/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಕೋಪದಿಂದ ಹೋರಾಟ ಮಾಡಿ ಕೊನೆಗೆ ಸೋಲನ್ನು ಅನುಭವಿಸುತ್ತೀರಿ
- ಸಮಾಜ ಯಾವುದನ್ನ ಒಪ್ಪತ್ತೊ ಅದನ್ನ ನಿಮ್ಮ ಮನಸ್ಸು ಒಪ್ಪುವುದಿಲ್ಲ
- ಅನಗತ್ಯ ಕೆಲಸಗಳಲ್ಲಿ ಮನಸ್ಸು ಆಸಕ್ತಿ ತೋರಿಸುತ್ತದೆ
- ಹಣ ಖರ್ಚಾಗಬಾರದು ಆದರೆ ಎಲ್ಲಾ ಕೆಲಸ ಆಗಬೇಕು ಅನ್ನೋ ಮನೋಭಾವ
- ಈ ದಿನ ತುಂಬಾ ತಾಳ್ಮೆಯಿಂದಿರಿ
- ಬೇರೆಯವರ ಬಗ್ಗೆ ನಿಮಗೆ ನಂಬಿಕೆ ಇಲ್ಲದಿರುವುದು
- ಸಂಪತ್ಪ್ರದ ಗೌರಿದೇವಿಯನ್ನು ಆರಾಧಿಸಿ
ವೃಷಭ
- ನಿವೃತ್ತ ಜೀವನ ನಡೆಸುತ್ತಿರುವವರಿಗೆ ಸ್ಥಾನ ಪಲ್ಲಟವಾಗಬಹುದು
- ನಕಾರಾತ್ಮಕ ಚಿಂತನೆ ಇರುವ ಮಕ್ಕಳ ವಿಷಯದಲ್ಲಿ ದೂರ ಇದ್ದರೆ ಒಳ್ಳೆಯದು
- ಮಕ್ಕಳಿಗೆ ತಮ್ಮ ಕೆಲಸವೇ ಹೆಚ್ಚಾಗುವುದರಿಂದ ಪೋಷಕರ ಬಗ್ಗೆ ಗಮನವಿರುವುದಿಲ್ಲ
- ಹಣದ ಬೆಲೆ ನಿಮಗೆ ಗೊತ್ತಾಗುವ ದಿನ
- ಬೇರೆ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ಸಿಗದೆ ತೊಂದರೆ ಎದುರಿಸುತ್ತೀರಿ
- ಇಂದು ನಿಮ್ಮ ಶರೀರದಲ್ಲಿ ಸುಸ್ತು ಕಾಣಬಹುದು
- ಚಿಕ್ಕಮಕ್ಕಳ ಚರ್ಮದಲ್ಲಿ ತೊಂದರೆಯಾಗಲಿದೆ ಜಾಗ್ರತೆ
- ರಾಜರಾಜೇಶ್ವರಿಯನ್ನು ಆರಾಧಿಸಿ
ಮಿಥುನ
- ದಿನದ ದೃಷ್ಠಿಯಿಂದ ಅದೃಷ್ಟ ಚೆನ್ನಾಗಿದೆ ಅಂತ ಅಂದುಕೊಳ್ಳುವ ರೀತಿಯಲ್ಲಿರುವುದಿಲ್ಲ
- ಚಿಕ್ಕ ಮಕ್ಕಳಿಗೆ ಮಾತಿನ ಸಮಸ್ಯೆ ಅಥವಾ ಗಂಟಲಿನ ಸಮಸ್ಯೆ ಹೆಚ್ಚಾಗಿ ಕಾಡಲಿದೆ
- ಪೋಷಕರ ನಡುವೆ ಮಾತು ಮಾತಿಗೆ ಜಗಳ ಉಂಟಾಗುವ ಸಾಧ್ಯತೆ ಇದೆ
- ತಾಯಿಯ ಆರೋಗ್ಯ ಚೆನ್ನಾಗಿದೆ ಎಂದು ತೀರ್ಮಾನಿಸಲಾಗುವುದಿಲ್ಲ
- ಮಾನಸಿಕ, ಆರ್ಥಿಕ ಹೊಡೆತಗಳೆರಡೂ ಕೂಡ ಒಟ್ಟಿಗೆ ಕಾಡುವಂತದ್ದು
- ದಿನಸಿ ವ್ಯಾಪಾರಿಗಳಿಗೆ ಶುಭದಾಯಕವಾಗಿದೆ
- ಸಪ್ತಋಷಿಗಳ ಧ್ಯಾನ ಮಾಡಿ
ಕಟಕ
- ಖರೀದಿಯ ಬಗ್ಗೆ ಹೆಚ್ಚು ಕಾಳಜಿವಹಿಸಿ
- ಸಾಲ ಮಾಡುವುದರಿಂದ ಕುಟುಂಬದ ಕಲಹಕ್ಕೆ ಕಾರಣವಾಗುತ್ತದೆ
- ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನವಹಿಸಬೇಕಾಗುತ್ತದೆ
- ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ
- ತಮ್ಮ ಜೊತೆ ಪ್ರಯಾಣಿಸುವವರಿಗೆ ತೊಂದರೆಯಾಗಬಹುದು ಗಮನವಹಿಸಿ
- ಅಗ್ನೈಶ್ವರ್ಯ ಮಂತ್ರ ಜಪಿಸಿ
ಸಿಂಹ
- ಗಣಿತ ಶಾಸ್ತ್ರವನ್ನು ಅಭ್ಯಾಸ ಮಾಡುವವರಿಗೆ ಶುಭವಿದೆ
- ಹಲವು ದಿನಗಳಿಂದ ಸ್ಥಗಿತವಾಗಿದ್ದ ಕೆಲವು ಕೆಲಸಗಳಿಗೆ ಚಾಲನೆ ಸಿಗಲಿದೆ
- ಪೋಷಕರ ಮತ್ತು ಅಧ್ಯಾಪಕರ ಸಲಹೆ ಮೇರೆಗೆ ಮಾಡುವಂತಹ ಕೆಲಸಗಳು ಜಯಪ್ರದವಾಗಲಿದೆ
- ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ
- ಅನಗತ್ಯ ಪ್ರಯಾಣ ಕಾಲಾಹರಣವನ್ನು ತಡೆಹಿಡಿಯಬೇಕಾಗುತ್ತದೆ
- ಪ್ರೇಮಿಗಳಿಗೆ ಶುಭದಿನ ಆದರೆ ಒತ್ತಡ ಸಮಯಾಭಾವ ಇರುತ್ತದೆ
- ಸಾಮ್ರಾಜ್ಯ ಲಕ್ಷ್ಮಿಯನ್ನು ಆರಾಧನೆ ಮಾಡಿ
ಕನ್ಯಾ
- ಉದ್ಯೋಗದಲ್ಲಿದ್ದ ಭಯ ಈ ದಿನ ನಿವಾರಣೆಯಾಗುತ್ತದೆ
- ಹಿರಿಯರ ಬೆಂಬಲ ನಿಮಗೆ ಹಲವಾರು ರೀತಿಯಲ್ಲಿ ಅನುಕೂಲತೆಯಾಗುವ ಸೂಚನೆ ತೋರಿಸುತ್ತದೆ
- ಅನೇಕ ಕೆಲಸಗಳು ನಿಮ್ಮ ಜವಾಬ್ದಾರಿಯಿಂದ ಬೇಗ ಪೂರ್ಣಗೊಳ್ಳುತ್ತವೆ
- ಶಿಸ್ತುಬದ್ಧವಾದ ಜೀವನ ನಿಮಗೆ ಸ್ಫೂರ್ತಿದಾಯಕವಾಗಿರುತ್ತದೆ
- ಮಕ್ಕಳನ್ನ ಪ್ರೀತಿಯಿಂದ ಸಹನೆಯಿಂದ ಉಪಚಾರ ಮಾಡಿ
- ಪ್ರೇಮ ವಿಚಾರಕ್ಕೆ ಮನೆಯಲ್ಲಿ ಗಲಾಟೆಯ ಆಗಬಹುದು
- ನವಗ್ರಹ ಮಂತ್ರ ಪಠಿಸಿ
ತುಲಾ
- ಜನರೊಂದಿಗೆ ನೀವು ವರ್ತಿಸುವ ರೀತಿ ನಾಟಕೀಯವಾಗಿರುವ ಹಾಗೆ ಕಾಣತ್ತೆ ಸ್ವಾಭಾವಿಕವಾಗಿರಿ
- ವಿದ್ಯಾರ್ಥಿಗಳು ಹೊಸ ತಂತ್ರ ಬಳಸಿ ನಿಮ್ಮ ಪ್ರಗತಿ ತೋರಿಸಬಹುದು
- ಹಣ ಉಳಿಸುವುದಕ್ಕೆ ತುಂಬಾ ಹೋರಾಟ ಮಾಡಿ ವಿಫಲರಾಗುತ್ತೀರಿ
- ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶಗಳಿವೆ
- ಧಾರ್ಮಿಕ ಕ್ಷೇತ್ರಗಳ ವಿಚಾರವಾಗಿ ಅಸಭ್ಯವಾಗಿ ವರ್ತಿಸಿ ಸಿಕ್ಕಿಹಾಕಿಕೊಳ್ಳುತ್ತೀರಿ
- ವೈಶ್ರವಣ ಮಂತ್ರವನ್ನು 108 ಬಾರಿ ಪಠಿಸಿ
ವೃಶ್ಚಿಕ
- ಪಿತ್ರಾರ್ಜಿತ ಆಸ್ತಿಯ ವಿಚಾರಗಳಿಗೆ ಕೋರ್ಟ್​ ಮೆಟ್ಟಿಲೇರುವ ಸಾಧ್ಯತೆಗಳಿವೆ
- ಈಜು ಪಟುಗಳಿಗೆ ಗಾಯವಾಗುವ ಸೂಚನೆಗಳಿವೆ ನಿಗಾವಹಿಸಿ
- ಮಾತನಾಡುವಾಗ ಒಳ್ಳೆಯ ಭಾಷೆ ನಿಮ್ಮ ಸ್ವಾಧೀನದಲ್ಲಿರಬೇಕು
- ನೀವು ಆಡುವ ಮಾತಿನಿಂದ ನಿಮ್ಮ ಗೌರವ ಹೆಚ್ಚಾಗಬಹುದು
- ಕೆಲವು ವೇಳೆ ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು
- ಹಣದ ಖರ್ಚು, ಮಾನಸಿಕವಾಗಿ ಬೇಸರ ಬಂಧುಗಳಲ್ಲಿ ವಿರಸ ಕಾಡಬಹುದು
- ನ್ಯಾಯ ಸಮ್ಮತವಾದ ವಿಚಾರಕ್ಕೆ ಅಡ್ಡಿಯಾಗಿ ಕೋಪ ಬರುವ ಸಾಧ್ಯತೆ ಇದೆ
- ದಕ್ಷಿಣ ಕಾಳಿಯನ್ನು ನೀಲಿ ಹೂಗಳಿಂದ ಅರ್ಚಿಸಿ
- ವಿದೇಶಿ ಕಂಪನಿಗಳಿಂದ ಉತ್ತಮವಾದ ಕೆಲಸಗಳಿಗೆ ಆಹ್ವಾನ ಬರಬಹುದು
- ಆದರೆ ನೀವು ಮಾಡುತ್ತಿರುವ ಕೆಲಸದ ಬಗ್ಗೆ ತೃಪ್ತಿ ಇರುವುದರಿಂದ ಆ ವಿಚಾರವನ್ನು ಕೈ ಬಿಡುವ ಸಾಧ್ಯತೆ ಇದೆ
- ಕುಟುಂಬದಲ್ಲಿ ಎಲ್ಲಾ ವಿಚಾರಗಳಿಗೂ ಭಿನ್ನಾಭಿಪ್ರಾಯ ಹುಟ್ಟಬಹುದು
- ಹಳೆಯ ಸ್ನೇಹಿತರ ಸಲಹೆ ಕೆಲವು ಸಹಾಯದಂತೆ ತೋರುತ್ತದೆ
- ನಿಮ್ಮ ಸಮಸ್ಯೆಗಳನ್ನು ಬಿಡಿಸಿ ಹೇಳಿ ಪರಿಹಾರ ಕಂಡುಕೊಳ್ಳಬಹುದು
- ಕೆಲಸ ಕಾರ್ಯಗಳಲ್ಲಿ ಭವಿಷ್ಯ ಚೆನ್ನಾಗಿರುತ್ತದೆ
- ಎರಡನೇ ಮದುವೆ ಆದವರಿಗೆ ತುಂಬಾ ತೊಡಕುಗಳು ಎದುರಾಗುತ್ತದೆ
- ಶುಕ್ರಗ್ರಹ ಮಂತ್ರ ಪಠಿಸಿ
ಮಕರ
- ಮುಂಚಿತವಾಗಿ ಸಿದ್ಧಪಡಿಸಿಟ್ಟ ಅಹಾರ ಸೇವನೆಯಿಂದ ತೊಂದರೆಯಾಗಬಹುದು
- ವ್ಯಾಪಾರ ವ್ಯವಹಾರಗಳಲ್ಲಿ ಹಣದ ಹೂಡಿಕೆ ಮನಸ್ಸಿಗೆ ನೆಮ್ಮದಿ ಸಿಗಲಿದೆ
- ನಿಮ್ಮ ಆಸೆ ಮತ್ತು ಶಿಸ್ತನ್ನು ಬೇರೆಯವರ ಮೇಲೆ ಹೇರಿಕೆ ಮಾಡಬಾರದು
- ಸಾಯಂಕಾಲ ಹೊತ್ತಿಗೆ ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತದೆ
- ಅನಗತ್ಯ ವಿವಾದಗಳು ಏರ್ಪಾಡಾಗುತ್ತದೆ
- ಮುಖ್ಯವಾಗಿ ಗಂಟಲಿನ ಸಮಸ್ಯೆ ಕಾಣಬಹುದು ಜಾಗ್ರತೆವಹಿಸಿ
- ವ್ಯಾಘ್ರವಾಹನ ಚಾಮುಂಡೇಶ್ವರಿಯನ್ನು ಪೂಜಿಸಿ
ಕುಂಭ
- ಜನರಿಂದ ನಿಮ್ಮ ಭಾವನೆಗಳಿಗೆ ಗೌರವ ಮನ್ನಣೆ ದೊರೆಯುತ್ತದೆ
- ಭೋಗ ಜೀವನ ನಡೆಸುವವರಿಗೆ ಅನ್ನದ ಬೆಲೆ ತಿಳಿಯುವಂತದ್ದು
- ಕುಟುಂಬದ ಸದಸ್ಯರಾಗಲಿ ಅಥವಾ ಸ್ನೇಹಿತರಾಗಲಿ ಯಾರು ಸಹಾಯ ಮಾಡುವುದಿಲ್ಲ
- ಹಲವಾರು ವಾದ-ವಿವಾದಗಳು ಏರ್ಪಾಡಾಗುತ್ತದೆ
- ಇಂದು ಸಿಟ್ಟು ತಾರಕಕ್ಕೆ ಏರಬಹುದು
- ಜೊತೆಯಲ್ಲಿಯೇ ಇರುವವರಿಗೆ ನಿಮ್ಮ ಕೋಪದಿಂದ ತೊಂದರೆಯಾಗುವ ಸಾಧ್ಯತೆ ಇದೆ
- ವೈಷ್ಣವೀ ಮಂತ್ರ ಪಠಣೆ ಮಾಡಿ
ಮೀನ
- ಕಷ್ಟಪಟ್ಟು ಸಂಪಾದಿಸಿದ ಹಣ ಅನುಪಯುಕ್ತವಾದ ಕೆಲಸಕ್ಕೆ ಖರ್ಚಾಗುವ ಸಾಧ್ಯತೆ ಹೆಚ್ಚು
- ಕೆಲಸದ ಆಮಿಷ ಒಡ್ಡಿ ಹಣವನ್ನು ನಿಮ್ಮಿಂದ ಕಸಿದುಕೊಳ್ಳಬಹುದು ಜಾಗ್ರತೆ
- ಹಣವನ್ನು ಮತ್ತೆ ಸಂಪಾದನೆ ಮಾಡುವ ಶಕ್ತಿಯಿದ್ದರೂ ಮನೋಬಲ ಕಡಿಮೆಯಾಗುತ್ತದೆ
- ಕೆಲವು ನಿರ್ಧಾರಗಳು ಇದಕ್ಕಿದ್ದ ಹಾಗೆ ಬದಲಾಗುವ ಸೂಚನೆಗಳಿವೆ
- ಮನೆಯಲ್ಲಿಯೂ ಸಣ್ಣ ಪುಟ್ಟ ಸಮಸ್ಯೆಗಳು ಕಾಡಬಹುದು
- ಈ ದಿನ ಮಾನಸಿಕ ಬೇಸರ ಉಂಟಾಗುತ್ತದೆ
- ವಿರೋಧಿಗಳ ಬಗ್ಗೆ ಎಚ್ಚರವಿದ್ದರೂ ಸಹ ಮೋಸ ಹೋಗುವ ಸಾಧ್ಯತೆಗಳಿವೆ
- ಕನಕದುರ್ಗಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ