/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಪುನರ್ವಸೂ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ಸ್ನೇಹಿತರ ಮನೆಯಲ್ಲಿ ಶುಭ ಸುದ್ದಿ ಸಿಗಲಿದೆ
- ತಂತ್ರಜ್ಞಾನದ ವಿಚಾರದಲ್ಲಿ ಕೊರತೆ ಉಂಟಾಗಬಹುದು
- ಆರ್ಥಿಕ ಸಮಸ್ಯೆ ಕಾಡಬಹುದು
- ನಿಮ್ಮ ಜೀವನ ಶೈಲಿಯಿಂದ ಬೇರೆಯವರಿಗೆ ಬೇಸರದ ದಿನ
- ಈ ದಿನ ನಿಮಗೆ ಅಧಿಕ ಕೋಪ ಇರಲಿದೆ
- ನಿಮ್ಮ ಕಾರ್ಯ ವೈಖರಿಯನ್ನು ನೋಡಿ ಪ್ರಶಂಸೆ ಮಾಡುತ್ತಾರೆ
- ಅಮೃತ ಮೃತ್ಯುಂಜಯನನ್ನು ಜಪ ಮಾಡಿ
ವೃಷಭ
- ತಾಯಿಯವರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು
- ನಿಜವಾದ ಸ್ನೇಹಿತರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಾರೆ
- ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಸಹೋದರರಲ್ಲಿ ಕಲಹ ವಾದ-ವಿವಾದಗಳು ನಡೆಯಬಹುದು
- ನಿಮ್ಮ ಪ್ರಮುಖ ನಿರ್ಧಾರಕ್ಕೆ ಅಡ್ಡಿಯಾಗಲಿದೆ
- ಕೆಲಸ ಮುಂದೂಡುವುದರಿಂದ ಬೇಸರ ಆಗಬಹುದು
- ಕುಬೇರನನ್ನು ಪ್ರಾರ್ಥಿಸಿ
ಮಿಥುನ
- ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಬಹುದು
- ನಿಮ್ಮ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ
- ತಾಳ್ಮೆಯಿರಲಿ ಇಂದು ನಕಾರಾತ್ಮಕ ಆಲೋಚನೆಗಳು ಬೇಡ
- ನಿಮ್ಮ ವೇಗಕ್ಕೆ ಬೇರೆಯವರು ಸಹಕರಿಸುವುದಿಲ್ಲ
- ಆತುರದ ನಿರ್ಧಾರ ಒಳ್ಳೆಯದಲ್ಲ
- ಆಯಾಸದಿಂದ ಆರೋಗ್ಯದ ಸಮಸ್ಯೆ ಕಾಡಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ
ಕಟಕ
- ಮನೆ ವೃತ್ತಿಯಲ್ಲಿ ಅನಾನುಕೂಲ
- ದೊಡ್ಡವರ ಮಾತನ್ನ ನಿರ್ಲಕ್ಷ ಮಾಡಬೇಡಿ
- ಪ್ರಯಾಣದಲ್ಲಿ ಆಯಾಸ ಆಗಲಿದೆ
- ಮಾನಸಿಕವಾಗಿ ದೃಢರಾಗಿರುತ್ತೀರಿ
- ಆಸ್ತಿ ವಿಚಾರಕ್ಕಾಗಿ ಮಾತುಕತೆ ನಡೆಯಬಹುದು
- ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು
- ಭೂವರಾಹನನ್ನು ಪ್ರಾರ್ಥಿಸಿ
ಸಿಂಹ
- ಆರೋಗ್ಯ ಸಮಸ್ಯೆ ಇರುವವರಲ್ಲಿ ಚೇತರಿಕೆ ಕಾಣಲಿದೆ
- ಕೆಲಸದಲ್ಲಿ ತುಂಬಾ ಒತ್ತಡದ ದಿನ
- ಮಕ್ಕಳಿಂದ ಅಸಮಾಧಾನ ಇದೆ
- ಹಳೆಯ ನೆನಪು ಇಂದು ನಿಮಗೆ ಕಣ್ಣೀರು ತರಿಸಬಹುದು
- ಮಾನಸಿಕ ಖಿನ್ನತೆಗೆ ಒಳಗಾಗುತ್ತೀರಿ
- ವಿವಾಹ ವಿಚಾರ ಪ್ರಸ್ತಾಪ ಮಾಡಿ ಜಗಳ ಮಾಡಿಕೊಳ್ಳುತ್ತೀರಿ
- ಸ್ವಯಂವರ ಪಾರ್ವತಿ ದೇವಿಯನ್ನು ಪ್ರಾರ್ಥಿಸಿ
ಕನ್ಯಾ
- ಆತಂಕ ಹೆಚ್ಚಾಗಿ ಕರ್ತವ್ಯದಲ್ಲಿ ಅಸ್ತವ್ಯಸ್ತ ಆಗಲಿದೆ
- ಜವಾಬ್ದಾರಿ ಸರಿಯಾಗಿ ನಿರ್ವಹಿಸಲು ಆಗುವುದಿಲ್ಲವೇನೋ ಅನ್ನೋ ಆತಂಕಕ್ಕೆ ಸೃಷ್ಠಿಯಾಗುತ್ತೀರಿ
- ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ
- ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು
- ಮಕ್ಕಳ ಪ್ರಗತಿ ಪೋಷಕರಿಗೆ ಸಂತೋಷ ಸಿಗಲಿದೆ
- ಕುಟುಂಬದಲ್ಲಿ ಮಂಗಳಕಾರ್ಯದ ಚರ್ಚೆಯಾಗಬಹುದು
- ಅನಗತ್ಯ ಮಾತು ಹಾಸ್ಯ ಬೇಡ ಅಪಮಾನ ಆಗಬಹುದು
- ಲಲಿತಾ ಸಹಸ್ರನಾಮ ಪಠಿಸಿ
ತುಲಾ
- ಪ್ರೇಮಿಗಳಿಗೆ ಶುಭದಿನ
- ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
- ಇಂದು ನೀವು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ
- ಮಕ್ಕಳಿಂದ ತೊಂದರೆಯಾಗುವುದರಿಂದ ದೂರವಾಗುತ್ತೀರಿ
- ಹಣದ ಅಡಚಣೆ ಆಗಲಿದೆ
- ವಿದ್ಯಾರ್ಥಿಗಳಿಗೆ ಶುಭದಿನ
- ಮರಗೆಲಸ ಮಾಡುವವರಿಗೆ ಲಾಭದ ದಿನ
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಯಾವುದೇ ಆತುರದ ನಿರ್ಧಾರ ಮಾಡಬೇಡಿ
- ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ಅವರ ವೃತ್ತಿಯಲ್ಲಿ ಯಶಸ್ಸಿದೆ
- ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
- ಅತಿಯಾದ ಕೋಪದಿಂದ ನಿಷ್ಠೂರ ಆಗಬಹುದು
- ವೃತ್ತಿಯಲ್ಲಿ , ನೌಕರಿಯಲ್ಲಿ ಕಿರುಕುಳ ಆಗಲಿದೆ
- ಲಕ್ಷ್ಮಿನಾರಾಯಣ ಉಪಾಸನೆ ಮಾಡಿ
ಧನುಸ್ಸು
- ಕಷ್ಠಪಟ್ಟು ಮಾಡಿದ ಕೆಲಸ ಫಲಕೊಡುವುದಿಲ್ಲ
- ಹಿರಿಯರ ಆಸ್ತಿ ವಿಚಾರದಲ್ಲಿ ಕಲಹ ಆಗಬಹುದು
- ದೊಡ್ಡ ದೊಡ್ಡ ಆಲೋಚನೆಗಳಿರುತ್ತವೆ
- ಮನೆಯಲ್ಲಿ ಆಶಾಂತಿಯ ವಾತಾವರಣ
- ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಅವಮಾನ ಆಗಬಹುದು
- ಕರ್ತವ್ಯ ನಿರ್ವಹಣೆ ನಿಯಮ ಬದ್ದವಾಗಿರಲಿ
- ಈಶ್ವರನ ಆರಾಧನೆ ಮಾಡಿ
ಮಕರ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಹಣ ಖರ್ಚು ಆಗುವುದರಿಂದ ಬೇಸರ ಆಗಬಹುದು
- ಸಣ್ಣ ಬದಲಾವಣೆಯಾಗುವುದರಿಂದ ಉದೋಗ್ಯದಲ್ಲಿ ಗೊಂದಲ ಆಗಬಹುದು
- ಶತ್ರುಗಳು ಮಿತ್ರರು ಆಗುವ ದಿನ
- ಮಕ್ಕಳ ವಿಚಾರದಲ್ಲಿ ತುಂಬಾ ಅನುಕೂಲವಿದೆ
- ಅಣ್ಣ ತಮ್ಮಂದಿರಲ್ಲಿ ಕಲಹ ಆಗಲಿದೆ
- ವಿಷ್ಣು ಸಹಸ್ರನಾಮ ಪಠಿಸಿ
ಕುಂಭ
- ದಾಂಪತ್ಯದಲ್ಲಿ ವೈಮನಸ್ಸು ದೂರವಾಗುತ್ತದೆ
- ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ
- ನೌಕರಿಯ ಸ್ಥಳದಲ್ಲಿ ಹಲವಾರು ಚರ್ಚೆಗಳು ಆಗಬಹುದು
- ಮನೆಯಲ್ಲಿ ಸಮಾಧಾನವಿರುವುದಿಲ್ಲ
- ಮಕ್ಕಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿಯಿದೆ
- ಮನೆದೇವರಿಗೆ ತುಪ್ಪದ ದೀಪ ಹಚ್ಚಿ
ಮೀನ
- ಕಚೇರಿಯಲ್ಲಿ ನೀವು ನಿಂದನೆಗೆ ಒಳಗಾಗುತ್ತೀರಿ
- ಷೇರು ಮಾರುಕಟ್ಟೆಯಲ್ಲಿ ಲಾಭವಿದೆ
- ವ್ಯಾವಹಾರಿಕ ವಿಚಾರಗಳನ್ನು ಮನೆಯಲ್ಲಿ ವಿನಿಮಯ ಮಾಡಿಕೊಳ್ಳಿ
- ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಆಗಲಿದೆ
- ಆರೋಗ್ಯದ ಬಗ್ಗೆ ಗಮನಹರಿಸಿ
- ವಿದೇಶದಿಂದ ಶುಭವಾರ್ತೆ ಕೇಳಬಹುದು
- ಇಷ್ಟ ದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ