/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು, ಆಶ್ವಯುಜ ಮಾಸ ಶುಕ್ಲ ಪಕ್ಷ ಪಂಚಮಿ ತಿಥಿ ಅನೂರಾಧ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಮನೆಯವರೊಂದಿಗಿನ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ
- ಬೇರೆಯವರಿಗೆ ಸಹಾಯ ಸಹಕಾರ ಮಾಡುತ್ತೀರಿ ಆದರೆ ಅವರಿಂದ ಬರುವ ಸಲಹೆಗಳು ಸೂಕ್ತವಾಗಿರುವುದಿಲ್ಲ
- ಮಾನಸಿಕವಾಗಿ ನೋವಿನಲ್ಲಿರುವ ನಿಮಗೆ ಅದ್ಯಾವುದು ಬೇಕಾಗಿರುವುದಿಲ್ಲ
- ನಿಮ್ಮ ಕಾರ್ಯಕ್ರಮಗಳು ತಕ್ಷಣ ನಿಂತುಹೋಗುವ ಸಾಧ್ಯತೆಗಳಿವೆ
- ಭಾವನಾತ್ಮಕವಾಗಿ ವರ್ತಿಸುವುದರಿಂದ ನಿಮ್ಮ ಕೆಲಸಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಾಣಬಹುದು
- ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಮೃತ್ಯುಂಜಯನನ್ನು ಆರಾಧಿಸಿ
ವೃಷಭ
- ಲೌಕಿಕ ಜೀವನಕ್ಕೆ ಕೊಟ್ಟಂತಹ ಬೆಲೆಯನ್ನು ಮನುಷ್ಯತ್ವಕ್ಕೆ ಕೊಡದೆ ಗೌರವ ಕಡಿಮೆಯಾಗುವ ಸಾಧ್ಯತೆ
- ಆರೋಗ್ಯ ವ್ಯವಹಾರ ಒಂದೆಡೆಯಾದರೆ ಒಂಟಿತನ ಮತ್ತೊಂದೆಡೆ ನಿಮ್ಮನ್ನ ಕಾಡಬಹುದು
- ನಾವು ಸರಿಯಾಗಿದ್ದರೆ ಏನನ್ನಾದರು ಸಾಧಿಸಬಹುದೆಂಬ ಛಲವಿರಬೇಕಾಗುತ್ತದೆ ನಿಮ್ಮ ತಪ್ಪಿನ ಅರಿವಾಗಬೇಕು
- ನಿಮ್ಮ ಜೀವನ ಎರಡೆರಡು ವಿಷಯಗಳಲ್ಲಿ ಆಶಾದಾಯಕವಾಗಿರಬಹುದು
- ಇಂದು ಜೀವನದಲ್ಲಿ ಜಿಗುಪ್ಪೆ ಕಾಡುವಂತಹ ದಿನ
- ಸಪ್ತರ್ಷಿಗಳನ್ನು ಧ್ಯಾನ ಮಾಡಿ
ಮಿಥುನ
- ಉದ್ಯೋಗಾಕಾಂಕ್ಷಿಗಳಿಗೆ ಶುಭಫಲವಿದೆ
- ವ್ಯವಹಾರ ವೃತ್ತಿಯಲ್ಲಿ ಹೊಸ ಸಿಬ್ಬಂದಿಯಿಂದ ತಿರುಕುಳ ಜಗಳವಾಗುವ ಸಾಧ್ಯತೆಯಿದೆ
- ಪ್ರಾಮಾಣಿಕವಾಗಿ ದುಡಿದ ಕಲಾವಿದರಿಗೆ ಇಂದು ಅದೃಷ್ಟ ಒಲಿಯಬಹುದು
- ನಿಮ್ಮ ಪಿತ್ರಾರ್ಜಿತ ಆಸ್ತಿಗೆ ಇನ್ನೂ ಸ್ವಲ್ಪ ಆಸ್ತಿ ಸೇರ್ಪಡೆಯಾಗಬಹುದು
- ನಿಮ್ಮ ಪ್ರತಿಭೆಯನ್ನು ವೃದ್ಧಿಗೊಳಿಸಲು ಅವಕಾಶಗಳಿವೆ ಗಮನಿಸಿ
- ಕುಬೇರ ಲಕ್ಷ್ಮಿಯ ಆರಾಧನೆ ಮಾಡಿ
ಕಟಕ
- ನಿಮ್ಮ ಜೀವನದ ಸಾಧನೆ ಹಲವರಿಗೆ ಮಾದರಿ ಆದರೆ ನೀವೇ ಬೆಲೆ ಕೊಡುವುದಿಲ್ಲ
ಈ ದಿನ ಚೆನ್ನಾಗಿದೆ - ಹೊಸತನ್ನು ಆರಂಭಿಸಲು ಸಕಾಲಕ್ಕೆ ಚಿಂತಿಸಿ
- ನಿಮ್ಮ ಸಾಮರ್ಥ್ಯ ಎಲ್ಲ ಕಡೆ ಯಶಸ್ಸು ಪಡೆಯಲು ಸಹಕಾರಿಯಾಗುವುದಿಲ್ಲ
- ಉತ್ತಮ ಫಲ ನಿರೀಕ್ಷಿಸಬಹುದಾದ ದಿನವಾಗಿದೆ
- ಹಿರಿಯರು ನಿಮ್ಮಲ್ಲಿರುವ ಪ್ರತಿಭೆಗೆ ಪ್ರಭಾವಿತರಾಗುತ್ತಾರೆ
- ದುರ್ಗಾರಾಧನೆ ಮಾಡಿ
ಸಿಂಹ
- ಬದಲಾಗುತ್ತಿರುವ ಹವಾಮಾನದಿಂದ ಶೀತ ಜ್ವರ ಕಾಣಬಹುದು ಜಾಗ್ರತೆವಹಿಸಿ
- ಹಣದ ಕೊರತೆಯಿಂದ ಕೋಪ ಬರಬಹುದು ನಿಯಂತ್ರಿಸಿ
- ಆತುರಾತುರವಾದ ನಿರ್ಧಾರಗಳು ನಿಮಗೆ ಹಿನ್ನಡೆ ಉಂಟು ಮಾಡಬಹುದು, ತಾಳ್ಮೆ ಇರಲಿ
- ಮಾನಸಿಕ ಒತ್ತಡವು ನಿಮಗೆ ತೊಂದರೆಯುಂಟು ಮಾಡಬಹುದು
- ನಿಮ್ಮ ಕಾಲಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಚ್ಚರವಹಿಸಿ
- ಯಾವುದೇ ಹೊಸ ಕೆಲಸ ಆರಂಭಿಸಬೇಡಿ
- ಇಂದ್ರಾಕ್ಷಿದೇವಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಸಮಾಜ ಮೆಚ್ಚುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತೀರಿ ಗೌರವ ಹೆಚ್ಚುವ ಸಾಧ್ಯತೆ
- ವೃತ್ತಿಯಲ್ಲಿ ಸ್ವಲ್ಪ ಲಾಭವಿರುತ್ತದೆ ಆದರೆ ತುಂಬಾ ಕಿರಿಕಿರಿ ಶೀತಲ ಸಮರ ಸಾಧ್ಯತೆ
- ಲೇಖಕರಿಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು
- ವೈಯಕ್ತಿಕವಾದ ಸಂಬಂಧಗಳಲ್ಲಿ ಸಂತೋಷವಿರುತ್ತದೆ
- ಹಣಕಾಸಿನ ವಿಚಾರದಲ್ಲಿ ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ
- ಜವಾಬ್ದಾರಿ ಸ್ಥಾನದಿಂದ ನಿಮಗೆ ಗೌರವ ಪುರಸ್ಕಾರ ದೊರೆಯಬಹುದು
- ಮನ್ಯುಸೂಕ್ತವನ್ನು ಪಠಣೆ ಮಾಡಿ
ತುಲಾ
- ಕೆಲವು ಕೆಲಸಗಳನ್ನು ಸಕಾಲಕ್ಕೆ ಮುಗಿಸಬೇಕೆಂಬ ಒತ್ತಡ ಬರಬಹುದು
- ಹೃದ್ರೋಗಿಗಳು ಎಚ್ಚರಿಕೆಯಿಂದ ಇರಬೇಕಾದ ದಿನ
- ನಿಮ್ಮ ಜವಾಬ್ದಾರಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲದಿದ್ದರೆ ಅವಮಾನ ಸಾಧ್ಯತೆ
- ಸಂಬಂಧಿಕರ ಮಾತು ಸಮಾಧಾನ ನೀಡಬಹುದು
- ತುಂಬಾ ವಿಶ್ರಾಂತಿ ಬೇಕೆನಿಸಬಹುದು ಆದರೆ ನೀವು ಮಾತ್ರ ಕಾರ್ಯತತ್ಪರರಾಗಿರುತ್ತೀರಿ
- ಹೊಸ ಕೆಲಸದ ಬಗ್ಗೆ ಮನಸ್ಸಿರುತ್ತದೆ ಧೈರ್ಯ ಮಾತ್ರ ಕಡಿಮೆಯಿರುತ್ತದೆ
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಜನರು ನಿಮ್ಮ ಸಲಹೆಗಳನ್ನು ಅಪೇಕ್ಷಿಸಬಹುದು ಸರಿಯಾದ ಸಲಹೆ ಕೊಡಿ
- ನಿಮ್ಮ ದಿಟ್ಟ ನಿರ್ಧಾರ ಬೇರೆಯವರಿಗೆ ದಾರಿದೀಪ ಸಾಧ್ಯತೆ
- ಕುಟುಂಬದವರು ನಿಮ್ಮನ್ನು ಇಷ್ಟ ಪಡುತ್ತಾರೆ ಆದರೆ ನೀವು ಅದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ
- ನಿಮ್ಮ ಸ್ನೇಹಿತರನ್ನು ವಿಶ್ವಾಸದಿಂದ ಗೌರವಿಸಿ
- ಅಹಂಭಾವ ಸ್ವಲ್ಪ ಕಡಿಮೆ ಇದ್ದರೆ ತುಂಬಾ ಒಳ್ಳೆಯದು
- ಆಂಜನೇಯನನ್ನು ಪೂಜಿಸಿ ಹನುಮಾನ್ ಚಾಲೀಸ ಪಠಣೆ ಮಾಡಿ
ಧನುಸ್ಸು
- ನಿರೀಕ್ಷಿಸಿದಷ್ಟು ಫಲಗಳು ಸಿಗಬೇಕಾದರೆ ಕಷ್ಟ ಸಾಧ್ಯ
- ವಿದ್ಯಾರ್ಥಿಗಳು ಮತ್ತು ನೌಕರರು ತುಂಬಾ ಪರಿಶ್ರಮಿಸಬೇಕಾದ ದಿನ
- ನಕಾರಾತ್ಮಕ ಆಲೋಚನೆಗಳು ನಿಮ್ಮ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ
- ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಅಪಯಶಸ್ಸು ಸಾಧ್ಯತೆ
- ಬಾಂಧವ್ಯ ತುಂಬಾ ದುರ್ಬಲವಾಗುವ ಸಾಧ್ಯತೆಯಿದೆ
- ಮನೆಗೆ ಮತ್ತೆ ಮತ್ತೆ ಸ್ನೇಹಿತರು ಬಂಧುಗಳು ಬರಬಹುದು
- ಗುರು ದಕ್ಷಿಣಾಮೂರ್ತಿಯನ್ನು ಆರಾಧನೆ ಮಾಡಿ
ಮಕರ
- ಇಂದು ಉದ್ಯೋಗ ಬದಲಾವಣೆ ಸ್ಥಾನ ಪಲ್ಲಟಕ್ಕೆ ಅವಕಾಶವಿದೆ
- ನಿಮ್ಮ ಹತ್ತಿರದವರ ಬಗ್ಗೆ ಹೆಚ್ಚು ಕಾಳಜಿವಹಿಸಿ
- ವಿದ್ಯಾರ್ಥಿಗಳು ಕಷ್ಟ ಪಟ್ಟರೂ ಸಂಕಷ್ಟ ತಪ್ಪಿದ್ದಲ್ಲ
- ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬರಬಹುದು ಆದರೆ ನಿಭಾಯಿಸುತ್ತೀರಿ
- ಬೇರೆಯವರ ತಪ್ಪುಗಳನ್ನು ಹೇಳುವ ಬದಲು ಸೂಕ್ತ ಸಲಹೆ ಕೊಟ್ಟರೆ ಒಳ್ಳೆಯದು
- ಲಲಿತಾ ಪರಮೇಶ್ವರಿಯನ್ನು ಆರಾಧನೆ ಮಾಡಿ
ಕುಂಭ
- ಬಂಧುಗಳಲ್ಲಿ, ಸ್ನೇಹಿತರಲ್ಲಿ ವಿಶ್ವಾಸವು ಗಟ್ಟಿಯಾಗುತ್ತದೆ
- ಸರ್ಕಾರಿ ಕೆಲಸಗಳಿದ್ದಲ್ಲಿ ಅವೆಲ್ಲವೂ ಪೂರ್ಣವಾಗುವ ಯೋಗವಿದೆ
- ಸಾಮಾಜಿಕ ವಲಯ ವಿಸ್ತಾರವಾಗಬಹುದು
- ಕಾರ್ಯಕ್ಷೇತ್ರದಲ್ಲಿ ಮಿತಿ ಮೀರಿದ ಅನಾಹುತಗಳು ನಿಮ್ಮ ನಿಯಂತ್ರಣಕ್ಕೆ ಬರುತ್ತವೆ
- ಶತ್ರುಗಳು ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತಾರೆ
- ನಿಮ್ಮ ಉದಾರವಾದ ವರ್ತನೆ ನಿಮಗೆ ಅನುಕೂಲ ಮಾಡಿಕೊಡಬಹುದು
- ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
ಮೀನ
- ಈ ದಿನ ತುಂಬಾ ಶಿಸ್ತುಬದ್ಧವಾಗಿರಬೇಕೆಂದು ಚಿಂತಿಸಬಹುದು ಆದರೆ ಸಾಧ್ಯವಾಗುವುದಿಲ್ಲ
- ಸಾರ್ವಜನಿಕವಾದ ಕೆಲಸಗಳಲ್ಲಿ ಭಾಗವಹಿಸುವುದು ಒಳ್ಳೆಯದು
- ನಿಮಗೆ ಬೇಕಾದಷ್ಟು ವಿರಾಮವಿರುತ್ತದೆ ಆದರೆ ಪೂರ್ತಿ ದಿನ ವ್ಯರ್ಥವಾಗುವ ಸಾಧ್ಯತೆ
- ವ್ಯವಹಾರಗಳಲ್ಲಿ ದುರ್ಬಲವಾದ ಅಂಶಗಳನ್ನು ನೋಡುವ ಸಾಧ್ಯತೆ
- ಪ್ರೇಮಿಗಳಲ್ಲಿ ಪರಸ್ಪರ ಜಗಳವಾಗುವ ಸಂದರ್ಭಗಳಿವೆ ಮಾಡುತ್ತೀರಿ
- ಕುಲದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ