ಇವತ್ತು ಯಾರಿಗೆ ಶುಭ, ಯಾರಿಗೆ ಅಶುಭ? ನಿಮ್ಮ ರಾಶಿ ಭವಿಷ್ಯ..!

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಧನಿಷ್ಠಾ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲಸಗಾರರ ಪ್ರಾಮಾಣಿಕ ದುಡಿಮೆ ತ್ಯಾಗದಿಂದ ಉತ್ತಮ ಲಾಭ
  • ನಿಮ್ಮ ಕೆಲಸಗಾರರಿಗೆ ಹಣ ಅವಶ್ಯಕ ವಸ್ತುಗಳನ್ನು ನೀಡಿ ಸಂತೋಷಪಡಿಸಿ 
  • ಗ್ರಾಹಕರಿಗೆ ವಸ್ತುಗಳನ್ನು ಒದಗಿಸುವಲ್ಲಿ ಹಿನ್ನಡೆಯಾಗಬಹುದು
  • ಇಂದು ಶೀತ ಸಂಬಂಧಿ ಕಾಯಿಲೆಗಳು ಕಾಡಬಹುದು
  • ಕೆಲಸಗಾರರು ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾರೆ
  • ಕಬ್ಬಿಣದ ವ್ಯಾಪಾರಿಗಳಿಗೆ ತುಂಬಾ ಬೇಡಿಕೆ ಅಧಿಕ ಲಾಭ  
  • ನಭೋ ದೇವನನ್ನು ಪ್ರಾರ್ಥಿಸಿ

ವೃಷಭ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ರಫ್ತು ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಹಿನ್ನಡೆ ನಷ್ಟ ಸಾಧ್ಯತೆ 
  • ಕೆಲಸದಲ್ಲಿ ಹೆಚ್ಚು ಒತ್ತಡದಿಂದ ಅನಾರೋಗ್ಯ ಕಾಡಬಹುದು ಎಚ್ಚರ 
  • ಕೆಲ ದುಷ್ಟರಿಂದ ಕಿರುಕುಳ ಸಾಧ್ಯತೆ ಎಚ್ಚರ
  • ಇಂದು ವಿದ್ಯಾರ್ಥಿಗಳಿಗೆ ಆತಂಕ ಅತಿಯಾದ ನಿದ್ರೆ ಕಾಡಬಹುದು
  • ವ್ಯಾಪಾರಸ್ಥರು ಪೊಲೀಸರ ವಿಚಾರಣೆಗೆ ಒಳಪಡುವ ಸಾಧ್ಯತೆ
  • ನಿಮ್ಮ ವಸ್ತುಗಳು, ಹಣದ ಬಗ್ಗೆ ಎಚ್ಚರಿಕೆ ಇರಲಿ ಕಳುವಾಗಬಹುದು
  • ಔಷಧಿ ವ್ಯಾಪಾರಸ್ಥರಿಗೆ ಶುಭ ದಿನ
  • ಕಾಮಧೇನುವನ್ನು ಸ್ಮರಿಸಿ                                        

ಮಿಥುನ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಕೀಲರು ನ್ಯಾಯಮೂರ್ತಿಗಳಿಗೆ ವಿಶೇಷವಾದ ಶುಭ ದಿನ
  • ಇಂದು ಹಿರಿಯ ದಂಪತಿಗಳಲ್ಲಿ ವಿರಸ ಸಾಧ್ಯತೆ 
  • ಹತ್ತಿ ಮತ್ತು ತೆಂಗು ಬೆಳೆಗಾರರಿಗೆ ಅಧಿಕ ಲಾಭ ಸಾಧ್ಯತೆ
  • ನಿಮ್ಮ ಮಾತುಗಳಿಂದ ಸಂಬಂಧ ಮುರಿಯಬಹುದು ಸರಿಯಾಗಿ ವ್ಯವಹರಿಸಿ 
  • ವಿವಾಹ ಉತ್ಸುಕರಿಗೆ ಸಿಹಿ ಸುದ್ದಿ  ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ 
  • ದಿವ್ಯರೂಪವಾದ ಜ್ಯೋತಿಯನ್ನು ಪ್ರಾರ್ಥಿಸಿ

ಕಟಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹೈನುಗಾರಿಕೆ ಮತ್ತು ಜಲಸಂಬಂಧಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚು ಲಾಭ
  • ಜಲ ಕಂಟಕ ಸೂಚನೆಯಿದೆ ಎಚ್ಚರಿಕೆ ಇರಲಿ
  • ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಶುಭ ದಿನ
  • ತಮ್ಮ ಬಳಿಯಿರುವ ಪದಾರ್ಥಗಳಿಗೆ ಅತೀವ ಬೇಡಿಕೆ ಬರುವ ಸಾಧ್ಯತೆ
  • ಆಲಸ್ಯ ಬಿಟ್ಟು ಕೆಲಸ ಮಾಡಿ
  • ಶಿಂಶುಮಾರನನ್ನು ಪ್ರಾರ್ಥಿಸಿ 

ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಕಾರ್ಮಿಕ ವರ್ಗದವರಿಗೆ ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ
  • ಕಸೂತಿ ಕೆಲಸ ಕಲಾಕಾರರು ಚಿತ್ರ ಬಿಡಿಸುವವರಿಗೆ ಉತ್ತಮ ದಿನ
  • ಇಂದು ಅನಗತ್ಯ ವಿಚಾರ ಚರ್ಚೆಗಳಲ್ಲಿ ಭಾಗಿಯಾಗಬೇಡಿ ಸಹನೆ ಇರಲಿ
  • ಇಂದು ಕುಟುಂಬದಲ್ಲಿ ಸಾಮರಸ್ಯ ಕಾಪಾಡಿ
  • ರಿಯಲ್​ ಎಸ್ಟೇಟ್​ನವರಿಗೆ ಶುಭ ದಿನ ಆದರೆ ಅತೀವ ಶತ್ರುಭಯ ಅಪನಿಂದನೆ ಸಾಧ್ಯತೆ  
  • ಬ್ರಹ್ಮನನ್ನು ಪ್ರಾರ್ಥಿಸಿ 

ಕನ್ಯಾ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಾಧಾರಣ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಚಂಚಲ ಮನಸ್ಸು
  • ಜ್ಞಾನಿಗಳು ಅನುಭವಿಗಳ ಭೇಟಿಗೆ ಅವಕಾಶ ಸಿಗಬಹುದು
  • ಇಂದು ಜ್ಞಾನಾರ್ಜನೆಯಲ್ಲಿ ಹೆಚ್ಚು ಆಸಕ್ತಿ ವಹಿಸಬಹುದು
  • ಸಂಶೋಧನಾ ವಿಚಾರದಲ್ಲಿ ಮನಸ್ಸು ಸ್ಥಿರ ಸಾಧ್ಯತೆ
  • ತುಂಬಾ ಓಡಾಟ ಸಾಧ್ಯತೆ ಆದಷ್ಟು ಮೌನವಾಗಿರುವುದು ಉತ್ತಮ
  • ಷೇರು ವ್ಯವಹಾರದಲ್ಲಿ ಮಿಶ್ರಫಲ ಸಾಧ್ಯತೆ
  •  ಮಹಾಶಾಸ್ತಾರ ಮಂತ್ರ ಶ್ರವಣ ಮಾಡಿ

ತುಲಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಸ್ತ್ರೀಯರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು ಆಲಸ್ಯ ಬೇಡ
  • ಉನ್ನತ ಶಿಕ್ಷಣ ಕ್ಷೇತ್ರದವರಿಗೆ ಶುಭ ದಿನ
  • ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳ್ಳೆಯದು
  • ಮಿತ್ರರು ಹೋದ್ಯೋಗಿಗಳ ಜೊತೆಗೆ ಔತಣ ಕೂಟಕ್ಕೆ ಹೋಗುವ ಸಾಧ್ಯತೆ
  • ಕಲಾವಿದರಿಗೆ ಗೌರವ ಸನ್ಮಾನ ಪುರಸ್ಕಾರ ದೊರೆಯುವ ಸಾಧ್ಯತೆ
  • ಮಹಾಲಕ್ಷ್ಮೀ ಕೈಯಲ್ಲಿರುವ ಪದ್ಮವನ್ನು ಸ್ಮರಣೆ ಮಾಡಿ

ವೃಶ್ಚಿಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ತೈಲ ವ್ಯಾಪಾರಿಗಳಿಗೆ ಧನಲಾಭ ಸಾಧ್ಯತೆ
  • ಹೋಟೆಲ್ ಉದ್ದಿಮೆದಾರರಿಗೆ ಸ್ವಲ್ಪ ಕಿರಿಕಿರಿ ನಷ್ಟ ಸಾಧ್ಯತೆ
  • ಸಣ್ಣ ಪುಟ್ಟ ಗಾಯಗಳಾಗಬಹುದು ಎಚ್ಚರಿಕೆ ಇರಲಿ
  • ವ್ಯಾಪಾರ ವ್ಯವಹಾರಕ್ಕೆ ಶುಭ ದಿನ ಉತ್ತಮ ಜನರ ಸಂಪರ್ಕ ಸಾಧ್ಯತೆ
  • ಸಾಯಂಕಾಲ ಮನಸ್ಸಿಗೆ ಸ್ವಲ್ಪ ಸಮಾಧಾನ ಸಾಧ್ಯತೆ
  • ಈ ದಿನ ಸಹೋದರನನ್ನು ಕ್ಷಮಿಸಿದರೆ ಒಳಿತು
  • ಸಹೋದರರಲ್ಲಿ ಜಗಳ ಸಾಧ್ಯತೆ ಹೆಚ್ಚು ಗಮನವಿರಲಿ
  • ದಕ್ಷಿಣಾವರ್ತ ಶಂಖವನ್ನು ಪಾರ್ಥನೆ ಮಾಡಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸಾಧ್ಯತೆ
  • ಇಂದು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ
  • ಕಣ್ಣಿನ ಸಮಸ್ಯೆ ಕಾಡಬಹುದು ವೈದ್ಯರ ಸಲಹೆ ಪಡೆಯಿರಿ
  • ಇಲಾಖಾ ಪರೀಕ್ಷೆಗಳು ಪಾಯಶಃ ಮುಂದೂಡಲ್ಪಡಬಹುದು
  • ಇಂದು ಮಿತ್ರರಿಂದ ವಿರೋಧ ಎದುರಿಸುವ ಸಾಧ್ಯತೆ
  • ಕೃಷಿಕರಿಗೆ ಲಾಭದ ದಿನ ಮಾನಸಿಕ ಒತ್ತಡ ಸಾಧ್ಯತೆ
  • ಇಂದು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ತಾಳ್ಮೆ ತುಂಬಾ ಮುಖ್ಯ
  • ಹರಿಹರ ಪುತ್ರನನ್ನು ಸ್ಮರಿಸಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವಾಹನ ಅಪಘಾತ ಆಗುವ​ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
  • ಇಂದು ವಿದ್ಯಾರ್ಥಿಗಳಿಗೆ ಗುತ್ತಿಗೆದಾರರಿಗೆ ಶುಭ ದಿನ
  • ನಿಮ್ಮ ಪ್ರತಿಭೆಗೆ ತಕ್ಕ ಮನ್ನಣೆ ಗೌರವ ಸಿಗುವ ಸಾಧ್ಯತೆ
  • ಕಮೀಷನ್​ ವ್ಯಾಪಾರದಾರರಿಗೆ ಲಾಭದ ದಿನ
  • ಹಣಕಾಸಿನ ವಿಚಾರದಲ್ಲಿ ಜಾಗ್ರತೆವಹಿಸಿ ಆದಷ್ಟೂ ಉಳಿತಾಯ ಮಾಡಿ
  • ಶಿಕ್ಷಕ ವರ್ಗದವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
  • ಇಂದು ಬೇರೆಯವರಿಂದ ಸಾಲವನ್ನು ಅಪೇಕ್ಷಿಸಬೇಡಿ
  • ಗುರುಪಾದುಕಾ ಸ್ತೋತ್ರ ಪಠಿಸಿ 

ಕುಂಭ  

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ಅಧಿಕ ವರಮಾನದಿಂದ ನೆಮ್ಮದಿ ಸಾಧ್ಯತೆ
  • ಮನೆಯಲ್ಲಿ ಶುಭಕಾರ್ಯ ಸಂಭ್ರಮ
  • ಮಕ್ಕಳ ಸಾಧನೆ ವಿಚಾರದಲ್ಲಿ ಶುಭ ಸುದ್ದಿ
  • ಕೋರ್ಟ್​ ಕಚೇರಿ ವಿಚಾರದಲ್ಲಿ ಜಯ ಸಾಧ್ಯತೆ
  • ವೈದ್ಯರಿಗೆ ಕೆಲಸದಲ್ಲಿ ಒತ್ತಡದಿಂದ ನಿದ್ರಾಭಂಗ ಸಾಧ್ಯತೆ
  • ಅಷ್ಟಾಕ್ಷರೀ ದತ್ತಮಂತ್ರ ಪಠಿಸಿ

ಮೀನ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಯಾವುದೇ ರೀತಿಯ ತೊಂದರೆಗಳಿದ್ದರೆ ಅವುಗಳಿಂದ ಮುಕ್ತಿ ಸಾಧ್ಯತೆ
  • ಇಂದು ಮಂಗಳ ಕಾರ್ಯಗಳಲ್ಲಿ ಭಾಗಿಯಾಗಬಹುದು 
  • ರೇಷ್ಮೆ ಮತ್ತು ಅಡಿಕೆ ಬೆಳೆಗಾರರಿಗೆ ಅಧಿಕ ಲಾಭ
  • ಇಂದು ವಿನಾಕಾರಣ ಕೋಪಕ್ಕೆ ಒಳಗಾಗದಿದ್ದರೆ ಒಳ್ಳೆಯದು
  • ಇಂದು ಋಣವಿಮೋಚನೆ ಯೋಗವಿದೆ
  • ನಿಮ್ಮ ಪ್ರಾಮಾಣಿಕ ಕೆಲಸದಿಂದ ಹೆಚ್ಚು ಯಶಸ್ಸು 
  • ಋಣವಿಮೋಚನೆ ಮಂಗಳ ಸ್ತೋತ್ರ ಪಠಿಸಿ

ಇನ್ನಷ್ಟು  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment