/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಜೇಷ್ಠಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಕುಟುಂಬದಲ್ಲಿನ ಸಮಸ್ಯೆಯನ್ನ ಅರ್ಥಮಾಡಿಕೊಳ್ಳದೆ ಜಗಳ ಆಗಬಹುದು
- ಹೊಸ ಕೆಲಸಗಳಿಗೆ ಸ್ಫೂರ್ತಿ ಸಿಗಲಿದೆ
- ಮನೆ ಕಟ್ಟುವ ವಿಚಾರದಲ್ಲಿ ದೀರ್ಘ ಸಮಾಲೋಚನೆ ಮಾಡುತ್ತೀರಿ
- ಪ್ರೇಮಿಗಳಲ್ಲಿ ದ್ವೇಷ ಬೇರೆಯಾಗುವ ಸಂಭವ ಹೆಚ್ಚು
- ನಿಮಗಿಂತ ಕಿರಿಯರಿಗೆ ಸಹಾಯ ಮಾಡಬಹುದು
- ಹೆಚ್ಚು ಖರ್ಚಿನಿಂದ ಬೇಸರ ಕಲಹ ಅಗಬಹುದು
- ಚಂಡಿಕಾಪಾರಾಯಣ ಮಾಡಿಸಿ
ವೃಷಭ
- ಕಲೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತೀರಿ
- ಆಧ್ಯ್ಮಾತಿಕ ಪ್ರಭಾವ ನಿಮ್ಮನ್ನು ಬೆರಗುಗೊಳಿಸುತ್ತದೆ
- ದೊಡ್ಡ ಜವಾಬ್ದಾರಿ ನಿಭಾಯಿಸುವುದರಲ್ಲಿ ಯಶಸ್ಸು
- ಹಲವು ಕೆಲಸಗಳು ನಿಮ್ಮಿಂದ ನಡೆಯುತ್ತದೆ
- ಹಿರಿಯರ ಮಾರ್ಗದರ್ಶನ ನಿಮಗೆ ದೀವಟಿಗೆ
- ಕೆಲಸದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ ಗೌರವ ಸಿಗಲಿದೆ
- ಶಿವಾರಾಧನೆ ಮಾಡಿ
ಮಿಥುನ
- ನಿಮ್ಮ ಆಲೋಚನೆಗಳಲ್ಲಿ ಏರುಪೇರು ಆಗಬಹುದು
- ನೌಕರಿ ವೃತ್ತಿಯಲ್ಲಿ ಅವಮಾನವಾಗಬಹುದು
- ನಿಮ್ಮ ಶಕ್ತಿಮೀರಿ ಕೆಲಸಮಾಡಿ ಒಳ್ಳೆಯದಾಗಲಿದೆ
- ವ್ಯಾಪಾರದಲ್ಲಿ ಮೋಸ ನಷ್ಟವಿರುತ್ತದೆ
- ಹಳೆಯ ವಿಚಾರಗಳಿಂದ ಮನಸ್ಸು ಚಂಚಲವಾಗಬಹುದು
- ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನಿಸಿ
- ದುರ್ಗಾರಾಧನೆ ಮಾಡಿ
ಕಟಕ
- ಪಾಲುದಾರಿಕೆ ಹೂಡಿಕೆಯಲ್ಲಿ ಲಾಭವಿದೆ
- ನೀವು ಎಷ್ಟು ಪಾರದರ್ಶಕವಾಗಿರುತ್ತೀರೋ ಅಷ್ಟು ಲಾಭ
- ತಾಯಿಯವರಿಂದ ಹಣ ಸಿಗಬಹುದು
- ಜನರಲ್ಲಿ ವಿಶ್ವಾಸ ಮೂಡುವ ಕೆಲಸ ಮಾಡಿ
- ಮನೆಯಲ್ಲಿ ಸಡಗರ ಖುಷಿ ಸಿಗಬಹುದು
- ನಿಮ್ಮ ಬಂಧುತ್ವ ಸ್ನೇಹಿತರ ಮಧ್ಯೆ ಚೆನ್ನಾಗಿರಲಿ
- ಮಹಾಲಕ್ಷ್ಮೀಯ ಪ್ರಾರ್ಥನೆ ಮಾಡಿ
ಸಿಂಹ
- ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು
- ಆರೋಗ್ಯ ಸಮಸ್ಯೆ ಹೊಟ್ಟೆ ನೋವು ಕಾಣಬಹುದು
- ಮನಸ್ಸಿನಲ್ಲಿ ಅಹಿತಕರ ವಿಷಯಗಳ ಆತಂಕ
- ಪೂರ್ಣ ವಿಶ್ರಾಂತಿಯಿಂದ ಚೇತರಿಕೆ ಕಾಣುತ್ತೀರಿ
- ದೂರದ ಪ್ರಯಾಣ ಮಾಡುವುದರಿಂದ ಬೇಸರ ಆಗಬಹುದು
- ನೌಕರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ
- ಮೃತ್ಯುಂಜಯ ಮಂತ್ರ 21 ಬಾರಿ ಪಠನೆ ಮಾಡಿ
ಕನ್ಯಾ
- ಪ್ರೇಮಿಗಳಿಗೆ ಶುಭ ದಿನ
- ಧಾರ್ಮಿಕ ವಿಚಾರಗಳಲ್ಲಿ ಸಮಯ ಕಳೆಯಬಹುದು
- ನಕಾರಾತ್ಮಕ ಚಿಂತೆಗಳು ನಿಮ್ಮಿಂದ ದೂರವಿರಲಿ
- ಉತ್ತಮ ಅನುಭವಿಗಳ ಸಲಹೆ ನಿಮಗೆ ಸಹಾಯವಾಗುತ್ತದೆ
- ಹಿರಿಯರು ಅಧಿಕಾರಿಗಳು ತುಂಬಾ ಪ್ರಭಾವ ಹೊಂದುತ್ತಾರೆ
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಮನೆದೇವರ ಪ್ರಾರ್ಥನೆ ಮಾಡಿ
ತುಲಾ
- ನರಗಳಲ್ಲಿ ಮೂಳೆಗಳಲ್ಲಿ ನೋವು ಇರಬಹುದು
- ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆಯಿರಲಿ
- ನಂಬಿದವರೇ ನಿಮಗೆ ಮೋಸ ದ್ರೋಹ ಮಾಡುತ್ತಾರೆ
- ರಾಜಕೀಯ ವಿಚಾರಗಳಿಂದ ದೂರವಿರಿ
- ವಿರೋಧಿಗಳಿಂದ ಸ್ನೇಹ ಸಂಪಾದಿಸಿ
- ಇದು ವಿಚಿತ್ರ ದಿನವೆಂದೇ ಹೇಳಬಹುದು
- ಗಣಪತಿಯ ಪ್ರಾರ್ಥನೆ ಮಾಡಿ
ವೃಶ್ಚಿಕ
- ಬೇರೆಯವರ ಅವಲಂಬನೆ ಬೇಡ
- ಕೋಪದಿಂದ ಹಲವಾರು ಅವಘಡಗಳಾಗಬಹುದು
- ಅನಗತ್ಯ ವಿವಾದಗಳು ನಿಮ್ಮ ಮೇಲೆ ಬರಬಹುದು
- ಸಾಮರ್ಥ್ಯ ಮೀರಿ ಸಹಾಯ ಮಾಡಲು ಪ್ರಯತ್ನಿಸದಿರಿ
- ಬೇರೆಯವರಿಗೆ ಸಹಾಯ ಮಾಡಲು ಅವಕಾಶವಿಲ್ಲ
- ಕಾರ್ಯದ ಒತ್ತಡ ದೈಹಿಕ ಹಿಂಸೆ
- ರುದ್ರ ದೇವರನ್ನು ಆರಾಧಿಸಿ.
ಧನುಸ್ಸು
- ಮೂಢನಂಬಿಕೆಗಳಿಂದ ಮೋಸಹೋಗಬಹುದು
- ಆದಾಯ ಮೂಲಗಳು ಗಟ್ಟಿಯಾಗುತ್ತದೆ
- ಬರಹಗಾರರಿಗೆ ಶುಭ ಲಾಭಗಳಿವೆ ಗೌರವ ಸಿಗಲಿದೆ
- ಇಂದು ರಾಜಕಾರಣಿಗಳಿಗೆ ಉತ್ತಮ ದಿನ
- ವ್ಯಾಪಾರಾದಿಗಳಿಂದ ಉತ್ತಮ ಲಾಭ ಇದೆ
- ರಾಜಕೀಯ ವಿಚಾರದಲ್ಲಿ ಆಸಕ್ತಿ ಹೊಂದುತ್ತೀರಿ
- ಕುಬೇರನನ್ನು ಪ್ರಾರ್ಥಿಸಿ
ಮಕರ
- ವ್ಯಾಪಾರ ನಿಮಿತ್ತ ಪ್ರಯಾಣ ಸಾಧ್ಯತೆ
- ಉನ್ನತ ಅಧಿಕಾರಿಗಳಿಗೆ ಶುಭವಿದೆ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
- ಮಕ್ಕಳ ನಿರ್ಧಾರ ನಿಮಗೆ ಇಷ್ಟವಾಗದ ದಿನ
- ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
- ಹೊಸ ಯೋಜನೆಯ ವಿಚಾರ ಚರ್ಚೆಯಾಗಲಿದೆ
- ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ಗುರಿಯ ಬಗ್ಗೆ ಗಮನವಿರಲಿ
- ನೀವು ಈ ದಿನ ಅಪಹಾಸ್ಯಕ್ಕೆ ಗುರಿಯಾಗಬಹುದು
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿರುವುದಿಲ್ಲ
- ಮಕ್ಕಳಿಂದ ಸಂತೋಷವಿದೆ
- ಜೀವನ ಸಂಗಾತಿಯ ಬಗ್ಗೆ ಚಿಂತೆಯಿರಲಿ
- ಹೊಸ ಕೆಲಸಗಳು ಯೋಜನೆಗಳು ಬೇಡ
- ಕುಲದೇವತಾ ಆರಾಧನೆ
ಮೀನ
- ಮನೆಯಲ್ಲಿ ಕೆಲವು ಕೊರತೆಗಳಿಂದ ಅಸಂತೋಷ
- ಆರ್ಥಿಕ ತೊಂದರೆಯಿಲ್ಲ ಸಂತೋಷ ಇರಲಿದೆ
- ಮಕ್ಕಳ ನಡವಳಿಕೆಯಿಂದ ಬೇಸರ ಆಗಬಹುದು
- ನಿಧಾನದ ಕೆಲಸಗಳೆಲ್ಲಾ ವೇಗದಿಂದ ನಡೆಯುತ್ತವೆ
- ನಿಮ್ಮ ಪ್ರಚಾರ ಹೆಸರು ಕೇಳಿಬರುತ್ತದೆ
- ವಾದ ವಿವಾದಗಳು ನಿಮ್ಮ ಪರವಾಗುವ ಸೂಚನೆಗಳಿವೆ
- ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ