ನಿರೀಕ್ಷೆಗೂ ಮೀರಿ ಒಳ್ಳೆಯದಾಗುತ್ತೆ.. ಇವತ್ತು ನಿಮ್ಮ ರಾಶಿ ಭವಿಷ್ಯ ಚೆನ್ನಾಗಿದೆ..!

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಶುಕ್ಲ ಪಕ್ಷ, ದ್ವಿತೀಯಾ (ಬಿದಿಗೆ) ತಿಥಿ, ಶ್ರವಣ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತುಂಬಾ ದಿನಗಳ ನಂತರ  ಪುಣ್ಯಕ್ಷೇತ್ರಕ್ಕೆ ಹೋಗುವ ಆಲೋಚನೆ ಮಾಡ್ತೀರಿ
  • ವಿರೋಧಿಗಳ ಜೊತೆ ವಾಗ್ವಾದ ನಡೆಯುವ ಸಾಧ್ಯತೆ ಹೆಚ್ಚು
  • ಉಗ್ರ ಸ್ವಭಾವದ ಜೊತೆಯಲ್ಲಿ ಅಂತರ ಕಾಯ್ದುಕೊಳ್ಳಿ
  • ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕಾಗುತ್ತದೆ
  • ಹಣದ ವಿಚಾರ ಬಂದಾಗ ನಿಮಗೆ ತೃಪ್ತಿ ಇರುವುದಿಲ್ಲ
  • ಆದಾಯದ ಮೂಲ ಚೆನ್ನಾಗಿರುವುದರಿಂದ ಮನಸ್ಸಿಗೆ ಸಂತೋಷವಿರಲಿದೆ
  •  ಉಗ್ರ ನರಸಿಂಹನನ್ನು ಪ್ರಾರ್ಥಿಸಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು ಸರಿಪಡಿಸಿಕೊಳ್ಳಿ
  • ಹಲವಾರು ಕೆಲಸಗಳು ನಿಮ್ಮ ಮುಂದಿರುತ್ತದೆ
  • ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲೇ ದಿನವನ್ನು ಕಳೆಯುತ್ತೀರಿ 
  • ಮುಖ್ಯವಾದ ಕೆಲಸಕ್ಕೆ ಅಡ್ಡಿಯಾಗಬಹುದು
  • ಬಂಧುಗಳಲ್ಲಿ ಅಭಿಪ್ರಾಯ ಬಹಳ ಚೆನ್ನಾಗಿರುತ್ತದೆ
  • ವಿದೇಶದಿಂದ ಇಲ್ಲಿಗೆ ಬರುವವರಿಗೂ ಕೂಡ ಯೋಗ ಸಿಗುವಂತಹದ್ದು
  • ಗಂಟಲಿನ ಸಮಸ್ಯೆ ಕಾಡಬಹುದು
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ 

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿದೇಶದಿಂದ ಧನಲಾಭವಾಗುವ ಯೋಗವಿದೆ
  • ಮನಸ್ಸಿಗೆ ಎನೋ ಸಮಾಧಾನ ಉಂಟಾಗಲಿದೆ
  • ವಿದೇಶಕ್ಕೆ ಪ್ರಯಾಣವನ್ನು ಬೆಳಿಸಬೇಕು ಅನ್ನೋ ಆಲೋಚನೆ ಇರುವವರಿಗೆ ಶುಭವಿದೆ
  • ವಿರೋಧಿಗಳಿಗೆ ಉತ್ತರ ನೀಡಲು ಸಿದ್ಧರಾಗಿರುತ್ತೀರಿ
  • ಸಾಯಂಕಾಲದ ಹೊತ್ತಿಗೆ ಬೇಸರದ ಜೊತೆ ಜಿಗುಪ್ಸೆ ಕಾಡಲಿದೆ
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ಆರ್ಥಿಕವಾಗಿ ಸುಧಾರಣೆಯಾಗುವ ದಿನ 
  • ವಿಷ್ಣು ಸಹಸ್ರನಾಮ ಪಠಣೆ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಸ್ವಭಾವ ಅನುಮಾನಾಸ್ಪದವಾಗಿ ಕಾಣುತ್ತದೆ
  • ಆರೋಗ್ಯ ಸಮಸ್ಯೆಗಳು ಇದ್ದರೆ ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ 
  • ಹಣದ ಕೊರತೆ ನಿಮಗೆ ಕಾಡಬಹುದು 
  • ಶ್ರಮದಿಂದ ಕಾರ್ಯ ಮುಗಿಸಲು ಪ್ರಯತ್ನಿಸುತ್ತೀರಿ
  • ನಿರ್ಲಕ್ಷ್ಯದಿಂದ  ಮುಖ್ಯ ಕೆಲಸಗಳನ್ನು ಕೈ ಬಿಡುವ ಸಾಧ್ಯತೆ ಇದೆ 
  • ಮಾತು ಮತ್ತು  ಅಭಿಪ್ರಾಯ ದ್ವೇಷಕ್ಕೆ ಕಾರಣವಾಗುತ್ತದೆ
  • ನಿಮ್ಮ ಜೀವನದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ
  • ಕುಲದೇವತೆಯನ್ನು ಪ್ರಾರ್ಥಿಸಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೇಮಿಗಳಿಗೆ ಶುಭದಿನ
  • ಸ್ವಾರ್ಥಕ್ಕೋಸ್ಕರ ಬೇರೆಯವರ ಸಹಾಯ ಕೇಳಬಾರದು  
  • ನಿಮಗಿರುವ ಸಂಪರ್ಕವು ಉತ್ತಮ ಕಾರ್ಯಗಳಿಗೆ ವಿನಿಯೋಗವಾಗಲಿ 
  • ತರಕಾರಿ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಲಾಭ ಸಿಗುವ ದಿನ
  • ನಿಮ್ಮ ಮಾತಿನಿಂದ ಹಲವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ
  • ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾವಕಾಶ
  • ಶಾಕಾಂಬರಿ ದೇವತೆಯನ್ನು ಆರಾಧನೆ ಮಾಡಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ  ಶುಭ ಲಾಭಗಳಿರುತ್ತದೆ
  • ನಕರಾತ್ಮಕವಾದ ಚಿಂತನೆಗಳು ಮನಸ್ಸಿನಲ್ಲಿ ಬಂದು ಭಯವನ್ನು ಹುಟ್ಟಿಸುತ್ತದೆ
  • ಮಾನಸಿಕವಾಗಿ ಏನೋ ಭಯ 
  • ಸ್ನೇಹಿತರು ಮತ್ತು  ಬಂಧುಗಳೊಂದಿಗೆ ವಿಶೇಷವಾದ ಬಾಂಧವ್ಯವನ್ನು ಉಳಿಸಿಕೊಳ್ಳಬೇಕು
  • ಹಲವರಿಗೆ ನಿಮ್ಮ ಮೇಲೆ ಕೋಪವಿರುತ್ತದೆ
  • ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ
  • ಸರ್ಕಾರಿ ಕೆಲಸಕ್ಕೆ ಅಡಚಣೆ ಇರುವುದು

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರೀತಿ ಪಾತ್ರರ ಮೇಲೆ ಅತಿಯಾದ ಅವಲಂಬನೆ ಬೇಡ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಹೆಸರು ಬರುತ್ತದೆ
  • ಆಹಾರ ಮಿತವಾಗಿರಲಿ ಅಲರ್ಜಿ ಸಮಸ್ಯೆ ಕಾಡಬಹುದು
  • ಹವ್ಯಾಸಿ ಕಲಾವಿದರು ತಮ್ಮ ಹವ್ಯಾಸಕ್ಕೆ ಅನುಗುಣವಾದಂತಹ ವಸ್ತುವಿನ ಖರೀದಿಗೆ ಹಣ ಖರ್ಚು ಮಾಡಬೇಕಾದ ದಿನ
  • ಸಿಟ್ಟಿನಿಂದ ಯಾರೊಂದಿಗೂ ಮಾತನಾಡಬಾರದು
  • ಧನ್ವಂತರಿಯನ್ನು ಪ್ರಾರ್ಥಿಸಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಆದಾಯದಷ್ಟೇ ಖರ್ಚಿರುತ್ತದೆ
  • ಹಳೆಯ ಸಾಲ ತೀರಿಸಲು ಮತ್ತೆ ಸಾಲ ಮಾಡಬಹುದು
  • ನಿಮ್ಮ ಪ್ರತಿಭೆ, ಸ್ವಭಾವ ಎಲ್ಲವೂ ಕೂಡ ಹಿರಿಯರಿಗೆ ಬಹಳ ಸಂತೋಷವನ್ನುಂಟು ಮಾಡುತ್ತದೆ
  • ಸ್ನೇಹಿತರೊಂದಿಗೆ ಗಹನವಾದ ವಿಚಾರವನ್ನ ಚರ್ಚಿಸುತ್ತೀರಿ
  • ಸಣ್ಣ-ಪುಟ್ಟ ವಿಚಾರಗಳನ್ನು ತಾತ್ಸಾರ ಮಾಡಬೇಡಿ
  • ನಿಮ್ಮ ಕೆಲಸವೆ ನಿಮಗೆ ತೃಪ್ತಿ ಕೊಡುವುದಿಲ್ಲ
  • ಹಿರಿಯರ ಪ್ರೀತಿಗೆ ಪಾತ್ರರಾಗುತ್ತೀರಿ
  • ಕುಲದೇವತಾ ಆರಾಧನೆ ಮಾಡಿ

ಧನುಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಿನಾಕಾರಣ ಹಣವನ್ನು ವಸ್ತು ಖರೀದಿಗೋಸ್ಕರ ವ್ಯಯವಾಗುವಂತಹದ್ದು ಹೆಚ್ಚಾಗಿ ಕಾಣುತ್ತದೆ
  • ಸಣ್ಣ ಪುಟ್ಟ ತಪ್ಪಿಗೋಸ್ಕರ ಹಣ ವ್ಯಯವಾಗಬಹುದು
  • ಮನೆಯವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡಬೇಕಾಗುತ್ತದೆ
  • ಆರ್ಥಿಕ ಲಾಭವಿರುವ ದಿನ
  • ಕುಟುಂಬದ ವಾತಾವರಣ ಚೆನ್ನಾಗಿರುವಂತೆ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿರುತ್ತೆ
  • ದೂರ ಪ್ರಯಾಣವನ್ನು ಮಾಡುವ ಸಾಧ್ಯತೆಗಳಿವೆ
  • ಎಲ್ಲಾ ಕೆಲಸಗಳು ಕೂಡ ತುಂಬಾ ಆತು ಆತುರವಾಗಿ ನಡೆಯುವಂತಹದ್ದು ನಿಮಗೆ ಸಮಯವೇ ಇಲ್ಲ 
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಯಾವುದೇ ಹೊಸ ಕೆಲಸಗಳನ್ನ ಪ್ರಾರಂಭಿಸಬೇಡಿ
  • ಹಣ ಹೂಡಿಕೆಗೆ ಒಳ್ಳೆಯ ದಿನ
  • ಆರೋಗ್ಯದ ವಿಚಾರಕ್ಕೆ ಒಮ್ಮೆ ಜಾತಕವನ್ನ ಪರಿಶೀಲಿಸಿಕೊಳ್ಳುವುದು ಒಳ್ಳೆಯದು
  • ವ್ಯಾವಹಾರಿಕವಾಗಿ ಸ್ವಲ್ಪ ದುರ್ಬಲರಾಗುತ್ತೀರಿ
  • ಮಕ್ಕಳಿಂದ ಚಿಂತೆ, ಹಣದ ಖರ್ಚು ನಿಮ್ಮ ಮುಂದೆ ಸವಾಲಾಗಿ ಕಾಣುವಂತಹದ್ದು
  • ಬೇರೆಯವರು ನಿಮಗೆ ತಿಳುವಳಿಕೆ ಹೇಳುವಂತೆ ಮಾಡಿಕೊಳ್ಳಬೇಡಿ
  • ಹಳೆಯ ರೋಗ ಮತ್ತೆ ಕಾಡಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ತ್ರೀಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ
  • ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು
  • ಆತ್ಮ ಸಾಕ್ಷಿಗೆ ಸರಿ ಅನಿಸಿದ ಕೆಲಸವನ್ನು ಮಾತ್ರ ಮಾಡಿ
  • ತುಂಬಾ ಒತ್ತಡಕ್ಕೆ ಮಣಿದು ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ
  • ಸತ್ಸಂಗ, ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ
  • ಕೋರ್ಟ್ ಕೆಲಸಗಳಲ್ಲಿ ಜಯ ಸಿಗಲಿದೆ
  • ನಿಮ್ಮ ಜವಾಬ್ದಾರಿ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ
  • ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಶೀತ ಸಂಬಂಧಿ ತೊಂದರೆ ನಿಮ್ಮನ್ನು ಕಾಡಬಹುದು
  • ಸಹೋದರರಿಗೆ ಯಾವುದೋ ಮಾತಿನಿಂದ ಜಗಳಕ್ಕೆ ಒಳಗಾಗುವಂತೆ ಅವಕಾಶ ಮಾಡಿಕೊಡುತ್ತೀರಿ 
  • ಕೈ ಹಾಕಿದ ಕೆಲಸದಲ್ಲಿ ಯಶಸ್ಸಿದೆ 
  • ಕುಟುಂಬದ ಕಿರಿಕಿರಿಗಳನ್ನು ದೂರಮಾಡಿಕೊಳ್ಳಬೇಕು,ಮನಸ್ಸನ್ನ ಪ್ರಶಾಂತವಾಗಿಟ್ಟುಕೊಳ್ಳಬೇಕು
  • ಮರಗೆಲಸ ಮಾಡುವವರಿಗೆ ಲಾಭದ ದಿನ
  • ಚಲನಚಿತ್ರ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾದ ದಿನ
  • ಸಾಯಂಕಾಲದ ಸಮಯದಲ್ಲಿ 108 ಬಾರಿ ಚಂದ್ರಾಯ ನಮಃ ಅಂತ ಪಠಿಸಿ

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment