/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಇನ್ನು, ನ್ಯೂಸ್​ಫಸ್ಟ್ ಕನ್ನಡ ವಾಹಿಯ ವೀಕ್ಷಕರು ಕೇಳಿದ ಪ್ರಶ್ನೆಗಳಿಗೆ ಗುರುಗಳು ಉತ್ತರ ನೀಡಿದ್ದಾರೆ. ಅದು ಹೀಗಿದೆ.
ಮಮತಾ, ಬೆಂಗಳೂರು
ಪ್ರಶ್ನೆ: ಮಗಳು ಮೋಹನಾಂಬಿಕರವರ ವಿದ್ಯಾಭ್ಯಾಸದ ಬಗ್ಗೆ?
ಪರಿಹಾರ: ವಿದ್ಯಾಭ್ಯಾಸದ ಸ್ಥಳದಲ್ಲಿ ಸರಸ್ವತಿ ಫೋಟೊ ಅಥವಾ ವಿಗ್ರಹ ಇಟ್ಟುಕೊಳ್ಳಿ ಪ್ರತಿ ಶುಕ್ರವಾರ ಬಿಳಿ ಹೂಗಳಿಂದ ಸರಸ್ವತಿ ಪ್ರಾರ್ಥನೆ ಮಾಡಿಪ್ರೇಮಕುಮಾರಿ, ಚಿಕ್ಕಮಗಳೂರು,ಕುಡ್ಲೂರು
ಪ್ರಶ್ನೆ: ಕಾಲು ನೋವಿನ ಬಗ್ಗೆ
ಪರಿಹಾರ: 5 ಶನಿವಾರ ಆಂಜನೇಯನ ದೇವಾಲಯದಲ್ಲಿ ಎಳ್ಳೆಣ್ಣೆ ಅಭಿಷೇಕ ಮಾಡಿಸಿ, ಆ ಎಳ್ಳೆಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ 5 ವಾರಗಳಲ್ಲಿ ಅನುಕೂಲವಾಗುತ್ತದೆ.
ಮೇಷ
/filters:format(webp)/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನೀವು ತುಂಬಾ ಸುಲಭ ಎಂದು ಭಾವಿಸಿದ ಕೆಲಸಗಳಿಂದ ಸಮಸ್ಯೆ ಉಂಟಾಗಲಿದೆ
- ಇಂದು ಆರೋಗ್ಯ ಚೆನ್ನಾಗಿದೆ ಹಾಗೇ ಕಾಪಾಡಿಕೊಳ್ಳಿ
- ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಲೆಕ್ಕದ ವಿಚಾರದಲ್ಲಿ ಗೊಂದಲವಿರುತ್ತದೆ
- ಬೇರೆಯವರ ಹಣದಿಂದ ನೀವು ವ್ಯವಹಾರ ನಡೆಸಬಹುದು
- ಅಕ್ಕಪಕ್ಕದವರ ಸಹಾಯ, ಸಹಕಾರ ದುರುಪಯೋಗ ಆಗಬಾರದು
- ನಿಮ್ಮ ಸಾಧನೆ ನಿಮ್ಮ ಅನುಭವ ಉತ್ಕೃಷ್ಟವಾದಂತಹದ್ದು
- ಕುಲದೇವತಾ ಆರಾಧನೆ ಮಾಡಿ
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ಚೆನ್ನಾಗಿದೆ
- ಖರ್ಚುಗಳನ್ನು ನಿಯಂತ್ರಿಸಿ
- ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ
- ಬಂಧುಗಳ ಮತ್ತು ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ,ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗಿ
- ಅನೇಕ ವಿಧವಾದ ಹಳೆಯ ನೆನಪುಗಳು ಕಾಡುತ್ತದೆ ಕೆಲವೊಂದು ಸಮಾಧಾನ ನೀಡಲಿದೆ
- ಜಮೀನಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ಮಾಡಿ
- ಮಾತಿನಲ್ಲಿ ಎಲ್ಲವೂ ಅಡಗಿರುತ್ತದೆ
- ಆಂಜನೇಯನನ್ನು ಆರಾಧನೆ ಮಾಡಿ
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ರಕ್ತದೊತ್ತಡ ಇರುವವರಿಗೆ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಹೆಚ್ಚಾಗಲಿದೆ
- ಧಾರ್ಮಿಕ ಮುಖಂಡರಿಗೆ ಭಯ ಅಥವಾ ಅವಮಾನ ಆಗುವ ಸಾಧ್ಯತೆ ಇದೆ
- ಧರ್ಮವನ್ನು ಮೀರಿ ವರ್ತಿಸುವವರಿಗೆ ತೊಂದರೆಯಿದೆ
- ನಿಮ್ಮ ವೃತ್ತಿ, ಕೆಲಸಕ್ಕೆ ಆದ್ಯತೆ ಕೊಡಿ ಅನಗತ್ಯ ವಿಚಾರಗಳನ್ನು ದೂರ ಮಾಡಿ
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂಬಂಧಿತ ವಿಚಾರಗಳಿಗೆ ವಿವಾದಗಳು ಏರ್ಪಟಾಗುತ್ತದೆ
- ಸಭ್ಯವಾಗಿ ವರ್ತಿಸಬೇಕು ಜೊತೆಗೆ ಮಾನಸಿಕ ಧ್ಯೆರ್ಯವಿರಬೇಕು
- ಗ್ರಹಗತಿಯಿಂದ ಎಲ್ಲವೂ ಶುಭವಾಗಲಿದೆ
- ಧರ್ಮಗ್ರಂಥಾವಲೋಕನ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಕ್ಕಳ ಪ್ರಗತಿಯಿಂದ ಸಮಾಧಾನವಾಗಲಿದೆ
- ಹಣಕಾಸಿನ ಸಮಸ್ಯೆ ಸ್ವಲ್ಪ ಕಾಡಬಹುದು
- ಧಾರಾಳವಾಗಿ ಖರ್ಚು ಮಾಡಿದ ಕೈ ಕಟ್ಟಿಹಾಕಿದಂತಾಗಿರುತ್ತದೆ
- ಸ್ವಯಂಕೃತ ಅಪರಾಧಗಳನ್ನು ಕಡಿಮೆ ಮಾಡಬೇಕು
- ಧಾರ್ಮಿಕ ಕಾರ್ಯಕ್ರಮಗಳು ಹಣದ ಕೊರತೆಯಿಂದ ರದ್ದಾಗಬಹುದು
- ಕುಟುಂಬದ ಸದಸ್ಯರ ಆಗಮನದಿಂದ ಸಂತೋಷವಿದ್ದು ನಂತರ ಜಗಳ ಆಗಬಹುದು
- ನಿಮ್ಮ ಗುರುಗಳನ್ನು ಪ್ರಾರ್ಥಿಸಿ
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ನ್ಯಾಯಾಲಯದ ವಿಚಾರದಲ್ಲಿ ಜಯ ಸಿಗಲಿದೆ
- ಯಾವುದೆ ವಿಚಾರವಿದ್ದರೂ ತಾರ್ಕಿಕವಾಗಿ ಚಿಂತನೆ ಮಾಡಬೇಡಿ ಹೊಂದಾಣಿಕೆ ಇರಲಿ
- ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೀರ
- ಮಾನಸಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೆಚ್ಚಾಗಲಿದೆ
- ಉತ್ತಮ ಆಹಾರ ಲಭ್ಯವಾಗಲಿದೆ
- ಜೀವನದ ಬಗ್ಗೆ ನಿರ್ಧಾರ ಮಾಡುತ್ತೀರಿ
- ಹಿರಿಯರ ಆಶೀರ್ವಾದ ಪಡೆಯಿರಿ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಿರಿಯರು ಹಿಂದೆ ಆಡಿದ ಮಾತು ಇಂದು ಸತ್ಯವೆಂದು ತಿಳಿಯುವ ದಿನ
- ಕುಟುಂಬದಲ್ಲಿ ಸಂತೋಷ,ನೆಮ್ಮದಿ ವಾತಾವರಣ ಇರುತ್ತದೆ
- ಕಾರ್ಯ ಒತ್ತಡದ ಮಧ್ಯೆಯು ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ
- ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಲಿದೆ
- ಸಾಯಂಕಾಲದ ಹೊತ್ತಿಗೆ ಮನೆಯಲ್ಲಿ ಹಿರಿಯರ ಆರೋಗ್ಯ ವ್ಯತ್ಯಾಸ ಆಗಲಿದೆ
- ಮೃತ್ಯುಂಜಯ ಮಂತ್ರವನ್ನು ಪಠಿಸಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳು ಎದುರಾಗಬಹುದು
- ಪ್ರೇಮಿಗಳಿಗೆ ಮತ್ತು ಸಂಬಂಧಿಕರನ್ನೇ ವಿವಾಹವಾದವರಿಗೆ ತೊಂದರೆಯಿದೆ
- ಹಲವು ಭಿನ್ನಾಭಿಪ್ರಾಯಗಳು,ನಿಮ್ಮ ಮಾತು ಸಾಂಸಾರಿಕ ಸಮಸ್ಯೆಗಳನ್ನ ಹೆಚ್ಚಿಸಬಹುದು
- ಮಕ್ಕಳಿಗೆ ಚಂಚಲ ಮನಸ್ಸಿನಿಂದ ಓದಿಗೆ ಸಮಸ್ಯೆ ಉಂಟಾಗಲಿದೆ
- ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆ
- ಸುಬ್ರಹ್ಮಣ್ಯನನ್ನು ಆರಾಧಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ನೌಕರಿಯಲ್ಲಿ ಹಿರಿಯರ ಸಲಹೆ ಪಡೆಯಿರಿ
- ಮನಸ್ಸನ್ನ ಕೇಂದ್ರಿಕರಿಸಲಾಗದೆ ಒದ್ದಾಡಬಹುದು
- ಕೆಲಸದ ಗುಣಮಟ್ಟ ಕಡಿಮೆಯಾಗಿ ನಿಂದನೆಗೆ ಒಳಗಾಗುತ್ತೀರಿ
- ಆತ್ಮ ವಿಶ್ವಾಸದ ಕೊರತೆ ಕಾಡಲಿದೆ
- ಬೇರೆಯವರಿಗೆ ವಿನಾಕಾರಣ ಸಲಹೆ ನೀಡಬೇಡಿ
- ಗಣಪತಿಗೆ 21 ಗರಿಕೆಯಿಂದ ಪೂಜಿಸಿ
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಸ್ವಲ್ಪ ಉದಾರತೆಯ ದಿನ
- ದಾನ ಧರ್ಮದ ಆಲೋಚನೆ ಮಾಡಿ ಭವಿಷ್ಯದಲ್ಲಿ ಕಾಪಾಡುತ್ತದೆ
- ಕೆಲಸ ಕಾರ್ಯಗಳಲ್ಲಿ ಹಲವಾರು ಜನರ ಸಹಾಯ ಪಡೆಯುತ್ತೀರಿ
- ನೀವು ಬೇರೆಯವರಿಗೆ ಸಹಾಯ ಮಾಡುವ ಅವಕಾಶವಿದೆ
- ಸಂದರ್ಭಗಳು ಕಾಲಕ್ರಮೇಣ ನಿಮ್ಮ ಪರವಾಗಿರಬಹುದು
- ದಾಂಪತ್ಯದಲ್ಲಿ ಸುಖ ಸಂತೋಷವಿರುತ್ತದೆ ಆದರೆ ಅನುಭವಿಸುವ ಯೋಗ ಕಡಿಮೆ
- ಹೊಸ ವ್ಯವಹಾರ, ಹಿಂದೆ ಮಾಡಿದ ಹಣದ ವ್ಯವಹಾರದಿಂದ ಬೇಸರವನ್ನುಂಟು ಮಾಡುವ ಸಾಧ್ಯತೆ
- ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ
- ಶ್ರೀ ರಾಮನನ್ನು ಪ್ರಾರ್ಥಿಸಿ
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ಬುದ್ದಿವಂತರ ಸಹವಾಸದಿಂದ ನಿಮಗೆ ಅನುಕೂಲವಿದೆ
- ನಿಮ್ಮ ವೃತ್ತಿಗೆ ಸಂಬಂಧಪಟ್ಟ ಹಾಗೆ ಹೆಚ್ಚು ಕೆಲಸಗಳು ನಿಮ್ಮ ಕೈ ಸೇರಿ ಆದಾಯ ಸಿಗಲಿದೆ
- ಕುಟುಂಬದ ಸಂತೋಷವನ್ನು ಹಾಗೆ ಕಾಪಾಡಿಕೊಳ್ಳಿ
- ವಿದ್ಯಾರ್ಥಿಗಳಿಗೆ ಬಹಳ ಶುಭದಿನ
- ವೃತ್ತಿ ಜೀವನಕ್ಕೆ ಯಾವುದೇ ಕೊರತೆಯಿರುವುದಿಲ್ಲ
- ಇರುವ ವ್ಯವಸ್ಥೆಗೆ ಹೊಂದಿಕೊಂಡರೆ ಯಾವ ಕೊರತೆಯು ಕಾಣುವುದಿಲ್ಲ
- ಪಾರ್ವತಿ ದೇವಿಯನ್ನು ಆರಾಧಿಸಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಕೆಲಸ ಆರಂಭ ಮಾಡಲು ಈ ದಿನ ಶುಭಕರವಾಗಿಲ್ಲ
- ಕತ್ತರಿ ಅಥವಾ ಚಾಕು ಇತ್ಯಾದಿಗಳಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
- ಬಡ್ಡಿ ವ್ಯವಹಾರ ಮಾಡುವವರಿಗೆ ಸಮಸ್ಯೆಗಳು ಉಂಟಾಗಲಿದೆ
- ವಿಕಲ ಚೇತನರು ಅದರಲ್ಲೂ ಕಾಲಿನ ಸಮಸ್ಯೆ ಇರುವವರಿಗೆ ತೊಂದರೆ ಆಗಬಹುದು
- ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಬಹುದು
- ಅನಪೇಕ್ಷಿತ ಪ್ರಯಾಣಕ್ಕೆ ಸಿದ್ದವಾಗಬೇಕಾಗುತ್ತದೆ
- ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಕೆಲಸದಲ್ಲಿ ದೃಢ ನಿರ್ಧಾರವಿರಬೇಕು
- ಭೂ ಸಂಬಂಧೀಯಾದ ವಿಚಾರದಲ್ಲಿ ನಷ್ಟ ಆಗುವ ದಿನವಾಗಿದೆ
- ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳು ಮಾಡಬೇಡಿ
- ಕುಟುಂಬದ ಹಿತಾಸಕ್ತಿಗೆ ಬೇರೆಯವರು ನಿಮ್ಮನ್ನ ವಂಚನೆ ಮಾಡಬಹುದು
- ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗುವ ಸಾಧ್ಯತೆ ಇದೆ
- ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರುತ್ತದೆ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us