Advertisment

ಇಂದು ಈ ರಾಶಿಯವರಿಗೆ ಕೋಪ ಹೆಚ್ಚು.. ಭಯದಿಂದ ಹೊರಬಂದು ಎಲ್ಲ ಸಾಧಿಸಬೇಕಾದ ದಿನ; ಇಲ್ಲಿದೆ ಭವಿಷ್ಯ!

ದ್ವೇಷ ಅಸೂಯೆಗಳ ಸಂಕೋಲೆಗಳಿಂದ ಹೊರಬರಬೇಕಾಗುತ್ತದೆ. ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು. ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ. ವೈರಾಗ್ಯದ ಮಾತುಗಳು ಬೇರೆಯವರನ್ನು ನಿಂದಿಸಬಹುದು. ಎಲ್ಲಾ ಇದ್ದರೂ ಮಾನಸಿಕ ನೆಮ್ಮದಿಯಿಲ್ಲ ಎನ್ನುವಂತಹ ಸ್ಥಿತಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಕಾರ್ಮಿಕ ವರ್ಗದವರಿಗೆ ಸ್ವಲ್ಪ ಸಂಕಷ್ಟ ಅಲ್ಪ ತೃಪ್ತಿ ಸಿಗಲಿದೆ
  • ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಗಣನೀಯ ನಷ್ಟ ಆಗಲಿದೆ
  • ತುಂಬಾ ಜವಾಬ್ದಾರಿಯುತ ಕೆಲಸಗಳು ಹೆಚ್ಚಾಗಿರುತ್ತದೆ
  • ಪ್ರೇಮಿಗಳಿಗೆ ಅನುಕೂಲವಾದ ದಿನ
  • ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟ ಆಗುತ್ತದೆ
  • ಅನಾರೋಗ್ಯ ಪೀಡಿತರು ಈ ದಿನ ಗುಣಮುಖರಾಗುವ ಸೂಚನೆ ಇದೆ
  • ಕುಬೇರನನ್ನು ಬಿಳೀ ಹೂಗಳಿಂದ ಅರ್ಚನೆ ಮಾಡಿ

     

ವೃಷಭ

RASHI_BHAVISHA_VRSHABA

  • ಜನರ ಅಭಿಪ್ರಾಯದಲ್ಲಿ ನೀವು ಪೂಜ್ಯರಾಗಿ ಕಾಣುತ್ತೀರಿ
  • ಆಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಲವು ಮೂಡುವ ದಿನ
  • ಸಾಲ ಕೊಟ್ಟಿದ್ದರೆ ಅದರ ಬಾಕಿ ಈ ದಿನ ಹಿಂದಿರುಗಿ ಬರಲಿದೆ
  • ಅರ್ಥಿಕ ಅನುಕೂಲ ಈ ದಿನ ಇದೆ
  • ನಿಮ್ಮನ್ನು ನೀವು ಸರಿಯಾಗಿ ತಿದ್ದಿಕೊಳ್ಳಬೇಕು
  • ಸಂತೋಷದಿಂದ ಪ್ರಯಾಣವನ್ನು ಮಾಡುವ ದಿನ
Advertisment

ಮಿಥುನ

RASHI_BHAVISHA_MITHUNA

  • ಸಂಗಾತಿಯೊಂದಿಗೆ ಉತ್ತಮ ನಡುವಳಿಕೆಯೊಂದಿಗೆ ಇರಬೇಕು 
  • ತಮ್ಮ ಕೋಪವನ್ನು ಸ್ನೇಹಿತರು, ಮನೆಯವರ ಮೇಲೆ ತೀರಸಬಾರದು
  • ಇಂದು ಈ ರಾಶಿಯವರಿಗೆ ಕೋಪ ಹೆಚ್ಚಾಗುವ ಸಾಧ್ಯತೆ
  • ಇವತ್ತು ಮೃತ್ಯುಂಜಯನನ್ನು ಪ್ರಾರ್ಥಿಸುವುದು ಒಳ್ಳೆಯದು
  • ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ
  • ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತೀರಿ
  • ಈಶ್ವರನನ್ನು ಆರಾಧನೆ ಮಾಡಿ

ಕಟಕ

RASHI_BHAVISHA_KATAKA

  • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ
  • ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
  • ಭಯದಿಂದ ಹೊರಬಂದು ಎಲ್ಲವನ್ನು ಸಾಧಿಸಬೇಕಾದ ದಿನ
  • ವಿರೋಧಿಗಳು ನಮ್ಮ ಕೆಲಸ ಹಾಳು ಮಾಡಬಹುದು
  • ದೈಹಿಕವಾಗಿ ಆರಾಮ ಇರುವುದಿಲ್ಲ ಆಲಸ್ಯ 
  • ವ್ಯಾಪಾರ, ವ್ಯವಹಾರಾದಿಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
  • ಮೂಲ ದೇವರನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ದ್ವೇಷ ಅಸೂಯೆಗಳ ಸಂಕೋಲೆಗಳಿಂದ ಹೊರಬರಬೇಕಾಗುತ್ತದೆ
  • ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
  • ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
  • ವೈರಾಗ್ಯದ ಮಾತುಗಳು ಬೇರೆಯವರನ್ನು ನಿಂದಿಸಬಹುದು
  • ಎಲ್ಲಾ ಇದ್ದರೂ ಮಾನಸಿಕ ನೆಮ್ಮದಿಯಿಲ್ಲ ಎನ್ನುವಂತಹ ಸ್ಥಿತಿ
  • ಕುಟುಂಬದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
  • ಬೂದಗುಂಬಳಕಾಯಿಯಿಂದ ದೃಷ್ಟಿ ತೆಗೆಯಿರಿ
Advertisment

ಕನ್ಯಾ

RASHI_BHAVISHA_KANYA

  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
  • ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
  • ಅಗತ್ಯವಿದ್ದ ಕೆಲಸಕ್ಕೆ ಗೈರಾಗಿ ಬೇಸರ ಪಡಬಹುದು
  • ಸ್ನೇಹಿತರ- ಬಂಧುಗಳ ಮಾತಿಗೆ ಗುರಿಯಾಗಬಹುದು
  • ಕೆಲಸಗಳ ಒತ್ತಡ, ಮಾನಸಿಕ ಆತಂಕಗಳು ಕಾಡಬಹುದು
  • ವೃತ್ತಿ ನೌಕರಿಯಲ್ಲಿ ಗೌರವ ಹೆಚ್ಚುವ ದಿನ
  • ಶಿವನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ತುಲಾ

RASHI_BHAVISHA_TULA

  • ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನ ಸಿಗಲಿದೆ
  • ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ ಅದನ್ನ ಹಾಗೇ ಕಾಪಾಡಿಕೊಳ್ಳಬೇಕು
  • ಬೇರೆಯವರ ಮಾತಿಗೆ ಮರುಳಾಗದಿರಿ
  • ಅದೃಷ್ಟದ ಬೆಂಬಲವಿದೆ ಮನಸ್ಸು ಶುದ್ಧವಾಗಿರಲಿ ಅನುಮಾನ ಬೇಡ
  • ವ್ಯವಹಾರದಲ್ಲಿ ನೈಜತೆ ಇರಲಿ
  • ಯುವ ಪೀಳಿಗೆಗೆ ವೃತ್ತಿ ಜೀವನದ ಸಿಹಿ ಅನುಭವ
  • ರಾಧಾಕೃಷ್ಣರನ್ನು ಪೂಜಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
  • ಸ್ಥಿರ ಮನಸ್ಸಿದ್ದರೇ ಎಲ್ಲವನ್ನೂ ಸಾಧಿಸಬಹುದು
  • ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆ
  • ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
  • ಕುಟುಂಬದ ಒಳಗೇ ಮದುವೆಯ ವಿಚಾರ ಬರಬಹುದು
  • ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧಿಯಿಂದ ಸಿಹಿ ಸುದ್ದಿ
  • ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ
Advertisment

ಧನುಸ್ಸು

RASHI_BHAVISHA_DHANASU

  • ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಕೆಲಸ ಬೇಡ
  • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
  • ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
  • ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ ಸರಿಯಾದ ಸಲಹೆ ಅಗತ್ಯ
  • ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ ಆಗಬಹುದು
  • ಹಳೆಯ ಕೆಟ್ಟ ಅಭ್ಯಾಸಗಳಿಗೆ ಮತ್ತೆ ದಾಸರಾಗಬಹುದು ಎಚ್ಚರವಹಿಸಿ
  • ಸುದರ್ಶನನನ್ನು ಪೂಜಿಸಿ

ಮಕರ

RASHI_BHAVISHA_MAKARA

  • ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
  • ಪ್ರೇಮಿಗಳಿಗೆ ತೊಂದರೆಯಿದೆ ಜಗಳ ಬೇಡ
  • ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಿರಲಿ
  • ಹಣಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
  • ನಾನು ಎಂಬುದು ಎಲ್ಲದಕ್ಕೂ ತೊಂದರೆಯಾಗಲಿದೆ
  • ಖರ್ಚುಗಳಿಂದ ಕುಟುಂಬದಲ್ಲಿ ಕಲಹ ಉಂಟಾಗಬಹುದು
  • ಪುಣ್ಯಕಥಾ ಶ್ರವಣ ಮಾಡಿ

ಕುಂಭ

RASHI_BHAVISHA_KUMBHA

  • ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಯಶಸ್ಸು 
  • ಹಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
  • ಮಹಿಳೆಯರು ಹಲವಾರು ಜನರಿಗೆ ಸಹಾಯ ಮಾಡುವ ಸೂಚನೆಯಿದೆ
  • ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
  • ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
  • ವ್ಯವಹಾರದಲ್ಲಿ ಸ್ನೇಹಿತರ ಬಲ ಸಿಗಲಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ
Advertisment

ಮೀನ

RASHI_BHAVISHA_MEENA

  • ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರ ಆಗಬಹುದು
  • ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆ ಉಂಟಾಗಬಹುದು
  • ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
  • ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಣಬಹುದು
  • ಮಕ್ಕಳ ಬಗ್ಗೆ ಕಾಳಜಿ ಇರಲಿ
  • ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
  • ಧ್ಯಾನ ಮಾಡಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Digital News First Kannada
Advertisment
Advertisment
Advertisment