ಬದಲಾವಣೆ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತೆ.. ಕೆಲಸದಲ್ಲಿ ಬಡ್ತಿ, ಹಣ ಕೈ ಸೇರುತ್ತೆ; ಇಲ್ಲಿದೆ ಇಂದಿನ ಭವಿಷ್ಯ!

ದಾಂಪತ್ಯ ಜೀವನ ಸುಖಮಯವಾಗಿರುತ್ತದೆ, ವಿನಾಕಾರಣ ಮಾತು ಬೇಡ. ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು. ಒಂದೇ ಸಮಯದಲ್ಲಿ 2-3 ಕೆಲಸ ಸಾಧ್ಯತೆಗಳಿವೆ ಶುಭವಿದೆ. ಮನೆಯಲ್ಲಿ ಕೆಲಸಗಾರರಿದ್ದರೆ ಸ್ವಲ್ಪ ಜಾಗ್ರತೆವಹಿಸಿ. ವಿದ್ಯಾರ್ಥಿಗಳಿಗೆ ಗಂಭೀರ ವಿಷಯ ಅಧ್ಯಯನ ಮಾಡಲು ಆಸಕ್ತಿ ಬರಬಹುದು.

author-image
Bhimappa
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ ತಿಥಿ, ಪುಬ್ಬಾ ನಕ್ಷತ್ರ, ಭಾದ್ರಪದ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ, ಪುಬ್ಬಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಕುಟುಂಬದ ಹಿರಿಯರ ಪ್ರೀತಿ ವಿಶ್ವಾಸಗಳಿಸಿ
  • ಬೇರೆಯವರ ನಿರ್ಲಕ್ಷದಿಂದ ನಿಮ್ಮ ಕೆಲಸಕ್ಕೆ ಹಿನ್ನಡೆಯಾಗಬಹುದು
  • ಉನ್ನತ ಹುದ್ದೆಯಲ್ಲಿರುವವರಿಗೂ ನಿರಾಶೆ
  • ಪ್ರೇಮಿಗಳಿಗೆ ಹಿನ್ನಡೆ ಉದ್ವಿಗ್ನತೆ ಕಾಡಬಹುದು
  • ಅಧಿಕಾರದ ಭಯದಿಂದ ಸ್ಥಾನ ಚ್ಯುತಿಯಾಗಬಹುದು
  • ಅತಿಯಾದ ಆತ್ಮ ವಿಶ್ವಾಸ ನಿಮಗೆ ತೊಂದರೆ ಮಾಡುತ್ತದೆ
  • ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
  • ಇಷ್ಟದೇವತಾ ಆರಾಧನೆ ಮಾಡಿ

ವೃಷಭ

RASHI_BHAVISHA_VRSHABA

  • ನೌಕರರಿಗೆ  ವಿದ್ಯಾರ್ಥಿಗಳಿಗೆ ತಾಳ್ಮೆ ಪರೀಕ್ಷೆಯ ದಿನವಿದು
  • ಕೈಯಲ್ಲಿ ಹಣದ ಸಮಸ್ಯೆ ಉದ್ಯೋಗ ಸಮಸ್ಯೆ ಆರೋಗ್ಯವೂ ಕೈ ಕೊಡಬಹುದು
  •  ಅತೀ ಮುಖ್ಯವಾದ ವಿಚಾರಗಳಲ್ಲಿ ಗೊಂದಲ
  •  ಆರ್ಥಿಕ ಸಮಸ್ಯೆ, ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗುವುದರಿಂದ ನೆಮ್ಮದಿ
  • ಜವಾಬ್ದಾರಿಯ ಬಗ್ಗೆ ನಿಗಾವಹಿಸಬೇಕಾದ್ದು ನಿಮಗೆ ಅನಿವಾರ್ಯವಾಗುತ್ತದೆ
  • ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸಿಸುತ್ತಾರೆ
  •  ಆಂಜನೇಯ ಸ್ವಾಮಿಯನ್ನು  ಪ್ರಾರ್ಥಿಸಿ

ಮಿಥುನ

RASHI_BHAVISHA_MITHUNA

  • ವ್ಯಾಪಾರ ವಿಸ್ತರಿಸಲು ಕೈ ಹಾಕಿ ನಷ್ಟವಾಗಬಹುದು
  • ಪ್ರೇಮಿಗಳಿಗೆ ಆಶುಭ  ಹೆಚ್ಚು ಧೈರ್ಯ ಬೇಡ  ಭವಿಷ್ಯಕ್ಕೆ ತೊಂದರೆಯಾಗಬಹುದು
  • ಧಾರ್ಮಿಕ ಮುಖಂಡರಿಗೆ ಹಿನ್ನಡೆ ಅವಮಾನ ಆಗಲಿದೆ
  • ಹಿತಶತ್ರುಗಳ ಕಾಟದಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು
  • ಆದರೆ ವಿರೋಧಿಗಳು ನಿಮ್ಮೆಲ್ಲಾ ಸಂತೋಷವನ್ನು ಹಾಳು ಮಾಡಬಹುದು
  • ಕುಟುಂಬದ ವಾತಾವರಣ ವ್ಯಾಪಾರ ವ್ಯವಹಾರ ಚೆನ್ನಾಗಿಯೇ ಇರುತ್ತದೆ
  • ಸುದರ್ಶನನನ್ನು ಪ್ರಾರ್ಥಿಸಿ

ಕಟಕ

RASHI_BHAVISHA_KATAKA

  • ಪುಸಕ್ತ ಪ್ರೇಮಿಗಳಿಗೆ  ವ್ಯಾಪಾರಸ್ಥರಿಗೆ ಶುಭವಿದೆ
  • ಸಹೋದರ ವೈಮನಸ್ಸು ಇರಬಹುದು ತಾಳ್ಮೆಯಿರಲಿ
  • ಈ ದಿನ ದುಂದುವೆಚ್ಚ ಬೇಡ
  •  ಬೇರೆಯವರಿಗೆ ಸಾಲದ ರೂಪದಲ್ಲಿ ಹಣ ಪದಾರ್ಥ ನೀಡಬಾರದು
  • ಆದಾಯದ ಮೂಲ ನೋಡಿ ಖರ್ಚಿಗೆ ಮುಂದಾಗಬೇಕು
  • ದುಬಾರಿ ವಸ್ತುಗಳ ಖರೀದಿ ಮಾಡಬೇಡಿ
  •  ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನಹರಿಸಿ
  •  ನಿಮ್ಮ ಸ್ಥಾನ  ಸಂಬಂಧಗಳ ತಿಳುವಳಿಕೆ ನಿಮಗಿರಬೇಕಾಗುತ್ತದೆ
  •  ಮೇಲಾಧಿಕಾರಿಗಳ ಜೊತೆ  ಕುಟುಂಬದ ಹಿರಿಯರ ಜೊತೆ ವಾದಿಸಬಾರದು
  •  ಕೋಪಬೇಡ  ಕೆಲ ಹೊತ್ತು ವಾತಾವರಣ ಚೆನ್ನಾಗಿರುವುದಿಲ್ಲ
  •  ನಯ ವಂಚಕರಿಂದ ದೂರವಿರಬೇಕಾಗುತ್ತದೆ
  •  ಹವಾಮಾನ ವೈಪರೀತ್ಯಾ ಶೀತ ಸಂಬಂಧಿ ತೊಂದರೆ ಕುಟುಂಬಕ್ಕೆಲ್ಲ ಬರಬಹುದು
  •  ದುರ್ಗಾದೇವಿಯನ್ನು ಆರಾಧನೆ ಮಾಡಿ

ಕನ್ಯಾ

RASHI_BHAVISHA_KANYA

  • ನಿಮ್ಮ ತತ್ತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಬೇಡ
  •  ಮದುವೆಗೆ ನಿಶ್ಚಯದ ಸೂಚನೆಗಳಿವೆ
  •  ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಲಿದೆ
  •  ಸ್ವಲ್ಪ ಆಸಕ್ತಿಯನ್ನು ಗಟ್ಟಿಮಾಡಿಕೊಳ್ಳಬೇಕು
  •  ಜಗಳ ಬೇಡ ಕೇವಲ ಮಾತಿನಿಂದ ನೀವು ಹೇಳಬೇಕಾದ್ದನ್ನು ಹೇಳಿ
  •  ಹಳೆಯ ನಷ್ಟಕ್ಕೆ ಅವಮಾನಕ್ಕೆ ಇಂದು ಪ್ರತೀಕಾರದ ಸಮಯವಾಗಿರುತ್ತದೆ
  • ನಿಮಗಿರುವ ಬುದ್ಧಿವಂತಿಕೆಯಿಂದ ನಿಮ್ಮ ವಿರೋಧಿಗಳನ್ನು ಸೋಲಿಸುತ್ತೀರಿ
  •  ಸಾಲಿಗ್ರಾಮ ಮಹಾವಿಷ್ಣುವನ್ನು ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ನಿಮ್ಮ ಜವಾಬ್ದಾರಿಯುತ ಕೆಲಸಗಳು ಸಕಾಲದಲ್ಲಿ ಮುಗಿಯಬಹುದು
  • ಸ್ನೇಹಿತರೊಂದಿಗೆ ಸೇರಿ ಹೊಸ ಯೋಜನೆ ರೂಪಿಸಲು ಅವಕಾಶವಿದೆ
  • ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ
  • ಕೆಲಸದಲ್ಲಿ ಬಡ್ತಿ ಅಥವಾ ಹಣ ನಿಮ್ಮ ಕೈ ಸೇರುತ್ತದೆ
  • ಕೌಶಲ್ಯದ ಕೆಲಸ ನಿಮಗೆ ಸಹಾಯಕವಾಗುವಂತೆ ಮಾಡಬಹುದು
  • ಮಕ್ಕಳ ವಿಚಾರವಾಗಿ ಇದ್ದ ಚಿಂತೆ ದೂರವಾಗಬಹುದು
  • ಕುಲದೇವತಾ ಆರಾಧನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ನಿಮ್ಮ ಧೈರ್ಯ ಹಾಗೂ ಭಾವನೆಗಳಿಗೆ ಭಂಗ ಬರಬಹುದು ಎಚ್ಚರಿಕೆಯಿರಲಿ
  • ಸಾಧನೆ ಮತ್ತು ಪ್ರಗತಿಯ ಬಗ್ಗೆ ಅಹಂಭಾವ ಬೇಡ
  •  ಹಣ ಮತ್ತು ದ್ರವ್ಯ ಕಳೆದುಕೊಳ್ಳುವ ಸಾಧ್ಯತೆಗಳಿವೆ
  •  ವಿನಾಕಾರಣ ವಾದ-ವಿವಾದಗಳು ಬೇಡ
  •  ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
  • ಅಪರಿಚಿತ ಭಯ ಕಾಡಬಹುದು 
  •  ಮಾಟ-ಮಂತ್ರ ಇತ್ಯಾದಿಗಳ ಬಗ್ಗೆ ವಿಚಾರ ಮಾಡುತ್ತೀರಿ
  • ಪ್ರತ್ಯಂಗಿರಾ ಹೋಮ ಮಾಡಿಸಿ

ಧನುಸ್ಸು

RASHI_BHAVISHA_DHANASU

  • ಮನೋರಂಜನೆಯನ್ನು ಅನುಭವಿಸುವ ಮೂಲಕ ಸಂತೋಷಿತರಾಗುತ್ತೀರಿ
  •  ಚಿಕ್ಕಮಕ್ಕಳಿಗೆ ಸಮಸ್ಯೆ ಇರುವುದರಿಂದ ಮಕ್ಕಳ ಬಗ್ಗೆ ಗಮನವಿರಲಿ 
  • ಕೈ ಹಾಕಿದ ಕೆಲಸಗಳು ಪೂರ್ಣವಾಗುವ ಸೂಚನೆಯಿರುತ್ತದೆ
  • ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
  • ಸಮಾಜ ಕಾರ್ಯ ಜನಸೇವೆಯಲ್ಲಿ ಉತ್ಸುಕರಾಗಿರುತ್ತೀರಿ
  • ವಿದೇಶಿ ಪ್ರಯಣಕ್ಕಾಗಿ ಪ್ರಯತ್ನಿಸುತ್ತಿದ್ದವರಿಗೆ ಈ ದಿನ ಶುಭವಿದೆ
  • ಅಶ್ವತ್ಥ ಪ್ರದಕ್ಷಿಣೆ ಮಾಡಿ

ಮಕರ

RASHI_BHAVISHA_MAKARA

  • ಕುಟುಂಬ ಸದಸ್ಯರ ಸ್ವಭಾವದಿಂದ ನಿಮಗೆ ಬೇಸರವಾಗಬಹುದು 
  • ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಬೇಕಾಗುತ್ತದೆ
  • ಪೂರ್ವಿಕರ ಆಸ್ತಿ ವಿಚಾರಗಳಲ್ಲಿ ಒಂದು ತಿರುವು ಬರಬಹುದು
  • ಹಣಕಾಸಿನ ಸಮಸ್ಯೆಯಿಂದ ಕೆಲವು ಕೆಲಸಗಳು ಸ್ಥಗಿತವಾಗಬಹುದು
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯರಿಗೆ ಶುಭಫಲವಿದೆ
  • ಕಾರ್ಯಕ್ಷೇತ್ರದಲ್ಲಿ ಕೆಲವು ಅರಿವಿಲ್ಲದ ಸಮಸ್ಯೆಗಳುಂಟಾಗಬಹುದು
  • ಕಾಮಧೇನು ಮಂತ್ರವನ್ನು ಜಪಿಸಿ

ಕುಂಭ

RASHI_BHAVISHA_KUMBHA

  • ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ವಿನಾಕಾರಣ ಮಾತು ಬೇಡ 
  • ಕಾರ್ಯ ನಿಮಿತ್ತ ಪ್ರಯಾಣ ಮಾಡಬಹುದು
  • ಒಂದೇ ಸಮಯದಲ್ಲಿ 2-3 ಕೆಲಸಗಳಾಗುವ ಸಾಧ್ಯತೆಗಳಿವೆ ಶುಭವಿದೆ
  • ಮನೆಯಲ್ಲಿ ಕೆಲಸಗಾರರಿದ್ದರೆ ಸ್ವಲ್ಪ ಜಾಗ್ರತೆವಹಿಸಿ
  • ವಿದ್ಯಾರ್ಥಿಗಳಿಗೆ ಗಂಭೀರ ವಿಷಯಗಳನ್ನು ಅಧ್ಯಯನ ಮಾಡಲು ಆಸಕ್ತಿ ಬರಬಹುದು
  •  ನಿಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿಯುತ ಕೆಲಸ ನಿಮ್ಮ ಹೆಗಲೇರಲಿದೆ 
  • ಶಿಂಶುಮಾರ ಮಂತ್ರವನ್ನು ಜಪ ಮಾಡಿಸಿ

ಮೀನ

RASHI_BHAVISHA_MEENA

  •  ಮನೆಯಲ್ಲಿ ಪರಸ್ಪರ ವಿವಾದಗಳು ಉಂಟಾಗಬಹುದು
  • ಯಾವುದೇ ಕಾರಣಕ್ಕೂ ಸಾಲ ಮಾಡುವುದು ಬೇಡ
  • ಖರ್ಚನ್ನು ಸರಿಯಾಗಿ ಗಮನಿಸಿ ಆದಾಯಕ್ಕೆ ಹೊಂದಿಕೆಯಾಗುವಂತೆ ಮಾಡಿ
  •  ಕೆಂಪುವಸ್ತ್ರ ಧರಿಸಿ ಶುಭವಾಗಲಿದೆ
  •  ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಬರಬಹುದು 
  • ತಾಯಿಯ ಆಶೀರ್ವಾದದ ಮೂಲಕ ಈ ದಿನದ ಕೆಲಸವನ್ನು ಆರಂಭಿಸಿ
  • ಸ್ರಷ್ಟಾ ಮಂತ್ರಜಪದಿಂದ ಶುಭವಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment