/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಾಡ್ಯ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ವೈಯಕ್ತಿಕ ಪ್ರತಿಷ್ಠೆಯಿಂದ ಹಣ,ಸ್ಥಾನ,ಗೌರವ ಕಳೆದುಕೊಳ್ಳಬಹುದು
- ಮೊಂಡುತನ, ಹಟ ಸ್ವಭಾವವನ್ನು ದೂರಮಾಡಿಕೊಂಡರೆ ಒಳ್ಳೆಯದು
- ನಿಮ್ಮ ಮನಸ್ಸಿನ ಸ್ಥಿರ ನಿರ್ಧಾರಗಳನ್ನು ಬದಲಿಸಿ ಅನುಕೂಲವಿದೆ
- ಈ ದಿನ ನಿಮ್ಮ ಭವಿಷ್ಯ ಉಜ್ವಲವಾಗುವಂತದ್ದು
- ಇಂಜಿನಿಯರ್ಸ್ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳಿಗೆ ಸೂಕ್ತವಾದ ಸಲಹೆಗಳು ದೊರೆಯಲಿದೆ
- ಕುಟುಂಬದ ಸದಸ್ಯರು ನಿಮ್ಮ ಯೋಜನೆಗಳಲ್ಲಿ ಮಾರ್ಗದರ್ಶನ ಮಾಡುತ್ತಾರೆ
- ಬೇರೆಯವರ ಮಾತನ್ನ ಗೌರವಿಸಿ
ವೃಷಭ
- ಮಾತೆಯರ ಆಭರಣ, ಹಣಕ್ಕೆ ಕುತ್ತು ಬರಬಹುದಾದ ಸಾಧ್ಯತೆ ಇದೆ
- ಈ ದಿನ ಗೊಂದಲ ಸೃಷ್ಠಿಯಾಗುವ ಸಾಧ್ಯತೆ ಹೆಚ್ಚಾಗಿವೆ
- ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
- ಹೆಚ್ಚು ನಿಯಮ ಹಾಕಬೇಡಿ ಆಗ ದಾರಿ ತಪ್ಪಬಹುದು
- ಮಕ್ಕಳಲ್ಲಿ ಸಿಟ್ಟು ವೈರತ್ವ ಮೂಡಿ ಮನೆಗೆ ಕಂಟಕವಾಗಬಹುದು
- ಲೇಖಕರಿಗೆ ಸಂಶೋಧಕರಿಗೆ ಹಿನ್ನಡೆಯಾಗುವ ದಿನವಾಗಿರುತ್ತದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಗಾಗಿ ಕೆಲವು ಮಾರ್ಗಗಳನ್ನು ಅನುಸರಿಸುತ್ತಿರುತ್ತೀರಿ
- ಸತ್ಯ ಶೋಧನೆ ಮಾಡಿ
ಮಿಥುನ
- ಸಂಗೀತ ಮನೋರಂಜನೆಯಲ್ಲಿ ಕಾಲ ಕಳೆಯುತ್ತೀರಿ
- ನೀವು ನಿರೀಕ್ಷೆ ಮಾಡದ ಲಾಭ ಅಥವಾ ಹಣ ನಿಮ್ಮ ಕೈ ಸೇರುವುದಿಲ್ಲ
- ಉತ್ತಮ ಭೋಜನ,ಲೌಕಿಕವಾದ ಆನಂದ ನಿಮ್ಮದಾಗುತ್ತದೆ
- ಇಂದು ಮಾನಸಿಕವಾಗಿ ಬೇಸರ ಆಗಲಿದೆ
- ಬೇರೆಯವರಿಗೆ ಸಲಹೆ ಸೂಚನೆ ಕೊಡುವಂತಹ ಸಮಯ ಇದಾಗಿದೆ
- ಇಂದು ಅದೃಷ್ಟ ನಿಮ್ಮದಾಗಿರುತ್ತದೆ
- ಅನಗತ್ಯ ವಿಚಾರದಲ್ಲಿ ತಲೆ ಹಾಕಿ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತೀರಿ
ಕಟಕ
- ಆತುರದ ನಿರ್ಧಾರಗಳು ಒಳ್ಳೆಯದಲ್ಲ
- ಸಮಾಧಾನವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು
- ನಿಮ್ಮ ಸಮಸ್ಯೆ ದೌರ್ಬಲ್ಯಗಳ ಅರಿವು ಇರಬೇಕು
- ನಿಮಗಿಂತ ಬಲವಾಗಿರುವವರೊಂದಿಗೆ ಸ್ಪರ್ಧಿಸಲು ಮುಂದಾಗುತ್ತೀರಿ
- ತೀರ್ಮಾನಿಸಿದ ಕೆಲಸಗಳಲ್ಲಿ ತಕ್ಷಣ ಬದಲಾವಣೆಯಾಗುವ ಸಾಧ್ಯತೆ
- ದೂರದ ಸಂಬಂಧಿಕರ ಜೊತೆಯಲ್ಲಿ ಕಲಹ ಉಂಟಾಗಬಹುದು
- ಯಾವುದೇ ಕೆಲಸಕ್ಕೂ ಕೈ ಹಾಕಿದರು ಸೋಲಾಗಬಹುದು
- ಮನೆಯಲ್ಲಿ ಅಶುಭ, ಗೊಂದಲ ವಾತಾವರಣ ಉಂಟಾಗಬಹುದು ಜಾಗ್ರತೆ
- ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರವಿರಲಿ
- ಗಣಪತಿಯನ್ನು ಪ್ರಾರ್ಥಿಸಿ
ಸಿಂಹ
- ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡದಿಂದ ತೊಂದರೆಯಾಗುವ ಸಂಭವವಿದೆ ಜಾಗ್ರತೆ
- ಭವಿಷ್ಯವನ್ನು ರೂಪಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ
- ಅತಿಯಾದ ಬುದ್ಧಿವಂತಿಕೆ ತೋರಿಸಿದರೆ ಹಿನ್ನಡೆಯಾಗುವ ಸಾಧ್ಯತೆ
- ಮಕ್ಕಳು ಅಗತ್ಯವಾಗಿ ಪೋಷಕರ ಮಾತನ್ನು ಕೇಳಬೇಕಾಗುತ್ತದೆ
- ಸ್ನೇಹಿತರ ನಿಧನದ ವಾರ್ತೆ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಬಹುದು
- ತಂದೆ ಮಕ್ಕಳ ಮಧ್ಯೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಮುನಿಸು ಬರಬಹುದು
- ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಶ್ರವಣ ಮಾಡಿ
ಕನ್ಯಾ
- ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ತುಂಬಾ ಗಂಭೀರವಾಗಿರುತ್ತದೆ
- ಸುಳ್ಳು ಹೇಳುವವರಿಗೆ, ವಿದ್ಯಾರ್ಥಿಗಳಿಗೆ ಈ ದಿನ ತುಂಬಾ ಹಿನ್ನಡೆಯಾಗುತ್ತದೆ
- ಅನೇಕರು ತಮ್ಮ ನೌಕರಿಯನ್ನು ದೂಷಿಸುತ್ತ ರಾಜೀನಾಮೆ ಕೊಡುವ ಸಾಧ್ಯತೆಗಳಿವೆ
- ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತವೆ, ಆದರೆ ಯಾವುದು ಕೈಗೂಡುವುದಿಲ್ಲ
- ಟೀಮ್ ವರ್ಕ್ ಮಾಡುವವರಿಗೆ ಶುಭಫಲವಿದೆ
- ಮಹಾವಿಷ್ಣುವಿನ ಸ್ಮರಣೆ ಮಾಡಿ
ತುಲಾ
- ಇಂದು ನೀವು ನಿಮ್ಮ ಸಮಯಕ್ಕೆ ಮಹತ್ವ ನೀಡಿ
- ನಿಮ್ಮ ದೃಢ ನಿರ್ಧಾರಗಳು ಸ್ವಲ್ಪ ಸಡಿಲವಾಗಬೇಕು
- ಆರ್ಥಿಕ ಲಾಭವಿದ್ದರು ಲೆಕ್ಕ ಸಿಗದ ಖರ್ಚಿನಿಂದ ನಷ್ಟ ಸಾಧ್ಯತೆ
- ಪ್ರಜ್ಞಾವಂತರು ನಿಮ್ಮ ಜೊತೆ ಇದ್ದರು ಅವರನ್ನು ಉಪಯೋಗಿಸಿಕೊಳ್ಳದೆ ಕೆಲಸದಲ್ಲಿ ಹಿನ್ನಡೆ ಸಾಧ್ಯತೆ
- ಅವಿವಾಹಿತರ ಕಷ್ಟಗಳನ್ನು ಕೇಳುವವರಿಲ್ಲದೆ ಬೇರೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ
- ನಿಮ್ಮ ಆಲೋಚನೆ, ನೀವಿರುವ ವಾತಾವರಣ ಆತ್ಮವಿಶ್ವಾಸ ಹೆಚ್ಚಿಸಬಹುದು
- ಗುರು ಪ್ರಾರ್ಥನೆ ಮಾಡಿ
ವೃಶ್ಚಿಕ
- ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡಿ ಕಾಲಹರಣ ಸಾಧ್ಯತೆ
- ವೈದ್ಯಕೀಯ ರಂಗದವರಿಗೆ ಗೊಂದಲದ ಸವಾಲುಗಳು ಕಾಡಬಹುದು
- ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು
- ಇಂದು ನಿಮ್ಮ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
- ಹಿಂದೆ ಮಾಡಿದ ತಪ್ಪುಗಳಿಗೆ ಇಂದು ವಿಷಾದ ವ್ಯಕ್ತಪಡಿಸುತ್ತೀರಿ
- ಈ ದಿನ ಋಣಾತ್ಮಕ ಚಿಂತನೆಗಳು ನಿಮ್ಮನ್ನು ಹೆಚ್ಚಾಗಿ ಕಾಡಬಹುದು
- ಈಶ್ವರನನ್ನು ಆರಾಧನೆ ಮಾಡಿ
ಧನುಸ್ಸು
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ ಸಾಧ್ಯತೆ
- ಇಂದು ಪ್ರೇಮಿಗಳಿಗೆ ಶುಭ ದಿನ
- ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
- ನಿಮ್ಮ ತಪ್ಪು ಮಾಹಿತಿಗಳಿಂದ ಅನರ್ಥವಾಗಿ ತೊಂದರೆಯಾಗುವ ಸಾಧ್ಯತೆ
- ನಿಮ್ಮ ಮೇಲಿನವರ ಸಹಕಾರವಿದ್ದರು ತೊಂದರೆಯಾಗಬಹುದು
- ಔಷಧಿ ವ್ಯಾಪಾರಿಗಳು ಸಮಸ್ಯೆಗೆ ಸಿಲುಕಬಹುದಾದ ದಿವಸ
- ಇಂದು ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ
ಮಕರ
- ಮನೆಯಲ್ಲಿ ಹೊಸ ವ್ಯವಹಾರ ಕುರಿತು ಚರ್ಚೆಯಾಗುತ್ತದೆ, ಆದರೆ ನೀವು ಸಹಕರಿಸುವುದಿಲ್ಲ
- ವಿದ್ಯೆ, ವಿವಾಹ ವಿಚಾರಕ್ಕೆ ಇದ್ದ ಸಮಸ್ಯೆ ದೂರಾಗಬಹುದು
- ಮನೆಯಲ್ಲಿ ಆಕಸ್ಮಿಕ ಅವಘಡಗಳು ಸಂಭವಿಸುವ ಸಾಧ್ಯತೆ
- ಮಕ್ಕಳ ಸಲಹೆ ಮನೆಯವರಿಗೂ, ಹಿರಿಯರ ಸಲಹೆ ಮಕ್ಕಳಿಗೂ ಅನುಕೂಲವಾಗಲಿದೆ
- ತಂದೆ-ಮಕ್ಕಳ ಸಂಬಂಧ ಚೆನ್ನಾಗಿರುವಂತೆ ಸಮಯವನ್ನ ಪ್ರಯತ್ನ ಪೂರಕವಾಗಿ ತಮ್ಮದಾಗಿಸಿಕೊಳ್ಳಿ
- ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಹೊಸ ಸಾಧನೆ ಮಾಡಲು ಪ್ಲಾನ್ ಮಾಡುತ್ತೀರ, ಆದರೆ ಕೈಗೂಡುವ ಸಾಧ್ಯತೆ ಕಡಿಮೆ
- ಇಂದು ಮಕ್ಕಳ ಯಶಸ್ಸಿನ ಬಗ್ಗೆ ಯೋಚಿಸುವಿರಿ
- ಆದಾಯದ ಹಿಂದೆ ಹೋಗಿ ಮರ್ಯಾದೆ ಕಳೆದುಕೊಳ್ಳುವ ಸಾಧ್ಯತೆಯಿದೆ ಜಾಗ್ರತೆವಹಿಸಿ
- ದೈಹಿಕ, ಮಾನಸಿಕ ಒತ್ತಡಗಳಿಂದ ಶಾರೀರಿಕ ಆರಾಮವಿರುವುದಿಲ್ಲ
- ಕೆಂಪು ವಸ್ತ್ರ ಧರಿಸಿ ವಾಹನ ಚಾಲನೆ ಮಾಡುವವರಿಗೆ ತೊಂದರೆ ಸಾಧ್ಯತೆ
- ಮೃತ್ಯುಂಜಯನನ್ನು ಬಿಲ್ವ ಪತ್ರೆ, ತುಂಬೆ ಹೂವಿನಿಂದ ಅರ್ಚಿಸಿ
ಮೀನ
- ಅಪಶಕುನದಿಂದ ತೊಂದರೆ ಆಗುವ ಸಾಧ್ಯತೆಯಿದೆ
- ಬೇಜವಾಬ್ದಾರಿ ಕೆಲಸಗಳು ಹಿನ್ನಡೆಯಾಗುವ ಸಾಧ್ಯತೆ
- ಮಾನಸಿಕ ಸಮಾಧಾನ ಕಡಿಮೆ ಪ್ರಮಾಣದಲ್ಲಿರುತ್ತದೆ
- ಪ್ರೇಮಿಗಳಲ್ಲಿ ಪರಸ್ಪರ ಕಾದಾಟ ಸಾಧ್ಯತೆ
- ಆಹಾರದ ಬಗ್ಗೆ ಎಚ್ಚರ ವಹಿಸಿ, ಹೊಸ ರುಚಿಯಿಂದ ತೊಂದರೆ ಸಾಧ್ಯತೆ
- ತಾವು ಮಾಡಿದ ಕೆಲಸಗಳೆಲ್ಲವೂ ಹಾಳಾಗುವಂತಹುದು
- ಮಾನಸಿಕವಾಗಿ ಧೈರ್ಯ, ಕೆಲಸದಲ್ಲಿ ಹೊಂದಾಣಿಕೆ ಇರಲಿ
- ಕುಬೇರ ದೇವರಿಗೆ ತುಪ್ಪದ ದೀಪ ಹಚ್ಚಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ