/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಪ್ರಯಾಣ ಇರಬಹುದು
- ವಿದ್ಯಾರ್ಥಿಗಳು ಬೇಸರದಿಂದ ಬಲವಂತದಿಂದ ಓದಬಾರದು
- ತುಂಬಾ ಆಯಾಸ ಆಗಬಹುದು
- ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ
- ತಂದೆ ತಾಯಿಯ ಜೊತೆಯಲ್ಲಿ ವಾದ ವಿವಾದ ಆಗಬಹುದು
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆ
- ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೈಹಿಡಿದ ಕೆಲಸಗಳು ಪೂರ್ಣಗೊಳ್ಳುವುದು
- ನಿಮ್ಮ ಮಹತ್ವಕಾಂಕ್ಷೆಗಳು ಈಡೇರಬಹುದು
- ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
- ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
- ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರ ಆಗಲಿದೆ
- ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಸೇರಿ ಶಿಕ್ಷೆ ಅನುಭವಿಸುತ್ತೀರಿ
- ಸರಸ್ವತಿ ದೇವಿಯ ಆರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ಥಿರ ಆಸ್ತಿಗಳ ವಿಚಾರಕ್ಕೆ ಕಲಹ ಆಗಬಹುದು
- ಮನೆಯವರ ಯೋಗಕ್ಷೇಮದಲ್ಲಿ ಕಾಳಜಿವಹಿಸಿ
- ಸಮಾಜ ಸೇವೆಗೆ ಮನಸ್ಸು ಬರಬಹುದು
- ನವವಿವಾಹಿತರಲ್ಲಿ ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
- ಹಿರಿಯರ ಮಾರ್ಗದರ್ಶನ ಮಾತು ಫಲಿಸುವುದಿಲ್ಲ
- ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಪಠಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಷ್ಟಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ
- ಹಣದ ವಿಚಾರಕ್ಕೆ ಕಲಹವಾಗಬಹುದು
- ಈ ದಿನ ಯಾರಿಗೂ ಸಾಲಕೊಡಬೇಡಿ ಕೇಳಬೇಡಿ
- ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
- ಮನೆಯಲ್ಲಿ ನಿಮ್ಮ ಬಗ್ಗೆ ಭಿನ್ನಾಭಿಪ್ರಾಯ ಮೂಡಬಹುದು
- ದುರ್ಗಾರಾಧನೆ ಮಾಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬೇಕಾಗಬಹುದು
- ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ
- ಸಮಸ್ಯೆಗಳನ್ನು ಕ್ಷಣದಲ್ಲೆ ಬಗೆಹರಿಯಲಿದೆ
- ಹಣಕಾಸಿನ ವಿಚಾರದಲ್ಲಿ ಎಚ್ಚರತಪ್ಪಿ ವ್ಯತ್ಯಾಸಗಳಾಗಬಹುದು
- ಸಮಯೋಚಿತವಾಗಿ ಮಾತನಾಡಿ
- ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡತೆರಬೇಕಾಗಬಹುದು
- ಚಂಡಿಕಾಪಾರಾಯಣ ಮಾಡಿಸಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿವೃತ್ತ ನೌಕರರಿಗೆ ಶುಭವಿಲ್ಲ
- ಹೊಸ ಜನರ ಸಂಪರ್ಕ ಮಾಡುತ್ತೀರಿ
- ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
- ಹಿರಿಯರ ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
- ಮನಸ್ಸಿಂದ ಯಾವುದೇ ಕೆಲಸ ಮಾಡಿ ಶುಭವಿದೆ
- ಗಂಡ ಹೆಂಡತಿ ಮಧ್ಯೆ ಪರಸ್ಪರ ಅನುಮಾನ ದು:ಖ ಉಂಟಾಗಬಹುದು
- ಶಿವಾರಾಧನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
- ಪೂರ್ವಿಕರ ವೃತ್ತಿಯಿಂದ ಹಣಗಳಿಸಬಹುದು ತಾಳ್ಮೆ ಇರಲಿ
- ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
- ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣ ಆದಾಯವಿರುತ್ತದೆ
- ಮನೆಯಲ್ಲಿ ಧಾರ್ಮಿಕ ಕಾರ್ಯಚರಣೆಗೆ ಚಿಂತನೆ ನಡೆಸುತ್ತೀರಿ
- ಹೊಸ ಪರಿಚಯದವರಿಂದ ಮೋಸ ಆಗಬಹುದು
- ತಾಳ್ಮೆಗಾಗಿ ಶ್ರೀಕೃಷ್ಣನನ್ನು ಪ್ರಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಅತಿಯಾದ ಆತಂಕದಿಂದ ಸಮಸ್ಯೆಗಳು ಉಂಟಾಗಬಹುದು
- ಅನುಮಾನಾಸ್ಪದ ವರ್ತನೆಯಿಂದ ಅವಮಾನ
- ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆಯಿರಲಿ
- ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
- ಕಮೀಶನ್​ ಏಜೆಂಟ್ಸ್​ಗಳಿಗೆ ಹಣ ನಷ್ಟ ಆಗಬಹುದು
- ಕೆಟ್ಟ ಜನರ ಸಹವಾಸ ವ್ಯವಹರಿಸುವುದನ್ನು ಬಿಡಿ
- ಕುಬೇರನನ್ನು ಪ್ರಾರ್ಥಿಸಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಇಂದು ಹೊಸ ಕೆಲಸದ ಪ್ರಾರಂಭ ಬೇಡ
- ಮನೆಯಲ್ಲಿ ನಿಮ್ಮಿಂದ ನಿರೀಕ್ಷೆಗಳು ಹೆಚ್ಚಾಗಬಹುದು
- ಪ್ರೇಮಿಗಳ ನಡುವೆ ಕಲಹ ಉಂಟಾಗಬಹುದು
- ನಿಮ್ಮ ಆಸೆಗಳನ್ನು ವ್ಯಕ್ತಪಡಿಸಬೇಡಿ ಈಡೇರುವುದಿಲ್ಲ
- ನಿಮಗೆ ಹೆದರಿಕೆ ಆಗಬಹುದು
- ಈ ದಿನ ವಾಹನ ಚಾಲನೆ ಪ್ರಯಾಣ ಅಪಾಯಕಾರಿ
- ವನದುರ್ಗಾ ಪ್ರಾರ್ಥಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ರಾಜಕೀಯ ವಿಚಾರಕ್ಕೆ ಉತ್ತಮ ದಿನ
- ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
- ಅತಿಯಾದ ಶಿಸ್ತುನ್ನು ತೋರಿಸುತ್ತಾ ತೊಂದರೆಗೆ ಸಿಲುಕಿಸಬಹುದು
- ತಾಯಿ ಮತ್ತು ಹೆಂಡತಿಗೆ ಸಮಸ್ಯೆ ಕಾಣಬಹುದು
- ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
- ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
- ಲಕ್ಷ್ಮೀ ಪ್ರಾಪ್ತಿಯಿದೆ ಖರ್ಚಿನ ವಿಚಾರದಲ್ಲಿ ಅಪಮಾನ
- ಕೋಪ ಉತ್ಸಾಹಗಳೆರಡನ್ನೂ ಕಡಿಮೆ ಮಾಡಿಕೊಳ್ಳಿ
- ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿಮಾಡಿಕೊಳ್ಳಿ
- ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
- ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಬಹುದು
- ಗಣಪತಿಗೆ ಹಾಲು ಜೇನುತುಪ್ಪ ಅರ್ಪಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಕಟ್ಟಡ ನಿರ್ಮಾಣ ಅಥವಾ ಭೂ ಸಂಬಂಧಿ ಖರೀದಿ ನಡೆಯಬಹುದು
- ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
- ಸರ್ಕಾರದಿಂದ ಹಣ ಸಹಾಯ ಆಗಲಿದೆ
- ಹಣವಿದ್ದರೂ ಖರ್ಚುಮಾಡದೆ ಕೆಲಸ ಸ್ಥಗಿತ ಆಗಬಹುದು
- ವಿದೇಶದಲ್ಲಿ ಮಕ್ಕಳಿಂದ ಸಹಾಯ ಆಗಲಿದೆ
- ನಿಮ್ಮ ಕೆಲಸಕ್ಕೆ ಗ್ರಹಗತಿಯಿಂದ ಅಡ್ಡಿಯಾಗಬಹುದು ಎಚ್ಚರಿಕೆ ವಹಿಸಿ
- ಕುಬೇರಲಕ್ಷ್ಮೀ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us