/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸ್ವಲ್ಪ ಚಟುವಟಿಕೆಯನ್ನ ತೋರಿಸಬೇಕು ಆಲಸ್ಯ ಆಗಬಾರದು
- ಶಾರೀರಿಕವಾಗಿ ಮಾನಸಿಕವಾಗಿ ಅಶಕ್ತರಾಗಿರುವಂತೆ ವರ್ತನೆ ಮಾಡುತ್ತೀರಿ
- ನಿಮಗೆ ಸಾಮರ್ಥ್ಯ ಇದ್ದರೂ ಕೂಡ ನೀವು ಮಾನಸಿಕವಾಗಿ ಹಿನ್ನಡೆಯನ್ನು ತೋರಿಸುತ್ತೀರಿ
- ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಲು ಉತ್ತಮ ದಿನ
- ವ್ಯಾವಹಾರಿಕ ಕ್ಷೇತ್ರಗಳಿಗೆ ಆಧ್ಯಾತ್ಮಿಕ ತಳಹದಿ ಇರಬೇಕೆನ್ನುವುದು ಕಂಡುಕೊಳ್ಳಿ
- ಹಣದ ವಿಚಾರಕ್ಕೆ ಸ್ವಲ್ಪ ಗೊಂದಲಗಳಾಗಬಹುದು
- ಆಂಜನೇಯಸ್ವಾಮಿಗೆ ವೀಳ್ಳೆದೆಲೆ ಮತ್ತು ತುಳಸಿಯನ್ನು ಅರ್ಪಿಸಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಜೀವನಕ್ಕೆ ತೊಂದರೆಯಿರುವುದಿಲ್ಲ ಆದರೆ ಜೀವಕ್ಕೆ ಅಭದ್ರತೆ ಕಾಡಲಿದೆ
- ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕ ಸಹಾಯವಾಗಲಿದೆ
- ಹಳೆ ಸ್ನೇಹಿತರ, ಬಂಧುಗಳ ಬೇಟಿಗೆ ಕಾತುರರಾಗಿರುತ್ತೀರಿ ಆದರೆ ಅವಕಾಶವಾಗುವುದಿಲ್ಲ
- ಒಂಟಿತನ ಹೆಚ್ಚಾಗಿ ಕಾಡುವ ದಿನ
- ಲಾಭದಾಯಕ ದಿನವಾದ್ರೂ ನಿರಾಸೆ ಉಂಟಾಗಲಿದೆ
- ಕೆಲವು ಸಂದರ್ಭಗಳಲ್ಲಿ ಹಣದ ಹಿಡಿತ ಮಾಡುವುದರಿಂದ ಅವಮಾನವಾಗಲಿದೆ
- ಪ್ರತ್ಯಂಗಿರಾ ದೇವಿಯನ್ನು ಆರಾಧಿಸಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಖ್ಯಾತಿಗೆ ಅಪಕೀರ್ತಿ ತರುವವರ ಜೊತೆ ಸೇರಬೇಕಾದ ಸಂದರ್ಭ ಬರಬಹುದು
- ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ
- ವೈಯಕ್ತಿಕವಾಗಿ ವೃತ್ತಿಯಲ್ಲಿ ಬೆಳವಣಿಗೆಗೆ ಅವಕಾಶವಿದೆ
- ತಾತ್ಕಾಲಿಕವಾಗಿ ಸಾಲ ಕೇಳಲು ಬರುವವರ ಜೊತೆ ಅಂತರವನ್ನು ಕಾಯ್ದುಕೊಳ್ಳಬೇಕು
- ತುಂಬಾ ಆತಂಕ ಮತ್ತು ಮನಸ್ಸಿನಲ್ಲಿ ಚಿಂತೆಯ ದಿನ
- ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು
- ಶೂಲಿನೀ ದುರ್ಗೆಯನ್ನು ಪ್ರಾರ್ಥಿಸಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನಿಸುವ ಸಾಧ್ಯತೆಗಳಿವೆ
- ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
- ಬೆಳಗ್ಗೆ ಎದ್ದಾಗಿನಿಂದ ಕಿರಿಕಿರಿ ಇರುತ್ತದೆ ತಾಳ್ಮೆಯಿರಲಿ
- ಸಮಯ ಮಾಡಿಕೊಂಡು ಸಾಧನೆ ಮಾಡಿದವರ ಭೇಟಿ ಮಾಡಿ ಆಶೀರ್ವಾದ ಪಡೆಕುಕೊಳ್ಳಿ
- ಪೋಷಕರ ಸಹಾಯ ಮುಖ್ಯ ಇಲ್ಲದಿದ್ದರೆ ಸಮಸ್ಯೆ ಉಂಟಾಗಲಿದೆ
- ಯಾವುದೇ ಕೆಲಸವನ್ನು ಯೋಚಿಸಿ, ಚರ್ಚಿಸಿ ಮಾಡಿದರೆ ಒಳ್ಳೆಯದು
- ಮನೋರಂಜನೆಗಾಗಿ ಹಣ ಖರ್ಚು ಮಾಡುವ ಸಿದ್ಧತೆಯಲ್ಲಿರುತ್ತೀರಿ
- ಹಸುವಿಗೆ ಅನ್ನ, ಬೆಲ್ಲವನ್ನು ಕೊಡಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂಬಂಧಿಕರ ಮತ್ತು ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಹಾಳಾಗುತ್ತದೆ
- ಮನೆಯವರೊಂದಿಗೆ ಸ್ಪಂದಿಸಲು ಇಷ್ಟವಿಲ್ಲದ ಸ್ವಭಾವ
- ನಿಮ್ಮ ಅಭಿಪ್ರಾಯ ಸಲಹೆ ಸ್ಪಷ್ಟವಾಗಿರಬೇಕು
- ಅನಾವಶ್ಯಕವಾದ ಒತ್ತಡಗಳಿಗೆ ನೀವು ಸಿಲುಕಬಹುದು
- ಕಾಲು ನೋವು ಸ್ನಾಯುಗಳ ನೋವಿಗೆ ವಿಶ್ರಾಂತಿ ಮುಖ್ಯವಾದದ್ದು
- ಹಣ ಹೂಡಿಕೆ ಆಸೆ ತೋರಿಸುತ್ತದೆ ಆದರೆ ನಷ್ಟ ಆಗುವ ಸಾಧ್ಯತೆ ಇದೆ
- ಆಂಜನೇಯನ ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ಪತಿ-ಪತ್ನಿಯರಲ್ಲಿ ಜಗಳ ಉಂಟಾಗುವ ದಿನ
- ಶಾರೀರಿಕ ತೊಂದರೆ ನೋವು, ಆಲಸ್ಯ ಕಾಣಬಹುದು
- ನಿಮ್ಮ ಕಾರ್ಯಕ್ಷೇತ್ರದಲ್ಲಿ, ಕುಟುಂಬದಲ್ಲಿ ಬೇರೆಯವರನ್ನು ಹೊಗಳುತ್ತಾ ಮೋಡಿ ಮಾಡುತ್ತೀರಿ
- ಚೆನ್ನಾಗಿರುವವರ ಮನಸ್ಸಿನ ಮೇಲೆ ನೀವು ಪರಿಣಾಮ ಬೀರುತ್ತೀರಿ
- ಸಹೋದ್ಯೋಗಿಗಳ ಮತ್ತು ಸ್ನೇಹಿತರು ನಿಮಗೆ ಸಹಾಯ ಮಾಡುವುದಿಲ್ಲ
- ಸಮಾಜಕ್ಕೆ, ಕುಟುಂಬದಲ್ಲಿ, ಮಕ್ಕಳಿಗೆ ತಪ್ಪು ಸಂದೇಶ ಕೊಟ್ಟು ನೀವು ಹಿನ್ನಡೆ ಅನುಭವಿಸುತ್ತೀರಿ
- ಐಕ್ಯಮತ್ಯ ಮಂತ್ರ ಪಠಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಸ್ವಂತ ವಿಚಾರಕ್ಕೆ ಸ್ವಲ್ಪ ಸಮಯವನ್ನು ಮೀಸಲಾಗಿಡಿ
- ಮಧ್ಯಾಹ್ನದ ನಂತರ ಉಸಿರಾಟಕ್ಕೆ ತೊಂದರೆ ಆಗಬಹುದು ಎಚ್ಚರಿಕೆ
- ಬಂಡವಾಳದ ಬಗ್ಗೆ ಚಿಂತೆ ಉಂಟಾಗಲಿದೆ
- ವ್ಯಾಪಾರದಲ್ಲಿ ತಲ್ಲೀನತೆ ಹೊಂದಿರುವುದರಿಂದ ಬೇರೆ ಯಾವುದರ ಬೆಲೆ ಗೊತ್ತಾಗುವುದಿಲ್ಲ
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಆಗುವ ಸಾಧ್ಯತೆ ಹೆಚ್ಚು
- ಲಾಭದಾಯಕವಾದ ದಿನ, ಬಂದ ಆದಾಯವನ್ನು ಒಳ್ಳೆ ಕೆಲಸಕ್ಕೆ ವಿನಿಯೋಗಿಸಿ
- ದಾಂಪತ್ಯ ಕಲಹ ಏರ್ಪಡುತ್ತದೆ
- ಶನಿ ಗ್ರಹವನ್ನು ಪಾರ್ಥಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಆಲೋಚನೆಗಳು ನಿಮಗೆ ಅಧೈರ್ಯ ಉಂಟು ಮಾಡಬಹುದು
- ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ ಆದರೆ ಹೆದರಿಕೆ ಇರುತ್ತದೆ
- ಮನೆಯಲ್ಲಿ ಶಾಂತವಾಗಿ ವರ್ತಿಸಬೇಕಾಗಬಹುದು
- ಹೊರಗಡೆ ತಿರುಗಾಡಲು ಅವಕಾಶಗಳು ಆಗುವುದಿಲ್ಲ ಮನಸ್ಸಿಗೆ ಬೇಸರವಾಗುತ್ತದೆ
- ನಿಮ್ಮ ಬುದ್ಧಿವಂತಿಕೆ ಕೆಲಸಕ್ಕೆ ಬರುವ ದಿನ
- ಬೇರೆಯವರನ್ನು ಅಗೌರವದಿಂದ ಕಂಡರೆ ನಿಮಗೆ ಮಾನಹಾನಿಯಾಗಬಹುದು
- ಶಾಂತಿ ದುರ್ಗೆಯನ್ನು ಪ್ರಾರ್ಥಿಸಿ
ಧನುಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಅಕ್ಕ ಪಕ್ಕದವರ ಜೊತೆ ಜಗಳವಾಗಬಹುದು
- ನಿಮ್ಮ ಒಳ್ಳೆಯತನ ಬೇರೆಯವರಿಗೆ ದೌರ್ಬಲ್ಯವೆನಿಸಬಹುದು ಎಚ್ಚರ
- ಜೀವನದ ಉಜ್ವಲವಾದ ಭವಿಷ್ಯ ನಿಮಗೆ ಕಾಣಬಹುದು
- ತಂದೆಗೆ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಯ ಸಾಧ್ಯತೆ ಎಚ್ಚರಿಕೆವಹಿಸಿ
- ಹೆಚ್ಚು ಬೆಲೆ ಬಾಳುವ ವಸ್ತು ಖರೀದಿಸುವಿರಿ
- ಆತ್ಮವಿಶ್ವಾಸ ಭರವಸೆ ನಿಮ್ಮ ಮುಂದಿನ ಕೆಲಸಕ್ಕೆ ಸ್ಫೂರ್ತಿದಾಯಕವಾಗಿರುತ್ತದೆ
- ಸೂರ್ಯನಾರಾಯಣನನ್ನು ಆರಾಧಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಂತೋಷದ ವಾತಾವರಣ ಅನಾರೋಗ್ಯದಿಂದ ಹಾಳಾಗಬಹುದು
- ಪ್ರೀತಿ ಪಾತ್ರರ ಅನಗತ್ಯ ಬೇಡಿಕೆಗಳನ್ನು ಒಪ್ಪಬಾರದು
- ಸಂತಾನಾಪೇಕ್ಷಿಗಳಿಗೆ ಶುಭ ಸಮಯ ದೈವಾನುಗ್ರಹವಿದೆ
- ಕುಟುಂಬದವರ ಸಹಕಾರವಿರುವುದರಿಂದ ಧೈರ್ಯ ಬರುತ್ತದೆ
- ಆಸ್ಪತ್ರೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಇದರಿಂದ ಬೇಸರವಾಗುವ ದಿನ
- ಹಳೆಯ ನೋವು ಅಥವಾ ಅನಾರೋಗ್ಯ ಮರುಕಳಿಸಬಹುದು
- ಗೋಪಾಲ ಕೃಷ್ಣನನ್ನು ಪ್ರಾರ್ಥಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಯೋಗ ಮತ್ತು ಧ್ಯಾನದ ಮೊರೆ ಹೋಗಬೇಕು
- ನಿಮ್ಮ ಶರೀರದ ಶಕ್ತಿಯನ್ನು ವೃದ್ಧಿಸಿಕೊಳ್ಳಿ ಆರೋಗ್ಯವಂತರಾಗಿರಲು ಯೋಗ ಮಾಡಿ
- ಹಣದ ವೃದ್ಧಿ ಇದ್ರೂ ಕೂಡ ದೇಹಾಲಸ್ಯ ಕಡಿಮೆ ಇರುತ್ತದೆ
- ನಿಮ್ಮ ಪ್ರತಿಭೆ ಮತ್ತು ಚಟುವಟಿಕೆಗೆ ಬೆಲೆ ಸಿಗಬೇಕೆಂದರೆ ಜಾಗರೂಕರಾಗಿರಬೇಕು
- ಆಲಸ್ಯ ಮತ್ತು ಸೋಮಾರಿತನದಿಂದ ನೀವು ಹೆಚ್ಚು ಅವಕಾಶ ವಂಚಿತರಾಗುತ್ತೀರಿ
- ಏಕಾಂಗಿ ಅಥವಾ ಒಂಟಿತನ ನಿಮ್ಮನ್ನು ಕಾಡಬಹುದು
- ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಮನೋರಂಜನೆಗಾಗಿ ಹೊರಗಡೆ ಸಮಯವನ್ನ ಕಳೆಯುತ್ತೀರಿ
- ಮಕ್ಕಳಿಂದ ಬೇಸರವಾಗುವ ದಿನ
- ಹೆಚ್ಚು ಹಣ ಖರ್ಚಾದರೂ ಮತ್ತೆ ಸಂಗ್ರಹವಾಗುವ ಯೋಗ ಇದೆ
- ಈ ದಿನ ಉತ್ತಮವಾಗಿದ್ದರೂ ನಿಮಗೆ ತೃಪ್ತಿಯಿರುವುದಿಲ್ಲ
- ಆಧ್ಯಾತ್ಮಿಕವಾಗಿ ಆಸಕ್ತಿಯಿದ್ದರೂ ರೂಢಿಸಿಕೊಳ್ಳಬೇಕು
- ಮನೆಯಲ್ಲಿ ಆಶ್ಚರ್ಯವೆಂಬಂತೆ ಒಂದು ಘಟನೆ ನಡೆಯಬಹುದು
- ಮಕ್ಕಳನ್ನು ಬಹಳ ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ಗೊತ್ತಿರಬೇಕು
- ಕುಲದೇವತಾ ಆರಾಧನೆ ಮಾಡಿ
ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us