/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ಕೆಲವು ಕೆಲಸಗಳಿಗೆ ಹಣವನ್ನು ಮುಂಗಡಕೊಟ್ಟು ಮೋಸಹೋಗಬಹುದು.
 - ಅನರ್ಥಗಳಿಂದ ಮಾನಹಾನಿಯಾಗುವ ಸಾಧ್ಯತೆಗಳಿವೆ
 - ಭೂಮಿ ಖರೀದಿ ಮಾಡಲು ಉತ್ತಮವಾದ ದಿನ
 - ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ
 - ಹಿಂದಿನ ದಿನಗಳ ವಿಚಾರದಲ್ಲಿ ಆತ್ಮಾವಲೋಕನದಿಂದ ಉತ್ತರ ಸಿಗುವುದು
 - ಮಾರುತಿಯನ್ನು ಆರಾಧನೆ ಮಾಡಿ
 
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿದ್ದರೂ ಬೇರೆಯವರ ಮಾತಿನಿಂದ ಬಿರುಕು
 - ವ್ಯವಹಾರದಲ್ಲಿ, ಆರೋಗ್ಯದ ವಿಚಾರದಲ್ಲಿ ಶುಭವಿದೆ
 - ಈ ದಿನ ಶತ್ರುನಾಶ ಉತ್ತಮ ಭೋಜನ
 - ಬೇರೆಯವರನ್ನು ದೂಷಿಸುವುದರಿಂದ ನಿಮಗೆ ತೊಂದರೆಯಾಗಬಹುದು
 - ಮದುವೆಯ ವಿಚಾರದತ್ತ ಗಮನಹರಿಸಿ
 - ಅನಿರೀಕ್ಷಿತವಾಗಿ ಯಾವುದೋ ಶುಭಸುದ್ದಿಯಿಂದ ಸಂತೋಷ ಉಂಟಾಗಲಿದೆ
 - ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
 
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಪಿತ್ರ್ರಾರ್ಜಿತ ಆಸ್ತಿಯನ್ನು ನೀವೇ ಖರೀದಿಸಲು ಮುಂದಾಗುತ್ತೀರಿ
 - ಸರಳ ಜೀವನದ ಕಡೆ ಮನಸ್ಸು ಹೋಗಬಹುದು
 - ಉನ್ನತ ಅಧಿಕಾರ ಪ್ರಾಪ್ತಿಯಾಗಬಹುದು
 - ಸಾಮಾಜಿಕ ಬದುಕಿನಲ್ಲಿ ಬದಲಾವಣೆ ಗಾಳಿಬೀಸುತ್ತದೆ
 - ಸಾಲ ಪಡೆಯುವುದರ ಬಗ್ಗೆ ಚಿಂತಿಸುವಿರಿ ಶುಭವಿದೆ
 - ಸಹೋದರರ ಕಿರಿ ಕಿರಿಯನ್ನು ಸಹಿಸಬೇಕಾಗುತ್ತದೆ ನೆಮ್ಮದಿಯಿರುವುದಿಲ್ಲ
 - ತಾಪಸಮನ್ಯುವನ್ನು ಪ್ರಾರ್ಥಿಸಿ
 
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ಇಂದು ಚಿಕ್ಕ ಮಕ್ಕಳ ಬಗ್ಗೆ ಗಮನವಿರಲಿ
 - ವೈವಾಹಿಕ ಸಂಬಂಧಗಳಿಂದ ದೂರವಾಗಲು ಯತ್ನಿಸುತ್ತೀರಿ
 - ಇಂದು ಶಸ್ತ್ರ ಚಿಕಿತ್ಸೆಯ ಸಂಭವವಿದೆ
 - ಧನನಷ್ಟ ಆಗುವುದರಿಂದ ಮಾನಸಿಕ ಚಿಂತನೆ ಕಾಡಲಿದೆ
 - ಮನೆಯಲ್ಲಿ ಕಳ್ಳತನ ಆಗಬಹುದು
 - ವಿಚಿತ್ರ ಸನ್ನಿವೇಶಗಳಿಂದ ನಿಮಗೆ ಅಚ್ಚರಿಯುಂಟಾಗಬಹುದು
 - ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
 
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ಇಂದು ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ
 - ಹತ್ತಿ ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
 - ಲೆಕ್ಕಾಧಿಕಾರಿಗಳಿಗೆ ಶುಭ ಲಾಭವಿದೆ
 - ನಿಮ್ಮ ಆಲಸ್ಯ ಅಥವಾ ಕೆಲಸವನ್ನು ಮುಂದೂಡುವಿಕೆಯಿಂದ ನಷ್ಟವಾಗುತ್ತದೆ
 - ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸುತ್ತೀರಿ
 - ಹಣ ಕೈಯಲ್ಲಿದ್ದರೂ ಮಾನಸಿಕ ನೆಮ್ಮದಿಯಿರುವುದಿಲ್ಲ
 - ತುಂಬಾ ದಿನಗಳಿಂದ ಬರಬೇಕಾದ ಹಣ ಸಾಯಂಕಾಲ ಕೈ ಸೇರಬಹುದು
 - ಚಾಮುಂಡೇಶ್ವರಿಯ ದರ್ಶನ ಮಾಡಿ
 
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಹಲವರಲ್ಲಿ ಮೈಮನಸ್ಸು ಬೆಳೆಯಬಹುದು
 - ಹಿರಿಯರಿಗೆ ಗೌರವವನ್ನು ನೀಡಿ
 - ಆಹಾರ ವ್ಯತ್ಯಾಸದಿಂದ ತುಂಬಾ ಆತಂಕ ಉಂಟಾಗಬಹುದು
 - ನಿಮ್ಮ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
 - ನಿಮ್ಮ ಪ್ರಯತ್ನ ಸಫಲವಾಗುವ ದಿನ
 - ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿ ವರ್ಗಾವಣೆ ಸಾಧ್ಯತೆ
 - ಕನ್ನಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
 
ತುಲಾ
/filters:format(webp)/newsfirstlive-kannada/media/media_files/2025/07/31/rashi_bhavisha_tula-2025-07-31-22-55-03.jpg)
- ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ತಂದುಕೊಳ್ಳಬೇಕಾಗುತ್ತದೆ
 - ಬೇರೆ ವ್ಯವಹಾರಕ್ಕೆ ಹಣದ ಹೂಡಿಕೆ ಮಾಡುವುದರಿಂದ ಶುಭ
 - ಪಿತ್ರಾರ್ಜಿತ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ
 - ರಾಜಕೀಯದ ವಿಚಾರಗಳು ಮುನ್ನಲೆಗೆ ಬರುತ್ತದೆ
 - ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
 - ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ
 - ಗಣಪತಿಯನ್ನು ಆರಾಧನೆ ಮಾಡಿ
 
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
 - ಸ್ಥಳ ಬದಲಾವಣೆಯ ವಿಚಾರ ಬರುತ್ತದೆ
 - ಇಂದು ನಿಮಗೆ ಧೈರ್ಯ ಕಡಿಮೆಯಾಗಬಹುದು
 - ಸಾಲಬಾಧೇಯಿಂದ ನೀವು ಮುಕ್ತಿ ಹೊಂದುತ್ತೀರಿ
 - ಶುಭ ಸಮಾಚಾರ ನಿಮಗೆ ಉತ್ಸಾಹ ನೀಡಲಿದೆ
 - ನಿಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
 - ಮನೆಯಲ್ಲಿ ಸಂಭ್ರಮದ ವಾತಾವರಣ
 - ಈಶ್ವರನನ್ನು ಪ್ರಾರ್ಥನೆ ಮಾಡಿ
 
ಧನುಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಆಸ್ತಿ ವಸ್ತು ದ್ರವ್ಯ ನಷ್ಟವಾಗುವ ಸೂಚನೆಯಿದೆ
 - ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ
 - ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
 - ನಿಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಬದಿಗಿಟ್ಟು ಭಗವಂತನಿಗೆ ಶರಣು ಹೋಗಬೇಕು
 - ಮಹಿಳೆಯರಿಗೆ ವಸ್ತ್ರ ಆಭರಣ ಪ್ರಾಪ್ತಿಯಾಗಲಿದೆ
 - ದೈನಂದಿನ ಚಟುವಟಿಕೆಯ ಹೊರತಾಗಿ ಬೇರೆ ಕೆಲಸಗಳಲ್ಲಿ ಆಸಕ್ತಿವಹಿಸುವಿರಿ
 - ಸರ್ಕಾರಿ ನೌಕರರಿಗೆ ಬಡ್ತಿ ಸಿಗಲಿದೆ
 - ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
 
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ಇಂಜಿನಿಯರ್ ಕೆಲಸ ಮಾಡುವವರಿಗೆ ಶುಭದಿನ
 - ನಿಮ್ಮ ಸಾಧನೆಯ ಸಂತೋಷವನ್ನು ಬೇರೆಯವರಿಗೆ ಹಂಚಿಕೊಳ್ಳಿ
 - ಸಹೋದರರ ನಡುವೆ ಕಲಹ ಉಂಟಾಗಬಹುದು
 - ಸಂಶೋಧಕರಿಗೆ ಮಹತ್ಮ ಪೂರ್ಣ ದಿನ
 - ಅಕಾಲ ಭೋಜನದಿಂದ ಬೇಸರ ಆಗಬಹುದು
 - ಹೊಂದಾಣಿಕೆ ಮಾಡಿಕೊಂಡ್ರೆ ಕೈ ಹಾಕಿದ ಕೆಲಸ ಉತ್ತಮ ಮುಟ್ಟದಾಗಿರುತ್ತದೆ
 - ಆಸ್ತಿ ವಿವಾದ ಇತ್ಯರ್ಥ ಆಗುವ ದಿನ
 - ಪ್ರೇಮಿಗಳ ನಡುವೆ ಮನಸ್ತಾಪ ಉಂಟಾಗಬಹುದು
 - ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ
 
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ಭೂಮಿ ಖರೀದಿಯ ಚಿಂತನೆಯಿರುತ್ತದೆ
 - ಸಂಬಂಧಿಕರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ
 - ಧನಲಾಭ ಐಶ್ವರ್ಯ ವೃದ್ಧಿಯಾಗಲಿದೆ
 - ಶತ್ರುಬಾಧೆಯಿಂದ ವ್ಯವಹಾರಕ್ಕೆ ಸ್ವಲ್ಪ ನಿಧಾನ ಆಗಲಿದೆ
 - ವಿದೇಶ ಪ್ರಯಾಣ ಮಾಡುತ್ತೀರಿ
 - ಹಿರಿಯರಿಗೆ ಗೌರವವನ್ನು ನೀಡಿ
 - ಬೇರೆಯವರಿಗೆ ಉಪಕಾರ ಮಾಡುತ್ತೀರಿ
 - ಸಾಮೂಹಿಕ ತಿರಸ್ಕಾರ ಮಾಡುವ ಜನರಲ್ಲಿ ನೀವೂ ಒಬ್ಬರಾಗಬಹುದು
 - ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
 
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಸುಖ ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಿ
 - ಯಾರನ್ನು ತುಂಬಾ ನಂಬಬೇಡಿ ಒಳ್ಳೆಯದಲ್ಲ
 - ನಿಮ್ಮ ವ್ಯಕ್ತಿತ್ವ ನಿಮಗೆ ಗೌರವ ತರುತ್ತದೆ
 - ವ್ಯವಹಾರದ ಮಾತುಕತೆ ಫಲಪ್ರದವಾಗಬಹುದು
 - ಇಂದು ಅಪನಿಂದನೆಯೂ ಬರುತ್ತದೆ
 - ಕೋರ್ಟ್ ಕಛೇರಿ ಕೆಲಸಗಳು ಸುಗಮವಾಗಿ ಆಗಲಿದೆ
 - ಸ್ನೇಹಿತರು ಮತ್ತು ಬಂಧುಗಳ ಮಧ್ಯದಲ್ಲಿದ್ದ ಗೊಂದಲ ನಿವಾರಣೆಯಾಗಲಿದೆ
 - ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us