Advertisment

ಹಣಕಾಸಿನ ವಿಚಾರದಲ್ಲಿ ವಿವಾದ ಬೇಡ.. ವಿವಾದಿತ ವಿಷಯಗಳು ಇತ್ಯರ್ಥ ಆಗುತ್ತವೆ; ಇಲ್ಲಿದೆ ಇಂದಿನ ಭವಿಷ್ಯ!

ವಿವಾದಿತ ವಿಷಯಗಳ ಇತ್ಯರ್ಥವಾಗುತ್ತದೆ, ಯಾರೊಂದಿಗೂ ಜಗಳ ಮಾಡಬೇಡಿ. ಹಣದ ಸಹಾಯ ನಿಮ್ಮಲ್ಲಿಗೇ ಬರುತ್ತದೆ. ಓದಿನ ಬಗ್ಗೆ ಇರುವ ಗೊಂದಲ ದೂರಮಾಡಿಕೊಳ್ಳಿ. ಇಂದು ಸಾಲದ ವಿಚಾರ ಬೇಡ. ನಿಮ್ಮ ಗುರಿಯ ಬಗ್ಗೆ ಗಮನವಿರಲಿ.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ ತಿಥಿ, ಜ್ಯೇಷ್ಠಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಪಿತ್ರಾರ್ಜಿತ ಆಸ್ತಿ ಸಿಗುವ ದಿನ
  • ಎಲ್ಲವೂ ಸಮೃದ್ಧವಾಗಿದೆ ಎಂಬ ಮನೋಭಾವವಿರುವ ದಿನ
  •  ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ
  • ಯೋಜನೆಗಳು ಯಶಸ್ವಿ ಆಗಲಿದೆ
  •  ಪ್ರೇಮಿಗಳಿಗೆ ಉತ್ತಮ ದಿನ
  • ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ
  • ಗಣಪತಿಯನ್ನು ಪ್ರಾರ್ಥಿಸಿ 

ವೃಷಭ

RASHI_BHAVISHA_VRSHABA

  • ಕುಟುಂಬದವರಿಗೆಲ್ಲಾ ಆತಂಕ ಕಾಡಬಹುದು
  • ಹಣ ಹೆಚ್ಚು ಖರ್ಚು ಆಗುವುದರಿಂದ ಬೇಸರ ಆಗಬಹುದು
  • ಯಾವುದೇ ಕೆಲಸದ ಬಗ್ಗೆ ತಾತ್ಸಾರ ಬೇಡ
  • ಹಳೆಯ ರೋಗಗಳು ಮತ್ತೆ ಕಾಣಬಹುದು
  • ಅತಿಯಾದ ಉತ್ಸಾಹದಿಂದ ಕೆಲಸ ಕೆಡಬಹುದು
  • ವಿದೇಶಿ ಮೂಲಗಳಿಂದ ಹಣದ ಸಹಾಯ ಸಿಗಲಿದೆ
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
Advertisment

ಮಿಥುನ

RASHI_BHAVISHA_MITHUNA

  • ವ್ಯಾವಹಾರಿಕವಾಗಿ ಉತ್ತಮ ಫಲ ಸಿಗಲಿದೆ 
  •  ಕುಟುಂಬದಲ್ಲಿ ಸಂತೋಷದ ವಾತಾವರಣ
  • ಹೊಸ ವಾಹನ ಖರೀದಿ ಮಾಡುತ್ತೀರಿ
  • ಮರಕೆಲಸ ಮಾಡವವರಿಗೆ ಲಾಭದ ದಿನ
  • ವೈವಾಹಿಕ ಜೀವನದಲ್ಲಿ ಏರುಪೇರು ಸಾಧಾರಣವಾದ ದಿವಸ
  •  ಕೆಲಸದ ಗುಣಮಟ್ಟ ಹೆಚ್ಚಾಗಿರುತ್ತದೆ 
  • ಸಾಯಿಬಾಬಾರನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ಕೆಲಸದ ಸ್ಥಳದಲ್ಲಿ ಕಿರಿಕಿರಿಯಾಗಬಹುದು
  • ವಿನಾಕಾರಣ ಸಮಯ ವ್ಯರ್ಥಮಾಡಬೇಡಿ
  • ಆರೋಗ್ಯದಲ್ಲಿ ತೊಂದರೆಯಾಗಬಹುದು
  • ಅನಗತ್ಯ ಸಮಸ್ಯೆಗಳು ಕಾಡುತ್ತದೆ
  • ಸಾಲಕ್ಕೆ ಸಿಕ್ಕಿಕೂಳ್ಳುವ ಸಾಧ್ಯತೆ ಹೆಚ್ಚು 
  • ದುಡ್ಡಿನ ವಿಚಾರದಲ್ಲಿ ವಿಳಂಬ ಸಾಧ್ಯತೆ
  • ಮಾರುತಿಯನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ದೊಡ್ಡ ಕೆಲಸಗಳ ನಿರ್ಧಾರ ಮಾಡಬಹುದು
  • ಸಾಮಾಜಿಕ ಜವಾಬ್ದಾರಿ ಹೆಚ್ಚಾಗುವ ದಿನ
  • ಬೆಲೆಬಾಳುವ ವಸ್ತು ಖರೀದಿ ಮಾಡುತ್ತೀರಿ
  • ಮಕ್ಕಳ ಬಗ್ಗೆ ಹೆಚ್ಚು ಗಮನವಿರಲಿ
  • ಕುಟುಂಬದ ಸದಸ್ಯರ ಆಸೆಗಳನ್ನು ಪೂರೈಸುತ್ತೀರಿ
  • ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ
  • ಸದ್ಗರು ದತ್ತಾತ್ರೇಯರನ್ನು ಪ್ರಾರ್ಥಿಸಿ
Advertisment

ಕನ್ಯಾ

RASHI_BHAVISHA_KANYA

  •  ಹಣಕಾಸಿನ ವಿಚಾರದಲ್ಲಿ ವಿವಾದಗಳು ಬೇಡ
  • ಇಂದು ಪ್ರೇಮಿಗಳಿಗೆ ಶುಭವಿದೆ
  • ಕೆಲಸದ ಒತ್ತಡ ಹೆಚ್ಚಿರುವ ದಿನ
  • ಆರೋಗ್ಯದ ಬಗ್ಗೆ ಅದರಲ್ಲೂ ಗಂಟಲಿನ ಬಗ್ಗೆ ಗಮನಿಸಿ
  • ಇಂದು ನಿಮಗೆ ಮನೆಯವರ  ಸಹಕಾರವಿರುತ್ತದೆ
  • ಹಳೆಯ ಜಗಳ ದ್ವೇಷ ನಿಮ್ಮನ್ನು ಕಾಡಬಹುದು
  •  ಶಿವಾರಾಧನೆ ಮಾಡಿ

ತುಲಾ

RASHI_BHAVISHA_TULA

  • ವಿವಾದಿತ ವಿಷಯಗಳು ಇತ್ಯರ್ಥವಾಗುತ್ತದೆ
  • ಮನೆಯಲ್ಲಿ ಕಳವು ಆಗಬಹುದು
  • ವಿವಾಹ ವಿಚಾರ ಪ್ರಸ್ತಾಪಕ್ಕೆ ಬರಬಹುದು
  • ಹಣದ ವಿಚಾರಕ್ಕಾಗಿ ಮನಸ್ತಾಪ
  • ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅವಕಾಶವಿದೆ
  • ರಾಜಕಾರಣಿಗಳಿಗೆ ಉತ್ತಮ ವಾತಾವರಣ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ವಿವಾದಿತ ವಿಷಯಗಳ ಇತ್ಯರ್ಥವಾಗುತ್ತದೆ
  • ಯಾರೊಂದಿಗೂ ಜಗಳ ಮಾಡಬೇಡಿ
  • ಹಣದ ಸಹಾಯ ನಿಮ್ಮಲ್ಲಿಗೇ ಬರುತ್ತದೆ
  • ಓದಿನ ಬಗ್ಗೆ ಇರುವ ಗೊಂದಲ ದೂರಮಾಡಿಕೊಳ್ಳಿ
  • ಇಂದು ಸಾಲದ ವಿಚಾರ ಬೇಡ
  • ನಿಮ್ಮ ಗುರಿಯ ಬಗ್ಗೆ ಗಮನವಿರಲಿ
  • ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ
Advertisment

ಧನುಸ್ಸು

RASHI_BHAVISHA_DHANASU

  • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
  • ಓದಿಗೆ ಬೇಕಾದ ಧನಸಹಾಯ ವ್ಯವಸ್ಥೆ ಆಗಬಹುದು
  • ನಿಮ್ಮ ಗುರಿ ಸಾಧನೆ ಬಗ್ಗೆ ಒಲವಿರುತ್ತದೆ
  • ಸ್ನೇಹಿತರ ಸಹಕಾರ ಸಮಾಧಾನ ಸಿಗಲಿದೆ
  • ಕುಟುಂಬದ ಸದಸ್ಯರು ಸಂತೋಷವಾಗಿರುವ ದಿನ
  • ಈ ದಿನ ನವದಂಪತಿಗಳಿಗೆ ಶುಭವಿದೆ
  • ಲಕ್ಷ್ಮಿನರಸಿಂಹನನ್ನು ಪ್ರಾರ್ಥಿಸಿ

ಮಕರ

RASHI_BHAVISHA_MAKARA

  • ಅಧಿಕವಾಗಿ ತಿರುಗಾಟದಿಂದ ಬೇಸರ ಆಗಬಹುದು
  • ಆದಾಯ ಕಡಿಮೆ ಖರ್ಚು ಹೆಚ್ಚು
  • ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
  • ಪ್ರೇಮಿಗಳಿಗೆ ತೊಂದರೆಯಾಗಬಹುದು 
  • ಮನೆಯ ಅವ್ಯವಸ್ಥೆಯಿಂದ ಕೋಪ ಬರಬಹುದು ತಾಳ್ಮೆ ಇರಲಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ಹಿರಿಯರ ಆಶೀರ್ವಾದ ಪಡೆಯಿರಿ ಯಶಸ್ಸಿದೆ
  • ಬೇರೆಯವರಿಗೆ ಸಹಾಯ ಮಾಡುವುದರಿಂದ ಜನಪ್ರಿಯರಾಗುತ್ತೀರಿ 
  • ಬಂಧುಗಳು ಮನೆಗೆ ಬರುವುದರಿಂದ ಸಂತೋಷದಿಂದಿರುತ್ತೀರಿ
  • ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ
  •  ಹೊಸ ತಂತ್ರಜ್ಞಾನದ ಕಡೆಗೆ ಮನಸ್ಸು ಬಾಗಬಹುದು
  •  ಮನೆಯಲ್ಲಿ ದಾಂಪತ್ಯದಲ್ಲಿ ಮುಕ್ತವಾಗಿ ಮಾತನಾಡಿ
  • ಇಷ್ಟದೇವತಾ ಪ್ರಾರ್ಥನೆ ಮಾಡಿ
Advertisment

ಮೀನ

RASHI_BHAVISHA_MEENA

  •  ಕಾನೂನು ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ
  •  ಮನೆಯಲ್ಲಿ ಸಂತೋಷದ ವಾತಾವರಣ 
  • ಹಣದ ವಿಚಾರದಲ್ಲಿ ಸ್ವಲ್ಪ ಸಮಾಧಾನ ಸಿಗಲಿದೆ
  • ಇಂದು ವ್ಯಾಪಾರದಲ್ಲಿ ಅನುಕೂಲವಿದೆ
  • ಕೆಲಸ ವೃತ್ತಿಯಲ್ಲಿ ಸಹಕಾರವಿರುತ್ತದೆ
  • ಹೊಸ ಆಲೋಚನೆಗಳಿಗೆ ಶುಭದಿನ
  •  ಕುಲದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First YouTube News First Web News First Live
Advertisment
Advertisment
Advertisment