇರೆಯವರಿಗೆ ಮಾದರಿ
  • ಆರೋಗ್ಯ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
  • ಅನಿವಾರ್ಯವಾಗಿ ಪ್ರಯಾಣ ಸಾಧ್ಯತೆ ಆದರೆ ಶುಭಕರವಿಲ್ಲ
  • ಯಾವುದೇ ವಿಚಾರಗಳನ್ನು ಲಘುವಾಗಿ ಪರಿಗಣಿಸಬೇಡಿ
  • ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇದ್ದರೂ ದ್ರೋಹ ಅಥವಾ ಮೋಸ ಸಾಧ್ಯತೆ
  • ಬಿಳಿ ಎಕ್ಕದ ಗಿಡಕ್ಕೆ ಪೂಜೆ ಮಾಡಿ ,12 ಪ್ರದಕ್ಷಿಣೆ ಹಾಕಿ 
Advertisment

ಮಿಥುನ

RASHI_BHAVISHA_MITHUNA

  • ಹಳೆಯ ವಿಚಾರ ಪ್ರಸ್ತಾಪವಾಗಿ ಬೇಸರ ಸಾಧ್ಯತೆ
  • ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ
  • ಸ್ನೇಹ ಮಿತ್ರತ್ವಕ್ಕೆ ಬೆಲೆ ಸಿಗಬಹುದು ಅದರಿಂದ ನೆಮ್ಮದಿ ಕೂಡ ಸಿಗುವ ದಿನ
  • ಪ್ರೇಮಿಗಳಿಗೆ ತೊಂದರೆಯಾಗುವ ಸಾಧ್ಯತೆ
  • ಹೊಸ ಉದ್ಯೋಗ ಅಥವಾ ವೃತ್ತಿ ಆರಂಭಿಸಲು ಶುಭದಿನ
  • ಪ್ರಯಾಣವು ಕೂಡ ಸುಖಕರವಾಗಿರಬಹುದು
  •  ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಕಟಕ

RASHI_BHAVISHA_KATAKA

  • ಯಾವುದೋ ತೊಂದರೆಯಿದೆ ಎಂದು ಮನಸ್ಸಿನಲ್ಲಿ ಭಯ ಸಾಧ್ಯತೆ
  • ವಿನಾಕಾರಣ ಕುಟುಂಬ ಕಲಹ ಸಾಧ್ಯತೆ
  • ಇಂದು ಜೀವ ಭಯವಾಗುವಂತ ಯಾವುದೇ ಘಟನೆ ನಡೆಯುವುದಿಲ್ಲ ಭಯ ಬೇಡ
  • ಸಣ್ಣ-ಸಣ್ಣ ಸಮಸ್ಯೆಗಳು ಮನಸ್ಸಿನಲ್ಲಿ ಭಯ ಹುಟ್ಟಿಸಬಹುದು
  • ಇಂದು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬೇಸರ ಉಂಟು ಮಾಡಬಹುದು
  • ವ್ಯವಹಾರಿಕವಾದ ಅಡೆತಡೆಗಳು ನಿಮ್ಮ ಮುಂದೆ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಸಿಂಹ 

RASHI_BHAVISHA_SIMHA

  • ಹೂ ಬೆಳೆಗಾರರಿಗೆ ನಷ್ಟ ಸಾಧ್ಯತೆ
  • ಸಾಯಂಕಾಲ ಶುಭ ಸುದ್ದಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ
  • ಕೌಟುಂಬಿಕ ಸಂಬಂಧದಲ್ಲಿ ವಿಶ್ವಾಸವಿರಲಿ
  • ಮನೆಯ ಸದಸ್ಯರಿಗೆ ಅಧ್ಯಾತ್ಮದ ವಿಚಾರಗಳ ಬಗ್ಗೆ ತಿಳುವಳಿಕೆ ಹೇಳಿ
  • ಪ್ರಾಯೋಗಿಕವಾದ ಕೆಲಸಕ್ಕೆ ಆದ್ಯತೆ ನೀಡಿ
  • ಕೆಲವು ಅನುಮಾನಾಸ್ಪದ ವಾತಾವರಣ ನಿರ್ಮಾಣವಾಗಬಹುದು
  •  ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
Advertisment

ಕನ್ಯಾ

RASHI_BHAVISHA_KANYA

  • ನಿಮ್ಮ ದೌರ್ಬಲ್ಯ ನಿಮ್ಮ ನಿಯಂತ್ರಣದಲ್ಲಿರಲಿ
  • ನಿರೀಕ್ಷಿಸಿದ ವಿಚಾರಗಳಿಗೆ ಸಂಪೂರ್ಣವಾದ ಸಹಾಯ, ಭರವಸೆ ಸಿಗಬಹುದು
  • ವೃತ್ತಿ ಮತ್ತು ಕೆಲಸದ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಬಹುದು
  • ವಿನಾಕಾರಣ ಬೇರೆಯವರೊಂದಿಗೆ ನಿಷ್ಠೂರ ಬೇಡ
  • ದೊಡ್ಡವರ ಸಂಪರ್ಕ ಮತ್ತು ಅವರ ಮಾತು ಸಮಾಧಾನ ಕೊಡುವ ಸಾಧ್ಯತೆ
  • ನಿಮ್ಮ ಜವಾಬ್ದಾರಿಯುತ ಕೆಲಸಕ್ಕೆ ಮುಂಗಡ ಹಣ ಸಿಗಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ತುಲಾ

RASHI_BHAVISHA_TULA

  • ಆರ್ಥಿಕ ಸಂಕಷ್ಟ ಕಾಡುವ ಸಾಧ್ಯತೆ
  • ದಾಂಪತ್ಯ ವಿಚಾರದಲ್ಲಿ ವಿರಸ ಸಾಧ್ಯತೆ
  • ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲ್ಪಡುವ ದಿನ
  • ಬಡ್ಡಿ ವ್ಯವಹಾರ ಮಾಡುವವರಿಗೆ ಇಂದು ಹಿನ್ನಡೆ ಸಾಧ್ಯತೆ
  • ಮನೆಯ ಅಗತ್ಯ ವಸ್ತುಗಳ ಖರೀದಿಯಿಂದ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
  • ವೃತ್ತಿಪರರಿಗೆ ಹೆಚ್ಚು ಅನುಕೂಲ ಇರುವ ದಿನ
  •  ಐಕ್ಯಮತ್ಯ ಮಂತ್ರ ಜಪಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅನಾನುಕೂಲ ಸಾಧ್ಯತೆ
  • ದೂರ ಪ್ರಯಾಣದ ವಿಚಾರವಾಗಿ ಮಾತುಕತೆ ನಡೆಯಬಹುದು 
  • ಅಧಿಕ ಖರ್ಚಿರುತ್ತೆ ಆದರೆ ಖರ್ಚನ್ನ ನಿಭಾಯಿಸುವ ಶಕ್ತಿ ಕೂಡ ಇರುತ್ತದೆ
  • ಸ್ವಲ್ಪ ಸಂತೋಷ ಸ್ವಲ್ಪ ಬೇಸರ ಇರುವ ದಿನ 
  •  ನಿಮ್ಮ ಆಹಾರದ ಬಗ್ಗೆ ಜಾಗ್ರತೆವಹಿಸಿ
  • ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುವ ದಿನ
  •  ಸರಸ್ವತಿ ಆರಾಧನೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ವಿದೇಶದ ಶುಭ ವಿಚಾರವೊಂದು ಮನಸ್ಸಿಗೆ ಸಂತೋಷ ನೀಡುತ್ತದೆ 
  • ಮಾತಿನಿಂದ ಜನಾಕರ್ಷಣೆ ಸಾಧ್ಯತೆ 
  • ಜವಾಬ್ದಾರಿಗಳ ಪೂರೈಕೆ ಆಗುತ್ತದೆ ಅದರಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
  • ನವ ವಿವಾಹಿತರಿಗೆ ಶುಭ ದಿನ 
  • ವ್ಯಾಪಾರದಲ್ಲಿ ಸವಾಲುಗಳು ಎದುರಾಗಬಹುದು ಆದರೆ ನಿಮ್ಮ ಅನುಭವ ನಿಮಗೆ ಜಯ ತಂದು ಕೊಡುತ್ತದೆ
  • ನೌಕರಿ ಅಥವಾ ವೃತ್ತಿಯಲ್ಲಿ ಗೌರವ ಹೆಚ್ಚಾಗಬಹುದು
  • ಹಿರೀಕರ ಆರ್ಶೀವಾದ ಪಡೆಯಿರಿ

ಮಕರ

RASHI_BHAVISHA_MAKARA

  • ಮಂಗಳಕಾರ್ಯ ಅಥವಾ ಶುಭ ಕಾರ್ಯದ ಬಗ್ಗೆ ಚಿಂತನೆ ಸಾಧ್ಯತೆ
  • ಎರಡನೇ ಬಳಗದ ಅಣ್ಣತಮ್ಮಂದಿರಿಗೆ ತೊಂದರೆ ಸಾಧ್ಯತೆ
  • ಕುಟುಂಬದವರೊಂದಿಗೆ ಸಾಯಂಕಾಲ ಉತ್ತಮ ವಾತಾವರಣವಿರುತ್ತದೆ
  • ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯ ಸಾಧ್ಯತೆ
  • ದಿನದ ಆರಂಭದಲ್ಲಿ ಕೆಲಸದಲ್ಲಿ ಉದಾಸೀನತೆ, ತಾತ್ಸಾರ ಆಲಸ್ಯ ಕಾಣಬಹುದು
  • ನಿಮ್ಮ ಪರಿಶ್ರಮದಿಂದ ಹಲವರಿಗೆ ಲಾಭ ಸಾಧ್ಯತೆ
  • ದುರ್ಗಾರಾಧನೆ ಮಾಡಿ

ಕುಂಭ

RASHI_BHAVISHA_KUMBHA

  • ಮನೆಯಿಂದ ಹೊರಗಿದ್ದಾಗ ಖುಷಿಯಾಗಿರುವ ಸಾಧ್ಯತೆ
  • ಪ್ರಯಾಣವು ಕೂಡ ಇಷ್ಟವಾಗಬಹುದು
  • ಮನೋರಂಜನೆಯ ದಿನವಾದರೂ ಸಂತೋಷ ಕಡಿಮೆ
  • ದಾಂಪತ್ಯದಲ್ಲಿ ಹೊಂದಾಣಿಕೆ ಬೇಕಾಗಬಹುದು
  • ಅನೇಕ ಯೋಚನೆಗಳು ಒಟ್ಟಿಗೆ ಬರಬಹುದು
  • ಸ್ನೇಹಿತರ ಜೊತೆ ವಿವಾದಗಳು ಉಂಟಾಗಬಹುದು
  • ಕುಲದೇವತಾ ಪ್ರಾರ್ಥನೆ ಮಾಡಿ
Advertisment

ಮೀನ

RASHI_BHAVISHA_MEENA

  • ಮಕ್ಕಳ ವಿಚಾರದಲ್ಲಿ ಸಮಸ್ಯೆ, ತೊಂದರೆ ಕಾಡಬಹುದು ಎಚ್ಚರಿಕೆ ಇರಲಿ
  • ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಸಾಧ್ಯತೆ
  • ಮೂಳೆಗೆ ಸಂಬಂಧಿಸಿದ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  • ಜನರ ಪರ ಕೆಲಸದಿಂದ ಹೊಗಳಿಕೆ ಸಾಧ್ಯತೆ
  • ಹಿರಿಯರ ಅಭಿಪ್ರಾಯ, ಮಾರ್ಗದರ್ಶನವನ್ನ ನಿರ್ಲಕ್ಷ್ಯ ಮಾಡಬೇಡಿ
  • ಇಂದು ಯಾವುದೇ ಹೊಸ ಕೆಲಸ ಆರಂಭಿಸುವುದು ಬೇಡ
  • ಕುಟುಂಬದಲ್ಲಿ ಸಂತೋಷ ವಿರುತ್ತದೆ ಅದನ್ನ ಹಾಗೆ ಕಾಪಾಡಿ
  • ಧನ್ವಂತರಿಯನ್ನು ಆರಾಧನೆ ಮಾಡಿ
        

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Horoscope Rashi Bhavishya News First Digital News First Web
Advertisment
Advertisment
Advertisment