/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ಉತ್ತರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಲು ಉತ್ತಮವಾದ ದಿನ
- ಅನಿರೀಕ್ಷಿತ ಧನಾಗಮನ ಆಗುತ್ತದೆ
- ಸಮಾಜದಲ್ಲಿ ಹೆಸರನ್ನು ಗಳಿಸುವ ಅವಕಾಶ ನಿಮಗೆ ಸಿಗಲಿದೆ
- ಕೈ ಹಿಡಿದ ಕೆಲಸಗಳಲ್ಲಿ ಹಿನ್ನಡೆ ಕಾಣುತ್ತದೆ ನೀವು ತಲೆಕೆಡೆಸಿಕೊಳ್ಳುವುದಿಲ್ಲ
- ಮಕ್ಕಳು ತುಂಬಾ ವಿಧೇಯರಾಗಿರುತ್ತಾರೆ, ಪೋಷಕರಿಗೆ, ಶಿಕ್ಷಕರ ಮನಸ್ಸಿಗೆ ಸಂತೋಷ ಸಿಗಲಿದೆ
- ಸ್ನೇಹಿತರ ಪ್ರೀತಿಗೆ ಕಟ್ಟುಬಿದ್ದು ಈ ದಿನ ವ್ಯರ್ಥವಾಗಬಹುದು
- ಗುರುದಕ್ಷಿಣಾ ಮೂರ್ತಿಯನ್ನು ಆರಾಧನೆ ಮಾಡಿ
ವೃಷಭ
- ಹಿರಿಯರು ನಿಮ್ಮನ್ನು ತುಂಬಾ ಅಭಿಮಾನದಿಂದ ಕಾಣುತ್ತಾರೆ ಕಿರಿಯರು ಗೌರವಿಸುತ್ತಾರೆ
- ಮಂಗಳ ಕಾರ್ಯದಲ್ಲಿ ಭಾಗಿಯಾಗಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡುವ ಸಾಮರ್ಥ್ಯವಿರುತ್ತದೆ
- ಸಂಬಂಧಿಕರು ನಿಮ್ಮನ್ನು ಹಣಕ್ಕಾಗಿ ಹಿಂಸಿಸಬಹುದು
- ಬೇರೆಯವರ ಸಮಸ್ಯೆಗಳನ್ನ ಬಗೆಹರಿಸುವುದಕ್ಕೆ ಹೋಗಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ
- ನಿಮ್ಮ ಒಳ್ಳೆಯ ಸ್ವಭಾವ, ನಿಮ್ಮ ವ್ಯಕ್ತಿತ್ವ, ವರ್ತನೆ ಬೇರೆಯವರಿಗೆ ಮಾರ್ಗದರ್ಶಿ ಆಗುವಂತಹದ್ದು
- ವ್ಯವಹಾರದ ದೃಷ್ಠಿಯಿಂದ ಸಾಧಾರಣವಾದ ದಿನ
- ಮನೆದೇವರನ್ನು ಪ್ರಾರ್ಥಿಸಿ
ಮಿಥುನ
- ಆಧ್ಯಾತ್ಮಿಕವಾಗಿ ಚಿಂತಿಸುತ್ತೀರಿ, ಆದರೆ ಪ್ರಯೋಜನವಾಗುವುದಿಲ್ಲ
- ತುಂಬಾ ತಿರುಗಾಟ ಇರುತ್ತದೆ ಆದರೆ ಆದಾಯ ಮಾತ್ರ ಇರುವುದಿಲ್ಲ
- ವಿದ್ಯಾರ್ಥಿಗಳಿಗೆ ಹಣದ ದೃಷ್ಟಿಯಿಂದ ಸ್ವಲ್ಪ ಸಂಕಷ್ಟದ ದಿನ
- ಯೋಜನಾ ಬದ್ಧವಾಗಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಹುದು
- ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಜಗಳ ಆಗಬಹುದು ಆದರೆ ಏನು ಪ್ರಯೋಜನವಾಗುವುದಿಲ್ಲ
- ಕೆಲಸದ ಒತ್ತಡ ತುಂಬಾ ಇರುತ್ತದೆ ಜಾಗರೂಕತೆಯಿಂದ ನಿಭಾಯಿಸಬೇಕು
- ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಿ
- ಇಷ್ಟದೇವತೆಯನ್ನು ಪ್ರಾರ್ಥಿಸಿ
ಕಟಕ
- ಕರ್ತವ್ಯ ಲೋಪದಿಂದ ನಿಮ್ಮ ಮೇಲೆ ಆಪಾದನೆ ಬರಬಹುದು
- ಮನೆಯ ನವೀಕರಣ ಮತ್ತು ಅಲಂಕಾರಕ್ಕೆ ಹಣ ಖರ್ಚಾಗಲಿದೆ
- ದಾಂಪತ್ಯ ಜೀವನ ಸುಖಮಯವಾಗಿದ್ದರೂ ಕೂಡ ನೀವು ಆಸ್ಪದ ಕೊಡುವುದಿಲ್ಲ
- ವಿನಾಕಾರಣ ಕೋಪಗೊಳ್ಳುತ್ತೀರಿ ಇದರಿಂದ ಮನೆಯವರಿಗೆಲ್ಲ ಆತಂಕವಾಗುತ್ತದೆ
- ಬೌದ್ಧಿಕವಾದಂತಹ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
- ಈಶ್ವರನ ಆರಾಧನೆ ಮಾಡಿ
ಸಿಂಹ
- ಕಾನೂನು ವಿದ್ಯಾರ್ಥಿಗಳಿಗೆ ಮತ್ತು ನ್ಯಾಯವಾದಿಗಳಿಗೆ ಶುಭದಿನ
- ಒಳ್ಳೆ ರೀತಿಯ ಹಣವಾದರೆ ಮಾತ್ರ ಸ್ವೀಕರಿಸಿ ಇಲ್ಲದಿದ್ದರೆ ತಿರಸ್ಕಾರ ಮಾಡಿ
- ಆದಾಯ ಚೆನ್ನಾಗಿರುವುದರಿಂದ ನೀವಿರುವ ಜಾಗಕ್ಕೆ ಅದೃಷ್ಟ ಲಕ್ಷ್ಮೀ ಹುಡುಕಿಕೊಂಡು ಬರಲಿದೆ
- ಉಚಿತವಾಗಿ ಯಾರಿಗೂ ಸಲಹೆ ನೀಡಬೇಡಿ
- ಆರೋಗ್ಯದಲ್ಲಿ ವ್ಯತ್ಯಯ ಕಂಡರೂ ಗಾಬರಿ ಆಗೋದು ಬೇಡ
- ತುಂಬಾ ಗಂಭೀರ ಮತ್ತು ತಾಳ್ಮೆಯಿಂದ ಮಾಡಿದ ಕೆಲಸಗಳು ಕೈಗೂಡುತ್ತವೆ
- ಕುಲದೇವತೆಯನ್ನು ಆರಾಧನೆ ಮಾಡಿ
ಕನ್ಯಾ
- ಸಂಶೋಧನಾ ಕಾರ್ಯದಲ್ಲಿ ಯಶಸ್ಸನ್ನ ಹೊಂದಬಹುದು
- ನೀವು ಬೇರೆಯವರ ಹಿಂಸೆಗೆ ಒಳಗಾಗಬಹುದು
- ಸರಿಯಾದ ಲೆಕ್ಕಚಾರವಿರದೆ ಹಣದ ಅಥವಾ ವಸ್ತುವಿನ ನಷ್ಟ ಸಾಧ್ಯತೆ
- ಪ್ರಯಾಣ ಮಾಡಲು ಈ ದಿನ ಯೋಗ್ಯವಲ್ಲ ಬೆನ್ನುನೋವು ಕಾಡಬಹುದು ಎಚ್ಚರಿಕೆ
- ನಿನ್ನೆ ಮಾಡಿದ ತಪ್ಪಿನಿಂದ ಇಂದು ನಿಮ್ಮ ಕೆಲಸದಲ್ಲಿ ಸಮಸ್ಯೆ ಎದುರಿಸುತ್ತೀರಿ
- ಬಹಳ ಉತ್ತೇಜನಕಾರಿ ಕೆಲಸಗಳು ಹಾಗೆ ಉಳಿಯಬಹುದು
- ಕುಬೇರ ಲಕ್ಷ್ಮೀಯನ್ನು ಪ್ರಾರ್ಥಿಸಿ
ತುಲಾ
- ಹಳೆಯ ಘಟನೆ ಮನಸ್ಸಿಗೆ ಬಂದು ತುಂಬಾ ಭಾವುಕತೆಯನ್ನು ಉಂಟು ಮಾಡುತ್ತದೆ
- ಪ್ರೀತಿ - ಪ್ರೇಮದ ವಿಚಾರ ಪ್ರಸ್ತಾಪಕ್ಕೆ ಬಂದು ಸಿಟ್ಟನ್ನು ಮಾಡಿಕೊಳ್ತೀರಿ
- ನಿಮ್ಮ ಆಲೋಚನೆಗಳನ್ನು ಹೇಗೆ ವ್ಯಕ್ತ ಪಡಿಸಬೇಕೆಂಬ ಗೊಂದಲವಿರುತ್ತದೆ
- ಮನೆಯಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೀರಿ
- ಕಣ್ಣಿಗೆ ಹೆಚ್ಚು ಆಯಾಸ ಮಾಡಿಕೊಳ್ಳಬೇಡಿ ತೊಂದರೆಯಾಗಬಹುದು
- ತಾಯಿಯವರ ಆರೋಗ್ಯಕ್ಕೆ ಸ್ವಲ್ಪ ತೊಂದರೆಯಾಗಬಹುದು ಎಚ್ಚರವಹಿಸಿ
- ಸೂರ್ಯದೇವರನ್ನು ಪ್ರಾರ್ಥಿಸಿ
ವೃಶ್ಚಿಕ
- ಆಹಾರ ಮಿತವಾಗಿರಲಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಆದಷ್ಟು ಮನಸ್ಸನ್ನು ಧ್ಯಾನದಲ್ಲಿ ತೊಡಗಿಸಿಕೊಳ್ಳಿ ಸಮಾಧಾನ ಸಿಗುತ್ತದೆ
- ತುಂಬಾ ಆತಂಕಪಡುವ ಯಾವುದೇ ಕೆಲಸಗಳಿಗೂ ಹೋಗಬಾರದು
- ಅನಗತ್ಯ ಓಡಾಟ, ಪ್ರಯಾಣ,ಪ್ರವಾಸಗಳಿದ್ದರೆ ಮುಂದಕ್ಕೆ ಹಾಕಿ
- ರಕ್ತದೊತ್ತಡ ರೋಗಿಗಳಿಗೆ ಸ್ವಲ್ಪ ತೊಂದರೆ ಇರುವ ದಿನ ಜಾಗ್ರತೆವಹಿಸಿ
- ಪ್ರೇಮಿಗಳು ಪರಸ್ಪರ ವಾದ ಮಾಡಬಾರದು
- ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಿ ಪ್ರಾರ್ಥಿಸಿ
ಧನುಸ್ಸು
- ಉದ್ಯೋಗದಲ್ಲಿ ಹೆಚ್ಚು ಕೆಲಸದ ಹೊರೆಯಿರುತ್ತದೆ
- ಎದುರಾಳಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಹಿರಿಯರ ಮತ್ತು ಅನುಭವಿಗಳ ಸಂಪರ್ಕ ಇಟ್ಟುಕೊಳ್ಳಿ ಉಪಯೋಗವಾಗುತ್ತದೆ
- ನಿಲ್ಲಿಸಿದ ಕೆಲಸ ಇದ್ದಕ್ಕಿದ್ದಂತೆ ಪ್ರಾರಂಭವಾಗುವ ದಿವಸ
- ಅಧ್ಯಾಪನ ವೃತ್ತಿಯಲ್ಲಿ ಇರುವವರಿಗೆ ಅಪರಾಧ ಭಾವನೆ ಕಾಡಬಹುದು
- ಮನೆಯಲ್ಲಿ ಮತ್ತು ಹೊರಗಡೆ ಚಿಕ್ಕ ಮಕ್ಕಳ ಜೊತೆಯಲ್ಲಿ ಆನಂದವಾಗಿರುತ್ತೀರಿ
- ಸರಸ್ವತಿ ಆರಾಧನೆ ಮಾಡಿ
ಮಕರ
- ನಿಮ್ಮ ಜವಾಬ್ದಾರಿ ಪೂರ್ಣ ಆಗುವುದಿಲ್ಲ, ಮನಸ್ಸಿಗೆ ಬೇಸರವಾಗುವ ದಿನ
- ವಿವಾಹ ವಿಚಾರದಲ್ಲಿ ಕಹಿಯ ವಾತಾವರಣ
- ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಸಮಸ್ಯೆ ಇದ್ದು ಬೇಸರ ತರುವಂತಹದ್ದು
- ಯಾವ ಕೆಲಸದಲ್ಲೂ ಮಾನಸಿಕ ಕೀಳರಿಮೆ ಇರಬಾರದು
- ಪ್ರಯತ್ನ ಕಡಿಮೆ ಮಾಡಿ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತೀರಿ
- ಕೆಲವು ಕಾರಣಗಳಿಂದ ಕೆಲವು ಕೆಲಸಗಳು ಸ್ಥಗಿತಗೊಳ್ಳಬಹುದು
- ಆದಾಯದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ ಅಸಮಾಧಾನ ಹೊಂದುತ್ತೀರಿ
- ಧರ್ಮಸ್ಥಳ ಮಂಜುನಾಥೇಶ್ವರನನ್ನು ಆರಾಧಿಸಿ
ಕುಂಭ
- ಆತ್ಮ ಗೌರವ ಹೆಚ್ಚಿಸಿಕೊಳ್ಳಿ ಯಾವುದೇ ವಿಷಯದಲ್ಲೂ ಕೂಡ ರಾಜಿ ಮಾಡಿಕೊಳ್ಳಬೇಡಿ
- ಪ್ರೇಮಿಗಳ ಮಧ್ಯದಲ್ಲಿ ಅನುಮಾನಗಳು ಭಿನ್ನಾಭಿಪ್ರಾಯಗಳು ಹೆಚ್ಚು ಬರಲಿದೆ
- ಆತುರದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ
- ಮಾನಸಿಕ ಚಂಚಲತೆ ನಿಯಂತ್ರಣದಲ್ಲಿಟ್ಟುಕೊಳ್ಳಿ
- ಆಹಾರ ಪದ್ಧತಿಯಲ್ಲಿ ಜಾಗರೂಕರಾಗಿರಿ
- ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯ ಮಾಡಿ ತೊಂದರೆಗೆ ಕಾರಣರಾಗುತ್ತಾರೆ
- ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ
ಮೀನ
- ಸಾಲ ಸುಲಭವಾಗಿ ಸಿಗುತ್ತದೆ ಆದರೆ ಯೋಚನೆ ಮಾಡಿ
- ಉದ್ಯೋಗ ಪ್ರಾಬಲ್ಯ ಹೆಚ್ಚಾಗುತ್ತದೆ
- ಪುರಸ್ಕಾರ, ಬಹುಮಾನ ಎಲ್ಲವೂ ನಿಮ್ಮ ಪಾಲಾಗಲಿದೆ
- ಬಿಡುವಿಲ್ಲದ ಕೆಲಸದ ಮಧ್ಯೆ ಅತಿಯಾದ ಸಂತೋಷವನ್ನ ನಿಮ್ಮದಾಗಿಸಿಕೊಳ್ಳುತ್ತೀರಿ
- ಆದರೆ ಉಪಯೋಗಿಸಿದ ವಾಹನ ಕೊಂಡುಕೊಳ್ಳುವುದು ಬೇಡ
- ಕೋಪ ಮತ್ತು ಉತ್ಸಾಹ ಎರಡೂ ನಿಯಂತ್ರಣದಲ್ಲಿರಬೇಕಾಗುತ್ತದೆ
- ಹೊಸ ವಾಹನ ಖರೀದಿಸುವ ಯೋಗವಿದೆ
- ಕುಲದೇವತಾ ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ